ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ 35 ಮಂದಿ ಸಾಧಕರನ್ನು ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್. ರಮ್ಯಾ ತಿಳಿಸಿದ್ದಾರೆ.
ಉಪವಿಭಾಗಾಧಿಕಾರಿ ಡಾ. ಕೆ.ಜೆ. ಕಾಂತರಾಜ್ ನೇತೃತ್ವದ ಆಯ್ಕೆ ಸಮಿತಿಯು ವಿಸ್ತೃತ ಚರ್ಚೆ ನಡೆಸಿ ಸಾಧಕರನ್ನು ಆಯ್ಕೆ ಮಾಡಿದೆ. ನವೆಂಬರ್ 1ರಂದು ಚಿತ್ರದುರ್ಗ ನಗರದ ಶ್ರೀ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾಡಳಿತದಿಂದ ಪ್ರಶಸ್ತಿ ಪ್ರದಾನ ಮಾಡಿ ಸಾಧಕರನ್ನು ಸನ್ಮಾನಿಸಲಾಗುವುದು.
ಕ್ಷೇತ್ರವಾರು ಪ್ರಶಸ್ತಿ ಪುರಸ್ಕೃತರು
ರಂಗಭೂಮಿ: ಚಳ್ಳಕೆರೆ ತಾಲ್ಲೂಕಿನ ಸಿದ್ದೇಶ್ವರನ ದುರ್ಗದ ಕ್ಯಾದಿಗುಂಟೆಯ ಎಸ್.ಬಿ. ನರಸಿಂಹಮೂರ್ತಿ, ಚಿತ್ರದುರ್ಗ ತಾಲ್ಲೂಕಿನ ಎಂ.ಕೆ. ಹಟ್ಟಿಯ ಗದಿಗಯ್ಯ ಕಿತ್ತೂರುಮಠ ಮತ್ತು ಉಪ್ಪನಾಯಕನಹಳ್ಳಿಯ ಸಿ. ಚಂದ್ರಪ್ಪ.
ಸಾಹಿತ್ಯ: ಚಳ್ಳಕೆರೆ ತಾಲ್ಲೂಕಿನ ತ್ಯಾಗರಾಜನಗರದ ಹೆಚ್. ನಾಗೇಂದ್ರಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹುರುಳಿ ಎಂ. ಬಸವರಾಜ್, ಹೊಳಲ್ಕೆರೆ ತಾಲ್ಲೂಕಿನ ಕಡೂರು ಗ್ರಾಮದ ಶಿವಪ್ರಕಾಶ್ ಆರ್. ಕುಂಬಾರ, ಚಿತ್ರದುರ್ಗ ತಾಲ್ಲೂಕಿನ ತುರುವನೂರಿನ ಕೆ. ನರಸಿಂಹಪ್ಪ ಹಾಗೂ ಚಳ್ಳಕೆರೆ ತಾಲ್ಲೂಕಿನ ಜಡೇಕುಂಟೆ ಗ್ರಾಮದ ಜಡೇಕುಂಟೆ ಮಂಜುನಾಥ್.
ಸಂಗೀತ: ಹೊಸದುರ್ಗ ತಾಲ್ಲೂಕಿನ ಹೊನ್ನೇಕೆರೆ ಗ್ರಾಮದ ಹೆಚ್.ಜಿ. ನಾಗರಾಜಪ್ಪ, ಶ್ರೀರಾಂಪುರದ ಜಿ.ಪಿ. ಜಯಪ್ರಕಾಶ್, ಚಿತ್ರದುರ್ಗ ತಾಲ್ಲೂಕಿನ ಅಯ್ಯನಹಳ್ಳಿ ಆಯಿತೋಳು ಗ್ರಾಮದ ಜಿ.ಎನ್. ಗೋಂದಾಳಪ್ಪ, ಚಿತ್ರದುರ್ಗದ ಗೌಸ್‌ಪೀರ್ ಹಾಗೂ ಚಳ್ಳಕೆರೆ ತಾಲ್ಲೂಕಿನ ನಲಗೇತನಹಟ್ಟಿ ಗ್ರಾಮದ ಮುತ್ತುರಾಜ್.
ಜಾನಪದ: ನಗಾರಿ ವಾದ್ಯದಲ್ಲಿ ಚಿತ್ರದುರ್ಗ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ವೆಂಕಟೇಶ್ ನಾಯ್ಕ್ ಹಾಗೂ ಉರುಮೆ ಮತ್ತು ಕೀಲುಕುದುರೆ ಕಲೆಯಲ್ಲಿ ಚಿತ್ರದುರ್ಗ ನಗರದ ಎಂ. ನಿಂಗರಾಜ್.
