ಗೋಡ್ಸೆಗೆ ಹೆಸರಾದ ಸಂಘಟನೆ ಗಾಂಧಿ ಸ್ಥಾಪಿಸಿದ ಸಂಸ್ಥೆಗೆ ಕಲಿಸುವುದೇನಿದೆ: RSS ಹೊಗಳಿದ ದಿಗ್ವಿಜಯ್‌ಗೆ ಪವನ್ ಖೇರಾ ಪ್ರಶ್ನೆ

Date:

ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಂಘಟನಾ ಶಕ್ತಿಯನ್ನು ಹೊಗಳಿರುವುದು ಸದ್ಯ ರಾಜಕೀಯವಾಗಿ ತೀವ್ರ ಚರ್ಚೆ ಹುಟ್ಟುಹಾಕಿದೆ. ತಮ್ಮದೇ ಪಕ್ಷದ ದಿಗ್ವಿಜಯ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ, “ಗಾಂಧಿ ಸ್ಥಾಪಿಸಿದ ಪಕ್ಷಕ್ಕೆ ಗೋಡ್ಸೆಗೆ ಹೆಸರಾದ ಸಂಘಟನೆ ಕಲಿಸುವುದೇನಿದೆ” ಎಂದು ಪ್ರಶ್ನಿಸಿದ್ದಾರೆ.

- Advertisement -

ಪ್ರಧಾನಿ ನರೇಂದ್ರ ಮೋದಿ ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರೊಂದಿಗೆ ಇರುವ ಹಳೆಯ ಛಾಯಾಚಿತ್ರವನ್ನು ಹಂಚಿಕೊಂಡ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆರ್‌ಎಸ್‌ಎಸ್‌ನ ಸಾಂಸ್ಥಿಕ ರಚನೆಗಳನ್ನು ಶ್ಲಾಘಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಇದನ್ನು ಓದಿದ್ದೀರಾ? ಅದು ಆರ್‌ಎಸ್‌ಎಸ್‌/ಬಿಜೆಪಿ ಕಾರ್ಯಕ್ರಮ: ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳದಿರಲು ಕಾಂಗ್ರೆಸ್ ನಿರ್ಧಾರ

“ನಾನು ಈ ಚಿತ್ರವನ್ನು Quoraದಲ್ಲಿ ನೋಡಿದೆ. ಇದು ತುಂಬಾ ಪ್ರಭಾವಶಾಲಿಯಾಗಿದ್ದು, ಒಬ್ಬ ತಳಮಟ್ಟದ RSS ಸ್ವಯಂಸೇವಕ ಮತ್ತು ಜನಸಂಘ ಕಾರ್ಯಕರ್ತ, ನಾಯಕರ ಪಾದಗಳ ಕೆಳಗೆ ನೆಲದ ಮೇಲೆ ಕುಳಿತವರು ಈಗ ಹೇಗೆ ಒಂದು ರಾಜ್ಯದ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಿಯಾದರು ಎಂಬುದು ತಿಳಿಯುತ್ತದೆ. ಇದು ಸಂಘಟನೆಯ ಶಕ್ತಿ” ಎಂದು ಪೋಸ್ಟ್ ಮಾಡಿದ್ದರು. ಜತೆಗೆ “ಜೈ ಸೀತಾರಾಮ್” ಎಂದು ಬರೆದುಕೊಂಡಿದ್ದರು.

ಸದ್ಯ ಆರ್‌ಎಸ್‌ಎಸ್‌ ಸಂಘಟನೆಯನ್ನು ಹಾಡಿಹೊಗಳಿದ ದಿಗ್ವಿಜಯ್ ಸಿಂಗ್ ಕಾಂಗ್ರೆಸ್ ನಾಯಕರುಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. “ಆರ್‌ಎಸ್‌ಎಸ್‌ನಿಂದ ಕಲಿಯಲು ಏನೂ ಇಲ್ಲ. ಗೋಡ್ಸೆಗೆ ಹೆಸರಾದ ಸಂಘಟನೆ ಗಾಂಧಿ ಸ್ಥಾಪಿಸಿದ ಸಂಸ್ಥೆಗೆ ಏನು ಕಲಿಸಬಹುದು” ಎಂದು ಪವನ್ ಖೇರಾ ಪ್ರಶ್ನಿಸಿದ್ದಾರೆ.

