ಅಲ್ಲಮನ ಅನನ್ಯ ಪದಪ್ರಯೋಗಗಳು | ಸಮರಸವೆ ಲಿಂಗ 

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಸಮರಸವೆ ಲಿಂಗ
ನೋಟವೆ ಕೂಟ
ಕೂಟವೆ ಪ್ರಾಣ
ಪ್ರಾಣವೆ ಏಕ
ಏಕವೆ ಸಮರಸ
ಸಮರಸವೆ ಲಿಂಗ
ಲಿಂಗವೆ ಪರಿಪೂರ್ಣ
ಪರಿಪೂರ್ಣವೆ ಪರಬ್ರಹ್ಮ
ಪರಬ್ರಹ್ಮವೆ ತಾನು!
ಇಂತೀ ನಿಜವ ಗುಹೇಶ್ವರ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳು ಎತ್ತ ಬಲ್ಲರು ನೋಡಯ್ಯಾ.

- Advertisement -

ವಚನಾರ್ಥ:
ನೋಟ ಎಂಬ ಪದದಿಂದ ಆರಂಭವಾಗಿ ನೋಡಯ್ಯಾ ಎಂದು ಅಂತ್ಯವಾಗುವುದು ವಚನ ವಿಶೇಷ. ಶರಣನು ಅಂಗ ಮತ್ತು ಲಿಂಗ ಅಂದರೆ ತನ್ನ ದೇಹ ಮತ್ತು ಪರದೈವಗಳ ಮಧ್ಯೆ ಸಾಧಿಸಿಕೊಳ್ಳುವ ಸಮರಸವೆ ವಚನದ ವಸ್ತು. ಶರಣನಿಗೂ ಲಿಂಗಕ್ಕೂ ನೋಟದ ಮೂಲಕ ದಿವ್ಯ ಸಂಪರ್ಕ ಸಾಧ್ಯವಾಗುತ್ತದೆ. ಇದನ್ನು ಆಧ್ಯಾತ್ಮಿಕ ಪರಿಭಾಷೆಯಲ್ಲಿ ದೃಷ್ಟಿಯೋಗ ಅನ್ನುತ್ತಾರೆ. ನೋಟದಿಂದ ಸಾಧ್ಯವಾಗುವ ಸಂಪರ್ಕವೇ ಕೂಟ ಅಂದರೆ ಸ್ನೇಹಸಂಬಂಧ. ಅಂತಹ ಸ್ನೇಹ ಸಂಬಂಧ ಇಬ್ಬರ ಪ್ರಾಣವನ್ನು ಬೆಸೆಯುತ್ತದೆ. ಏಕೋಭಾವ ಸೃಷ್ಟಿಯಾಗುತ್ತದೆ. ಏಕತೆಯನ್ನು ನಿರಂತರವಾಗಿ ನಿರ್ವಹಿಸಲು ಸಮರಸವನ್ನು ಕಾಪಾಡಿಕೊಳ್ಳಬೇಕು. ಸಮರಸದಿಂದ ಲಿಂಗಾಂಗ ಸಾಮರಸ್ಯದ ಸಾಧನೆ ಕೈಗೂಡುತ್ತದೆ. ಇಂತಹ ಸಾಮರಸ್ಯದ ಸ್ವಾರಸ್ಯವೇನು ಸಾಮಾನ್ಯವಲ್ಲ. ಅದು ಶರಣನನ್ನು ಪರಿಪೂರ್ಣತೆಯತ್ತ ಕರೆದೊಯ್ದು “ಅಹಂ ಬ್ರಹ್ಮಾಸ್ಮಿ” ಎಂಬ ಪರಬ್ರಹ್ಮದ ಅತ್ಯುನ್ನತ ಆಧ್ಯಾತ್ಮಿಕ ಸ್ಥಿತಿಯನ್ನು ಅವನಲ್ಲಿ ಸ್ಥಾಪಿಸಬಲ್ಲ ಮಹಾಶಕ್ತಿ. ಅಂತಹ ಮಹಾಶಕ್ತಿಯನ್ನು ಮೈಗೂಡಿಸಿಕೊಂಡವ ಪರಬ್ರಹ್ಮವೇ ತಾನಾಗುತ್ತಾನೆ. ಇಂತಹ ಮಹಾಶಕ್ತಿಯನ್ನು ದರ್ಶಿಸಬೇಕಾದರೆ ನಮ್ಮ ನೋಟ ಅಂದರೆ ದೃಷ್ಟಿ ಸ್ಪಷ್ಟವಾಗಿರಬೇಕು. ಕಣ್ಣು ಕೆಟ್ಟ ಅಣ್ಣಗಳು ಇದನ್ನು ನೋಡಲು ಸಾಧ್ಯವಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಪದ ಪ್ರಯೋಗಾರ್ಥ:
ನೋಟ- ಕೂಟ- ಪ್ರಾಣ- ಏಕ- ಸಮರಸ- ಲಿಂಗ- ಪರಿಪೂರ್ಣ- ಪರಬ್ರಹ್ಮ ಈ ಎಂಟು ಪದಗಳನ್ನು ಒಂದರ ಹಿಂದೊಂದು ಸರಪಳಿಯಂತೆ ಜೋಡಿಸಿಕೊಂಡು ಹೋಗಿರುವುದು ವಚನದ ವಿಶೇಷ. ನೋಟ ಎಂಬ ಪದದಿಂದ ಆರಂಭವಾಗಿ ನೋಡಯ್ಯ ಎಂದು ಅಂತ್ಯವಾಗುವ ಪದ ಚಮತ್ಕಾರವನ್ನು ಇಲ್ಲಿ ಗಮನಿಸಬಹುದು. ವಚನ ಮಧ್ಯದಲ್ಲಿ ಸಮರಸವೇ ಲಿಂಗ ಎಂಬುವುದು ಗಮನ ಸೆಳೆಯುವ ಪದ ಪ್ರಯೋಗ. ಇದನ್ನೇ ಬೇಂದ್ರೆ ಸಮರಸವೇ ಜೀವನ ಎಂದಿದ್ದಾರೆ. ರಸವೇ ಜನನ – ವಿರಸವೇ ಮರಣ – ಸಮರಸವೇ ಜೀವನ ಎಂದು ಬೇಂದ್ರೆ “ನನ್ನ ಹಾಡು” ಕವನದ  ಕೊನೆಯ ಮೂರು ಸಾಲುಗಳಲ್ಲಿ ಹೇಳಿದ್ದಾರೆ. ಅಲ್ಲಮನಿಗೆ ಸಮರಸವೇ ಲಿಂಗ. ಬೇಂದ್ರೆ ದೃಷ್ಟಿಯಲ್ಲಿ ಸಮರಸವೇ ಜೀವನ. ಎರಡೂ ಪ್ರಸಂಗಗಳ ದರ್ಶನ ಮತ್ತು ನೋಟ ಒಂದೇ. ಸಮರಸವೇ ಲಿಂಗ ಎಂಬುದು ಶರಣ ಬದುಕಿನ ಲಿಂಗಾಂಗ ಸಾಮರಸ್ಯದ ಸಹಬಾಳ್ವೆ. ಸಮರಸವೇ ಜೀವನ ಎಂಬುದು ಮನುಷ್ಯ ಜೀವನದ ಸಾರ. ಅಂದರೆ ಜೀವನದಲ್ಲಿ ಸುಖ-ದುಃಖ, ಸಾವು-ನೋವುಗಳ ನಡುವೆ ಸಮನ್ವಯ ಮತ್ತು ಸಾಮರಸ್ಯವನ್ನು ಸಾಧಿಸಬೇಕು. ಅದುವೇ ನಿರಂತರವಾಗಿ ಸಾಗಬಹುದಾದ ಚೈತನ್ಯದ ಲಿಂಗಪೂಜೆ. ಸಮರಸ ಎಂಬುದು ಜೀವನದಲ್ಲಿರಬೇಕಾದ ಒಂದು ಸಹಜ ಧೋರಣೆ. ಅದನ್ನು ಲಿಂಗಕ್ಕೆ ಸಮೀಕರಿಸಿ ಸಮರಸವೇ ಲಿಂಗ ಎಂದಿರುವುದು ಅಲ್ಲಮನ ಆಧ್ಯಾತ್ಮಿಕ ನೋಟದ ಅನನ್ಯ ಪದಪ್ರಯೋಗ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ 

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲಾಪತಾ ಲೇಡೀಸ್: ಮನೆ ಒಳಗೂ ಹೊರಗೂ ಕಳೆದುಹೋಗುವ ಮಹಿಳೆಯರ ಹುಡುಕಾಟ

'ಲಾಪತಾ ಲೇಡೀಸ್' ಕೇವಲ ರೈಲಿನಲ್ಲಿ ಕಾಣೆಯಾದ ಇಬ್ಬರು ವಧುಗಳ ಕಥೆಯಲ್ಲ. ಮಹಿಳೆ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಕಂಗಳ ಕರುಳ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ವಚನ ಕಲ್ಯಾಣ | ಇವ ನಮ್ಮವನೆಂದೆನಿಸಯ್ಯಾ….

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ....

ಅವಳ ಕಣ್ಣೋಟ | ಮಿಮಿ-ತಾಯ್ತನದ ನಡುವೆ ಮರೆಯಾದ ಕನಸು

ಮಹಿಳೆಯರ ಬದುಕಿನಲ್ಲಿ ಮದುವೆ, ತಾಯ್ತನ ಇವೆಲ್ಲವೂ ಸಹಜವಾದ ಆಯ್ಕೆಗಳೇ. ಆದರೆ ಅವಳ...