ರಾಜ್ಯದಲ್ಲಿ ಅಕಾಲಿಕ ಮಳೆ : ಸಿಡಿಲು ಬಡಿದು ಐವರು ಸಾವು

Date:

  • ಮಳೆಯಿಂದ ಮನೆ ಚಾವಣಿ ಕುಸಿದು ಇಬ್ಬರು ಸಾವು
  • ಕುರಿಗಳು ಮೇಯಿಸಲು ಹೋದ ಮೂವರು ಮೃತ

ಬೇಸಿಗೆಯ ಬೇಗೆಯ ನಡುವೆ ರಾಜ್ಯದಲ್ಲಿ ಮಳೆಯ ಆರ್ಭಟವೂ ಹೆಚ್ಚಾಗಿದ್ದು, ಶುಕ್ರವಾರ ಗುಡುಗು ಸಿಡಿಲು ಸಹಿತ ಸುರಿದ ಭಾರೀ ಮಳೆಗೆ ಐದು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹದಿಮೂರು ಜಾನುವಾರುಗಳು ಮೃತಪಟ್ಟಿವೆ.

ದಕ್ಷಿಣ ಕನ್ನಡ, ಉಜಿರೆ, ಧರ್ಮಸ್ಥಳ, ಮುಂಡಾಜೆ, ಗದಗ, ಕೊಪ್ಪಳ, ಕಲಬುರಗಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳ ಹಲವೆಡೆ ಶುಕ್ರವಾರ ಆಲಿಕಲ್ಲು ಸಹಿತ ಜೋರು ಮಳೆಯಾಗಿದೆ. ಜೋರು ಮಳೆಗೆ ಕೆಲವೆಡೆ ಬೇಸಿಗೆ ಬೆಳೆಗಳಿಗೆ ಹಾನಿಯಾಗಿದೆ. ಆಲಿಕಲ್ಲು ಸಹಿತ ಮಳೆಯ ಅಬ್ಬರದಿಂದ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.

ಗದಗ ತಾಲೂಕಿನ ಲಿಂಗಧಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ  ಶರಣಪ್ಪ ಪುರದ (19) ಮತ್ತು ದೇವರಾಜ ಹನುಮಂತಪ್ಪ (19) ಮೃತಪಟ್ಟವರು. ಇನ್ನೊಬ್ಬ ಕುರಿಗಾಹಿ ಸುನೀಲ್‌ ಎಂಬಾತ ಗಾಯಗೊಂಡಿದ್ದಾರೆ. ಇವರನ್ನು ನಗರದ ಜಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರು ಯುವಕರು ಕುರಿಗಳ ಮೇಯಿಸಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಬಿಲ್ವಾಡ ಬಿ ಗ್ರಾಮದ ರೈತ ಬೋಗಪ್ಪ(60) ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ಮಳೆಯಿಂದ ಮನೆ ಚಾವಣಿ ಕುಸಿದು ಯಂಕೂಬಾಯಿ ಕುಲಕರ್ಣಿ(79), ಶಾರವ್ವ ಪತ್ತಾರ(58) ಮೃತಪಟ್ಟಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಅನುಮತಿ ಪಡೆಯದೆ ಜಾಹೀರಾತು ನೀಡಿದರೆ ಅಭ್ಯರ್ಥಿ ವಿರುದ್ಧ ಅಗತ್ಯ ಕ್ರಮ: ಆಯುಕ್ತ

ಸಿಡಿಲು ಸಹಿತ ಸುರಿದ ಭಾರೀ ಮಳೆಗೆ ಜಾನುವಾರುಗಳು ಮೃತಪಟ್ಟಿವೆ. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ 5 ಜಾನುವಾರುಗಳು, ಕೊಪ್ಪಳದಲ್ಲಿ ಎರಡು ಜಾನುವಾರುಗಳು, ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನಲ್ಲಿ 6 ಜಾನುವಾರುಗಳು ಹಾಗೂ ಅಫಜಲಪುರ ತಾಲ್ಲೂಕಿನ ತೆಲ್ಲೋಣಗಿ ಗ್ರಾಮದಲ್ಲಿ ಬಸವರಾಜ ಮಾಗಣಗೇರಿ ಅವರಿಗೆ ಸೇರಿರುವ ಎರಡು ಎತ್ತುಗಳು ಮೃತಪಟ್ಟಿವೆ.

ರಾಜ್ಯದಲ್ಲಿ ಮುಂದಿನ ಐದು ಮಳೆ

ರಾಜ್ಯದಲ್ಲಿ ಏಪ್ರಿಲ್ 12ರವರೆಗೆ ಜೋರು ಮಳೆ ಆಗುವ ಸಾಧ್ಯತೆಯಿದ್ದು, ಏ.8ರಂದು ಅಧಿಕ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿಯ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ, ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಧಾರವಾಡ, ಹಾವೇರಿ, ರಾಯಚೂರು, ಕೊಪ್ಪಳ ಜಿಲ್ಲೆ ಸೇರಿದಂತೆ ಹಲವೆಡೆ ಮಳೆ ಬೀಳಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ದಾವಣಗೆರೆ, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಹಲವೆಡೆ ಮಳೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಇಂಗ್ಲಿಷ್‌ ಬ್ಯಾನರ್ ಹರಿದು ಕರವೇ ಕಾರ್ಯಕರ್ತರ ಆಕ್ರೋಶ; ವಶಕ್ಕೆ ಪಡೆದ ಪೊಲೀಸರು

ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ 4ರಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಅದಕ್ಕೂ ಮುನ್ನ...

ಬೆಂಗಳೂರು | ಬ್ರ್ಯಾಂಡ್‌ ಹೆಸರು ಬಳಸಿ ನಕಲಿ ಬಟ್ಟೆ ತಯಾರು: ಸಿಸಿಬಿ ದಾಳಿ

ಅರ್ಮಾನಿ, ಲಿವೈಸ್, ಅಲ್ಲೆನ್ ಸೊಲ್ಲಿ, ಬುರ್ಬೆರಿ ಲೆದರ್ ಟ್ಯಾಗ್ಸ್, ಪೋಲೊ, ಎಲ್​ಪಿ...

ಮಂಡ್ಯ | ರಸ್ತೆಯಲ್ಲಿ ಸಂಚರಿಸುವ ಒಂಟಿ ಮಹಿಳೆಯರಿಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ

ಬೈಕ್​​ನಲ್ಲಿ ಬಂದು ರಸ್ತೆಯಲ್ಲಿ ಓಡಾಡುವ ಒಂಟಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ...

ಮೈತ್ರಿ ಕಗ್ಗಂಟು | ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ಸಿಗುವುದೇ ಡೌಟು!

ಲೋಕಸಭಾ ಚುನಾವಣೆಗಾಗಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ. ರಾಜ್ಯದಲ್ಲಿ...