ಕ್ರೀಡೆ: ಯೋಗ ಕ್ಷೇತ್ರದಲ್ಲಿ ಚಿತ್ರದುರ್ಗ ವಿದ್ಯಾನಗರದ ಸುಭದ್ರ ಶಂಕರನಾಥ ಶೆಟ್ಟಿ, ಕ್ರೀಡಾ ಕ್ಷೇತ್ರದಲ್ಲಿ ಚಿತ್ರದುರ್ಗ ನಗರದ ಯು. ಸತೀಶ್ ಕುಮಾರ್ ಹಾಗೂ ಚಳ್ಳಕೆರೆ ತಾಲ್ಲೂಕಿನ ಕಾಟಪ್ಪನಹಟ್ಟಿಯ ವಿ. ನಾರಾಯಣರಾವ್.
ಚಿತ್ರಕಲೆ: ಚಿತ್ರದುರ್ಗ ತಾಲ್ಲೂಕಿನ ತುರುವನೂರಿನ ಡಾ. ಡಿ.ಎಸ್. ಶ್ವೇತಾ ಹಾಗೂ ಹೊಸದುರ್ಗ ತಾಲ್ಲೂಕಿನ ಕಡಿವಾಣಕಟ್ಟೆ ಗ್ರಾಮದ ಡಾ. ಚಂದ್ರು.
ವೈದ್ಯಕೀಯ: ಚಳ್ಳಕೆರೆಯ ಡಾ. ಎಫ್.ವಿ. ನಂದಿನಿ ಲಾವಣ್ಯ ಹಾಗೂ ಚಿತ್ರದುರ್ಗ ನಗರದ ಟಿ. ಮಂಜುನಾಥ್.
ಶಿಕ್ಷಣ: ಚಿತ್ರದುರ್ಗದ ಸಂಗೇನಹಳ್ಳಿಯ ಅಶೋಕ್ ಕುಮಾರ್ ಹಾಗೂ ಕೂನಬೇವು ಗ್ರಾಮದ ಅನಿತಾ ಲಕ್ಷ್ಮೀ.
ಸಮಾಜ ಸೇವೆ: ಮೊಳಕಾಲ್ಮೂರು ತಾಲ್ಲೂಕಿನ ಚಿಕ್ಕೋಬನಹಳ್ಳಿಯ ನಾಗರಾಜ ಹಾಗೂ ಚಿತ್ರದುರ್ಗ ನಗರದ ಡಿ.ಎಚ್. ನಟರಾಜ.
ಕೃಷಿ: ಚಳ್ಳಕೆರೆಯ ನರಸಿಂಹಮೂರ್ತಿ ಹಾಗೂ ಚಿತ್ರದುರ್ಗ ತಾಲ್ಲೂಕಿನ ಹುಣಸೆಕಟ್ಟೆ ಗ್ರಾಮದ ಕೆ.ಎಂ. ಕಾಂತರಾಜ್.
ಸಂಕೀರ್ಣ: ಚಿತ್ರದುರ್ಗ ನಗರದ ಬಿ. ಬಸವರಾಜಪ್ಪ.
ದೃಶ್ಯ ಮಾಧ್ಯಮ: ಚಿತ್ರದುರ್ಗ ಪಬ್ಲಿಕ್ ಟಿವಿಯ ಜಿಲ್ಲಾ ವರದಿಗಾರ ಎಸ್. ಸಿದ್ದರಾಜು.
ಪತ್ರಿಕಾ ಮಾಧ್ಯಮ: ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿ ಅರಳೀಕೆರೆ ಗ್ರಾಮದ ಡಾ.ವಿ. ವೀರಣ್ಣ, ಚಿತ್ರದುರ್ಗ ವಿಜಯವಾಣಿ ವಿಶೇಷ ವರದಿಗಾರ ಡಿ.ಪಿ. ನಾಗರಾಜ ಶ್ರೇಷ್ಠಿ, ಹಿರಿಯೂರು ತಾಲ್ಲೂಕಿನ ಸೊಂಡೆಕೆರೆ ಗ್ರಾಮದ ಕೆ. ಶಿವಣ್ಣ, ಚಳ್ಳಕೆರೆ ಗಾಂಧಿನಗರದ ಟಿ.ಜೆ. ತಿಪ್ಪೇಸ್ವಾಮಿ ಹಾಗೂ ಚಿತ್ರದುರ್ಗ ನಗರದ ಕೆಳಗೋಟೆಯ ಸಿ.ಪಿ. ಮಾರುತಿ.
ಒಟ್ಟು 35 ಮಂದಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 1ರಂದು ನಡೆಯಲಿದೆ.




