1 ಲಕ್ಷ ಶಾಲೆಗಳಲ್ಲಿ ಶೌಚಾಲಯವೇ ಇಲ್ಲ; ಭಾರತದ ಶಾಲಾ ಶಿಕ್ಷಣದ ಗಂಭೀರತೆ ಬಿಚ್ಚಿಟ್ಟ ವರದಿ

Date:

ಯಾವುದೇ ಒಂದು ದೇಶ ಮುಂದುವರೆಯಬೇಕೆಂದರೆ ಮೂಲಭೂತವಾಗಿ ಬೇಕಾದ್ದು ಶಿಕ್ಷಣ. ಆದರೆ, ಶಿಕ್ಷಣವು ಇಂದು ಮಾರುವ/ಕೊಳ್ಳುವ ಸರಕಾಗಿ ಮಾರ್ಪಟ್ಟಿದೆ. ಶಿಕ್ಷಣದ ಖಾಸಗೀಕರಣದಿಂದಾಗಿ ಶಾಲೆಗಳು ಮಾರುಕಟ್ಟೆಗಳಾಗಿಯೂ, ವಿದ್ಯಾರ್ಥಿಗಳು ಗ್ರಾಹಕರಾಗಿಯೂ ಮಾರ್ಪಟ್ಟಿದ್ದಾರೆ. ಸರ್ಕಾರಿ ಶಾಲೆಗಳು ಶೋಚನೀಯ ಪರಿಸ್ಥಿತಿ ತಲುಪುತ್ತಿವೆ. ಇಂತಹ ಸಮಯದಲ್ಲಿಯೇ ಇತ್ತೀಚೆಗೆ, ನೀತಿ ಆಯೋಗ ಹಾಗೂ ಯುಡಿಐಎಸ್ಇ+ (UDISE+ 2024–25) ಬಿಡುಗಡೆ ಮಾಡಿರುವ ಜಂಟಿ ವರದಿಯು ಭಾರತದ ಶಾಲಾ ಶಿಕ್ಷಣದ ಕಳವಳಕಾರಿ ವಾಸ್ತವವನ್ನು ಹೊರಹಾಕಿದೆ.

- Advertisement -

ದೇಶದಲ್ಲಿ ಡಿಜಿಟಲ್ ಶಿಕ್ಷಣ ಮತ್ತು ತಾಂತ್ರಿಕ ಪ್ರಗತಿಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದ್ದರೂ, ತಳಮಟ್ಟದ ಸರ್ಕಾರಿ ಶಾಲೆಗಳು ಇಂದಿಗೂ ಕನಿಷ್ಠ ಸೌಲಭ್ಯಗಳಿಗಾಗಿ ಒದ್ದಾಡುತ್ತಿವೆ. ಪ್ರಸ್ತುತ ದೇಶದ 14.71 ಲಕ್ಷ ಶಾಲೆಗಳಲ್ಲಿ 24.69 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಬೃಹತ್ ಶೈಕ್ಷಣಿಕ ಜಾಲದಲ್ಲಿರುವ ವ್ಯವಸ್ಥಿತ ದೋಷಗಳು ಮಕ್ಕಳ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ವರದಿಯ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ ಶಾಲೆಗಳಲ್ಲಿ ಕ್ರಿಯಾತ್ಮಕ ಶೌಚಾಲಯಗಳ ಪ್ರಮಾಣ ಶೇಕಡಾ 85 ರಿಂದ 94ಕ್ಕೆ ಏರಿಕೆಯಾಗಿದ್ದರೂ, ವಾಸ್ತವದ ಸ್ಥಿತಿ ಭಿನ್ನವಾಗಿದೆ. ಇಂದಿಗೂ ದೇಶದ ಸುಮಾರು 98,592 ಸರ್ಕಾರಿ ಶಾಲೆಗಳಲ್ಲಿ ಬಾಲಕಿಯರಿಗೆ ಬಳಸಲು ಯೋಗ್ಯವಾದ ಪ್ರತ್ಯೇಕ ಶೌಚಾಲಯಗಳಿಲ್ಲ ಮತ್ತು 61,540 ಶಾಲೆಗಳಲ್ಲಿ ಕನಿಷ್ಠ ಶೌಚಾಲಯ ಸೌಲಭ್ಯವೂ ಕಾರ್ಯನಿರ್ವಹಿಸುತ್ತಿಲ್ಲ. ಪ್ರೌಢಾವಸ್ಥೆಗೆ ತಲುಪುವ ಹೆಣ್ಣುಮಕ್ಕಳು ಅರ್ಧಕ್ಕೇ ಶಾಲೆ ಬಿಡಲು ಈ ಶೌಚಾಲಯಗಳ ಕೊರತೆಯೇ ಪ್ರಮುಖ ಕಾರಣವಾಗಿದೆ.

ಅಲ್ಲದೆ, ಸುಮಾರು 1.19 ಲಕ್ಷ ಶಾಲೆಗಳಲ್ಲಿ ಇಂದಿಗೂ ವಿದ್ಯುತ್ ಸಂಪರ್ಕವಿಲ್ಲದೆ ವಿದ್ಯಾರ್ಥಿಗಳು ಕತ್ತಲೆಯಲ್ಲೇ ಕಲಿಯುತ್ತಿದ್ದಾರೆ. ಹಾಗೆಯೇ 14,505 ಶಾಲೆಗಳಲ್ಲಿ ಕುಡಿಯುವ ನೀರಿನ ಮೂಲಗಳಿಲ್ಲದಿರುವುದು ಮತ್ತು 59,829 ಶಾಲೆಗಳಲ್ಲಿ ಕೈ ತೊಳೆಯುವ ಸೌಲಭ್ಯವಿಲ್ಲದಿರುವುದು ಮಕ್ಕಳ ನೈರ್ಮಲ್ಯ ಮತ್ತು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

ಈ ಲೇಖನ ಓದಿದ್ದೀರಾ?: ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ: ನಾರ್ವೆ ನಂ.1, ಭಾರತ 157; ಈ ಕುಸಿತಕ್ಕೆ ಕಾರಣಗಳೇನು?

