ಬೆಂಗಳೂರು | 41 ಅಂಡರ್‌ಪಾಸ್‌ಗಳ ಸ್ಥಿತಿಗತಿ ವರದಿ ಸಿದ್ಧಪಡಿಸಿದ ಬಿಬಿಎಂಪಿ

Date:

  • ಅಂಡರ್‌ಪಾಸ್‌ಗಳ ನಿರ್ವಹಣೆಗಾಗಿ ಹಣ ವ್ಯಯಿಸುತ್ತಿರುವ ಬಿಬಿಎಂಪಿ
  • ಬಿಬಿಎಂಪಿ ನಿರ್ಲಕ್ಷ್ಯದಿಂದಾಗಿ ಸಾವನ್ನಪ್ಪಿದ ಸಾಫ್ಟವೇರ್ ಎಂಜಿನಿಯರ್

ಬೆಂಗಳೂರಿನ ಕೆ ಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಮಳೆ ನೀರಿನಲ್ಲಿ ಸಿಲುಕಿ ಯುವತಿ ಸಾವನ್ನಪ್ಪಿದ ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಚ್ಚೆತ್ತುಕೊಂಡಿದೆ. ರೈಲ್ವೆ ಸೇತುವೆಗಳು ಸೇರಿದಂತೆ 41 ಅಂಡರ್‌ಪಾಸ್‌ಗಳ ಸ್ಥಿತಿಗತಿಯ ಬಗೆಗಿನ ವರದಿ ಸಿದ್ಧಗೊಳಿಸಿದೆ. ಈ ವರದಿಯನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲು ನಿರ್ಧರಿಸಿದೆ.

ನಗರದ ಹಲವಾರು ಅಂಡರ್‌ಪಾಸ್‌ಗಳ ನಿರ್ವಹಣೆಗಾಗಿ ಬಿಬಿಎಂಪಿ ಹಣ ವ್ಯಯಿಸುತ್ತಿದೆ. ಆದರೂ, ಸೇತುವೆಗಳು ಗುಣಮಟ್ಟದಿಂದ ಕೂಡಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

“ಸಾರ್ವಜನಿಕರಿಗೆ ಲಭ್ಯವಾಗುವಂತೆ ಅಧಿಕೃತ ವೆಬ್‌ಸೈಟ್‌ನಲ್ಲಿ ವರದಿಯನ್ನು ಹಾಕಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ರಸ್ತೆ ಮೂಲಸೌಕರ್ಯ ವಿಭಾಗವು ನಗರದ ನಾನಾ ಭಾಗಗಳಲ್ಲಿ ಇರುವ 53 ಅಂಡರ್‌ಪಾಸ್‌ಗಳ ಪೈಕಿ 41 ಅಂಡರ್‌ಪಾಸ್‌ಗಳ ಸಮೀಕ್ಷೆ ಪೂರ್ಣಗೊಳಿಸಿದೆ. ಇದುವರೆಗೆ 14 ಅಂಡರ್‌ಪಾಸ್‌ಗಳ ಆಡಿಟ್ ವರದಿಗಳನ್ನು ಅಪ್ಲೋಡ್ ಮಾಡಲಾಗಿದೆ” ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೆ ಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಮೇ 21ರಂದು ಯುವತಿ ಭಾನುರೇಖಾ ಅವರು ತಮ್ಮ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಕಾರು ಮಳೆ ನೀರಿನಲ್ಲಿ ಮುಳುಗಿತ್ತು. ಭಾನುರೇಖಾ ಸಾವನ್ನಪ್ಪಿದ್ದರು. ಬಿಬಿಎಂಪಿ ನಿರ್ಲಕ್ಷ್ಯದಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ನಗರದಲ್ಲಿರುವ ಹಲವು ಅಂಡರ್‌ಪಾಸ್‌ಗಳನ್ನು ನೇರವಾಗಿ ಬಿಬಿಎಂಪಿಯೇ ನಿರ್ವಹಿಸುತ್ತಿದೆ. ಕೆಲವು ಅಂಡರ್‌ಪಾಸ್‌ಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ಒಪ್ಪಿಸಿದೆ ಎಂಬುದು ಸಮೀಕ್ಷೆ ವೇಳೆ ತಿಳಿದುಬಂದಿದೆ. ಅಂಡರ್‌ಪಾಸ್‌ಗಳ ನೀರು ಸರಾಗವಾಗಿ ಮಳೆ ಚರಂಡಿಗಳಿಗೆ ಹರಿದುಹೋಗುವಂತೆ ನೋಡಿಕೊಳ್ಳಲು ಪಾಲಿಕೆಯು ಹೊರಗುತ್ತಿಗೆ ನೀಡುತ್ತಿದೆ ಎಂದು ಹೇಳಲಾಗಿದೆ.

