ಗದಗ ಸೀಮೆಯ ಕನ್ನಡ | ಮಳಿ ಆಗದ ಹೊಲಾ ಎಲ್ಲಾ ಒಣಗಿ ಬೆಳಿ ಇಲ್ಲ, ಹಬ್ಬದ ಕಳೇನೂ ಇಲ್ಲ

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌)

- Advertisement -

ನಮ್ಮಂದಿ ಪ್ರತೀ ಹುಣಿವಿ, ಅಮಾಸಿಗೆ ಒಂದ್‌-ಒಂದ್‌ ವಿಶೇಷ ಆಚರಣೆ ಮಾಡ್ತಾರ. ದಸರಾ ಮುಗದಿಂದ ಬರೊ ಹುಣ್ಣವಿ ಶೀಗಿ ಹುಣಿವಿ. ಕೆಲವು ಜಿಲ್ಲಾದಾಗ ಎಳ್ಳ ಅಮಾಸಿ ಮಾಡ್ತಾರ. ಎರಡು ಆಚರಣಿ ಒಂದಾ; ಆದ್ರ, ಇದು ಹುಣವಿ ಅದು ಅಮಾಸಿ ಅನ್ನುದೊಂದ ವ್ಯತ್ಯಾಸ. ಶೀಗಿ ಹುಣವಿ ಅಂದ್ರ ನೆನಪ ಆಗೋದು ಅವತ್ತ ಮಾಡು ಅಡಗಿ ಮತ್ತ ಗಾಳಿ ಪಟಾ ಹಾರಸೋದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಮುಂಗಾರಿನ ಬೆಳಿ ಬೆಳದು ಕೊಯ್ಲಿಗೆ ಬಂದಿರತಾವ. ಫಲದಿಂದ ತುಂಬಿದ ಹೊಲಕ್ಕ ರೈತರು ಪೂಜೆ ಮಾಡಿ, ಚರಗಾ ಚಲ್ಲತಾರ. ಶೀಗಿ ಹುಣ್ಣವಿ ಹಳ್ಯಾಗ ಕಳಿಕಟ್ಟುಹಂಗ ಬ್ಯಾರೆಕಡೆ ಕಳೆ ಇರಂಗಿಲ್ಲ. ಎಣ್ಣಿ ಬುಟ್ಟಿ ತಯಾರ ಮಾಡುದು, ಹೊಲಕ್ ಹೋಗಾಕ ಚಕ್ಕಡಿ ತಯಾರ ಮಾಡುದು. ಹೋಗಿಂದ ಗಾಳಿಪಟಾ ಹಾರಸಾಕ ಗಾಳಿಪಟಾ ಸಜ್ಜ ಮಾಡುದು ಒಂದ್‌ ಕೆಲಸಾದ್ರ, ಇತ್ತಾಗ ಅಡಗಿ ಮನಿಯಿಂದ ಬರು ಘಮಾ ಎಲ್ಲಾ ಹಬ್ಬದ ಅಡಗಿಗಿಂತ ಬ್ಯಾರೆನೇ ಇರತೈತಿ.

ಒಂದ ದಿನ ಮದ್ಲ ಎಳ್ಳ ಹಚ್ಚಿದ ರೊಟ್ಟಿ, ಎಳ್ಳ ಹೋಳಗಿ, ಶೇಂಗಾ ಹೋಳಗಿ ತಯಾರ ಮಾಡಿರ್ತಾರ. ಬೆಳಗಾ ಮುಂಜಾನೆ ಕುದ್ಯಾಕ ಹಾಕಿರೊ ಪುಂಡಿಸೊಪ್ಪು ಉಳದ ಅಡಗಿ ಮಾಡುದ್ರಾಗ ಕುದ್ದಿರತದ. ಅದಕ್ಕ, ಶೇಂಗಾ ಕಾಳ, ನುಚ್ಚಬ್ಯಾಳಿ, ಸ್ವಲ್ಪ ಕಡ್ಲಿ ಬ್ಯಾಳಿ, ಜ್ವಾಳದ ಸುಚ್ಚು, ಸ್ವಲ್ವ ಬೆಲ್ಲಾ, ಹಸೆಕಾಯಿ ಹಾಕಿ, ಇವೆಲ್ಲಾ ಕುದ್ದಮ್ಯಾಲ ಬೆಳ್ಳುಳ್ಳಿ ಒಗ್ಗರಣಿ ಹಾಕಿದ್ರ ಪುಂಡಿಪಲ್ಲೆ ರೆಡಿ. ಇವೆಲ್ಲಾ ಕುದಿಯೊದ್ರಾಗ, ಹುಣಗದ ಕಡಬು, ಜ್ವಾಳದ ಹಿಟ್ಟನ ಉಂಡಗಡಬು, ಕುಚ್ಚಿದ ಮೆಣಶಿನಕಾಯಿ, ಶೇಂಗಾ ಹಿಂಡಿ, ಅಗಸಿ ಹಿಂಡಿ, ಗುಳ್‌ ಹಿಂಡಿ, ಹೆಸಕಾಳ ಪಲ್ಯೆ, ಮಡಕಿಕಾಳ ಪಲ್ಯೆ, ಮುಳಗಾಯಿ ಪಲ್ಯೆ, ಕೊಸಂಬ್ರಿ, ಅನ್ನಾ, ಕಟ್ಟಿನ ಸಾರು ತಯಾರ ಆಗ್ತಾವ.