ಮೂಲಸೌಕರ್ಯಗಳ ಜೊತೆಗೆ ಶಿಕ್ಷಕರ ಕೊರತೆಯೂ ದೊಡ್ಡ ಸವಾಲಾಗಿದೆ. ದೇಶದ 1 ಲಕ್ಷಕ್ಕೂ ಹೆಚ್ಚು ಶಾಲೆಗಳು (ಒಟ್ಟು ಶಾಲೆಗಳಲ್ಲಿ 7% ಕ್ಕಿಂತ ಹೆಚ್ಚು) ಕೇವಲ ಒಬ್ಬನೇ ಒಬ್ಬ ಶಿಕ್ಷಕರನ್ನು ಹೊಂದಿವೆ. ಇಂತಹ ‘ಏಕ ಶಿಕ್ಷಕ’ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಆಡಳಿತಾತ್ಮಕ ಕೆಲಸಗಳ ಜೊತೆಗೆ ಒಂದರಿಂದ ಐದನೇ ತರಗತಿಯವರೆಗಿನ ಎಲ್ಲ ಮಕ್ಕಳನ್ನು ಒಂದೇ ಕೋಣೆಯಲ್ಲಿ ಕೂರಿಸಿ ಪಾಠ ಮಾಡಬೇಕಿದೆ. ಇದರಿಂದ ಶಿಕ್ಷಣದ ಗುಣಮಟ್ಟ ಸಂಪೂರ್ಣವಾಗಿ ಕುಂಟಿತವಾಗುತ್ತಿದೆ. ಮತ್ತೊಂದೆಡೆ, ಯೋಜನಾ ಲೋಪದಿಂದಾಗಿ ದೇಶದ 7,993 ಶಾಲೆಗಳಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಶಿಕ್ಷಣದ ಮೊದಲ ವರ್ಷಕ್ಕೆ ದಾಖಲಾಗಿಲ್ಲ. ಹಳೆಯ ದಾಖಲೆಗಳು ಮತ್ತು ವಿದ್ಯಾರ್ಥಿಗಳಿರುವ ಕಾರಣಕ್ಕಾಗಿ ಆ ಶಾಲೆಗಳು ನಡೆಯುತ್ತಿವೆ. ಮುಚ್ಚುವ ಹಂತಕ್ಕೆ ತಲುಪಿವೆ.

ಈ ಎಲ್ಲ ಕಾರಣಗಳಿಂದಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲಿನ ಪೋಷಕರ ನಂಬಿಕೆ ಕುಸಿಯುತ್ತಿದೆ. 2005ರಲ್ಲಿ ಒಟ್ಟು ದಾಖಲಾತಿಯಲ್ಲಿ ಸರ್ಕಾರಿ ಶಾಲೆಗಳ ಪಾಲು 71% ರಷ್ಟಿದ್ದರೆ, 2024–25ರ ವೇಳೆಗೆ ಅದು 49.24%ಗೆ ಕುಸಿದಿದೆ. ಅಂದರೆ ಅರ್ಧಕ್ಕಿಂತ ಹೆಚ್ಚು ಪೋಷಕರು ಬಡತನದ ನಡುವೆಯೂ ಸಾಲ ಸೋಲ ಮಾಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದಲ್ಲದೆ, ಇಂದಿಗೂ 11.5%ರಷ್ಟು ವಿದ್ಯಾರ್ಥಿಗಳು ಮಾಧ್ಯಮಿಕ ಹಂತ ತಲುಪುವಷ್ಟರಲ್ಲಿ ಶಿಕ್ಷಣವನ್ನು ಅರ್ಧಕ್ಕೆ ಕೈಬಿಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರದ ‘ಶಾಲಾ ಬಲವರ್ಧನೆ’ ಯೋಜನೆಯಡಿ ಕಡಿಮೆ ವಿದ್ಯಾರ್ಥಿಗಳಿರುವ ಸುಮಾರು 92,000 ಶಾಲೆಗಳನ್ನು ಹತ್ತಿರದ ಶಾಲೆಗಳೊಂದಿಗೆ ವಿಲೀನಗೊಳಿಸಲಾಗಿದೆಯಾದರೂ, ಇದರಿಂದ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಶಾಲೆಗಳು ಮತ್ತಷ್ಟು ದೂರವಾಗುವ ಆತಂಕ ಎದುರಾಗಿದೆ ಎಂದು ವರದಿ ಹೇಳಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...

ಕಲಬುರಗಿ | SIR ಎಡವಟ್ಟು: ಬದುಕಿರುವವರಿಗೂ ಮತದಾರರ ಪಟ್ಟಿಯಲ್ಲಿ ‘Death’ ಮುದ್ರೆ?

ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಉದ್ದೇಶದಿಂದ ಕೈಗೊಳ್ಳಲಾಗಿರುವ ವಿಶೇಷ ತೀವ್ರ ಪರಿಷ್ಕರಣೆ (SIR)...