ಗ್ರಾಹಕರಿಗೆ ಬಂಪರ್‌ ಆಫರ್! ಗ್ರಾಂ ಚಿನ್ನಕ್ಕೆ ₹8-10 ಸಾವಿರ?

Date:

ದಿನೇ ದಿನೇ ಏರುತ್ತಲೇ ಇದ್ದ ಚಿನ್ನದ ದರ ಕಳೆದ ಒಂದು ವಾರದಿಂದ ದಾಖಲೆಯ ಮಟ್ಟದಲ್ಲಿ ಇಳಿಕೆಯಾಗುತ್ತಿದೆ. ಈ ಪ್ರೈಸ್‌ ಡ್ರಾಪ್‌ ಟ್ರೆಂಡ್‌ ಇನ್ನೂ ಕೆಲ ದಿನಗಳವರೆಗೆ ಮುಂದುವರೆದು 1 ಗ್ರಾಂ ಚಿನ್ನ ₹8-10 ಸಾವಿರಕ್ಕೆ ಇಳಿಯುವ ನಿರೀಕ್ಷೆ ಇದೆ ಎನ್ನುತ್ತಿದ್ದಾರೆ ತಜ್ಞರು. ಮದುವೆ, ಶುಭ ಸಮಾರಂಭದ ಸೀಸನ್‌ ಆಗಿರುವುದರಿಂದ ಗ್ರಾಹಕರಿಗೆ ಬಂಪರ್‌ ಆಫರ್‌ ಆದರೂ ಹೂಡಿಕೆದಾರರು ಆತಂಕದಲ್ಲಿದ್ದಾರೆ.

- Advertisement -

ಕಳೆದ ಏಳು ದಿನಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ (10 ಗ್ರಾಂಗೆ) ಬರೋಬ್ಬರಿ ₹13,690ಗಳಷ್ಟು ಕುಸಿತ ಕಂಡಿದೆ. ಚಿನ್ನದ ಜೊತೆಗೆ ಬೆಳ್ಳಿ ಬೆಲೆಯೂ ಪಾತಾಳಕ್ಕೆ ಕುಸಿದಿದೆ. ಕೇವಲ ಒಂದು ವಾರದಲ್ಲಿ ಕೆಜಿಗೆ ಬರೋಬ್ಬರಿ ₹30,000ಗಳಷ್ಟು ಇಳಿದಿದೆ. ಜನವರಿಯಲ್ಲಿ ಕೆಜಿಗೆ ₹4 ಲಕ್ಷ ದಾಟಿದ್ದ ಬೆಳ್ಳಿ, ಇಂದು (ಮಾ.23) ₹2.5 ಲಕ್ಷದ ಆಸುಪಾಸಿಗೆ ಬಂದಿದೆ. ಹೈ-ರೇಟ್ ಇದ್ದಾಗ ಬೆಳ್ಳಿ ಕೊಂಡುಕೊಂಡವರಿಗೆ ಇದು ದೊಡ್ಡ ಶಾಕ್‌ ಅಂತೂ ನೀಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಬಲಗೊಳ್ಳುತ್ತಿರುವುದು ಹಾಗೂ ಜಾಗತಿಕ ಬ್ಯಾಂಕ್‌ಗಳ ಬಡ್ಡಿದರ ನಿಯಮಗಳ ಅನಿಶ್ಚಿತತೆಯೇ ಚಿನ್ನ ಬೆಳ್ಳಿಯ ದಿಢೀರ್ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ.

