ಈ ದಿನ ಸಂಪಾದಕೀಯ | ‘ಗೆದ್ದಿತು’ ಇರಾನ್ ಸ್ವಾಭಿಮಾನ, ‘ಸೋತಿತು’ ಅಮೆರಿಕ-ಇಸ್ರೇಲ್ ದುರಾಕ್ರಮಣ

Date:

ಟ್ರಂಪ್ – ನೆತನ್ಯಾಹು ಕೇಡಿನ ಜೋಡಿಯ ಮಸಲತ್ತುಗಳು. ಕರಾಮತ್ತುಗಳು ಕಾರಸ್ಥಾನಗಳನ್ನು ನೋಡಿದವರಿಗೆ ಇವರಿಬ್ಬರ ‘ಶರಣಾಗತಿ’ ವಿಶ್ವಾಸ ಹುಟ್ಟಿಸುವುದಿಲ್ಲ. ಇವರಿಬ್ಬರ ಕೇಡಿನ ಗುಪ್ತ ಕಾರ್ಯಸೂಚಿಯೇನಾದರೂ ಇದ್ದರೆ ಕಾಲವೇ ಅದನ್ನು ಬಯಲು ಮಾಡಲಿದೆ. ಈ ಇಬ್ಬರು ಪ್ರಚಂಡ ಎದುರಾಳಿಗಳ ವಿರುದ್ಧ ನೆಲಕಚ್ಚಿ ಹೋರಾಡಿ ಶಕ್ತಿಶಾಲಿಯಾಗಿ ಹೊರಹೊಮ್ಮಿರುವ ಇರಾನ್ ‘ಗೆದ್ದಿದೆ’. ಚಂಡಪ್ರಚಂಡರೆಂದು ಎದೆ ಬಡಿದುಕೊಳ್ಳುತ್ತಿದ್ದ ಅಮೆರಿಕ-ಇಸ್ರೇಲ್ ‘ಸೋತಿವೆ’

- Advertisement -

ಪ್ರಪಂಚ ಪತನದ ಅಂಚಿನಿಂದ ಸದ್ಯಕ್ಕಾದರೂ ಹಿಂದಿರುಗಿದೆ. ಹಠಾತ್ತನೆ ಹೂಂಕರಿಸಿ ಆಕಾಶದೆತ್ತರಕ್ಕೆ ನಿಂತ ಇಂಧನ ಬಿಕ್ಕಟ್ಟು ಸಡಿಲಗೊಳ್ಳುವ ಸುಳಿವುಗಳು ಗೋಚರಿಸಿವೆ. ಅಮೆರಿಕ- ಇಸ್ರೇಲ್ ಎಂಬ ದುರುಳ ಜೋಡಿ ಇರಾನ್ ವಿರುದ್ಧ ಕಾಲು ಕೆದರಿ ನಡೆಸಿದ್ದ ಯುದ್ಧ, ಎರಡು ವಾರಗಳ ತಾತ್ಕಾಲಿಕ ವಿರಾಮ ಕಂಡಿದೆ. ಕದನವಿರಾಮಕ್ಕೆ ಒಪ್ಪಿದ ಇರಾನ್ ವಿಧಿಸಿರುವ ಹತ್ತು ಷರತ್ತುಗಳು ‘ಕಾರ್ಯಸಾಧ್ಯ’ ಎಂಬ ಟ್ರಂಪ್ ಪ್ರತಿಕ್ರಿಯೆ ಸಕಾರಾತ್ಮಕ. ತಾತ್ಕಾಲಿಕ ಕದನವಿರಾಮ ಕಾಯಂ ಅಗುವ ಆಸೆಗೆ ಆಸ್ಪದ ನೀಡಿದೆ. ಅಮೆರಿಕ ಇಸ್ರೇಲ್ ಎರಡು ವಾರಗಳ ಕಾಲ ಇರಾನ್ ಮೇಲಿನ ದಾಳಿಗಳನ್ನು ನಿಲ್ಲಿಸಲಿವೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ಅಂತಾರಾಷ್ಟ್ರೀಯ ಸಂಚಾರಕ್ಕೆ ತೆರೆಯಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಹಾಲಿ ಕದನವಿರಾಮದ ಹಿಂದೆ ಪಾಕಿಸ್ತಾನದ ರಾಯಭಾರವಿದೆ. ಅಲ್ಲಿಯ ತನಕ ಎಲ್ಲವೂ ಸರಿಯಿದ್ದರೆ ಶುಕ್ರವಾರ ಪಾಕಿಸ್ತಾನದಲ್ಲಿ ಅಮೆರಿಕ- ಮತ್ತು ಇರಾನ್ ನಡುವೆ ಶಾಂತಿಯ ಮಾತುಕತೆಗಳು ನಡೆಯಲಿವೆ. ಸಂಧಾನ ಸಫಲವಾಗದಿದ್ದರೆ ಯುದ್ಧಕ್ಕೆ ಮರಳುವುದಾಗಿ ಟ್ರಂಪ್ ಘೋಷಿಸಿದ್ದಾರೆ.