ನಾಯಂಡಹಳ್ಳಿ, ಆನಂದ್ ನಗರ (ಬಳ್ಳಾರಿ ರಸ್ತೆ), ಕಂಟೋನ್ಮೆಂಟ್ ರೈಲು ನಿಲ್ದಾಣ (ಜಯಮಹಲ್ ಸಂರ್ಕಿಸುವ ರಸ್ತೆ), ಆರ್‌ ಎಮ್‌ ವಿ ಲೇಔಟ್ ಮತ್ತು ಯಲಹಂಕ ರೈಲ್ವೆ ಕೆಳಸೇತುವೆಗಳ ನಿರ್ವಹಣೆಯನ್ನು ಬಿಬಿಎಂಪಿ ಹೊರಗುತ್ತಿಗೆಗೆ ನೀಡಿದೆ.

ಸಿಎನ್ಆರ್ ರಸ್ತೆ, ಕುವೆಂಪು ವೃತ್ತ (ಹೊಸ ಬಿಇಎಲ್ ರಸ್ತೆ ಕಡೆಗೆ) ಮತ್ತು ಮೆಕ್ರಿ ವೃತ್ತದಲ್ಲಿರುವ ಅಂಡರ್‌ಪಾಸ್‌ಗಳನ್ನು ಅಲ್ಲಿ ಜಾಹೀರಾತು ಫಲಕಗಳನ್ನು ಹಾಕುವ ಹಕ್ಕು ಹೊಂದಿರುವ ಖಾಸಗಿ ಸಂಸ್ಥೆಗಳು ನಿರ್ವಹಿಸುತ್ತಿವೆ.

ಈ ಅಂಡರ್‌ಪಾಸ್‌ಗಳು ಪದೇಪದೆ ಜಲಾವೃತವಾಗುತ್ತಿವೆ. ಒಳಚರಂಡಿಗೆ ನೀರು ಹರಿಯುವ ಜಾಗದಲ್ಲಿ ಕಸ, ಮಣ್ಣು ಮತ್ತು ಹೂಳನ್ನು ತೆರವುಗೊಳಿಸದೇ ಇರುವುದೇ ಇಂದಿನ ಪರಿಸ್ಥಿತಿಗೆ ಕಾರಣವೆಂದು ತಜ್ಞರು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೆರೆಗೆ ಕೊಳಚೆ ನೀರು ಹರಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ : ಸಚಿವ ಈಶ್ವರ ಖಂಡ್ರೆ

ಸ್ಯಾಂಕಿ ರಸ್ತೆ (ಗಾಲ್ಫ್ ಕ್ಲಬ್ ಹತ್ತಿರ), ಕಾವೇರಿ ಥಿಯೇಟರ್ (ಭಾಷ್ಯಂ ವೃತ್ತ ಮತ್ತು ಬಳ್ಳಾರಿ ರಸ್ತೆ ನಡುವೆ), ಮತ್ತು ಕೆ ಆರ್ ವೃತ್ತ (ನೃಪತುಂಗ ರಸ್ತೆ) ಈ ಮೂರು ‘U’ ಆಕಾರದ ಅಂಡರ್‌ಪಾಸ್‌ಗಳಲ್ಲಿ ಮೇಲ್ಛಾವಣಿ ಹಾಕಬೇಕೆಂದು ವರದಿ ಸೂಚಿಸಿದೆ.

