ಈ ದಿನ ಸಂಪಾದಕೀಯ | ಸ್ತ್ರೀ ಘನತೆ ಅಗ್ಗದ ವಸ್ತುವಲ್ಲ; ಚಲನಚಿತ್ರ ವಾಣಿಜ್ಯ ಮಂಡಳಿ ಖಡಕ್‌ ಎಚ್ಚರಿಕೆ ನೀಡಲಿ

Date:

ಜಯಮಾಲಾ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿ ಎರಡು ತಿಂಗಳಾಗುತ್ತಿದೆ. ನಟಿಯಾಗಿ/ನಿರ್ಮಾಪಕಿಯಾಗಿ/ಮಂಡಳಿಯ ಅಧ್ಯಕ್ಷೆಯಾಗಿ ಕನ್ನಡ ಸಿನಿಮಾ ನಿರ್ಮಾಪಕರು, ನಿರ್ದೇಶಕರಿಗೆ ಸ್ಪಷ್ಟ ಸಂದೇಶ ನೀಡಬೇಕಿದೆ. ಅದಕ್ಕೆ ಪ್ರೇಮ್‌ ಪ್ರಕರಣವೇ ನಾಂದಿಯಾಗಲಿ.

- Advertisement -

ಸಿನಿಮಾದಲ್ಲಿ ಹೆಣ್ಣನ್ನು ಭೋಗದ ವಸ್ತುವನ್ನಾಗಿ ಬಿಂಬಿಸುವ ʼವ್ಯಸನʼ ಹೊಸದೇನಲ್ಲ. ಹೆಣ್ಣಿನ ಅಂಗಾಂಗ ಪ್ರದರ್ಶನ, ದ್ವಂದ್ವಾರ್ಥದ ಹಾಡು, ಸಂಭಾಷಣೆ, ಸಂಜ್ಞೆಗಳು ಪಡ್ಡೆ ಹುಡುಗರನ್ನು ಸೆಳೆಯಲು ಹೆಣ್ಣನ್ನು ವಸ್ತುವಾಗಿ ಬಳಕೆ ಮಾಡೋದು ಭಾರತದ ಸಿನಿಮಾ ಪರಂಪರೆಯಲ್ಲಿ ಢಾಳಾಗಿ ಕಾಣ ಸಿಗುತ್ತದೆ. ಹಾಗೆ ನೋಡಿದರೆ ಮಡಿವಂತ ಸಮಾಜದಲ್ಲಿ ಮನರಂಜನಾ ಕ್ಷೇತ್ರದ ಈ ಸ್ತ್ರೀ ಘನತೆಯ ಹರಣದ ಬಗ್ಗೆ ಹೆಚ್ಚಿನ ವಿರೋಧ ವ್ಯಕ್ತವಾಗಿಲ್ಲ ಎಂಬುದಕ್ಕೆ ಕಾರಣ ಕೂಡ ಪುರುಷ ಪ್ರಧಾನ ದಬ್ಬಾಳಿಕೆಯ ಪ್ರಭಾವವೇ ಆಗಿತ್ತು. ತೊಂಭತ್ತರ ದಶಕದವರೆಗೂ ಅಶ್ಲೀಲ ಹಾಡು ಕುಣಿತಕ್ಕೆಂದು ಕ್ಯಾಬರೆ ನರ್ತಕಿಯರನ್ನು ಸಿನಿಮಾಗಳಲ್ಲಿ ಬಳಸಲಾಗುತ್ತಿತ್ತು. ಆ ಜಾಗವನ್ನು ನಾಯಕಿ ನಟಿಯರೇ ತುಂಬಿದ್ದಾರೆ ಎಂಬುದು ಈ ನಾಲ್ಕು ದಶಕದ ಬೆಳವಣಿಗೆ. ಅದು ಬಿಟ್ಟರೆ ಮನರಂಜನಾ ಕ್ಷೇತ್ರದಲ್ಲಿ ಹೆಣ್ಣನ್ನು ಮಾರುಕಟ್ಟೆ ಸರಕಾಗಿ ಎರಡನೇ ದರ್ಜೆಯ ವ್ಯಕ್ತಿಯನ್ನಾಗಿ ನೋಡುವ ನೋಟ ಬದಲಾಗಲೇ ಇಲ್ಲ. ಭಾರತದ ಸಿನಿಮಾ ಕ್ಷೇತ್ರದಲ್ಲಿ #Metoo ಅಭಿಯಾನ ಶುರುವಾಗಿದ್ದೇ ಕಳೆದು ಒಂದು ದಶಕದ ಬೆಳವಣಿಗೆ. ಅಲ್ಲಿಯವರೆಗೆ ನಟಿಯರು ಎಲ್ಲ ನೋವುಗಳನ್ನು ನುಂಗಿ ನಡೆದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಮಾಸ್‌ ಸಿನಿಮಾ ಅಂದ್ರೆ ಮಚ್ಚು, ಲಾಂಗು, ರಕ್ತದಷ್ಟೇ ಸಾಮಾನ್ಯ ಹೆಣ್ಣಿನ ಅಂಗಪ್ರದರ್ಶನ ಎಂಬಂತಾಗಿದೆ. ಈಗ ಪ್ರತಿಯೊಬ್ಬರಿಗೂ ಸಾಮಾಜಿಕ ಮಾಧ್ಯಮ ಎಂಬ ಪ್ರಬಲ ಅಸ್ತ್ರ ಸಿಕ್ಕ ನಂತರ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ಶೋಷಣೆಯನ್ನು ಅಷ್ಟೇ ಬಲವಾಗಿ ಖಂಡಿಸಲು ವೇದಿಕೆ ಲಭಿಸಿದೆ. ಇತ್ತೀಚೆಗೆ ಕನ್ನಡದ ಸಿನಿಮಾದ ಹಾಡೊಂದು ವಿವಾದಕ್ಕೆ ಗುರಿಯಾದ ಎರಡೇ ದಿನಕ್ಕೆ ಹಾಡನ್ನು ಅಳಿಸಿ ಬೇರೆ ಹಾಡು ಬರೆಯಬೇಕಾದ ಸಂದರ್ಭ ಸೃಷ್ಟಿಯಾಗಿದೆ. ಪ್ರೇಮ್‌ ನಿರ್ದೆಶನದ ಕೆಡಿ ದ ಡೆವಿಲ್‌ ಸಿನಿಮಾದ “ಸೆರ್ಗ ಸರ್ಸೇ…” ಹಾಡು ವ್ಯಾಪಕ ಖಂಡನೆಗೆ ಗುರಿಯಾಗಿದೆ. ಬಾಲಿವುಡ್‌ ಮಂದಿ ಕೂಡ ಟೀಕಿಸಿದ್ದರು. ಕಳೆದ ಬುಧವಾರ ನಿರ್ದೇಶಕ ಪ್ರೇಮ್‌ ಹಾಡು ಬದಲಿಸುವ ಮಾತಾಡಿದ್ದಾರೆ. ಆದರೆ, ತಮ್ಮ ಅಭಿಪ್ರಾಯ ಹಂಚಿಕೊಂಡ ವಿಡಿಯೋದ ಉದ್ದಕ್ಕೂ “ನಾನು ನನ್ನ ದೃಷ್ಟಿಕೋನದಲ್ಲಿ ಬರೆದೆ…” ಅಂತ ನಾಲ್ಕಾರು ಬಾರಿ ಹೇಳಿದ್ದಾರೆ. ಆ ಮೂಲಕ ತಮ್ಮ ದೃಷ್ಟಿಕೋನವೇ ಅಶ್ಲೀಲ ಎಂದು ಸಾರಿದಂತೆ ಅವರ ಮಾತುಗಳಿದ್ದವು. ಕ್ಷಮೆ ಕೇಳುವಾಗಲೂ ಅವರಿಗೆ ತಪ್ಪಿನ ಅರಿವಾದಂತೆ ಅಥವಾ ಹೆಣ್ಣುಮಕ್ಕಳಿಗೆ ಅವಮಾನವಾಗಿದೆ ಎಂಬ ಭಾವನೆ ಅವರಲ್ಲಿ ಇದ್ದಂತಿಲ್ಲ.