ಆದರೆ ಟ್ರಂಪ್ ಮತ್ತು ನೆತನ್ಯಾಹು ಜೋಡಿಯ ಮಸಲತ್ತುಗಳು. ಕರಾಮತ್ತುಗಳು ಕಾರಸ್ಥಾನಗಳನ್ನು ನೋಡಿದವರಿಗೆ ಇವರಿಬ್ಬರ ‘ಶರಣಾಗತಿ’ ವಿಶ್ವಾಸ ಹುಟ್ಟಿಸುವುದಿಲ್ಲ. ಇವರಿಬ್ಬರ ಕೇಡಿನ ಗುಪ್ತ ಕಾರ್ಯಸೂಚಿಯೇನಾದರೂ ಇದ್ದರೆ ಕಾಲವೇ ಅದನ್ನು ಬಯಲು ಮಾಡಲಿದೆ. ಈಗಲೂ ಈ ಕದನವಿರಾಮ ಲೆಬನಾನ್ ಗೆ ಅನ್ವಯಿಸುವುದಿಲ್ಲವೆಂದು ಅಪಸ್ವರ ಎತ್ತಿದೆ ಇಸ್ರೇಲ್. ಕದನವಿರಾಮಕ್ಕೆ ತುಸುವೇ ಮುನ್ನ ಲೆಬನಾನ್ ಮೇಲೆ ನಡೆಸಿದ ಡ್ರೋನ್ ದಾಳಿಯಲ್ಲಿ ಎಂಟು ಮಂದಿ ಹತರಾಗಿದ್ದಾರೆ. ತನ್ನನ್ನು ಬೆಂಬಲಿಸಿ ಹೋರಾಡಿರುವ ಹೆಜ್ಪೊಲ್ಲಾ ಪಡೆಗಳಿರುವ ಲೆಬನಾನ್ ವಿರುದ್ಧ ದಾಳಿಗಳು ನಿಲ್ಲದೆ ಹೋದರೆ ಕದನವಿರಾಮ ಬಾಳುವುದಿಲ್ಲ ಎಂದು ಎಚ್ಚರಿಕೆ ನೀಡಿದೆ ಇರಾನ್.

ಈ ಇಬ್ಬರು ಪ್ರಚಂಡ ಎದುರಾಳಿಗಳ ವಿರುದ್ಧ ನೆಲಕಚ್ಚಿ ಹೋರಾಡಿ ಶಕ್ತಿಶಾಲಿಯಾಗಿ ಹೊರಹೊಮ್ಮಿರುವ ಇರಾನ್ ‘ಗೆದ್ದಿದೆ’. ಚಂಡಪ್ರಚಂಡರೆಂದು ಎದೆ ಬಡಿದುಕೊಳ್ಳುತ್ತಿದ್ದ ಅಮೆರಿಕ-ಇಸ್ರೇಲ್ ‘ಸೋತಿವೆ’. ತಿಂಗಳ ತರುವಾಯವೂ ಇರಾನಿನ ಹೋರಾಟದ ಸ್ವಾಭಿಮಾನ, ಸಾಮರ್ಥ್ಯ, ಮನೋಬಲ ಕುಂದಲಿಲ್ಲ. ಅಸಮಾನ ಬಲಗಳ ನಡುವಿನ ಯುದ್ಧವಿದು. ಅಮೆರಿಕ-ಇಸ್ರೇಲ್ ಗೆ ಇರುವಷ್ಟು ಯುದ್ಧ ಸಂಪನ್ಮೂಲಗಳು ಇರಾನ್ ಗೆ ಇಲ್ಲ. ನಾಲ್ಕು ದಶಕಗಳಿಂದ ಅಮೆರಿಕ ವಿಧಿಸಿದ ನಿರ್ಬಂಧಗಳನ್ನು ಎದುರಿಸಿ ತಲೆಯೆತ್ತಿ ನಿಂತ ಇರಾನ್, ಈ ಯುದ್ಧವನ್ನು ವರ್ಷಗಳಷ್ಟು ಹಿಂದೆಯೇ ನಿರೀಕ್ಷಿಸಿತ್ತು. ತಯಾರಿಯನ್ನೂ ನಡೆಸಿತ್ತು. ಹೀಗಾಗಿಯೇ ಈಗಲೂ ಸೋತು ಶರಣಾಗಲಿಲ್ಲ. ಬದಲಿಗೆ ಯುದ್ಧವನ್ನು ಇನ್ನೂ ಹಿಗ್ಗಿಸುವ ಇರಾದೆಯನ್ನು ಕಾರ್ಯತಃ ಪ್ರಕಟಿಸಿತ್ತು. ಶತ್ರು ದೇಶಗಳ ಮಿಲಿಟರಿ ಸಂಪನ್ಮೂಲಗಳಿಗೆ ಭಾರೀ ಹಾನಿಯನ್ನು ಉಂಟು ಮಾಡಿತು. ಅಮೆರಿಕದ ಅಸೀಮ ಯುದ್ಧವಿಮಾನಗಳನ್ನು ಹೊಡೆದು ಕೆಡವಿ ಬೆರಗು ಹುಟ್ಟಿಸಿತು.

