ಈ ದಿನ ಸಂಪಾದಕೀಯ | ಮಂದಿರ ಪ್ರವೇಶಕ್ಕೆ ಬೆಂಬಲಿಸದ ಮೋದಿ ಸರ್ಕಾರ, ಮಹಿಳಾ ಹಕ್ಕುಗಳ ರಕ್ಷಣೆ ಮಾಡುವುದೇ?

Date:

ಬಿಜೆಪಿ ಮತ್ತು ಮೋದಿ ಸರ್ಕಾರಕ್ಕೆ ನಿಜಕ್ಕೂ ಮಹಿಳೆಯರ ಘನತೆಯ ರಕ್ಷಣೆ, ಮಹಿಳಾ ಹಕ್ಕುಗಳ ರಕ್ಷಣೆಯ ಬದ್ಧತೆ, ಮಹಿಳೆಯರನ್ನು ಪುರುಷನ ಸಮಾನವಾಗಿ ನೋಡುವ ಮನಸ್ಥಿತಿ ಇದೆಯೇ ಎಂದು ನೋಡಿದರೆ ʼಅಂಗೈ ಹುಣ್ಣಿಗೆ ಕನ್ನಡಿ ಬೇಕೇʼ ಎಂಬ ಮಾತು ನೆನಪಾಗುತ್ತದೆ.

- Advertisement -

ಇಡೀ ಜಗತ್ತು ಯುದ್ಧದ ಭೀಕರ ಪರಿಣಾಮ ಎದುರಿಸುತ್ತಿದೆ. ಇಂಧನಕ್ಕಾಗಿ ಕೊಲ್ಲಿ ರಾಷ್ಟ್ರಗಳನ್ನು ಅವಲಂಬಿಸಿರುವ ಭಾರತದಲ್ಲಿ ಇರಾನ್‌- ಇಸ್ರೇಲ್‌ ಯುದ್ಧ ಆರಂಭವಾದ ಒಂದೇ ವಾರಕ್ಕೆ ಎಲ್‌ಪಿಜಿ ಸಿಲಿಂಡರ್‌ ಕೊರತೆ ಬಾಧಿಸಿದೆ. ದೇಶದಲ್ಲಿ ಲಕ್ಷಾಂತರ ಹೋಟೆಲ್‌ಗಳು ಬಾಗಿಲು ಹಾಕಿವೆ, ಸಣ್ಣ ಪುಟ್ಟ ತಿಂಡಿ ತಿನಿಸು ಕೇಂದ್ರಗಳು ಕದ ಮುಚ್ಚಿವೆ. ಆಟೋ ಗ್ಯಾಸ್‌ ಕೊರತೆ, ಗ್ಯಾಸ್‌ ಸಿಕ್ಕರೂ ದರ ಏರಿಕೆಯ ಬಿಸಿ ಚಾಲಕರ ಕುಟುಂಬಗಳ ನಿದ್ದೆಗೆಡಿಸಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ಪಂಚರಾಜ್ಯಗಳ ಚುನಾವಣಾ ಪ್ರಚಾರ ನಿರತರು. ನೆಹರೂ, ಕಾಂಗ್ರೆಸ್‌ ಟೀಕಿಸುತ್ತಾ, ಮಹಿಳೆಯರಿಗೆ ಬಣ್ಣ ಬಣ್ಣದ ಭರವಸೆ ನೀಡುತ್ತಿದ್ದಾರೆ. ಹೇಗಾದರೂ ಮಾಡಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ತರಲು ಹರ ಸಾಹಸಪಡುತ್ತಿದ್ದಾರೆ. ಈ ಮಧ್ಯೆ ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡುವ ಮಸೂದೆ ಜಾರಿಗೆ ಸಂಬಂಧಿಸಿ ವಿಶೇಷ ಅಧಿವೇಶನ ನಡೆಸಲಿದ್ದಾರೆ. ಈ ಅಧಿವೇಶನ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಮತದಾನಕ್ಕೂ ಮುನ್ನ ಅಂದ್ರೆ ಇದೇ ತಿಂಗಳ ಏಪ್ರಿಲ್‌ 16-18ರವರೆಗೆ ನಡೆಯಲಿದೆ. ಈ ತರಾತುರಿಯ ವಿಶೇಷ ಅಧಿವೇಶನದಲ್ಲಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಮಹಿಳಾ ಮತದಾರರನ್ನು ಸೆಳೆಯುವ ಹುನ್ನಾರ ಅಡಗಿದೆ ಎಂಬುದು ನಿಸ್ಸಂದೇಹ. ಈ ಎರಡೂ ರಾಜ್ಯಗಳಲ್ಲಿ ಮಹಿಳೆಯರು ಟಿಎಂಸಿ ಮತ್ತು ಡಿಎಂಕೆಯ ಬಲಿಷ್ಠ ಬೆಂಬಲಿಗರು. ಅಸ್ಸಾಂನಲ್ಲಿ ತಮ್ಮದೇ ಸರ್ಕಾರ ಇದ್ದ ಕಾರಣ ಅಲ್ಲಿ ಚುನಾವಣೆ ಘೋಷಣೆಗೂ ಮುನ್ನ ಮಹಿಳೆಯರ ಖಾತೆಗಳಿಗೆ ಹಣ ಹಾಕಿ ಮತ ಖರೀದಿ ನಡೆಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

