ಈ ದಿನ ಸಂಪಾದಕೀಯ | ಯುದ್ಧ ನಿಲ್ಲಬಹುದು, ಯುದ್ಧೋನ್ಮಾದ ನಿಲ್ಲುವುದೇ?

Date:

ಯುದ್ಧ ನಿಲ್ಲಬಹುದು. ಆದರೆ ಯುದ್ಧೋನ್ಮಾದದಲ್ಲಿ ತೇಲಾಡುತ್ತಿರುವವರನ್ನು ಕೆಳಗಿಳಿಸುವುದು ಕಷ್ಟವಿದೆ. ಯುದ್ಧೋನ್ಮಾದದ ಭಾಷೆಯನ್ನು ರಾಜಕೀಯ ಪಕ್ಷಗಳು ಮತ್ತದರ ನಾಯಕರು ಅಧಿಕಾರಕ್ಕಾಗಿ, ಸ್ವಾರ್ಥಕ್ಕಾಗಿ ಬಳಸುತ್ತಾರೆ. ಇದು ಯುದ್ಧ ನಿಂತ ನಂತರವೂ ಸಮಾಜವನ್ನು ವಿಭಜಿಸಲು ಕಾರಣವಾಗುತ್ತದೆ.

ಸದ್ಯ ಯುದ್ಧ ನಿಂತಿದೆ. ಕಾಲು ಕೆದರಿ ಕಾದಾಟಕ್ಕಿಳಿದಿದ್ದ ದೇಶಗಳು ಕದನ ವಿರಾಮ ಘೋಷಿಸಿವೆ. ವಿರಾಮ ಎನ್ನುವುದು ಯುದ್ಧನಿರತ ದೇಶಗಳಿಗಷ್ಟೇ ಅಲ್ಲ, ಇಡೀ ಮಾನವಕುಲಕ್ಕೇ ಮುಖ್ಯವಾಗಿದೆ. ಏಕೆಂದರೆ ಯುದ್ಧ ತರುವ ಸಾವು-ನೋವು, ಕಷ್ಟ-ನಷ್ಟ ಅಷ್ಟಿಷ್ಟಲ್ಲ. ಸಂಪನ್ಮೂಲ ಉರಿದು ಪರಿಸರ ಬರಡಾಗುವುದಕ್ಕೆ ಲೆಕ್ಕವಿಲ್ಲ. ಅಂತಹ ಬರಡು ಪ್ರದೇಶವಾಗಿರುವ ಪ್ಯಾಲೆಸ್ತೀನ್ ಗಾಜಾ ಪಟ್ಟಿಯನ್ನು ಜೀವ ಉಕ್ಕಿಸುವ ಜಾಗವಾಗಿಸುವುದು ಸಾಧ್ಯವಿಲ್ಲ.