ಕೆಲವೇ ದಿನಗಳಲ್ಲಿ ಇಲ್ಲವೇ ವಾರದೊಪ್ಪತ್ತಿನಲ್ಲಿ ಈ ಯುದ್ಧ ಮುಗಿದು ಮಧ್ಯಪ್ರಾಚ್ಯವನ್ನು ಮತ್ತು ಅಲ್ಲಿನ ತೈಲನಿಧಿಯನ್ನು ತಮ್ಮ ಇಷ್ಟ ಬಂದಂತೆ ಆಳಬಹುದು ಎಂಬ ಟ್ರಂಪ್-ನೆತನ್ಯಾಹು ಕನಸು ಭಗ್ನಗೊಂಡಿದೆ.  ಇವರಿಬ್ಬರು ಜಂಟಿಯಾಗಿ ನಡೆಸಿದ ಇರಾನ್ ಸುಪ್ರೀಮ್ ನಾಯಕ ಖಮೇನಿಯವರ ಹತ್ಯೆ ಮತ್ತು ಅನ್ಯಾಯದ ಆಕ್ರಮಣ ದಾಳಿಗಳು, ಆ ದೇಶದ ಜನರನ್ನು ಒಗ್ಗೂಡಿಸಿದವು. ದೇಶಪ್ರೇಮವನ್ನು ಬಡಿದೆಬ್ಬಿಸಿದವು. ಸಾವಿರಾರು ವರ್ಷಗಳ ಪರ್ಷಿಯನ್ (ಇರಾನ್) ನಾಗರಿಕತೆಯನ್ನು ಶಿಲಾಯುಗಕ್ಕೆ ಅಟ್ಟುತ್ತೇನೆಂಬುದು ಅತಿ ದುರಹಂಕಾರದ ಮಾತು. ಪುಡಿ ರೌಡಿಗಳ ಭಾಷೆ.

ಇರಾನಿನ ಶಾಲೆ, ಆಸ್ಪತ್ರೆ, ವಿಶ್ವವಿದ್ಯಾಲಯ, ವಿಶ್ವಪರಂಪರೆಯಡಿ ಘೋಷಿತ ಸ್ಮಾರಕಗಳು, ಸಾಂಸ್ಕೃತಿಕ ತಾಣಗಳನ್ನೂ ಬಿಡದೆ ಬಾಂಬ್ ಸುರಿಸಲಾಗಿತ್ತು. ‘ದೈತ್ಯ ಕ್ರೋಧಾಗ್ನಿ’ಯಲ್ಲಿ ಸುಟ್ಟು ಭಸ್ಮವಾಗಲಿದೆ ಇರಾನ್ ಎಂಬ ಟ್ರಂಪ್ ಬೆದರಿಕೆ ಜಗತ್ತನ್ನು ನಿಜಕ್ಕೂ ತೀವ್ರ ಆತಂಕಕ್ಕೆ ನೂಕಿತ್ತು. ಬುಧವಾರದ ಬೆಳಗು ಮಹಾನ್ ಕೇಡಿನ ಸುದ್ದಿಯನ್ನು ತರುವುದೆಂಬ ನಿರೀಕ್ಷೆ ಹುಸಿಯಾದದ್ದು, ಇರಾನಿನ ಗೆಲುವಷ್ಟೇ ಅಲ್ಲದೆ ಮಾನವೀಯತೆಯ ಮೇಲುಗೈ ಕೂಡ ಆಗಿದೆ.

