ಬೀದರ್‌ | ಕಾವ್ಯ ಸಮಾಜದ ನೋವು, ನಲಿವಿಗೆ ಸ್ಪಂದಿಸಲಿ : ಶಶಿಕಾಂತ ಶೆಂಬೆಳ್ಳಿ

Date:

ಸಾಹಿತ್ಯವು ಆತ್ಮಸಂತೋಷ ನೀಡುವುದರ ಜೊತೆಗೆ ಸಮಾಜದ ನೋವು-ನಲಿವುಗಳಿಗೆ ಸ್ಪಂದಿಸುವಂತಿರಬೇಕು. ಕಾಲದಿಂದ ಕಾಲಕ್ಕೆ ಸಾಗಿಬಂದ ಕಾವ್ಯ ಹಾಗೂ ಸಾಹಿತ್ಯ ಕೃತಿಗಳು ಸಮಾಜಮುಖಿ ಚಿಂತನೆಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಹಿರಿತ ಪತ್ರಕರ್ತ ಶಶಿಕಾಂತ ಶೆಂಬೆಳ್ಳಿ ಅಭಿಪ್ರಾಯಪಟ್ಟರು.

- Advertisement -

ಬೀದರ್ ನಗರದ ಕುಂಬಾರವಾಡ ರಸ್ತೆಯ ಅತಿವಾಳೆ ಸಾಂಸ್ಕೃತಿಕ ಸಭಾಂಗಣದಲ್ಲಿ ಭಾನುವಾರ ಜನಪರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಒಂದು ದಿನದ ಕಾವ್ಯ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

‘ಖಡ್ಗಕ್ಕಿಂತ ಲೇಖನಿ ಹರಿತ’ ಎಂಬ ಮಾತಿನಂತೆ ಬರಹಕ್ಕೆ ತನ್ನದೇ ಆದ ಶಕ್ತಿ ಮತ್ತು ಮಹತ್ವವಿದೆ. ಯಾವುದೇ ಚಳವಳಿಯು ಜನಮಾನಸವನ್ನು ತಲುಪಿ ಜನಪ್ರಿಯತೆ ಗಳಿಸುವಲ್ಲಿ ಕಾವ್ಯ ಹಾಗೂ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತವೆ. ಲೇಖನಿಯ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ, ಬದಲಾವಣೆಗೆ ದಾರಿ ಮಾಡಿಕೊಡಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಎಸ್.ಎಂ.ಜನವಾಡಕರ್ ಮಾತನಾಡಿ, “ಕಾವ್ಯ ರಚಿಸುವಾಗ ಬದುಕಿನ ಸಮಗ್ರ ಅನುಭವ ಹಾಗೂ ಆಳವಾದ ಅರಿವು ಅಗತ್ಯ. ಕಾವ್ಯವು ಸ್ಪಷ್ಟ, ನಿಖರ ಹಾಗೂ ಅರ್ಥಪೂರ್ಣವಾಗಿರಬೇಕು. ಸಮಾಜವನ್ನು ಕಟ್ಟುವ ಮತ್ತು ಮೌಲ್ಯಗಳನ್ನು ಬೆಳೆಸುವಂತಹ ಕಾವ್ಯಗಳು ಇಂದಿನ ಅಗತ್ಯವಾಗಿದೆ” ಎಂದರು.

ಸಾಹಿತಿ ಪಾರ್ವತಿ ಸೋನಾರೆ ಮಾತನಾಡಿ, “ಯಾವುದೇ ವಿಷಯ ಮನಸ್ಸನ್ನು ಕಾಡಿದಾಗ ಕಾವ್ಯ ಹುಟ್ಟಿಕೊಳ್ಳುತ್ತದೆ. ಹೊಸ ಬರಹಗಾರರು ಸರಳ ಪದಗಳನ್ನು ಬಳಸಿಕೊಂಡು ಅರ್ಥಪೂರ್ಣ ಹಾಗೂ ಉತ್ತಮ ಕಾವ್ಯ ರಚಿಸಬಹುದು. ಇಂದಿನ ಕವಿಗಳು ಹೊಸ ವಿಚಾರಗಳು ಮತ್ತು ಹೊಸ ದಿಕ್ಕಿನತ್ತ ದೃಷ್ಟಿ ಹರಿಸುವ ಅಗತ್ಯವಿದೆ” ಎಂದರು.

ಜನಪರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಸಂಜೀವಕುಮಾರ ಅತಿವಾಳೆ ಪ್ರಾಸ್ತಾವಿಕವಾಗಿ ಮಾತನಾಡಿ, “ಕಾವ್ಯವು ಕೇವಲ ಪದಗಳ ಜೋಡಣೆಯಾಗದೆ ಕವಿಯ ಅನುಭವ, ಭಾವನೆ ಹಾಗೂ ಸಾಮಾಜಿಕ ಕಾಳಜಿಯನ್ನು ಪ್ರತಿಬಿಂಬಿಸಬೇಕು. ಹೊಸ ತಲೆಮಾರಿನ ಬರಹಗಾರರು ತಮ್ಮದೇ ಆದ ಚಿಂತನೆ ಮತ್ತು ಸೃಜನಶೀಲತೆಯ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಹೊಸತನ ತರಬೇಕು” ಎಂದು ಹೇಳಿದರು.

