ಜೀತಪದ್ಧತಿಗೆ ಸಿಲುಕಿ ನಾಶವಾಗಬೇಕಿದ್ದ ಮೊಗಳ್ಳಿಯನ್ನು ಸ್ವತಂತ್ರವಾಗಿಸಿದ್ದು ಕತೆ: ನಟರಾಜ್‌ ಹುಳಿಯಾರ್

Date:

ಸಾಹಿತ್ಯ ನಮಗೆ ಮುಕ್ತವಾಗುವುದನ್ನು, ಸ್ವತಂತ್ರವಾಗುವುದನ್ನು ಮತ್ತು ಅಭಿವ್ಯಕ್ತಿಸುವುದನ್ನು ಕಲಿಸುತ್ತದೆ. ಹಾಗೆಯೇ ಗಣೇಶ್‌ ಅವರು ಕಲಿತರು, ಕನ್ನಡಕ್ಕೆ ಕೊಡುಗೆಯನ್ನು ನೀಡಿದರು.

ಜೀತಪದ್ದತಿಗೆ ಸಿಲುಕಿ ನಾಶವಾಗಬೇಕಿದ್ದ ಮೊಗಳ್ಳಿಯನ್ನು ಸ್ವತಂತ್ರವಾಗಿಸಿದ್ದು ಕತೆ. ಒಬ್ಬ ಮನುಷ್ಯ ಏಕಾಂಗಿಯಾಗಿ ತನ್ನಲ್ಲೇ ನಂಬಿಕೆ ಇಟ್ಟು ವಿದ್ವಾಂಸನಾಗುವಂತಹ ಬದ್ದತೆ‌ ಹೊಂದಿರುವ ಎಚ್‌ ಎನ್‌ ಒಂದುಕಡೆಯಾದರೆ, ಇನ್ನೊಂದುಕಡೆ ಯಾವ ಹಿನ್ನೆಲೆಯೂ ಇಲ್ಲದೆ ಮನೆಯಲ್ಲಿ ಅಕ್ಷರಸ್ಥರೇ ಇಲ್ಲದೆ ಊರಿಂದ ತಪ್ಪಿಸಿಕೊಂಡು ಬಂದಂಥ ಮೊಗಳ್ಳಿ ಗಣೇಶ್‌ ಉತ್ತಮ ಬರಹಗಾರ ಎಂದು ಲೇಖಕ, ಸಂಸ್ಕೃತಿ ಚಿಂತಕ ನಟರಾಜ್‌ ಹುಳಿಯಾರ್ ಅಭಿಪ್ರಾಯಪಟ್ಟರು.

- Advertisement -

ಬೆಂಗಳೂರು ನಗರದ ನ್ಯಾಷನಲ್ ಕಾಲೇಜಿನ ಕನ್ನಡ ವಿಭಾಗ ಮತ್ತು ಪೂರ್ಣಚಂದ್ರ ಕನ್ನಡ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ‘ಮೊಗ್ಗಳ್ಳಿ ಗಣೇಶ್ ಅವರ ಸಾಹಿತ್ಯ’ ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರೈತ ಹೋರಾಟದಿಂದ ವಿಧಾನಸಭಾಧ್ಯಕ್ಷ ಸ್ಥಾನದವರೆಗೆ ಕಾಗೋಡು ತಿಮ್ಮಪ್ಪ ಹಾದಿ…

ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಕೆಲವು ವ್ಯಕ್ತಿಗಳು ತಮ್ಮ ಹೋರಾಟ, ಸಾರ್ವಜನಿಕ ಬದುಕು ಹಾಗೂ ಜನಪರ ಚಟುವಟಿಕೆಗಳ ಮೂಲಕ ವಿಶೇಷ ಛಾಪು ಮೂಡಿಸಿದ್ದಾರೆ. ಅಂತಹವರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಕಾಂಗ್ರೆಸ್...

ಈ ದಿನ ಕವಿತೆ | ಎರಡು ದೀಪಗಳು- ಅಲಿ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಉರ್ದು ಕವಿ ಅಲಿ ಸರ್ದಾರ್ ಜಾಫ್ರಿಯವರ ಕವನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ . ಕತ್ತಲ ಗವಿಯೊಳಗಿಂದರೆಕ್ಕೆಗಳು ಫಡಫಡಿಸುವ ಸದ್ದು ಕೇಳುವುದು.ನಿರ್ದಯಿ ಗಾಳಿಯುಮಂಜಿನ ಮೇಲೆ...

