ಪ್ಯಾಲೆಸ್ತೀನ್ ಜನರಿಗಾಗಿ ಒಗ್ಗೂಡಿದ ಬೆಂಗಳೂರಿನ ಮಂದಿ

Date:

ಕಳೆದ ಒಂದು ವರ್ಷದಿಂದ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಿಂದ ಪ್ಯಾಲೆಸ್ತೀನ್ ಧ್ವಂಸವಾಗಿದೆ. ಈಗ ಇರಾನ್, ಸಿರಿಯಾ, ಯೆಮೆನ್ ಮತ್ತು ಲೆಬನಾನ್ ದೇಶಗಳ ಮೇಲೆ ದಾಳಿ ನಡೆಸುತ್ತಿದೆ. ಇಸ್ರೇಲ್ ನಡೆಸಿದ ಕ್ರೂರ ದಾಳಿಯಲ್ಲಿ ಕನಿಷ್ಟ 16,500 ಮಕ್ಕಳೂ ಸೇರಿ ಸುಮಾರು 1,86,000 ಜನ ಸಾವನ್ನಪ್ಪಿದ್ದಾರೆ. ಇದನ್ನು ಖಂಡಿಸಿ ನ್ಯಾಯ ಮತ್ತು ಶಾಂತಿಗಾಗಿ ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಪ್ರತಿಭಟನೆಯನ್ನು ಆಯೋಜಿಸಿತ್ತು.

- Advertisement -

ಪ್ರತಿಭಟನೆಯಲ್ಲಿ ನಾಗರಿಕರು, ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು, ಸಂಘಟನೆಗಳು, ಮಹಿಳಾ ಹಕ್ಕುಗಳ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳು ಸೇರಿದಂತೆ ನಜನರು ಭಾಗಿಯಾಗಿ ಪ್ಯಾಲೇಸ್ತೀನ್ ಪರ ನಾವಿದ್ದೇವೆ ಎಂಬ ನಿಲುವು ಸೂಚಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದುಕೊಂಡಿರುವುದೇ ಚುನಾವಣಾ ವ್ಯವಸ್ಥೆಯ ಮೇಲಿರುವ ಸಾರ್ವಜನಿಕರ ಅಪಾರ ನಂಬಿಕೆಯಿಂದ. ಆದರೆ, ಚುನಾವಣಾ ಆಯೋಗವು (ECI) ದೇಶಾದ್ಯಂತ ಜಾರಿಗೆ...

ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ...

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ ಪತ್ರದಲ್ಲಿ ಬರೆದಿದ್ದ ಭಗತ್‌ ಸಿಂಗ್ ವಿಚಾರಗಳು 2026ರಲ್ಲೂ ಬದುಕಿವೆ. ಅದಕ್ಕಾಗಿ ಇನ್ನೂ ಸಾವಿರಾರು ವರ್ಷ ಭಾರತೀಯರ ಹೃದಯಗಳಲ್ಲಿ ಬದುಕಿರುತ್ತಾರೆ. ಇಂದು...

ಅಶೋಕ್ ಸಿಂಘಾಲ್ ಜನ್ಮಶತಮಾನೋತ್ಸವ: ಕೋಮುವಾದದ ರೂವಾರಿಯ ವೈಭವೀಕರಣ –...

ಬೆಂಗಳೂರಿನಿಂದ ದೆಹಲಿಯವರೆಗೆ ನಡೆಯುತ್ತಿರುವ ಅಶೋಕ್ ಸಿಂಘಾಲ್ ಅವರ ಜನ್ಮಶತಮಾನೋತ್ಸವದ ಆಚರಣೆಗಳು ಭಾರತದ ಪ್ರಜಾಸತ್ತಾತ್ಮಕ ಭವಿಷ್ಯಕ್ಕೆ ಒಡ್ಡಿರುವ ಅಪಾಯದ ಮುನ್ಸೂಚನೆಯಾಗಿವೆ. ಕೋಮು ಸೌಹಾರ್ದತೆಗೆ ಕೊಳ್ಳಿ ಇಟ್ಟ, ಹಿಂಸಾಚಾರಗಳನ್ನು ಪ್ರೇರೇಪಿಸಿದ ಮತ್ತು ದೇಶದ ಬಹುತ್ವವನ್ನು ಸದಾ...