ಹಿರಿಯ ಕನ್ನಡಾಭಿಮಾನಿ ಜಿ. ಬಾಬುರಾವ್, ಕಸಾಪ ತಾಲ್ಲೂಕಾಧ್ಯಕ್ಷ ಟಿ.ಎಂ.ಮಚ್ಚೆ ಮಾತನಾಡಿದರು. ಸಾಹಿತಿ ಮಾಣಿಕ್ ನೆಳಗಿ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಮ್ಮಟದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಕಾವ್ಯಾಸಕ್ತರು ಹಾಗೂ ಯುವ ಬರಹಗಾರರು ಪಾಲ್ಗೊಂಡಿದ್ದರು.

ಕಾವ್ಯ ರಚನೆ ವಿಧಾನ, ಭಾಷಾ ಬಳಕೆ, ಛಂದಸ್ಸು, ಭಾವನೆಗಳ ಅಭಿವ್ಯಕ್ತಿ ಸೇರಿದಂತೆ ಕಾವ್ಯ ಸೃಷ್ಟಿಯ ವಿವಿಧ ಆಯಾಮಗಳ ಕುರಿತು ಎಸ್.ಎಂ. ಜನವಾಡಕರ್ ಹಾಗೂ ಮಾಣಿಕ್ ನೆಳಗಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ ಸಮಾರೋಪ ನುಡಿಗಳನ್ನಾಡಿದರು. ಸಾಹಿತಿಗಳಾದ ಪುಷ್ಪಾ ಕನಕ, ಸಾಧನಾ ರಂಜೋಳಕರ್, ಬಸವರಾಜ ಮಯೂರ ಹಾಗೂ ನಿವೃತ್ತ ಮುಖ್ಯಗುರು ರಘುನಾಥ ಭೂರೆ ಉಪಸ್ಥಿತರಿದ್ದರು.

ಇದನ್ನೂ ಓದಿ : ಬೀದರ್‌ | ಅ.7ರಂದು ಆಣದೂರ ಆರೋಗ್ಯ ಕೇಂದ್ರದಲ್ಲಿ ಸಾಮೂಹಿಕ ರಕ್ತದಾನ ಶಿಬಿರ

ಕಮ್ಮಟದಲ್ಲಿ ಪಾಲ್ಗೊಂಡ ಸಾಹಿತಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಹಿರಿಯ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಹಾಗೂ ಸಾಹಿತಿ, ಗಾಯಕಿ ರೇಣುಕಾ ಎನ್.ಬಿ. ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಅವಿನಾಶ್ ಸ್ವಾಗತಿಸಿದರು. ಸುನೀತಾ ಕೂಡ್ಲಿಕರ್ ನಿರೂಪಿಸಿದರು. ರಾಜು ಪವಾರ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರೋಪಿಯ IQ ಕಡಿಮೆ ಇದ್ದ ಮಾತ್ರಕ್ಕೆ ವಿಚಾರಣೆಯಿಂದ ಹೊರಗಿಡಲು ಸಾಧ್ಯವಿಲ್ಲ: ಕೇರಳ ಹೈಕೋರ್ಟ್

ಕಡಿಮೆ ಬುದ್ಧಿಮತ್ತೆ (IQ) ಅಥವಾ ಬೌದ್ಧಿಕ ಅಸಮರ್ಥತೆ ಇದೆ ಎಂಬ ಕಾರಣವೊಂದರಿಂದಲೇ...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ; NSUIನಿಂದ ವಿನೂತನ ‘ಜೀವಂತ ಶವ’ ಪ್ರತಿಭಟನೆ

ಮತದಾರರ ಹಕ್ಕುಗಳು ಮತ್ತು ಚುನಾವಣಾ ಪ್ರಕ್ರಿಯೆಯ ಮೇಲಿನ ಬೆದರಿಕೆಗಳನ್ನು ಖಂಡಿಸಿ, ಮುಖ್ಯ...

ಸಾಗರ | ತಾಲೂಕು ಮಟ್ಟದ ಪ್ರಜಾಸೇವೆ ಸಭೆ; 500ಕ್ಕೂ ಹೆಚ್ಚು ಅರ್ಜಿಗಳ ಸ್ವೀಕಾರ

ಸಾಗರ ತಾಲೂಕಿನಲ್ಲಿ ಮನೆ ಬಾಗಿಲಿಗೆ ಬಂತು ಸರ್ಕಾರ–ಸೇವೆಗೆ ಇರಲಿದೆ ಸಹಕಾರ ಎಂಬ...

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ‘ಬ್ಯಾರಿ ಭಾಷಾ ದಿನ’ ಆಚರಣೆ

ಜಗತ್ತಿನ ಯಾವುದೇ ಭಾಷೆಯನ್ನು ಬ್ಯಾರಿ ಸಮುದಾಯದ ಮಕ್ಕಳು ಕಲಿಯಲಿ. ಆದರೆ, ಮನೆಯಲ್ಲಿ...