ಕರಸ್ಥಲದ ಲಿಂಗ ಮತ್ತು ಬೆರಳಿನ ಮಸಿ: ಸ್ಥಾವರ ಪ್ರಭುತ್ವದ...

ಭಾರತೀಯ ಸಮಾಜದ ಹಳ್ಳಿಯ ಭೌತಿಕ ವಿನ್ಯಾಸವನ್ನು ಗಮನಿಸಿದರೆ ಅದೊಂದು ಅಪ್ಪಟ ಘನೀಕೃತ ‘ಸ್ಥಾವರ’ ಮಾದರಿ. ಹಳ್ಳಿಯ ಹೃದಯಭಾಗದಲ್ಲಿ ಕೇವಲ ಪೂಜೆಯ ತಾಣವಲ್ಲ, ಇಡೀ ನೆಲದ ಮೇಲೆ ಅಧಿಪತ್ಯ ಸಾಧಿಸುವ ಕ್ಷೇತ್ರಾಧಿಪತಿಯ ‘ದೇವಸ್ಥಾನ’ ವಿರಾಜಮಾನವಾಗಿರುತ್ತದೆ....

“ಮೊಗಳ್ಳಿ ಗಣೇಶ್‌ ಹತ್ತನೇ ತರಗತಿ ಮುಗಿಸಿದ ಬಳಿಕ ಅವರ ತಂದೆ ಅವನನ್ನು ಜೀತಕ್ಕೆ ಕಳುಹಿಸಲು ಮುಂದಾಗಿದ್ದನ್ನು ನಿರಾಕರಿಸಿ ಅಲ್ಲಿಂದ ಕಾಲುಕಿತ್ತು ನಗರ ಪ್ರದೇಶಕ್ಕೆ ಬಂದಾಗ… ಈ ನಗರ ಅವನನ್ನು ಹೇಗೆ ರೂಪಿಸಿತು? ಆ ಜೀತವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಆಗ ಓಡಿ ಬಂದಿದ್ದರಿಂದಲೇ ಆತ ಸ್ವತಂತ್ರನಾಗಲು ಸಾಧ್ಯವಾಗಿದ್ದು. ಹಾಗಾಗಿ ನಾವು ನಮ್ಮ ಮನಸ್ಸಿನಲ್ಲಿರುವ ಜೀತ ಪದ್ದತಿಯನ್ನು ಮೊದಲು ತೊಲಗಿಸಿದರೆ ಸ್ವತಂತ್ರರಾಗಬಹುದು” ಎಂದು ಹೇಳಿದರು.

“ಕನ್ನಡ ಸಾಹಿತ್ಯ ಜಾತ್ಯತೀತವಾಗಿದೆ. ಎಲ್ಲಿ ಪ್ರತಿಭೆ ಇರುತ್ತದೆಯೋ, ಎಲ್ಲಿ ಶ್ರೇಷ್ಠ ಸಾಹಿತ್ಯ ಇರುತ್ತದೆಯೋ ಅದನ್ನು ಅಪ್ಪಿಕೊಳ್ಳುವಂಥದ್ದು ಕನ್ನಡ ಸಾಹಿತ್ಯ. ಗಣೇಶ್‌ ಮೈಸೂರಿಗೆ ಬಂದ ಕಾಲ ಪ್ರಕ್ಷುಬ್ಧ ಕಾಲ. ಬಹಳ ದೊಡ್ಡ ಮಂಥನದ ಕಾಲ… ಈಗ ತಿರುಗಿ ನೋಡಿದರೆ ಅವನ ಅನಾಥತೆಯಲ್ಲಿ ಬಂದದ್ದು, ಅವನ್ನು ರೂಪಿಸಿದ್ದು ಗಮನಾರ್ಹ” ಎಂದು ನೆನಪಿಸಿಕೊಂಡರು.