ಇರಾಕ್, ಲಿಬ್ಯಾ ಹಾಗೂ ಸಿರಿಯಾ ದೇಶಗಳನ್ನು ಭಗ್ನಾವಶೇಷಗಳಾಗಿಸಿ ಕರ್ನಲ್ ಗದ್ದಾಫಿ ಮತ್ತು ಸದ್ದಾಮ್ ಹುಸೇನ್ ಅವರನ್ನು ಅವಮಾನಿಸಿ ನಾಯಿಗಳಂತೆ ಎಳೆದೊಯ್ದು ಕೊಂದಿತ್ತು ಅಮೆರಿಕ, ಮೊನ್ನೆ ಮೊನ್ನೆ ವೆನಿಜುವೆಲಾದ ಮುಖ್ಯಸ್ಥನನ್ನೂ ಅಪಹರಿಸಿ ತನ್ನ ಬಂಧನದಲ್ಲಿ ಇಟ್ಟಿದೆ. ಇರಾನನ್ನೂ ಹೀಗೆಯೇ ಬೇಟೆಯಾಡಬಹುದೆಂಬ ಟ್ರಂಪ್-ನೆತನ್ಯಾಹು ಭ್ರಮೆ ಹರಿದು ಚೂರಾಗಿದೆ. ದುರಹಂಕಾರಗಳು ಮಣ್ಣು ಮುಕ್ಕಿವೆ. ಇರಾನನ್ನು ಶಿಲಾಯುಗಕ್ಕೆ ಅಟ್ಟುತ್ತೇವೆ ಎಂದವರು ತಾವೇ ಶರಣಾಗಿದ್ದಾರೆ.

ಡೊನಾಲ್ಡ್ ಟ್ರಂಪ್ ಮತ್ತು ನೆತನ್ಯಾಹು ಎಂಬ ಈ ಇಬ್ಬರು ಮಹಾಕೇಡಿಗರ ಕೃತ್ಯಗಳು ಜಗತ್ತನ್ನು ಹಲವು ಬಗೆಯ ವಿನಾಶದತ್ತ ಎಳೆದೊಯ್ಯುತ್ತಲಿದ್ದವು. ವಿಶ್ವದಾದ್ಯಂತ ಅರ್ಥವ್ಯವಸ್ಥೆಗಳನ್ನು ತತ್ತರಗೊಳಿಸಿದ್ದವು. ಜನಜೀವನಗಳು ಬುಡಮೇಲಾಗುತ್ತಲಿದ್ದವು. ಯುದ್ಧದ ಬಿಸಿಯಲ್ಲಿ ಭಾರತ ಈಗಾಗಲೇ ಬಸವಳಿದಿದೆ. ಗಗನಕ್ಕೆ ಜಿಗಿದಿರುವ ಕಚ್ಚಾ ತೈಲದ ಬೆಲೆಯನ್ನು ಭರಿಸುವ ಶಕ್ತಿ ಭಾರತದ ಜನಸಾಮಾನ್ಯರಿಗೆ ಇಲ್ಲ. ಮೋದಿ ಸರ್ಕಾರದ ಆರ್ಥಿಕ ನೀತಿಗಳು-ಅನೀತಿಗಳ ಭಾರದ ಅಡಿಯಲ್ಲಿ ಅವರ ನಡು ಮುರಿದಿದೆ. ಆದರೆ ಮುಸ್ಲಿಮ್ ದ್ವೇಷ ಮತ್ತು ಅಂಧಭಕ್ತಿಯ ‘ಸ್ಟೀರಾಯ್ಡ್’ ತುಂಬಿ ಎಬ್ಬಿಸಿ ನಿಲ್ಲಿಸಲಾಗಿದೆ.