2029ರ ಲೋಕಸಭೆ ಚುನಾವಣೆಗೂ ಮುನ್ನ ಶಾಸನಸಭೆಗಳಲ್ಲಿ ಶೇ.33 ರಷ್ಟು ಮಹಿಳಾ ಮೀಸಲಾತಿ ಕಾಯಿದೆ ಜಾರಿಗೆ ತರುವ ಮತ್ತು ಲೋಕಸಭೆ ಸ್ಥಾನಗಳ ಸಂಖ್ಯೆಯನ್ನು 816ಕ್ಕೆ ಹೆಚ್ಚಿಸುವ (ಇದರಲ್ಲಿ273 ಮಹಿಳೆಯರಿಗೆ ಮೀಸಲು) ಎರಡು ಕರಡು ವಿಧೇಯಕಗಳಿಗೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮೋದಿ ಸರ್ಕಾರದ ಈ ತರಾತುರಿಯ ʼವಿಶೇಷ ಅಧಿವೇಶನʼ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.

ಈ ರಾಜಕೀಯ ಚರ್ಚೆ ಆಚೆಗಿಟ್ಟು ನೋಡುವುದಾದರೂ, ಬಿಜೆಪಿ ಮತ್ತು ಮೋದಿ ಸರ್ಕಾರಕ್ಕೆ ನಿಜಕ್ಕೂ ಮಹಿಳೆಯರ ಘನತೆಯ ರಕ್ಷಣೆ, ಮಹಿಳಾ ಹಕ್ಕುಗಳ ರಕ್ಷಣೆಯ ಬದ್ಧತೆ, ಮಹಿಳೆಯರನ್ನು ಪುರುಷನ ಸಮಾನವಾಗಿ ನೋಡುವ ಮನಸ್ಥಿತಿ ಇದೆಯೇ ಎಂದು ನೋಡಿದರೆ ʼಅಂಗೈ ಹುಣ್ಣಿಗೆ ಕನ್ನಡಿ ಬೇಕೇʼ ಎಂಬ ಮಾತು ನೆನಪಾಗುತ್ತದೆ. ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಅನುಮೋದಿಸಿ ಭಾರೀ ಪ್ರಚಾರಗಿಟ್ಟಿಸಿಕೊಂಡಿದ್ದ ಮೋದಿ ಮತ್ತವರ ಪಟಾಲಂ ತಮ್ಮದೇ ಸರ್ಕಾರ ಇರುವ ಉತ್ತರಪ್ರದೇಶ, ಮಧ್ಯಪ್ರದೇಶ, ಮಣಿಪುರದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಸಾಮೂಹಿಕ ಅತ್ಯಾಚಾರ, ಬೆತ್ತಲೆ ಮೆರವಣಿಗೆಯಂತಹ ಭೀಕರ ಕ್ರೌರ್ಯ ಮತ್ತು ದೇಶದ ಮಾನ ವಿಶ್ವಮಟ್ಟದಲ್ಲಿ ಕಳೆಯುವಂತಹ ಘಟನೆಗಳು ನಡೆದಾಗ ಹೇಗೆ ವರ್ತಿಸಿದೆ ಎಂದು ನೋಡಿದರೆ ತಿಳಿಯುತ್ತದೆ.

