ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಸಿಎಂ ಸಿದ್ದರಾಮಯ್ಯ ಐದು ದಿನ ಪ್ರಚಾರ ಕೈಗೊಳ್ಳುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಪ್ರಚಾರಕ್ಕಾಗಿ ಮಾ.30ರಂದು ಬಾಗಲಕೋಟೆಗೆ ಬರಲಿದ್ದಾರೆ. ಮಾರ್ಚ್ 30, 31, ಏಪ್ರಿಲ್ 3, 4, 6ರಂದು ಬಾಗಲಕೋಟೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಮಾ.30ರಂದು ಮಧ್ಯಾಹ್ನ 1ಕ್ಕೆ ಸುತಗುಂಡಾರ, 3:30ಕ್ಕೆ ನಾಯನೇಗಲಿ, ಸಂಜೆ 4.30ಕ್ಕೆ ರಾಂಪುರ, 6ಕ್ಕೆ ಬೇವೂರಿನ ಬಹಿರಂಗ ಸಭೆಗಳಲ್ಲಿ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.
31ರಂದು ಬೆಳಿಗ್ಗೆ 11ಕ್ಕೆ ಮುಗಳೋಳ್ಳಿ, 1 ಘಂಟೆಗೆ ನೀಲಾನಗರ, ಸಂಜೆ 4ಕ್ಕೆ ಐಹೊಳೆ, 6ಕ್ಕೆ ಅಮೀನಗಡದಲ್ಲಿ ಭಾಷಣ ಮಾಡಲಿದ್ದಾರೆ. ಏ.3ರಂದು ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿ ಅಂದು ಮಧ್ಯಾಹ್ನ 12ಕ್ಕೆ ಮುಚಖಂಡಿ, ಸಂಜೆ 5:30ಕ್ಕೆ ಶಿರೂರ, ರಾತ್ರಿ 7ಕ್ಕೆ ಬಾಗಲಕೋಟೆಯ ವಾಂಬೆ ಕಾಲೋನಿಯ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಏಪ್ರಿಲ್ 4ರಂದು ಬೆಳಿಗ್ಗೆ 11:30ಕ್ಕೆ ಮೋಗನೂರ, ಮಧ್ಯಾಹ್ನ 2:30ಕ್ಕೆ ಮುಖಂಡರೊಂದಿಗೆ ಸಭೆ, ಸಂಜೆ 6:30ಕ್ಕೆ ಕಮತಗಿಯಲ್ಲಿ ಪ್ರಚಾರ ನಡೆಸಿ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಶೇಷ ಸಂಪುಟ ಸಭೆ ರದ್ದು; ಉಪಚುನಾವಣೆ ಬಹಿಷ್ಕಾರಕ್ಕೆ ಸಮಗ್ರ ಒಳಮೀಸಲಾತಿ ಹೋರಾಟಗಾರರ ನಿರ್ಧಾರ
ಏಪ್ರಿಲ್ 6ರಂದು ಮಧ್ಯಾಹ್ನ 1ಕ್ಕೆ ಬಾಗಲಕೋಟೆಗೆ ಆಗಮಿಸಿ ನಾನಾ ಸಮುದಾಯಗಳ ಮುಖಂಡರ ಜತೆಗೆ ಚರ್ಚೆ ನಡೆಸಲಿದ್ದಾರೆ. ಸಂಜೆ 4ಕ್ಕೆ ಬಾಗಲಕೋಟೆಯಲ್ಲಿ ರೋಡ್ ಶೋ ನಡೆಸಿ ಹೊಳೆ ಆಂಜನೇಯ ದೇವಸ್ಥಾನದ ಬಳಿ ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.