ರಾಜಕಾರಣಿಗಳು, ಅಧಿಕಾರಿಗಳು, ಸಿನಿಮಾ ಕಲಾವಿದರು ಹೀಗೆ ಹಲವರು ಮಾನಹಾನಿಕರ ಹೇಳಿಕೆ ನೀಡಿದಾಗ, ಹೆಣ್ಣುಮಕ್ಕಳ ಘನತೆಗೆ ಧಕ್ಕೆ ತರುವ ಮಾತು, ಹಾಡು, ಸಾಹಿತ್ಯ ರಚನೆಯ ನಂತರ ವಿವಾದ ಉಂಟಾದಾಗ ಯಾರಿಗಾದರೂ “ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ” ಎಂದು ಹೇಳುತ್ತಾರೆ. “ಹೌದು ನನ್ನಿಂದ ತಪ್ಪಾಗಿದೆ. ಒಬ್ಬ ಹೆಣ್ಣಿಗೆ ಅಥವಾ ಇಡೀ ಹೆಣ್ಣುಕುಲಕ್ಕೆ ಅವಮಾನವಾಗಿದೆ” ಎಂದು ಹೃದಯದಿಂದ ಪಶ್ಚತ್ತಾಪಪಟ್ಟು ಮುಕ್ತ ಮನಸ್ಸಿನಿಂದ ಕ್ಷಮೆ ಕೇಳುವ ಮನಸ್ಥಿತಿಯೂ ಇಲ್ಲ. ಇದು ಸ್ಪಷ್ಟವಾಗಿ ಗಂಡಾಳಿಕೆಯ ಅಹಂಕಾರ. ತಾನು ತಪ್ಪು ಮಾಡಿದ್ದರೂ ಒಪ್ಪಿಕೊಳ್ಳದ ನಡವಳಿಕೆ ನಿಜಕ್ಕೂ ಅಕ್ಷಮ್ಯ.

ನಿರ್ದೇಶಕ ಪ್ರೇಮ್‌ “ಸರ್ಸೇ ಸೆರಗ ಸರ್ಸೇ…” ಎಂಬ ಹಾಡು ಬಿಡುಗಡೆ ಮಾಡಿದಾಗ ಭಾರೀ ಟೀಕೆ ವ್ಯಕ್ತವಾಗಿ ಮಹಿಳಾ ಆಯೋಗಕ್ಕೂ ದೂರು ಸಲ್ಲಿಕೆಯಾಯಿತು. ಮಹಿಳಾ ಆಯೋಗ ಪ್ರೇಮ್‌ಗೆ ಮಾರ್ಚ್‌ 23ರಂದು ಖುದ್ದು ಹಾಜರಾಗಿ ವಿವರಣೆ ನೀಡಲು ನೋಟಿಸ್‌ ನೀಡಿದೆ. ಬಾಲಿವುಡ್‌ ನಟಿ ಕಂಗನಾ ಕೂಡ ಅಸಮಾಧಾನ ಹೊರ ಹಾಕಿದ್ರು. ಹಿಂದಿಯಲ್ಲೂ ಚಿತ್ರೀಕರಣ ಆಗಿದ್ದ ಆ ಹಾಡಿನಲ್ಲಿ ನಟಿಸಿದ್ದ ಬಾಲಿವುಡ್‌ ನಟಿ ನೋರಾ ಕೂಡಾ ಅಸಮಾಧಾನ ಹೊರ ಹಾಕಿದ ನಂತರ ಪ್ರೇಮ್‌ ಮಾಧ್ಯಮಗಳ ಮುಂದೆ ಬಂದು ಹಾಡು ಬದಲಿಸುವ ಮಾತಾಡಿದ್ದಾರೆ. ಮನಪೂರ್ವಕ ಕ್ಷಮೆ ಕೇಳುವ ಮನಸ್ಸು ಮಾಡಿಲ್ಲ.

ಕ್ಷಮೆ ಕೇಳಿ ಬಚಾವ್‌ ಆಗುವ ದಾರಿ ಬಹಳ ಸುಲಭವಿದೆ. ಆದರೆ, ಹೆಣ್ಣುಮಕ್ಕಳ ಆತ್ಮಗೌರವ ಅಷ್ಟು ಅಗ್ಗವಾಗಿ ಹೋಯಿತೇ? ಸಮಾಜಕ್ಕೆ ಎಂತಹ ಸಂದೇಶ ಕೊಡಲು ಹೊರಟಿದ್ದಾರೆ? ಹಣದ ಥೈಲಿ ತುಂಬಿಸಿಕೊಳ್ಳವುದು ಬಿಟ್ಟರೆ ಯಾವ ನೈತಿಕ ಜವಾಬ್ದಾರಿಯೂ ಇಲ್ಲವೇ? ಈ ಪ್ರಕರಣ ಪ್ರೇಮ್‌ ಅವರಂತಹ ಇತರರಿಗೆ ಪಾಠವಾಗಬೇಕು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಈಗ ಹಿರಿಯ ನಟಿ ಜಯಮಾಲಾ ಅಧ್ಯಕ್ಷೆ. ಆ ಸ್ಥಾನದಲ್ಲಿ ಮಹಿಳೆಯೊಬ್ಬರು ಇರುವ ಕಾರಣಕ್ಕೆ ಅವರಿಂದ ತೀವ್ರತರವಾದ ಕ್ರಮವನ್ನು ನಾಡಿನ ಹೆಣ್ಣುಮಕ್ಕಳು ಬಯಸಿದ್ದರು. ಆದರೆ ಅವರು ನಿರಾಶೆಗೊಳಿಸಿದ್ದಾರೆ.