“ರೈತ ಚಳವಳಿ, ದಲಿತ ಚಳವಳಿ, ವೈಚಾರಿಕ ಚಳವಳಿಗಳು ನಡೆಯುತ್ತಿರುತ್ತವೆ. ಅದೇ ಕಾಲಕ್ಕೆ ಗಣೇಶ್‌ ಹೇಗೋ ಅಲ್ಲಿಗೆ ಬಂದುಬಿಡ್ತನೆ. ಅಲ್ಲದೆ ಬರಹಗಾರನನ್ನು ಯಾವ ರೀತಿಯ ಸಿದ್ಧಾಂತಗಳು ಕೈಹಿಡಿಯುತ್ತವೆ ಎಂಬುದು ಬಹಳ ಮುಖ್ಯ. ಕತೆಗಾರ ಕತೆಯನ್ನು ಕಟ್ಟಲು ಒಂದು ಹಳ್ಳಿ ಬೇಕು… ಅಲ್ಲಿಯ ಅನುಭವ, ಹಿಂಸೆ, ಜಾತಿ ಪದ್ದತಿಯ ಭೀಕರತೆ, ಸಣ್ಣತನಗಳು ಇವೆಲ್ಲವನ್ನೂ ದೃಷ್ಟಿಸುವ ಕಣ್ಣುಗಳನ್ನು ನಗರ ನೀಡುತ್ತದೆ. ಹಾಗೆಯೇ ಮೊಗಳ್ಳಿ ಗಣೇಶನಿಗೆ ಆ ನಗರದಲ್ಲಿ ಮಾರ್ಕ್ಸ್‌ ವಾದ ಸಿಗುತ್ತದೆ. ಎಂ ಡಿ ನಂಜುಂಡ ಸ್ವಾಮಿಯವರಿಂದ ಸಮಾಜವಾದ ಸಿಗುತ್ತದೆ, ಅಂಬೇಡ್ಕರ್‌ ವಾದ ಸಿಗುತ್ತದೆ, ಹಲವು ಚಳವಳಿಗಳು ಸಿಗುತ್ತವೆ. ಯಾವುದೇ ಬರಹಗಾರನಿಗೆ ಇಂತಹ ಸಿದ್ಧಾಂತಗಳೆಲ್ಲವೂ ಸೇರಿಕೊಳ್ಳಬೇಕು. ಆಗ ಮಾತ್ರ ಉತ್ತಮ ಬರಹಗಾರನಾಗಲು ಸಾಧ್ಯ” ಎಂದು ಹೇಳಿದರು.

ಮೊಗಳ್ಳಿ ಗಣೇಶ್‌ ಸಾಹಿತ್ಯ

“ಭಾರತದಂತಹ ದೇಶದಲ್ಲಿ ಸಿದ್ಧಾಂತಗಳಿಲ್ಲದೆ ಬರೆದರೆ ಈ ಲೋಕ ಅರ್ಥವಾಗುವುದಿಲ್ಲ. ಜಾತೀಯತೆ ಏನು ಮಾಡುತ್ತದೆಂಬುದು ತಿಳಿದಿರಬೇಕು. ವರ್ಗ ತಿಳಿಯಬೇಕಾದರೆ ಮಾರ್ಕ್ಸ್‌ನ ಸಿದ್ಧಾಂತ ನಮಗೆ ತಿಳಿದಿರಬೇಕು. ಜಾತಿ ವಿಷಯದಲ್ಲಿ ವ್ಯಕ್ತಿಗಳು ಎಷ್ಟು ಸಣ್ಣವರಾಗಿ, ಕ್ಷುದ್ರವಾಗಿ ವರ್ತಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಲೋಹಿಯಾವಾದ ಬೇಕು. ಸ್ತ್ರೀ ದಮನ ಎಲ್ಲಿ, ಹೇಗೆ ನಡೆಯುತ್ತಿದೆ ಎಂಬುದನ್ನು ತಿಳಿಯುವುದಕ್ಕೆ ಮಹಿಳಾವಾದ ಬೇಕು. ಇವೆಲ್ಲ ಅಂಶಗಳು ಬರಹಗಾರನ ಕಣ್ಣು ತೆರೆಸುತ್ತವೆ. ಇವೆಲ್ಲವೂ ಒಬ್ಬ ಕತೆಗಾರನ ಬರಹಗಳಲ್ಲಿ ಸೂಚಿಸುತ್ತವೆ” ಎಂದರು.