ಕೆ ಆರ್ ವೃತ್ತ, ನೆಹರು ವೃತ್ತ ಮತ್ತು ಶಿವಾನಂದ ವೃತ್ತ ಸೇರಿದಂತೆ ನಗರದ ಕೇಂದ್ರ ಭಾಗದಲ್ಲಿರುವ ಅಂಡರ್‌ಪಾಸ್‌ಗಳನ್ನು ಮುಚ್ಚಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂಎನ್ ಅನುಚೇತ್ ತಿಳಿಸಿದ್ದಾರೆ.

“ಹೊರ ವರ್ತುಲ ರಸ್ತೆಯಲ್ಲಿರುವ ಹೆಬ್ಬಾಳದಿಂದ ನಾಗವಾರ ಮತ್ತು ಕಾಡುಬೀಸನಹಳ್ಳಿಯಿಂದ ಕೆಆರ್ ಪುರಂ ಮಾರ್ಗದ ಅಂಡರ್‌ಪಾಸ್‌ಗಳಲ್ಲಿಯೂ ನೀರು ತುಂಬಿದ್ದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ರಸ್ತೆಯುದ್ದಕ್ಕೂ ಇರುವ ಮಳೆನೀರು ಚರಂಡಿಗಳಲ್ಲಿ ಪ್ಲಾಸ್ಟಿಕ್, ಹೂಳು, ಮರಳು ಮತ್ತು ಇತರ ಕಸ ತುಂಬಿರುವುದು ರಸ್ತೆ ಜಲಾವೃತವಾಗಲು ಕಾರಣವಾಗಿದೆ. ಈ ಪ್ರದೇಶಗಳಲ್ಲಿ ಸಾಕಷ್ಟು ನಿರ್ಮಾಣ ಚಟುವಟಿಕೆಗಳು ನಡೆಯುತ್ತಿವೆ. ಅಲ್ಲಿನ ತ್ಯಾಜ್ಯಗಳು ಚರಂಡಿಗಳನ್ನು ಸೇರುತ್ತಿವೆ” ಎಂದು ಅನುಚೇತ್ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂ.ಗ್ರಾಮಾಂತರ | ಕಾರ್ಮಿಕರ ಸುಲಿಗೆ ಮಾಡುತ್ತಿದ್ದ ಮೂವರ ಬಂಧನ

ರಾತ್ರಿ ವೇಳೆ ಕಾರ್ಮಿಕರನ್ನು ಬೆದರಿಸಿ ಹಣ ಮತ್ತು ಮೊಬೈಲ್‌ ಫೋನ್‌ ಸುಲಿಗೆ...

ಬೆಂಗಳೂರು ಜೋಡಿ ಕೊಲೆ | ವಿವಾಹೇತರ ಸಂಬಂಧವೇ ಕೊಲೆಗೆ ಕಾರಣ?

ಬೆಂಗಳೂರಿನ ಸಾರಕ್ಕಿ ಪಾರ್ಕ್‌ನಲ್ಲಿ ನಡೆದಿದ್ದ ಜೋಡಿ ಕೊಲೆಗೆ ಸಂಬಂಧ ಕೆಲವು ಮಾಹಿತಿಗಳು...

ಬೆಂಗಳೂರು | ಹಾಡಹಗಲೇ ಪಾರ್ಕ್‌ನಲ್ಲಿ ಕುಳಿತಿದ್ದ ಇಬ್ಬರ ಬರ್ಬರ ಹತ್ಯೆ

ರಾಜ್ಯ ರಾಜಧಾನಿ ಬೆಂಗಳೂರಿನ ಸಾರಕ್ಕಿ ಮಾರ್ಕೆಟ್ ಬಳಿಯ ಪಾರ್ಕ್‌ನಲ್ಲಿ ಕುಳಿತಿದ್ದ ಇಬ್ಬರನ್ನು...

ಬೆಂಗಳೂರು |ತಲಾ ₹1 ಲಕ್ಷ ದಂಡ ಬಾಕಿ ಉಳಿಸಿಕೊಂಡಿವೆ 123 ವಾಹನಗಳು

ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿ, ಹೆಚ್ಚು ದಂಡಕ್ಕೆ ಗುರಿಯಾಗಿರುವ ವಾಹನಗಳನ್ನು...