ಕರ್ನಾಟಕದಲ್ಲಿ ಸಿನಿಮಾ ಮತ್ತು ಕಿರುತೆರೆಯಲ್ಲಿ ದುಡಿಯುವ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ತಡೆಯಲು ದೂರು ಸಮಿತಿಯೇ ಇಲ್ಲ. ಹತ್ತಕ್ಕಿಂತ ಹೆಚ್ಚು ಮಹಿಳೆಯರು ದುಡಿಯುವ ಜಾಗಗಳಲ್ಲಿ POSH ಕಮಿಟಿ ಇರಬೇಕು ಎಂಬ (Sexual Harassment of Women at Workplace(Prevention, Prohibition, and Redressal) Act, 2013) ನಿಯಮವನ್ನೇ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಇದುವರೆಗೆ ಪಾಲಿಸಿರಲಿಲ್ಲ. ಎರಡು ವರ್ಷಗಳ ಹಿಂದೆ ಕೇರಳದಲ್ಲಿ ʼಹೇಮಾ ಕಮಿಟಿʼ ಅಲ್ಲಿನ ಸಿನಿಮಾ ರಂಗದ ಸ್ತ್ರೀ ಶೋಷಣೆಯ ಕರಾಳ ಮುಖವನ್ನು ಅನಾವರಣ ಮಾಡಿದ ಮೇಲೆ ದಕ್ಷಿಣದ ಹಲವು ಭಾಷೆಗಳ ನಟಿಯರು ತಮ್ಮ ರಾಜ್ಯದಲ್ಲೂ ಇಂತಹದೊಂದು ಅಧ್ಯಯನ ನಡೆಸಬೇಕು ಎಂದು ಒತ್ತಾಯಿಸಿದ್ದರು. ಕರ್ನಾಟಕದಲ್ಲೂ ಹೇಮಾ ಕಮಿಟಿ ರೀತಿಯಲ್ಲಿ ಕಮಿಟಿ ಸ್ಥಾಪಿಸಬೇಕು ಎಂದು ಮಹಿಳಾ ಆಯೋಗಕ್ಕೆ ಒತ್ತಡ ಬಂದಾಗ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ತಕ್ಷಣಕ್ಕೆ POSH ಕಮಿಟಿ ಮಾಡುವ ನಿರ್ಧಾರಕ್ಕೆ ಬರಲಾಯಿತು. ನಿರ್ದೇಶಕಿ ಕವಿತಾ ಲಂಕೇಶ್‌ ನೇತೃತ್ವದ ಕಮಿಟಿ ರಚನೆ ಮಾಡಿ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಕಮಿಟಿಯನ್ನು ರದ್ದುಪಡಿಸಲಾಯಿತು. ವಾಣಿಜ್ಯ ಮಂಡಳಿಗೆ ಹೊಸ ಪದಾಧಿಕಾರಿಗಳ ಆಯ್ಕೆ ಇರುವ ಕಾರಣ ನೀಡಿದ್ದರು. ವಾಸ್ತವದಲ್ಲಿ ಅಲ್ಲಿದ್ದ ನಿರ್ಮಾಪಕರು, ನಿರ್ದೇಶಕರು ಭಯಬಿದ್ದು ಅಂತಹ ಕಮಿಟಿ ಸ್ಥಾಪಿಸುವುದರ ವಿರುದ್ಧ ಧ್ವನಿ ಎತ್ತರಿಸಿ ಮಾತನಾಡಿದ್ದರು. ನಂತರ ಬಂದ ಹೊಸ ಮಂಡಳಿ ನಾಮಕಾವಸ್ತೆಗೆ POSH ಕಮಿಟಿ ರಚನೆ ಮಾಡಿತ್ತು. ಇದುವರೆಗೆ ಅಲ್ಲಿ ಒಂದೇ ಒಂದು ದೂರು ದಾಖಲಾಗಿಲ್ಲ. ಜಯಮಾಲಾ ಅವರಿಗೆ ಸಿನಿಮಾ ರಂಗದಲ್ಲಿನ ʼಕಾಸ್ಟಿಂಗ್‌ ಕೌಚ್‌ʼ ಗೊತ್ತಿಲ್ಲದ ವಿಚಾರ ಅಲ್ಲ. ಅವರಿಗೆ ಒಮ್ಮೆಯಾದರೂ ಅಂತಹ ಕೆಟ್ಟ ಅನುಭವ ಆಗಿರಬಹುದು/ ಆಗಿರದೆಯೂ ಇರಬಹುದು. ಆದರೆ, ಅವಕಾಶಕ್ಕಾಗಿ ನಟಿಯರ ದುರ್ಬಳಕೆ ಮಾಡಿಕೊಳ್ಳುವ ದುಷ್ಟತನ ಕನ್ನಡ ಸಿನಿಮಾ ರಂಗದಲ್ಲಿ ಯಾರಿಗೂ ಇಲ್ಲ ಎಂದು ಹೇಳಲಾರರು.