“ಮೊಗಳ್ಳಿ ಗಣೇಶ್‌ ಇಂತಹ ಹಿಂಸೆಗಳನ್ನು ತಮ್ಮ ಕೃತಿಗಳಲ್ಲಿ ಬರೆದರು. ನಿರರ್ಗಳವಾಗಿ ಬರೆಯುತ್ತಿದ್ದರು. ಬರೆಯುವುದನ್ನು ತುಂಬಾ ಎಂಜಾಯ್‌ ಮಾಡುತ್ತಿದ್ದರು. ದಲಿತರ ಮೇಲೆ ನಡೆಯುತ್ತಿರುವ ವರ್ಗ, ದಲಿತ ಸಮಾಜದಲ್ಲಿ ನಡೆಯುತ್ತಿರುವ ವರ್ಗ, ಮಹಿಳೆಯರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಇವೆಲ್ಲವನ್ನೂ ಗಣೇಶ್‌ ಬರೆದಿದ್ದಾರೆ. ಇವತ್ತಿಗೂ ಸರ್ಕಾರಿ ಶಾಲೆಯ ಅಂಗಳದಲ್ಲಿ ದಲಿತ ಮಕ್ಕಳನ್ನು ನೋಡಿದರೆ ತಿಳಿಯುತ್ತದೆ, ಆ ಸಮುದಾಯದ ಸ್ಥಿತಿ ಹೇಗಿದೆಯೆಂಬುದು. ಮೀಸಲಾತಿ ಬಗ್ಗೆ ಬಾಯಿಗೆ ಬಂದಂತೆ ಮಾತುನಾಡುವವರು ಈ ಹಿನ್ನೆಲೆಗಳನ್ನು ಗಮನಿಸಬೇಕು. ಅಲ್ಲಿ ನಿಜವಾದ ವಾಸ್ತವತೆ ತಿಳಿಯುತ್ತದೆ. ಈಗಲೂ ಅದೆಷ್ಟೋ ಮೊಗಳ್ಳಿ ಗಣೇಶ್‌ರನ್ನು ಅಲ್ಲಿ ಕಾಣಬಹುದು” ಎಂದು ಮರುಕಪಟ್ಟರು.

“ಒಂದು ಸಣ್ಣ ಹಾಸ್ಟೆಲ್‌ ಫೆಸಿಲಿಟಿ ಸಿಗುವುದರಿಂದ ಬೆಳೆಯುತ್ತಾರೆ, ಯಾರದ್ದಾದರೂ ಸಣ್ಣ ಸಹಾಯದಿಂದ ಬೆಳೆಯುತ್ತಾರೆ. ಹಾಗಾಗಿ ಶಾಲೆ ಕಾಲೇಜುಗಳಲ್ಲಿ ಇತರೆ ವಿದ್ಯಾರ್ಥಿಗಳು, ಶಿಕ್ಷಕರು ಇವೆಲ್ಲವನ್ನೂ ಮಾತನಾಡುವಾಗ ಅರ್ಥ ಮಾಡಿಕೊಂಡು ಚರ್ಚೆ ಮಾಡಬೇಕು. ಈ ಹಿಂದೆ ದ್ರೋಣಾಚಾರ್ಯನಿಗೆ ಮೀಸಲಾತಿ ಇತ್ತು. ಆದರೆ ಏಕಲವ್ಯನಿಗೆ ಮೀಸಲಾತಿ ಇರಲಿಲ್ಲ. ಈಗ ಮೀಸಲಾತಿ ಇದ್ದರೂ ದಲಿತರ ಸ್ಥಿತಿ ಇದಕ್ಕೆ ಹೊರತಾಗಿಲ್ಲ” ಎಂದು ಹೇಳಿದರು.

ಇದನ್ನೂ ಓದಿದ್ದೀರಾ? ಬೆಳಗಾವಿ | ಸಾವಿರಾರು ರೈತರ ಬೃಹತ್ ಪ್ರತಿಭಟನೆ ಭೂಸ್ವಾಧೀನಕ್ಕೆ ಸಮರ್ಪಕ ಪರಿಹಾರ, ನೀರಾವರಿ ಯೋಜನೆ ಜಾರಿಗೆ ಆಗ್ರಹ