ಬುಧವಾರದ ಬೆಳಗಿನ ಜಾವದ ಹೊತ್ತಿಗೆ ರಾಶಿ ಬಾಂಬುಗಳ ಸುರಿಸಿ ಇರಾನನ್ನು ಮತ್ತೆ ಶಿಲಾಯುಗಕ್ಕೆ ನೂಕುವುದಾಗಿ ಜಂಭ ಕೊಚ್ಚಿಕೊಂಡಿದ್ದ ಟ್ರಂಪ್ ಮತ್ತು ನೆತನ್ಯಾಹು ತಮ್ಮ ತಮ್ಮ ದೇಶದ ಜನತೆಯ ತೀವ್ರ ಅಸಮಾಧಾನಗಳಿಗೆ ತುತ್ತಾಗಿರುವುದು ನೈಸರ್ಗಿಕ ನ್ಯಾಯವೇ ಆಗಿದೆ. ಇವರಿಬ್ಬರು ಎದುರಿಸಿರುವ ಮುಖಭಂಗ ರಾಷ್ಟ್ರೀಯ ಮಾತ್ರವಲ್ಲದೆ ಅಂತಾರಾಷ್ಟ್ರೀಯವೂ ಆಗಿದೆ. ಇರಾನ್ ಪರಮಾಣು ಶಕ್ತಿಯನ್ನು ಕೈವಶ ಮಾಡಿಕೊಳ್ಳದಂತೆ ತಡೆಯುವುದು ಮತ್ತು ಇರಾನಿನ ಆಳ್ವಿಕೆಯನ್ನು ವೆನಿಜುವೆಲಾ ಮಾದರಿಯಲ್ಲಿ ಬದಲಿಸುವುದು ಯುದ್ಧದ ಉದ್ದೇಶವೆಂದು ಸಾರಿದ್ದರು ಟ್ರಂಪ್. ಆದರೆ ಇರಾನಿನ ಆಳ್ವಿಕೆ ಬದಲಾಗಿಲ್ಲ, ಪರಮಾಣು ಶಕ್ತಿಯನ್ನು ಕೈವಶ ಮಾಡಿಕೊಳ್ಳದಂತೆ ಇರಾನನ್ನು ತಡೆದಿದ್ದೇವೆಂದು ತೋರಿಸಲು ಟ್ರಂಪ್-ನೆತನ್ಯಾಹು ಬಳಿ ಯಾವ ಪುರಾವೆಯೂ ಇಲ್ಲ.

ಅಂತಾರಾಷ್ಟ್ರೀಯ ಗೂಂಡಾಗಳ ಜೋಡಿಯಂತೆ ಧಮಕಿ ಹಾಕಿ ರೌಡಿಗಿರಿ ಮಾಡಿದ ಇವರಿಬ್ಬರು ತಮ್ಮ ತಮ್ಮ ಜನತೆಯ ದೃಷ್ಟಿಯಲ್ಲಿ ಕೆಳಗೆ ಕುಸಿದಿದ್ದಾರೆ. ರಾಯಿಟರ್ಸ್- ಫಾಕ್ಸ್ ನ್ಯೂಸ್ ನಡೆಸಿರುವ ಸಮೀಕ್ಷೆಗಳ ಪ್ರಕಾರ ಟ್ರಂಪ್ ಗೆ ಅಮೆರಿಕನ್ನರ ಅನುಮೋದನೆ ಶೇ.37ಕ್ಕೆ ಕುಸಿದಿದೆ. ಶೇ.59 ರಷ್ಟು ಅಮೆರಿಕನ್ ಪ್ರಜೆಗಳು ಈತನನ್ನು ವಿರೋಧಿಸಿದ್ದಾರೆ. ಇಸ್ರೇಲಿನ ರಾಜಕೀಯ ಇತಿಹಾಸ ಈವರೆಗೆ ಕಂಡಿರದ ಅನಾಹುತವನ್ನು ನೆತನ್ಯಾಹು ಎಸಗಿದ್ದಾರೆ. ಇರಾನ್ ವಿರುದ್ಧ ಯಾವ ಗುರಿಗಳನ್ನು ಇಟ್ಟುಕೊಂಡು ಯುದ್ಧ ಸಾರಿದರೋ ಅವುಗಳಲ್ಲಿ ಒಂದೂ ಈಡೇರಿಲ್ಲವೆಂದು ಅಲ್ಲಿನ ಪ್ರತಿಪಕ್ಷಗಳು ಟೀಕಿಸಿವೆ.