ಅಡಗಿ ಮಾಡೊದ ಮುಗದಿಂದ ಎಲ್ಲಾನೂ ಎಣ್ಣಿ ಬುಟ್ಟ್ಯಾಗ ತುಂಬಿ ಪೂಜೆ ಮಾಡಿ ಚಕ್ಕಡ್ಯಾಗ ಇಡುದು. ಈಗ ಮನ್ಯಾಗ ಟ್ಯಾಕ್ಟರ್‌ ಬಂದಾವು, ಈಗ ಟ್ಯಾಕ್ಟರ್‌ದಾಗ ಹೊಲಕ್‌ ಹೋಗೋದು. ಹಸರ ತುಂಬಿದ ಹೊಲಾ ನೋಡೋದ ಒಂದ ಆನಂದ. ಈ ಹಬ್ಬ ಭೂಮಿತಾಯಿಗೆ ಉಡಿತುಂಬು ಹಬ್ಬಾ ಅಂತಾಳ ನಮ್ಮ ಅಮ್ಮ. ಅಲ್ಲದ, ಶೀಗಿ ಹುಣ್ಣವಿಗೆ ಮಹಾಭಾರತದ ಕಥಿ ಹೇಳತಾಳ.

ಕೌರವರು ವಿರಾಟ ರಾಜನ ದನಕರುನೆಲ್ಲ ಕದ್ದಾಗ, ಪಾಂಡವರು ಅವನ್ನ ಬಿಡಸ್ಕೊಂಡಬಂದು ಒಟ್ಟಿಗೆ ಕೂತು ಊಟಾ ಮಾಡಿದ್ರಂತ. ಅದರ ಸಲವಾಗಿ ಶೀಗಿ ಹುಣವಿ ದಿನ.

ಹೊಲದಾಗ ದಂಟಿನ ಹಂದ್ರಾ ಹಾಕಿ ಪಾಂಡವರ ಪ್ರತೀಕ ಅಂತ ಐದ ಕಲ್ಲಿಟ್ಟು, ಆ ಕಲ್ಲಿನ ಹಿಂದ ಅಂದ್ರ, ವಿರುದ್ಧ ದಿಕ್ಕಿಗೆ ಇನ್ನೊಂದು ಕಲ್ಲಿಡತಾರ – ಅದು ಗೋವು ಕದ್ದ ಕಳ್ಳನ ಪ್ರತೀಕ. ಇವ್ರಿಗೆ ಪೂಜೆ ಮಾಡಿ, ಎಡಿ ಇಟ್ಟು ಚರಗಾ ಚಲ್ಲೋದು. ಚರಗಾ ಅಂದ್ರ, ಹಬ್ಬಕ್ಕ ಅಂತ ಏನ್‌ ಅಡಗಿ ಮಾಡಿರ್ತಾರಲ್ಲ ಅದನ್ನ ಹೊಲದಾಗ ಎಲ್ಲಾ ದಿಕ್ಕಿಗೂ ‘ಹುಲ್ಲಿಗ್ಯೋ ಸಲಾಮ್ರಿಗ್ಯೋ…’ ಅನಕೋತ್‌ ಐದ ಸುತ್ತ ಹೊಲದ ತುಂಬ ಚಲ್ಲೋದು. ಹಿಂಗ ಮಾಡಿದ ಅಡಗಿ ಚರಗಾ ಚಲ್ಲೋದು ಹೊಲದಾಗ ಇರೋ ಪ್ರಾಣಿ, ಪಕ್ಷಿ, ಕೀಟಗಳಿಗೂ ಆಹಾರ ತಲಪಲಿ ಅಂತ.

