ಅಲ್ಲಮನ ಅನನ್ಯ ಪದಪ್ರಯೋಗಗಳು | ಏಕೆ?

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಏಕೆ?
ಅಮೃತಸಾಗರದೊಳಗಿರ್ದು
ಆಕಳ ಚಿಂತೆ ಏಕಯ್ಯ? ಮೇರುಮಧ್ಯದೊಳಗಿರ್ದು
ಜರಗ ತೊಳೆವ ಚಿಂತೆ ಏಕಯ್ಯ? ಗುರುವಿನೊಳಗಿರ್ದು
ತತ್ತ್ವವಿದ್ಯೆಯ ಚಿಂತೆ ಏಕಯ್ಯ? ಪ್ರಸಾದದೊಳಗಿರ್ದು
ಮುಕ್ತಿಯ ಚಿಂತೆ ಏಕಯ್ಯ?
ಕರಸ್ಥಲದೊಳಗೆ ಲಿಂಗವಿರ್ದ ಬಳಿಕ,
ಮತ್ತಾವ ಚಿಂತೆ ಏಕೆ
ಹೇಳಾ ಗುಹೇಶ್ವರಾ?

- Advertisement -

ಪದಾರ್ಥ:
ಅಮೃತಸಾಗರ = ಕ್ಷೀರಸಾಗರ
ಜರಗ  =  ಬಂಗಾರದ ಅದಿರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ವಚನಾರ್ಥ:
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ. ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ! ಎಂಬ ಬಸವಣ್ಣ ವಚನವಿದೆ. ವಿಶ್ವವ್ಯಾಪಿಯಾಗಿದ್ದು ವಿಶ್ವರೂಪ ದರ್ಶನ ನೀಡಬಲ್ಲಂತಹ ಮಹಾಮಹಿಮ ಲಿಂಗವು ಶರಣನ ಕರಸ್ಥಲಕ್ಕಿಳಿದು ಬಂದು ಕೂರುತ್ತಾನೆ ಅಂದರೆ ಅದಕ್ಕಿಂತ ಮತ್ತೇನು ಬೇಕು? ಕರಸ್ಥಲದೊಳಗೆ ಲಿಂಗವಿದ್ದ ಬಳಿಕ ಮತ್ತಾವ ಚಿಂತೆ ಏಕೆ? ಎಂಬುದನ್ನು ನಿರೂಪಿಸಲು ಅಲ್ಲಮ ಬಳಸಿರುವುದು ಪ್ರಶ್ನೋತ್ತರ ಮಾದರಿಯನ್ನು. ವಚನದಲ್ಲಿ ಅಲ್ಲಮ ಹಾಕಿರುವ ನಾಲ್ಕು ಪ್ರಶ್ನೆಗಳಿವೆ. ಆ ನಾಲ್ಕು ಪ್ರಶ್ನೆಗಳಲ್ಲೇ ಉತ್ತರ ಅಡಗಿದೆ. ಹಾಲಿನ ಸಮುದ್ರದ ಮಧ್ಯೆ ಇದ್ದು ಹಾಲು ನೀಡುವ ಹಸು ಇಲ್ಲವಲ್ಲ ಎಂದು ಚಿಂತೆ ಏಕೆ? ಬಂಗಾರದ ಪರ್ವತದಲ್ಲಿದ್ದುಕೊಂಡು ಬಂಗಾರದ ಅದಿರನ್ನು ತೊಳೆದು ಬಂಗಾರ ಹುಡುಕುವ ಚಿಂತೆ ಏಕೆ? ವಿದ್ಯೆಯ ಕಲಿಸಿರುವ ಗುರುವೇ ಅಂತರಂಗದಲ್ಲಿರುವಾಗ ಬೇರೆ ತತ್ತ್ವವಿದ್ಯೆಗಳನ್ನು ತಿಳಿಯುವ ಚಿಂತೆ ಏಕೆ? ಗುರುವಿನ ಕರುಣೆಯ ಪ್ರಸಾದವೇ ಪ್ರಾಪ್ತವಾದ ಮೇಲೆ ಮುಕ್ತಿ ಸದ್ಗತಿಗಳ ಚಿಂತೆ ಏಕೆ? ಚಿಂತಿಸುವ ಅಗತ್ಯವಿಲ್ಲ ಎಂಬುದೇ ಎಲ್ಲಾ ಪ್ರಶ್ನೆಗಳಿಗೂ ಉತ್ತರ.

ಪದಪ್ರಯೋಗಾರ್ಥ:
ಏಕೆ? ಚಿಂತೆ ಏಕೆ? ಎಂದು ಕೇಳುವ ಪ್ರಶ್ನೆಗಳೇ ವಚನದಲ್ಲಿ ಪ್ರಯೋಗವಾಗಿರುವ ಅನನ್ಯ ಪದ ಬಾಣಗಳು. ಪ್ರಶ್ನೆಯ ಬಾಣಗಳು. ಏಕೆ ಹೇಳು, ಏಕೆ ಹೇಳು ಎಂದು ಕೇಳುತ್ತಲೇ ವಿಷಯವನ್ನು ಮಂಡಿಸಿ ಮನದಟ್ಟು ಮಾಡಿಸುವುದು ಒಂದು ಸಂವಹನ ಕಲೆ ಮತ್ತು ತಂತ್ರಗಾರಿಕೆ. ಅದನ್ನು ಅಲ್ಲಮ ಈ ವಚನದಲ್ಲಿ ಸಮರ್ಥವಾಗಿ ಬಳಸಿರುವುದನ್ನು ಕಾಣಬಹುದು. ಈಗಿನ ಆಧುನಿಕ ಕಾಲದಲ್ಲಿ ಯಾವುದೇ ಹೊಸ ವಿಷಯವನ್ನು ಜನಸಾಮಾನ್ಯರಲ್ಲಿ ಪ್ರಚುರ ಪಡಿಸುವಾಗ FAQ- Frequently Asked  Questions ಎಂಬ ಪ್ರಶ್ನೆಗಳ ಸಿದ್ದಪಟ್ಟಿ ತಯಾರಿಸಿ ಆ ಪ್ರಶ್ನೆಗಳಿಗೆ ಉತ್ತರವನ್ನು ಪ್ರಕಟಿಸಿ ಪ್ರಚಾರ ಮಾಡುವ ಪರಿಪಾಠವಿದೆ. ಏಕೆ ಎಂದು ಪ್ರಶ್ನೆ ಮಾಡುತ್ತಲೇ ವಿಷಯ ಮಂಡಿಸಿರುವ ಅಲ್ಲಮನ ಪದಪ್ರಯೋಗ ಈ ದೃಷ್ಟಿಯಿಂದ ಬಹಳ ಅನನ್ಯವಾದುದು. “ಬಾ ಹತ್ತರಕೆ, ಪ್ರಶ್ನೋತ್ತರಕೆ, ನಿನ್ನುತ್ತರಕೆ, ನಿನ್ನೆತ್ತರಕೆ, ನನ್ನೆತ್ತರಕೆ, ಇದು ಉತ್ತಮಕೆ, ಪುರುಷೋತ್ತಮಕೆ -ದ ರಾ ಬೇಂದ್ರೆ” ಪ್ರಶ್ನೋತ್ತರಕೆ ಪುರುಷೋತ್ತಮಕೆಯ ಶಕ್ತಿಯಿದೆ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಶ್ರೀಗೆ ಆಹ್ವಾನ

ಕೊಪ್ಪಳದ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಈ...

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...