- Advertisement -

ಹಾಗೆ ನೋಡಿದರೆ, ಯುದ್ಧ ಆಗಿದ್ದು ಇಸ್ರೇಲ್, ಅಮೆರಿಕ ಮತ್ತು ಇರಾನ್ ದೇಶಗಳ ನಡುವೆ. ಆ ಮೂರು ದೇಶಗಳು ನಮ್ಮಿಂದ ಸಾವಿರಾರು ಮೈಲಿ ದೂರದಲ್ಲಿವೆ. ಆದರೆ ಆ ದೇಶಗಳ ನಡುವೆ ನಡೆದ ಯುದ್ಧ, ನಮ್ಮ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ನಮ್ಮ ಅಡುಗೆ ಮನೆಯಿಂದ ಹಿಡಿದು ದೇಶದ ಆರ್ಥಿಕತೆವರೆಗೆ; ನಮ್ಮ ಜೇಬಿನಿಂದ ಹಿಡಿದು ರಿಸರ್ವ್ ಬ್ಯಾಂಕ್‌ವರೆಗೆ ಆದ ಅನಾಹುತ ಲೆಕ್ಕಕ್ಕೆ ಸಿಗದಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಕೊಲ್ಲಿ ದೇಶಗಳಲ್ಲಿ ಯುದ್ಧ ಆರಂಭವಾಗುತ್ತಿದ್ದಂತೆ, ಇಲ್ಲಿ ಗ್ಯಾಸ್ ಸಿಲಿಂಡರ್ ಸರಬರಾಜು ವ್ಯತ್ಯಯವಾಯಿತು. ಪೆಟ್ರೋಲ್-ಡೀಸೆಲ್ ಕೊರತೆ ಉಂಟಾಯಿತು. ಸರಕು-ಸಾಗಾಣೆ ವೆಚ್ಚ ಹೆಚ್ಚಾಗಿ ದಿನಬಳಕೆ ವಸ್ತುಗಳ ಬೆಲೆ ಏರಿತು. ಹೋಟೆಲ್-ರೆಸ್ಟೋರೆಂಟ್-ಪಿಜಿಗಳು ಬಂದ್ ಆದವು. ಅದನ್ನು ನಂಬಿದ್ದ ಅಸಂಘಟಿತ ಕಾರ್ಮಿಕರು ಬೀದಿಗೆ ಬಿದ್ದರು. ಊಟ-ತಿಡಿ ಬೆಲೆ ಏರಿಕೆಯಾಗಿ ವಲಸಿಗರು, ಪ್ರವಾಸಿಗರು ಪರದಾಡಿದರು. ಷೇರು ಪೇಟೆ ದಿಢೀರ್ ಕುಸಿಯಿತು. ಅದರ ಮೇಲೆ ಹಣ ಹೂಡಿದವರು ಆತ್ಮಹತ್ಯೆಗೆ ಶರಣಾದರು. ಅದಂದಿನ ಆದಾಯ ನಂಬಿ ಬದುಕುವ ವಲಸೆ ಕಾರ್ಮಿಕರು, ಮತ್ತೆ ಊರ ಕಡೆ ಮುಖ ಮಾಡಿದರು. ಗ್ಯಾಸ್ ಬಳಸುತ್ತಿದ್ದ ಆಟೋ-ಕಾರು ಚಾಲಕರು, ದಿನವಿಡೀ ಕ್ಯೂ ನಿಂತರೂ ಗ್ಯಾಸ್ ಸಿಗದಾಯಿತು. ಗ್ಯಾಸ್ ಸ್ಟೇಷನ್‌ಗಳಿಗೆ ನೋ ಸ್ಟಾಕ್ ಬೋರ್ಡ್ ಮತ್ತು ಬೀಗ ಬಿತ್ತು. ಕಾಳಸಂತೆಯಲ್ಲಿ ಸಿಲಿಂಡರ್ ಖರೀದಿಸಿದ‌ ಹೋಟೆಲ್‌ ಮಾಲೀಕರು ಮತ್ತು ಆಟೋ ಚಾಲಕರು ಹೆಚ್ಚುವರಿ ಹೊರೆಯನ್ನು ಜನರ ತಲೆ ಮೇಲೆ ಹಾಕಿದರು. ಅನಗತ್ಯ ಜಗಳ ಶುರುವಾಯಿತು. ಮನುಷ್ಯ-ಮನುಷ್ಯರ ನಡುವೆ ವೈಷಮ್ಯ. ವಾತಾವರಣವೇ ಕಲುಷಿತವಾಯಿತು.

ಇದನ್ನು ಓದಿದ್ದೀರಾ?: ‘ಗೆದ್ದಿತು’ ಇರಾನ್ ಸ್ವಾಭಿಮಾನ, ‘ಸೋತಿತು’ ಅಮೆರಿಕ-ಇಸ್ರೇಲ್ ದುರಾಕ್ರಮಣ

ಇನ್ನು ಮನೆಯೊಳಗಿನ ಬದಲಾವಣೆಗಳು ಒಂದೆರಡಲ್ಲ. ಗ್ಯಾಸ್ ಬದಲಿಗೆ ಎಲೆಕ್ಟ್ರಿಕ್ ಸ್ಟವ್, ಸೀಮೆಎಣ್ಣೆ, ಸೌದೆ ಬಳಕೆಗೆ ಬಂದವು. ಸ್ಕೂಟರ್-ಕಾರ್ ಬದಲಿಗೆ ಸೈಕಲ್-ಬಸ್ ಬಳಸುವುದು ಹೆಚ್ಚಾಯಿತು. ಆದಾಯ ಕಡಿಮೆಯಾಯಿತು. ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಾಯಿತು. ಹೊಟ್ಟೆ-ಬಟ್ಟೆ ಕಟ್ಟಿ ಬದುಕುವ ಸ್ಥಿತಿಗೆ ಒಗ್ಗಿಕೊಳ್ಳಬೇಕಾಯಿತು.