image 2026 03 23T180416.462

ಪ್ರಮುಖವಾಗಿ ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆ ಇಂದು ಪ್ರತಿ 1 ಗ್ರಾಂಗೆ ₹12,435 ತಲುಪಿದ್ದು, 10 ಗ್ರಾಂ ಚಿನ್ನದ ಬೆಲೆ ₹1,24,350 ಗಳಲ್ಲಿ ವಹಿವಾಟು ನಡೆಸುತ್ತಿದೆ. ಹೂಡಿಕೆದಾರರ ನೆಚ್ಚಿನ ಶುದ್ಧ ಚಿನ್ನ ಅಂದರೆ, 24 ಕ್ಯಾರೆಟ್ ಬೆಲೆ ಇಂದು ಪ್ರತಿ 1 ಗ್ರಾಂಗೆ ₹13,565ಗಳಾಗಿದ್ದು, 10 ಗ್ರಾಂಗೆ ₹1,35,650 ನಿಗದಿಯಾಗಿದೆ. ಇನ್ನು ಬಜೆಟ್ ಸ್ನೇಹಿ ಎನ್ನಲಾಗುವ 18 ಕ್ಯಾರೆಟ್ ಚಿನ್ನದ ದರದಲ್ಲಿ ಇಂದು ಪ್ರತಿ 1 ಗ್ರಾಂಗೆ ₹10,174 ಹಾಗೂ 10 ಗ್ರಾಂಗೆ ₹1,01,740 ಗಳ ಆಸುಪಾಸಿನಲ್ಲಿದೆ. ಇನ್ನು ಬೆಳ್ಳಿ ಗ್ರಾಂಗೆ ₹230 ಗಳಿದ್ದು ಕೆಜಿಗೆ ₹2,30,000ಕ್ಕೆ ಮಾರಾಟವಾಗುತ್ತಿದೆ. ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ದರದಲ್ಲಿ ಕಂಡುಬರುತ್ತಿರುವ ಈ ಇಳಿಕೆಯು ಗ್ರಾಹಕರಿಗೆ ನಿರಾಳ ತಂದಿದೆ.

ಇದನ್ನೂ ಓದಿ: ಭಗತ್‌ ಸಿಂಗ್‌, ಸುಖ್‌ದೇವ್‌, ರಾಜ್‌ಗುರು |95 ವರ್ಷಗಳ ಹಿಂದೆ ಇಂದು ನೇಣುಗಂಬ ಏರಿದ್ದ ಸಿಡಿಲಮರಿಗಳು!

ಜಾಗತಿಕ ಮಾರುಕಟ್ಟೆಗಳು ಅನಿಶ್ಚಿತವಾದ್ದರಿಂದ ಇಂದು ಇರುವ ಬೆಲೆ ಬೆಳಗಾಗುವುದರೊಳಗೆ ಏರಿದ್ದರೆ ಅಚ್ಚರಿ ಪಡುವಂತಿಲ್ಲ, ಹಾಗೇ ಮತ್ತಷ್ಟು ಕಡಿಮೆಯಾದರೆ ಮಧ್ಯಮ ವರ್ಗ ಹಾಗೂ ಬಡವರ ಆಭರಣ ಕೊಳ್ಳುವ ಕನಸು ಒಂದಿಷ್ಟು ಚಿಗುರಬಹುದು ಎನ್ನುತ್ತಿದ್ದಾರೆ ಮಾರುಕಟ್ಟೆ ತಜ್ಞರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

KPSC ಹಗರಣ | ಅಮಾನತಿನಲ್ಲಿರುವ ಐಎಎಸ್‌ ಗಂಗ್ವಾರ್‌ಗೆ ಜಾಮೀನು ನಿರಾಕರಣೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ...

ಏಕಪಕ್ಷೀಯ ನಿರ್ಧಾರ ವಿವಾದದ ಬೆನ್ನಲ್ಲೇ ಸಭೆ: ಸರ್ವಮತದಿಂದ ತೀಮಾರ್ನಗಳ ತಗೆದುಕೊಂಡಿದ್ದು ಎಂದ ಇಸಿಐ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ...

ಮಂಗಳೂರು | ಕಾರಿಡಾರ್‌ ಗೋಡೆ ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯ, ಓರ್ವ ಗಂಭೀರ

ಮಂಗಳೂರಿನ ಪಾಂಡೇಶ್ವರ ಸಮೀಪದ ಎಮ್ಮೆಕೆರೆ ಕ್ರಾಸ್ ಬಳಿಯ ರಾಮಲಕ್ಷ್ಮೀ ಹಾಲ್ ಸಭಾಭವನದಲ್ಲಿ...

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು: ಜನವಾದಿ ಮಹಿಳಾ ಸಂಘಟನೆ ಆಗ್ರಹ

ದೇಶದ ಚುನಾವಣಾ ಪ್ರಜಾಪ್ರಭುತ್ವದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ಮುಖ್ಯ ಚುನಾವಣಾ...