ಅದಕ್ಕೊಂದು ತಾಜಾ ಉದಾಹರಣೆ ಸಿಕ್ಕಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ “ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಕೊಡುವ ಒಂದೇ ಒಂದು ಪಕ್ಷ ಬಿಜೆಪಿ” ಎಂದು ಮೋದಿಯವರು ಹೇಳಿರುವುದು, ಮತ್ತೊಂದೆಡೆ ಅದೇ ಸಮಯದಲ್ಲಿ ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧವನ್ನು ಬೆಂಬಲಿಸಿದೆ. 2018ರಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶದ ಪರವಾಗಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಅದರ ವಿರುದ್ಧ ಮೇಲ್ಮನವಿ ಅರ್ಜಿಗಳ ವಿಚಾರಣೆಯ ಸಮಯದಲ್ಲಿ (ಏ.09) ಕೇಂದ್ರ ಸರ್ಕಾರವು ” 2018ರ ತೀರ್ಪು ಪರುಷರು ಶ್ರೇಷ್ಠ, ಮಹಿಳೆಯರು ಕನಿಷ್ಠ ಎಂಬ ಊಹೆಯನ್ನು ಆಧರಿಸಿದೆ” ಎಂದು ಹೇಳಿದೆ. ಕೇರಳದ ಕೆಲವು ದೇವಸ್ಥಾನಗಳಿಗೆ ಪುರುಷರಿಗೂ ಪ್ರವೇಶವಿಲ್ಲ ಎಂಬ ಉದಾಹರಣೆಯನ್ನು ನೀಡಿ, ಈ ಸಮಾಜದಲ್ಲಿ ಹೆಣ್ಣು ಗಂಡು ಸಮಾನರು ಎಂಬ ಹೇಳುವ ಪ್ರಯತ್ನ ಮಾಡಿದ್ದಾರೆ. ಸಮಾನರು, ಅಸಮಾನತೆ ಇಲ್ಲ ಎಂದ ಮೇಲೆ ಮಹಿಳೆಯರಿಗೆ ಹೆಚ್ಚೇನು ಮಾಡಲಿದೆ ಈ ಸರ್ಕಾರ?

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದನ್ನು ಬೆಂಬಲಿಸುವ ಮೋದಿ ಸರ್ಕಾರ ಮಹಿಳೆಯರನ್ನು ಅಧಿಕಾರದ ಸ್ಥಾನದಲ್ಲಿ ಕೂರಿಸುವ, ಸಮಾನ ಅವಕಾಶ ನೀಡುವ ಮಾತನ್ನು ನಂಬಲು ಸಾಧ್ಯವೇ? ಜನಗಣತಿ, ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡನೆ ಆದ ನಂತರ ಮೀಸಲಾತಿ ಜಾರಿಗೆ ಬರಲಿದೆ. ಆದರೆ, ಮುಂದಿನ ಲೋಕಸಭಾ ಚುನಾವಣೆಗೆ ಮೋದಿ ಸರ್ಕಾರ ಈಗಲೇ ಸಿದ್ಧತೆ ಶುರು ಮಾಡಿದಂತಿದೆ.