ಯುದ್ಧ- ಬಡವರು ಮತ್ತು ಮಧ್ಯಮವರ್ಗದವರ ಮೇಲೆ ನೇರವಾಗಿ ಪರಿಣಾಮ ಬೀರಿತು. ಬದುಕು ಅಸ್ತವ್ಯಸ್ತಗೊಂಡು ಆತಂಕ ಸೃಷ್ಟಿಸಿತು. ದೇಶದ ಜನ ತೊಂದರೆಗೆ ಒಳಗಾಗದಂತೆ ನೋಡಿಕೊಳ್ಳಬೇಕಾದ, ಅವರ ಬದುಕನ್ನು ಹಸನುಗೊಳಿಸಬೇಕಾದ ಆಳುವ ಸರ್ಕಾರ, ‘ಯುದ್ಧದಿಂದಾಗಿ ಇಡೀ ಪ್ರಪಂಚವೇ ತೊಂದರೆಗೆ ಸಿಲುಕಿದೆ, ನಮ್ಮ ದೇಶವೊಂದೇ ಅಲ್ಲ’ ಎನ್ನುವ ಸಮಜಾಯಿಷಿ ಮಾತುಗಳಿಂದ ಬಡವರಿಗೆ ಹಲ್ಲುಕಚ್ಚಿ ಬದುಕುವ ಪಾಠ ಮಾಡಿತು. ಕಷ್ಟ-ನಷ್ಟವನ್ನು ಸಾರ್ವತ್ರಿಕರಿಸಿತು. ಇನ್ನು ರಾಜಕೀಯ ನಾಯಕರು ತಮ್ಮ ಅಧಿಕಾರವನ್ನು ಭದ್ರಪಡಿಸಿಕೊಳ್ಳಲು ಚುನಾವಣೆಗಳತ್ತ ಗಮನ ಹರಿಸಿದರು. ಗೆಲ್ಲಲು ಪಾಕಿಸ್ತಾನವನ್ನು ಎಳೆದುತಂದು, ‘ನಾವು’ ಮತ್ತು ‘ಅವರು’ ಎಂದು ವಿಭಜಿಸಿದರು. ಯುದ್ಧೋನ್ಮಾದದಲ್ಲಿ ತೇಲಾಡಿದರು.

ವಿಪರ್ಯಾಸವೆಂದರೆ, ಯುದ್ಧ ಒಂದು ದಿನ ನಿಲ್ಲಬಹುದು. ಗಡಿಗಳಲ್ಲಿ ಗುಂಡಿನ ಸದ್ದು ಅಡಗಬಹುದು. ಆದರೆ ಯುದ್ಧೋನ್ಮಾದದಲ್ಲಿ ತೇಲಾಡುತ್ತಿರುವವರನ್ನು ಕೆಳಗಿಳಿಸುವುದು ಕಷ್ಟವಿದೆ. ಯುದ್ಧ- ಎರಡು ದೇಶಗಳ ನಡುವೆ, ಕೇವಲ ಸೈನಿಕರಿಗಷ್ಟೇ ಸೀಮಿತವಾಗುವುದಿಲ್ಲ. ಹಿಂಸೆ, ರಕ್ತ, ಸಾವು, ಸರ್ವನಾಶವನ್ನು ಸಾರುತ್ತದೆ. ಜನಸಾಮಾನ್ಯರ ಮನಸ್ಸನ್ನು ಮಲಿನಗೊಳಿಸುತ್ತದೆ. ದೇಶಭಕ್ತಿ, ಭದ್ರತೆ, ಪ್ರತೀಕಾರ ಹೊತ್ತಿ ಉರಿಯುತ್ತದೆ. ಮನುಷ್ಯರ ನಡುವೆ ಕಂದಕ ಸೃಷ್ಟಿಸುತ್ತದೆ. ದ್ವೇಷ, ಅಸಹಿಷ್ಣುತೆ ಬಿತ್ತುತ್ತದೆ. ಶತ್ರುತ್ವ ಹುಟ್ಟುಹಾಕುತ್ತದೆ. ಅದು ಯುದ್ಧ ನಿಂತ ನಂತರವೂ ಮುಂದುವರೆಯುತ್ತದೆ.