ಪ್ಯಾಲೆಸ್ತೀನಿಯರನ್ನ ಕೊಲ್ಲುವುದು, ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸುವುದು, ಬಂಧಿತರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಅವರಿಗೆ ಚಿತ್ರಹಿಂಸೆ ನೀಡುವುದು ಸೇರಿದಂತೆ ಪ್ಯಾಲೇಸ್ಟಿನಿಯನರ ಜೀವನವನ್ನು ನಾಶಪಡಿಸಲು ಇಸ್ರೇಲ್‌ ಮುಂದಾಗಿದೆ. ಇಸ್ರೇಲ್‌ನ ಈ ನಡೆ ಖಂಡನೀಯ. ಹಾಗಾಗಿ, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ತಕ್ಷಣವೇ ಇಸ್ರೇಲ್ ಆಡಳಿತದೊಂದಿಗಿನ ಸಂಬಂಧವನ್ನು ಕಡಿತಗೊಳಿಸಬೇಕು. ಪ್ಯಾಲೆಸ್ತೀನಿಯರ ನರಮೇಧದಲ್ಲಿ ಭಾಗಿಯಾಗುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಇಸ್ರೇಲ್ ಮತ್ತು ಪ್ಯಾಲೇಸ್ತೀನ್ ನಡುವೆ ಯುದ್ಧ ಕಳೆದ ಒಂದು ವರ್ಷದಿಂದ ನಡೆಯುತ್ತಿದೆ. ಕನಿಷ್ಠ 16,500 ಮಕ್ಕಳನ್ನು ಒಳಗೊಂಡಂತೆ ಸುಮಾರು 1,86,000 ಪ್ಯಾಲೆಸ್ತೀನಿಯರನ್ನು ಕೊಂದಿರುವ ಬಗ್ಗೆ ವರದಿಯಾಗಿದೆ. ಪ್ಯಾಲೆಸ್ತೀನ್‌ನಲ್ಲಿ 2.3 ದಶಲಕ್ಷಕ್ಕೂ ಹೆಚ್ಚು ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ. ಈ ಯುದ್ಧದಲ್ಲಿ 20,000 ಪ್ಯಾಲೇಸ್ತೀನರು ಕಾಣೆಯಾಗಿದ್ದಾರೆ. 902 ಗಾಝಾ ಕಟುಂಬಗಳನ್ನು ನಾಶ ಮಾಡಿದ್ದಾರೆ. 1,364 ಕುಟುಂಬಗಳಲ್ಲಿ ಕೇವಲ ಒಬ್ಬರು ಬದುಕಿ ಉಳಿದಿದ್ದಾರೆ.

Screenshot 2024 10 05 204942

ಪ್ರತಿಭಟನೆಯಲ್ಲಿದ್ದ ಸಾಮಾಜಿಕ ಕಾರ್ಯಕರ್ತ ತನ್ವೀರ್ ಅಹಮದ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಗಾಝಾ, ಲೆಬನಾನ್, ಸಿರಿಯಾ ಮೇಲೆ ಇಸ್ರೇಲ್ ತನ್ನ ನರಮೇಧ ಮುಂದುವರೆಸಿದೆ. ಅದರ ವಿರುದ್ಧವಾಗಿ ಈಗ ಪ್ರತಿಭಟನೆ ಮಾಡುತ್ತಿದ್ದೇವೆ. ಪ್ಯಾಲೇಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಖಂಡನೀಯ. ಇದರ ವಿರುದ್ಧವಾಗಿ ನಾವು ನಿಲ್ಲುತ್ತಿದ್ದೇವೆ. ಇಸ್ರೇಲ್ ಜತೆಗೆ ಅಮೆರಿಕಾ ಮತ್ತು ಭಾರತ ಕೈಜೋಡಿಸುತ್ತಿರುವುದನ್ನ ಖಂಡಿಸುತ್ತೇವೆ. ವಿಶ್ವದ ರಾಜ್ಯಗಳು ಇಸ್ರೇಲ್ ಜತೆಗೆ ಯಾವುದೇ ರೀತಿಯ ವ್ಯವಹಾರ ಒಪ್ಪಂದಗಳನ್ನ ಇಟ್ಟುಕೊಳ್ಳಬಾರದು. ಒಳಒಪ್ಪಂದಗಳನ್ನ ಕೈ ಬಿಡಬೇಕು. ಇಸ್ರೇಲ್ ಕಡೆಗೆ ದುಡ್ಡು ಇರಬಹುದು, ಆದರೆ, ನ್ಯಾಯ ಅಂತೂ ಇಲ್ಲ. ಪ್ಯಾಲೇಸ್ತೀನ ಜತೆಗೆ ನಾವಿದ್ದೇವೆ. ಒಂದು ಮಗುವಿನ ಮೇಲೆ ಬಾಂಬ್ ಹಾಕಿ ಮಗುವನ್ನ ಕೊಲೆ ಮಾಡುವುದು ನಿಮಗೆ ಸರಿ ಅನಿಸಬಹುದು. ಆದರೆ, ಅಂತಹ ಅಮಾನವೀಯ ಕೃತ್ಯವನ್ನ ನಾವು ಖಂಡಿಸುತ್ತೇವೆ” ಎಂದಿದ್ದಾರೆ.

ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮಧು ಮಾತನಾಡಿ, “ಈ ಇಸ್ರೇಲ್ – ಪ್ಯಾಲೇಸ್ತೀನ್ ಚರಿತ್ರೆ ಕಳೆದ ಒಂದು ವರ್ಷದಲ್ಲ. ಇದರ ಇತಿಹಾಸ ಬಹಳ ಹಳೆಯದು. ಎರಡನೇ ಮಹಾಯುದ್ಧದ ಸಮಯದಲ್ಲಿ ಈ ಯುದ್ದ ಎಂಬುದು ಆರಂಭವಾಗಿದೆ. ಇದಕ್ಕೆ ಕಾರಣ ನಾಜಿ ಜರ್ಮನಿ. ಅಮೆರಿಕಾ ಸೇರಿದಂತೆ ವಿಶ್ವದ ಜನರು ಇಸ್ರೇಲ್ ಈ ನರಮೇಧವನ್ನ ತೀವ್ರವಾಗಿ ಖಂಡಿಸುತ್ತಿದ್ದಾರೆ. ಪ್ಯಾಲೆಸ್ತೀನ್ ಪರ ತಮ್ಮ ನಿಲುವನ್ನು ಸೂಚಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಆಟೋ ಚಾಲಕ ಸಾಬೀರ್ ಅಲಿ ಮಾತನಾಡಿ, “ಪ್ಯಾಲೇಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯ ಎಲ್ಲರಿಗೂ ತಿಳಿದೆ ಇದೆ. ಆ ಕಾಲದಲ್ಲಿ ಹಿಟ್ಲರ್ ಇಸ್ರೇಲ್ ಎಲ್ಲ ಜನರನ್ನ ಸಾಯಿಸಿ ಒಂದು 600 ಜನರನ್ನ ಅಷ್ಟೇ ಉಳಿಸಿದ್ರು, ಇವರು ಇದ್ದಿದ್ದೆ ಸ್ವಲ್ಪ ಜನ ಇವರಿಗೆ ಆಶ್ರಯ ಕೊಟ್ಟಿದ್ದು, ಪ್ಯಾಲೇಸ್ತೀನಿಯರು, ಅವರಿಗೆ ಅನ್ನ ಕೊಟ್ಟ ಪ್ಯಾಲೇಸ್ತೀನಿಯರ ಮೇಲೆ ಇಸ್ರೇಲ್ ನವರು ದೌರ್ಜನ್ಯ ಮಾಡುತ್ತಿದ್ದಾರೆ. ಅವರ ಮನೆಯ ಅನ್ನ ತಂದು ಅವರನ್ನೇ ಅವರ ಮನೆಯಿಂದ ಒದ್ದು ಓಡಿಸುತ್ತಿದ್ದಾರೆ. ನಮಗೆ ಯಾರಾದರೂ ಆಶ್ರಯ ಕೊಟ್ಟರೇ, ಅವರಿಗೆ ನಾವು ಆದಷ್ಟು ಸಹಾಯ ಮಾಡಬೇಕು. ಆದರೆ, ಇಸ್ರೇಲ್ ಈ ರೀತಿ ಕೃತ್ಯ ನಡೆಸುತ್ತಿದೆ. ಎಲ್ಲರಿಗೂ ಬದುಕುವ ಹಕ್ಕಿದೆ. ಅದು ಅವರ ಮನೆಯಲ್ಲಿ ಅವರನ್ನ ಬದೋದೋಕೆ ಬಿಡದೇ ಇರೋದು ನಿಜಕ್ಕೂ ಇದು ಟೆರೆರಿಸಮ್” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಲೆನಾಡಿನ ಪ್ರಮುಖ ಬಿಕ್ಕಟ್ಟು, ಪರಿಹಾರ ಮಾರ್ಗ ಕುರಿತು ಶಾಸಕರ ಭವನ-2ರಲ್ಲಿ ದುಂಡು ಮೇಜಿನ ಸಭೆ