ಸೋವಿಯತ್ ಒಕ್ಕೂಟ ಛಿದ್ರಗೊಂಡ ನಂತರ ಪ್ರಪಂಚದ ಸೂಪರ್ ಪವರ್ ತಾನೇ ಎಂದು ಮೆರೆದಿದ್ದ ಅಮೆರಿಕದ ಇಳಿಜಾರು ಪಯಣ ಆರಂಭ ಆದಂತಿದೆ. ಸೂರ್ಯನು ಮುಳುಗದ ಸಾಮ್ರಾಜ್ಯವೆಂದು ಹೆಸರಾಗಿದ್ದ ಬ್ರಿಟನ್ ಕಾಲದ ತುಳಿತಕ್ಕೆ ಸಿಕ್ಕು ಮೂಲೆಗುಂಪಾದ ಉದಾಹರಣೆ ಕಣ್ಣೆದುರಿಗೇ ಇದೆ.

ಅಂತಾರಾಷ್ಟ್ರೀಯ ವ್ಯಾಪಾರ ವಾಣಿಜ್ಯದಲ್ಲಿ ಸ್ಥಾಪಿತವಾಗಿರುವ ಅಮೆರಿಕದ ಡಾಲರ್ ಯಜಮಾನಿಕೆ ಅಂತ್ಯಗೊಳ್ಳಬೇಕೆಂದು ಚೀನಾ ಮತ್ತು ಇರಾನ್ ಇದೇ ಸಂದರ್ಭದಲ್ಲಿ ದನಿಯೆತ್ತಿವೆ. ಡಾಲರ್ ಪ್ರಾಬಲ್ಯವನ್ನು ಬಳಸಿಕೊಂಡು ಅಮೆರಿಕ ತನ್ನ ವೈರಿಗಳು ಮತ್ತು ಪ್ರತಿಸ್ಪರ್ಧಿಗಳನ್ನು ಸಂಕಟಕ್ಕೆ ತಳ್ಳುತ್ತಿದೆ. ವಿಶೇಷವಾಗಿ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಶೇ.80ರಷ್ಟು ವ್ಯವಹಾರಗಳು ಡಾಲರ್ ಕರೆನ್ಸಿಯಲ್ಲೇ ನಡೆಯುತ್ತವೆ. ಡಾಲರ್ ಸ್ಥಾನದಲ್ಲಿ ಚೀನಾದ ಯುವಾನ್ ಕರೆನ್ಸಿಯನ್ನು ಸ್ಥಾಪಿಸಲು ಎರಡೂ ದೇಶಗಳು ಮುಂದಾಗಿವೆ. ಪೆಟ್ರೋ ಡಾಲರ್ ಎಂಬ ಪದ ಪೆಟ್ರೋ ಯುವಾನ್ ಆಗಿ ಪರಿವರ್ತನೆಯಾದರೆ ಆಶ್ಚರ್ಯವಿಲ್ಲ. ತನ್ನ ಮೇಲೆ ಅಮೆರಿಕ ವಿಧಿಸಿರುವ ನಾಲ್ಕು ದಶಕಗಳ ನಿರ್ಬಂಧಗಳನ್ನು ಕೊಡವಿಕೊಳ್ಳಲು ಪೆಟ್ರೋಡಾಲರ್ ಗಳು ಪೆಟ್ರೋಯುವಾನ್ ಆಗಬೇಕೆಂಬುದು ಇರಾನ್ ಇರಾದೆ. ಈ ಮಹತ್ವಾಕಾಂಕ್ಷೆಯ ಇರಾದೆ ಸಾಕಾರಗೊಳ್ಳುವುದು ಅಷ್ಟು ಸುಲಭ ಅಲ್ಲವಾದರೂ, ಅಂತಹ ಚರ್ಚೆ ಶುರುವಾಗಿರುವುದೇ ಗಮನಾರ್ಹ ವಿದ್ಯಮಾನ.

ಈ ಯುದ್ಧವಿರಾಮ ಬಹುಕಾಲ ಬಾಳುವುದಿಲ್ಲ ಎಂಬ ಸಂದೇಹವನ್ನು ರಾಜಕೀಯ ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ. ಈ ಸಂದೇಹ ನಿಜವಾಗದಿರಲಿ. ಮನುಕುಲ ಯುದ್ಧದಲ್ಲಿ ಸೋತು ಸುಣ್ಣವಾಗದಿರಲಿ. 

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...