ಮನಿಮಂದಿ ಅಲ್ದ ಊರಿಂದ ಬೀಗರುನ್ನು ಕರಸ್ತಾರ ಹಬ್ಬಕ್ಕ. ಎಲ್ಲರೂ ಕೂತ ಊಟಾ ಮಾಡಿ ಪೂರಾ ದಿನಾ ಹೊಲ್ದಾಗ ಕಳಿಯೋದ. ಈ ಹುಣವಿಯಿಂದ ಬಿಸೋ ಗಾಳಿ ಗಾಳಿಪಟಾ ಹಾರಸಾಕ ಭಾಳ ಅನುಕೂಲ ಇರತೈತಿ. ಅದಕ್ಕ ಶೀಗಿ ಹುಣವಿಗೆ ಪಟಾ ಹಾರಸಾಕ ಚಾಲು ಮಾಡ್ತಾವ ಹುಡುಗುರು. ನಾವ್‌ ಸಣ್ಣೊರ್‌ ಇದ್ದಾಗ ಪಟಾ ಮಾಡಾಕ ಭಾಳ ಓಡಾತ್ತಿದ್ವಿ. ಯಾಕಂದ್ರ, ಅವಾಗ ಅಂಗಡ್ಯಾಗ ಗಾಳಿಪಟಾ ಸಿಗತಿರಲಿಲ್ಲ. ಬಿದರ್‌ ತಂದು ಅದನ್ನ ಕತ್ತರಸಿ ಪೇಪರ್‌ ಹಾಳಿಯಿಂದ ಪಟಾ ಮಾಡುದು. ಅದಕ್‌ ಮನ್ಯಾಗ ಇದ್ದಿದ್ದ ದಾರಾ ಜೋಡಸಿ ಪಟಾ ಹಾರಸೂದು.

ಆದರ, ಈ ವರ್ಷ ಈ ಯಾವ ಹಬ್ಬದ ಕಳೇನೂ ಇಲ್ಲ. ಮಳಿ ಆಗದ ಹೊಲಾ ಎಲ್ಲಾ ಒಣಗಿ ಬೆಳಿ ಕೈಗೆ ಹತ್ತಿಲ್ಲ. ಹಿಂತಾದ್ರಾಗ್‌ ಹೆಂಗ್‌ ಹಬ್ಬಾ ಮಾಡುದು ಅಂದು ಯಾರೂ ಹೊಲಕ್‌ ಅಡಗಿ ಕಟಗೊಂಡ ಹೋಗಲಿಲ್ಲ.‌ ಮನ್ಯಾಗಿನ ಗಣಮಕ್ಕಳ ಕಡೆ ಚರಗಾ ಚಲ್ಲಾಕ ಕೊಟ್ಟ ಕಳಸಿ, ಮನ್ಯಾಗ ಊಟಾ ಮಾಡಿದ್ರು. ಮಳಿ ಆಗಿ ಭೂಮಿ ಬೆಳದ್ರ ನಮ್ಮ ಹೊಟ್ಟಿಗ ಊಟ ಅಲ್ಲವಾ ಹೊಲದಾಗ ಪೀಕ್‌ ಇಲ್ಲದ ಯಾವ ಹಬ್ಬಾ ಚಲೋ ಅಕ್ಕಾವು ಅಂತ ಉಸರ ಹಕ್ಕೊತ ಮನಿ ಮಂದಿ ಹಬ್ಬ ಮಾಡಿದ್ದ ಆತು.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಅಶ್ವಿನಿ ಮ ಮೇಲಿನಮನಿ
ಅಶ್ವಿನಿ ಮ ಮೇಲಿನಮನಿ
ಪತ್ರಕರ್ತೆ. ಕರ್ನಾಟಕದ ಯಾವ ಸೀಮೆಯಲ್ಲಿದ್ದರೂ ಸ್ವಾಭಾವಿಕವಾಗಿ ತನ್ನ ಸೀಮೆಯ ಕನ್ನಡವನ್ನಷ್ಟೇ ಮಾತಾಡುವ ಅಪ್ಪಟ ಕನ್ನಡತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಾ ಸೀಮೆಯ ಕನ್ನಡ | ಬುಕ್ಕಾಪಟ್ಟಣದ ರಂಗಮ್ಮನ ಕತೆ

'ದೇಸಿ ನುಡಿಗಟ್ಟು' ವಿಡಿಯೊ ಸರಣಿಯಲ್ಲಿ ನೋಡಿ, ತುಮಕೂರು ಜಿಲ್ಲೆಯ ಶಿರಾ ತಾಲೂಕಿನ...

ನಾಗಮಂಗಲ ಸೀಮೆಯ ಕನ್ನಡ | ‘ಹೆಣ್ಮಗ್ಳು ಒಬ್ಳೇ ಅವ್ಳೆ ಅಂತ ಚುಡಾಯ್ಸಕ್ ಬತ್ತೀಯ!’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ಪರೇಶಾನ್ ಬಾಬಾ ಮತ್ತು ಹೇಮಾಳ ‘ದವಾಖಾನಿ ಬ್ಯಾನಿ’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊನ್ನಾಳಿ ಸೀಮೆಯ ಕನ್ನಡ | ನಮ್ಮೂರಾಗ ಎಲ್ಲಾ ಜಾತೇರು ಸೇರ್ಕೆಂದ್ ಮಾಡಾ ಮಯೇಶುರಿ ಹಬ್ಬ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...