ಇದನ್ನೂ ಓದಿ ʼಈ ದಿನʼ ಕವಿತೆ | ಸರಿದಿತ್ತು ನಮ್ಮಯ ಸೆರಗು…

ಜಯಮಾಲಾ ಅವರು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿ ಎರಡು ತಿಂಗಳಾಗುತ್ತಿದೆ. ನಟಿಯಾಗಿ/ ಅಧ್ಯಕ್ಷೆಯಾಗಿ ಅವರು ಕನ್ನಡ ಸಿನಿಮಾ ನಿರ್ಮಾಪಕರು, ನಿರ್ದೇಶಕರಿಗೆ ಸ್ಪಷ್ಟ ಸಂದೇಶ ನೀಡಬೇಕಿದೆ. ಅದಕ್ಕೆ ಪ್ರೇಮ್‌ ಪ್ರಕರಣವೇ ನಾಂದಿಯಾಗಲಿ. ತಕ್ಷಣವೇ ಚಲನಚಿತ್ರ ವಾಣಿಜ್ಯ ಮಂಡಳಿ ಹೆಣ್ಣುಮಕ್ಕಳ ಘನತೆಗೆ ಧಕ್ಕೆ ತರದ ರೀತಿಯಲ್ಲಿ ಸಿನಿಮಾ ನಿರ್ಮಾಣ ಮಾಡುವಂತೆ ಹಾಗೂ ತಪ್ಪಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡುವ ಕೆಲಸ ಮಾಡಬೇಕಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?

ಚುನಾವಣೆಯ ಕಾವಲುಗಾರನಿಗೆ ಕಾನೂನಿನ ಕವಚ ಕುಂಡಲಗಳನ್ನು ನೀಡಿ, ಕಾನೂನಿನ ಕೈಗಳು ಮುಟ್ಟದಂತೆ,...

ಈ ದಿನ ಸಂಪಾದಕೀಯ | ಎದ್ದು ನಿಂತ ಯುವಜನತೆ, ಹೊಸ ಬೆಳವಣಿಗೆಯತ್ತ ಭಾರತ

ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆ, ಸರ್ಕಾರ ರಚನೆ, ಆಡಳಿತ ನಡೆಸುವುದಷ್ಟೇ ಅಲ್ಲ, ದನಿ...

ಈ ದಿನ ಸಂಪಾದಕೀಯ | ಗ್ಯಾನೇಶ್ ರಕ್ಷಣೆಗಾಗಿ ಯುವತಿಯರನ್ನು ಪೀಡಿಸುವ ಕೀಚಕರಾಗುತ್ತಿದ್ದಾರೆಯೇ ದೆಹಲಿ ಪೊಲೀಸರು?

ರಕ್ಷಕರೇ ಭಕ್ಷಕರಾಗುವ ಅದೇ ಹಳೆಯ ನಿರಾಶಾಜನಕ ಕತೆಯಿದು. ದೆಹಲಿ ಪ್ರತಿಭಟನೆಯಲ್ಲಿ ಪೊಲೀಸರ...

ಈ ದಿನ ಸಂಪಾದಕೀಯ | ಸಂಸದೀಯ ಸಮಿತಿ ಸಭೆಯಿಂದ ಸುಪ್ರೀಂ ಕೋರ್ಟ್‌ ಹಿಂದೆ ಸರಿದದ್ದು ಸ್ವಾಗತಾರ್ಹ!

ಸಂವಿಧಾನದ 143ನೇ ವಿಧಿಯಡಿ ಸಂಸದೀಯ ಸಮಿತಿಯು ಮಹತ್ವದ ಕಾನೂನು ರೂಪಿಸುವಾಗ, ಸುಪ್ರೀಂ...