ತಮ್ಮ ಪೋಸ್ಟ್‌ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ದಿಗ್ವಿಜಯ್ ಸಿಂಗ್ ಸ್ಪಷ್ಟೀಕರಣವನ್ನು ನೀಡಲು ಮುಂದಾಗಿದ್ದಾರೆ. “ನಾನು ಮೊದಲಿನಿಂದಲೂ ಇದನ್ನು ಹೇಳುತ್ತಿದ್ದೇನೆ. ನಾನು ಆರ್‌ಎಸ್‌ಎಸ್‌ನ ಸಿದ್ಧಾಂತವನ್ನು ವಿರೋಧಿಸುತ್ತೇನೆ. ಅವರು ಸಂವಿಧಾನ ಅಥವಾ ದೇಶದ ಕಾನೂನುಗಳನ್ನು ಗೌರವಿಸುವುದಿಲ್ಲ. ಹಾಗೆಯೇ ಅದು ಅದು ನೋಂದಾಯಿಸದ ಸಂಸ್ಥೆ. ಆದರೆ ನಾನು ಅವರ ಸಂಘಟನಾ ಸಾಮರ್ಥ್ಯವನ್ನು ಮೆಚ್ಚುತ್ತೇನೆ. ಅದು ನೋಂದಾಯಿಸದ ಸಂಸ್ಥೆಯಾದರೂ ತುಂಬಾ ಶಕ್ತಿಶಾಲಿಯಾಗಿದೆ. ಪ್ರಧಾನಿ ಕೆಂಪು ಕೋಟೆಯಲ್ಲಿ ನಿಂತು ಆರ್‌ಎಸ್‌ಎಸ್‌ ವಿಶ್ವದ ಅತಿದೊಡ್ಡ ಎನ್‌ಜಿಒ ಎಂದು ಹೇಳುವಷ್ಟು ಶಕ್ತಿಶಾಲಿಯಾಗಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.

digvijay

ಜತೆಗೆ ಆರ್‌ಎಸ್‌ಎಸ್‌ ಎನ್‌ಜಿಒ ಎಂಬ ಪ್ರಧಾನಿ ಹೇಳಿಕೆಯನ್ನೂ ಈ ವೇಳೆಯೇ ಟೀಕಿಸಿದ್ದಾರೆ. “ಆರ್‌ಎಸ್‌ಎಸ್‌ ಒಂದು ಸರ್ಕಾರೇತರ ಸಂಸ್ಥೆಯಾಗಿದ್ದರೆ, ಅದರ ನಿಯಮಗಳು ಎಲ್ಲಿವೆ? ಆದರೆ ನಾನು ಅವರ ಸಂಘಟನಾ ಸಾಮರ್ಥ್ಯವನ್ನು ಮೆಚ್ಚುತ್ತೇನೆ” ಎಂದು ಹೇಳಿಕೊಂಡಿದ್ದಾರೆ. ಜತೆಗೆ ಕಾಂಗ್ರೆಸ್‌ನ ಸಂಘಟನಾ ಸಾಮರ್ಥ್ಯದ ಬಗ್ಗೆ ಮಾತನಾಡಿ, “ಸುಧಾರಣೆಗೆ ಅವಕಾಶವಿದೆ ಮತ್ತು ಪ್ರತಿಯೊಂದು ಸಂಸ್ಥೆಗೂ ಯಾವಾಗಲೂ ಸುಧಾರಣೆಗೆ ಅವಕಾಶವಿರಬೇಕು” ಎಂದಿದ್ದಾರೆ.

“ಕಾಂಗ್ರೆಸ್ ಮೂಲಭೂತವಾಗಿ ಒಂದು ಚಳುವಳಿಯ ಪಕ್ಷವಾಗಿದೆ. ಅದು ಉಳಿಯಬೇಕು ಎಂದು ನಾನು ಹಲವು ಬಾರಿ ಹೇಳಿದ್ದೇನೆ. ಆದರೆ ಆ ಚಳುವಳಿಯನ್ನು ಮತಗಳಾಗಿ ಪರಿವರ್ತಿಸುವುದರಿಂದ ನಾವು ವಿಫಲರಾಗುತ್ತೇವೆ” ಎಂದು ತಿಳಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

26 ಬಾರಿ ಸೋತರೂ ಕುಗ್ಗದ ಛಲ; 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕ ಹುದ್ದೆ ಪಡೆದ ವೃದ್ಧ

ಸರಿಯಾದ ಪ್ರಯತ್ನ ಮತ್ತು ಛಲವಿದ್ದರೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು...

1,870 ಕೋಟಿ ರೂ. ದೇಣಿಗೆ ದಂಧೆ ಆರೋಪ: ಗುಜರಾತ್‌ನ 3 ರಾಜಕೀಯ ಪಕ್ಷಗಳ ಅಕ್ರಮ ಬಯಲು

ಗುಜರಾತ್‌ನಲ್ಲಿ ನೋಂದಾಯಿತವಾಗಿದ್ದ, ಆದರೆ ಮಾನ್ಯತೆ ಪಡೆಯದ ಮೂರು ರಾಜಕೀಯ ಪಕ್ಷಗಳು ಆದಾಯ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ ಮಂಡಳಿಯ ಚಪ್ಪಾಳೆ

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ...

ತಮಗೆ ಬಿಜೆಪಿ‌ ಸೇರುವಂತೆ ಗ್ಯಾನೇಶ್ ಕುಮಾರ್ ಆಹ್ವಾನಿಸಿದ್ದರು: ನಿವೃತ್ತ ಐಎಎಸ್ ಜಿಜಿ ಥಾಮ್ಸನ್

ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರು 2016ರಲ್ಲಿ ಸರ್ಕಾರಿ ಸೇವೆಯಲ್ಲಿದ್ದಾಗ...