ಇಂದಿನ ಡಿಜಿಟಲ್ ಯುಗದಲ್ಲಿ ಯುದ್ಧೋನ್ಮಾದ ಇನ್ನಷ್ಟು ವೇಗವಾಗಿ ಹರಡುತ್ತದೆ. ಸಾಮಾಜಿಕ ಮಾಧ್ಯಮಗಳು ಅಸಲಿ ಮಾಹಿತಿಗಿಂತ ಸುಳ್ಳು ಸುದ್ದಿಗಳು, ಅತಿರಂಜಿತ ವರದಿಗಳು, ಕೆರಳಿಸುವ ನಿರೂಪಣೆಗಳು ಮತ್ತು ಉದ್ದೀಪನಕಾರಿ ಚಿತ್ರಣಗಳನ್ನು ಚಿತ್ತಕ್ಕಿಳಿಸುತ್ತವೆ. ಯುದ್ಧದ ವೇಳೆ ಬಳಕೆಯಾದ ದ್ವೇಷ ಭಾಷೆ, ಹಿಂಸಾತ್ಮಕ ಚಿತ್ರಣಗಳು ಮತ್ತು ಪ್ರಚಾರಗಳು ಜನರಲ್ಲಿ ಭಯ ಮತ್ತು ಕೋಪವನ್ನು ನೆಲೆಗೊಳಿಸುತ್ತವೆ. ಈ ಮನೋಭಾವವು ದಿನನಿತ್ಯದ ಜೀವನದಲ್ಲೂ ಪ್ರತಿಫಲಿಸುತ್ತದೆ. ಯುದ್ಧ ನಿಂತ ನಂತರವೂ ಮುಂದುವರಿಯುತ್ತದೆ.

ಇದನ್ನು ಓದಿದ್ದೀರಾ?: ಕದನ ವಿರಾಮಕ್ಕೆ ಇರಾನ್ ಸಂಭ್ರಮ; ಅಮೆರಿಕ-ಇಸ್ರೇಲ್ ಮೇಲಿನ ಅಪನಂಬಿಕೆಯೂ ಇದೆ!

ಯುದ್ಧೋನ್ಮಾದದ ಭಾಷೆಯನ್ನು ರಾಜಕೀಯ ಪಕ್ಷಗಳು ಮತ್ತದರ ನಾಯಕರು ಅಧಿಕಾರಕ್ಕಾಗಿ, ಸ್ವಾರ್ಥಕ್ಕಾಗಿ ಬಳಸುತ್ತಾರೆ. ಜನರ ಭಾವನೆಗಳನ್ನು ಕೆರಳಿಸಲು, ಬೆಂಬಲ ಗಳಿಸಲು ಪ್ರಯತ್ನಿಸುತ್ತಾರೆ. ಇದನ್ನು ನಾವು 2014ರಿಂದ, ಸಂಘ ಪರಿವಾರ ಮತ್ತು ಬಿಜೆಪಿ ನಾಯಕರಲ್ಲಿ ನೋಡುತ್ತಿದ್ದೇವೆ. ಇದು ಯುದ್ಧ ನಿಂತ ನಂತರವೂ ಸಮಾಜವನ್ನು ವಿಭಜಿಸುತ್ತಿರುವುದನ್ನು ಕಾಣುತ್ತಿದ್ದೇವೆ.

ಈ ಬಗೆಯ ಯುದ್ಧೋನ್ಮಾದವನ್ನು ನಿಲ್ಲಿಸಲು ಕೇವಲ ಯುದ್ಧ ವಿರಾಮ ಸಾಕಾಗುವುದಿಲ್ಲ. ಯುದ್ಧ ನಿಂತ ತಕ್ಷಣ ಶಾಂತಿ ಸ್ಥಾಪನೆಯಾಗುವುದಿಲ್ಲ. ಅದು ಕೇವಲ ಒಪ್ಪಂದಗಳಿಂದ ಸಾಧ್ಯವಿಲ್ಲ. ಶಾಂತಿ, ಸಹೋದರತೆ, ಸೌಹಾರ್ದ ಸಂಸ್ಕೃತಿಯನ್ನು ಬೆಳೆಸುವ ಪ್ರಾಮಾಣಿಕ ಪ್ರಯತ್ನವಾಗಬೇಕು. ಮಾಧ್ಯಮಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು. ಶಿಕ್ಷಣ ವ್ಯವಸ್ಥೆ ತರ್ಕಬದ್ಧ ಚಿಂತನೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ನಾಗರಿಕ ಸಮಾಜವು ಸಂವಾದ ಮತ್ತು ಸಹಬಾಳ್ವೆಯನ್ನು ಉತ್ತೇಜಿಸಬೇಕು. ಯುದ್ಧ ಮತ್ತು ಉನ್ಮಾದ ಸರ್ಕಾರಗಳ ನಿರ್ಧಾರವಾಗಿರಬಹುದು, ಆದರೆ ಶಾಂತಿ ಜನರ ಆಯ್ಕೆಯಾಗಿರಬೇಕು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...