ಜೈ ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಮಾತನಾಡಿ, “ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕಾ ನಡೆಸುತ್ತಿರುವ ದೌರ್ಜನ್ಯವನ್ನ ಖಂಡಿಸಿ, ಪ್ಯಾಲೆಸ್ತೀನ್ ಪರ ಬೆಂಬಲ ಸೂಚಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಅವರ ಜಾಗದಲ್ಲಿ ಬಂದು ಅವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಮಕ್ಕಳನ್ನು ಕೊಲೆ ಮಾಡುತ್ತಿದ್ದಾರೆ. ಅನ್ಯಾಯದ ವಿರುದ್ಧ ನಾವಿದ್ದೇವೆ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಎಲ್ಲಿ ಅನ್ಯಾಯ ಆಗುತ್ತದೆ. ಎಲ್ಲಿ ಜನರ ಮೇಲೆ ಅನ್ಯಾಯ ಆಗುತ್ತದೆ ಅದನ್ನು ತಡೆಯಬೇಕು” ಎಂದು ಹೇಳಿದರು.

ಈ ವೇಳೆ ಸಾಮಾಜಿಕ ಕಾರ್ಯಕರ್ತ ವಿನಯ್ ಶ್ರೀನಿವಾಸನ್ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.

WhatsApp Image 2024 10 05 at 7.58.31 PM 1
WhatsApp Image 2024 10 05 at 7.58.31 PM
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೋಮನಹಳ್ಳಿಯ ಸುಷ್ಮಗೆ ಸಂದ ಡಾಕ್ಟರೇಟ್ ಗೌರವ

ಬೆಂಗಳೂರು ವಿಶ್ವವಿದ್ಯಾಲಯದ ಗ್ರಾಮೀಣ ಅಭಿವೃದ್ಧಿ ಅಧ್ಯಯನ ಕೇಂದ್ರದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ...

ಬಿಡದಿ ಟೌನ್‌ಶಿಪ್ ವಿರುದ್ಧ ಹೋರಾಟ: ಉಪವಾಸನಿರತ ಮೂವರು ರೈತರು ತೀವ್ರ ಅಸ್ವಸ್ಥ

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ – ಬಿಡದಿ ಟೌನ್‌ಶಿಪ್‌) ಯೋಜನೆ...

ಗುತ್ತಿಗೆ ಪದ್ಧತಿ ರದ್ದತಿಗೆ ಆಗ್ರಹ: ಸೆ. 23ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ BWSSB ಕಾರ್ಮಿಕರ ಬೃಹತ್ ಹೋರಾಟ

ಬೆಂಗಳೂರು ನಗರದ ಕೋಟ್ಯಂತರ ಜನರಿಗೆ ಕುಡಿಯುವ ನೀರು ಪೂರೈಕೆ ಹಾಗೂ ಒಳಚರಂಡಿ...

ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ: ವಾಹನ ಸವಾರರ ಪರದಾಟ

ರಾಜಧಾನಿ ಬೆಂಗಳೂರಿನ ವಿವಿಧೆಡೆ ಸೋಮವಾರ ಸಂಜೆ ಏಕಾಏಕಿ ಹಠಾತ್‌ ಧಾರಾಕಾರ ಮಳೆಯಾಗಿದ್ದು,...