ಮಹಿಳಾ ಮೀಸಲಾತಿಯೊಳಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮಹಿಳೆಯರಿಗೆ ಪ್ರತ್ಯೇಕ ಕೋಟಾವನ್ನು ನೀಡಬೇಕು ಎಂದು ಕಾಂಗ್ರೆಸ್ ತನ್ನ ಆಗ್ರಹವನ್ನು ಪುನರುಚ್ಚರಿಸಿದೆ. ಇದಕ್ಕಾಗಿ ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸುವ ಅಗತ್ಯವನ್ನು ಪಕ್ಷ ಪ್ರತಿಪಾದಿಸಿದೆ. ಆದರೆ, ಮೋದಿ ಸರ್ಕಾರ ಆತುರಾತುವಾಗಿ ಮಹಿಳಾ ಮೀಸಲಾತಿ ಬಗ್ಗೆ ನಿರ್ಧಾರ ಕೈಗೊಳ್ಳಲು ವಿಶೇಷ ಅಧಿವೇಶನ ಕರೆದಿರುವುದರ ಹಿಂದೆ ಸ್ವಾರ್ಥ, ರಾಜಕೀಯ ಲಾಭದ ಲೆಕ್ಕಾಚಾರವಿದೆಯೇ ವಿನಃ ಮಹಿಳಾ ಸಬಲೀಕರಣದ ಉದ್ದೇಶ ಇಲ್ಲ ಎಂಬುದು ಸ್ಪಷ್ಟವಾಗಿದೆ. ಮೀಸಲಾತಿ ನಿಗದಿಪಡಿಸದಿದ್ದರೆ ಅಹಿಂದ ವರ್ಗದ ಮಹಿಳೆಯರಿಗೆ ರಾಜಕೀಯ ಪ್ರವೇಶ ಕನಸಾಗಿಯೇ ಉಳಿಯಲಿದೆ. ಚುನಾವಣೆಯಲ್ಲಿ ಗೆಲ್ಲಲು ಬಗೆ ಬಗೆಯ ಗ್ಯಾರಂಟಿ ಕೊಡುವ ಮೋದಿಯವರು ನಂತರ ನಡೆಯುವ ಘಟನೆಗಳಿಗೆ ಮೌನವಾಗಿರುತ್ತಾರೆ.

ಕೊಲ್ಲಿ ಯುದ್ಧದ ಈ ಸಮಯದಲ್ಲಿ ಭಾರತದ ರಾಜತಾಂತ್ರಿಕತೆಯ ವೈಫಲ್ಯ ಮುಚ್ಚಿಕೊಳ್ಳಲು ಮಹಿಳಾ ಮೀಸಲಾತಿಯ ಚರ್ಚೆ ಮುನ್ನೆಲೆಗೆ ತರಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಎಪ್ಸ್ಟೀನ್‌ ಫೈಲ್ಸ್‌ನಲ್ಲಿ ಮೋದಿ ಮತ್ತು ಅವರ ಸಂಪುಟದ ಸಚಿವ ಪುರಿ ಹೆಸರಿರುವುದು ಸಂಸತ್ತಿನಲ್ಲಿ ಭಾರೀ ಗದ್ದಲ ಎಬ್ಬಿಸುತ್ತಿರುವಾಗ ರಾತ್ರೋರಾತ್ರಿ ಯುಎಸ್‌ ಟ್ರೇಡ್‌ ಡೀಲ್‌ಗೆ ಸಹಿ ಹಾಕಿ ದೇಶದ ಜನರ ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡಿದ್ದರು. ಈಗ ಪಂಚರಾಜ್ಯಗಳ ಚುನಾವಣೆಯಲ್ಲಿ ಗೆಲ್ಲಲು, ಯುದ್ಧದ ಪರಿಣಾಮವಾಗಿ ವಿವಿಧ ಕ್ಷೇತ್ರಗಳಲ್ಲಿ ಆಗುತ್ತಿರುವ ನಷ್ಟವನ್ನು ಮರೆ ಮಾಚಲು ಹೊಸ ಹೊಸ ನಾಟಕಗಳ ಮೊರೆ ಹೋಗುತ್ತಿದ್ದಾರೆ. ದೇಶದ ಜನ ಈ ಕಪಟಿಗಳ ಹುನ್ನಾರವನ್ನು ಅರ್ಥ ಮಾಡಿಕೊಳ್ಳಬೇಕಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...