“ನಿಜಕ್ಕೂ ಈ ದೇಶದ ಜಾತೀಯತೆಯ ಕರಾಳತೆಯನ್ನು ಅರಿಯಲು ಮೊಗಳ್ಳಿ ಗಣೇಶನ ಕೃತಿಗಳನ್ನು ಓದಬೇಕು. ಈ ದೇಶ ನಮಗೆ ಅರಿವಿಲ್ಲದೆಯೇ ನಮ್ಮನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಕಾಣಬಹುದು. ಗಣೇಶ್‌ ಅವರ ‘ತೊಟ್ಟಿಲು’ ಕೃತಿ ತುಂಬಾ ಅಚ್ಚುಕಟ್ಟಾಗಿ ಮೂಡಿಬಂದಿದೆ. ನೇರವಾಗಿ ಬರೆಯುತ್ತಿದ್ದರು. ಪ್ರಾಮಾಣಿಕವಾಗಿ ಬರೆಯುತ್ತಿದ್ದರು. ಜೀತಪದ್ದತಿಗೆ ಸಿಲುಕಿ ನಾಶವಾಗಬೇಕಿದ್ದ ಮೊಗಳ್ಳಿಯನ್ನು ಸ್ವತಂತ್ರವಾಗಿಸಿದ್ದು ಕತೆ.‌ ಸಾಹಿತ್ಯ ನಮಗೆ ಮುಕ್ತವಾಗುವುದನ್ನು, ಸ್ವತಂತ್ರವಾಗುವುದನ್ನು ಮತ್ತು ಅಭಿವ್ಯಕ್ತಿಸುವುದನ್ನು ಕಲಿಸುತ್ತದೆ. ಹಾಗೆಯೇ ಗಣೇಶ್‌ ಅವರು ಕಲಿತರು, ಕನ್ನಡಕ್ಕೆ ಕೊಡುಗೆಯನ್ನು ನೀಡಿದರು. ಹಾಗಾಗಿ ಗಣೇಶ್ ಸಾಹಿತ್ಯವನ್ನು ನೆನಪಿಸಿಕೊಳ್ಳುತ್ತಿರುವುದು ಅಭಿನಂದನೀಯ. ಈ ಕೃತಜ್ಞತೆ ಅವನಿಗೆ ಸಲ್ಲಬೇಕಾದ್ದು, ಮುಂದೆಯೂ ಸಲ್ಲಬೇಕಾದದ್ದು” ಎಂದರು. ‌ ‌

ಎನ್‌ಇಎಸ್‌ ಅಧ್ಯಕ್ಷ ಡಾ ಹೆಚ್‌ ಎನ್‌ ಸುಬ್ರಹ್ಮಣ್ಯ, ಗೌರವ ಕಾರ್ಯದರ್ಶಿ ವಿ. ವೆಂಕಟಶಿವಾ ರೆಡ್ಡಿ, ಪೂರ್ಣಚಂದ್ರ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಕೆ ಸಿ ಶಿವಾರೆಡ್ಡಿ, ಕಾರ್ಯದರ್ಶಿ ಎಂ ಸಿ ನರೇಂದ್ರ, ಶೈಕ್ಷಣಿಕ ಸಂಚಾಲಕ ಕೇಶವ ಮುಳಗಿ ಹಾಗೂ ನ್ಯಾಷನಲ್‌ ಕಾಲೇಜು ಚೇರ್ಮನ್‌ ಪಿ ಎಲ್‌ ವೆಂಕಟರಾಮ ರೆಡ್ಡಿ, ಶಿವಣ್ಣ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಬ್ಬು ಬೆಳೆಗಾರರಿಂದ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಬಂದ್

ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ...

ಹಾಲು, ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾಪಕ್ಕೆ ವಿರೋಧ; ವಿಜಯಪುರದಲ್ಲಿ ಎಸ್‌ಯುಸಿಐಸಿ ಪ್ರತಿಭಟನೆ

ನವೆಂಬರ್ 1ರಿಂದ ಜಾರಿಗೆ ಬರುವಂತೆ ಜಾರಿಗೊಳಿಸಿರುವ, ಪ್ರತಿ ಲೀಟರ್‌ ಹಾಲಿಗೆ ₹8...

ಗ್ಯಾನೇಶ್ ವಿರುದ್ಧ ‘ಇಂಡಿಯಾ’ ಒಕ್ಕೂಟದ ಸಾಂಕೇತಿಕ ‘ಮಹಾಭಿಯೋಗ’: ಮುಂದುವರಿದ ವಾಗ್ದಾಳಿ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ವಿರುದ್ಧ 'ಇಂಡಿಯಾ'...

ವಿಜಯಪುರ |ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ: ನ.30ರವರೆಗೆ ಅವಕಾಶ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2026-27ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ,...