ಚಿತ್ರದುರ್ಗ | ಯಡಿಯೂರಪ್ಪ ಅಭಿಮಾನೋತ್ಸವ; ನಾಡಿನ ಮಠಾಧೀಶರು, ಅಭಿಮಾನಿಗಳು ಭಾಗಿ

Date:

ಚಿತ್ರದುರ್ಗ ನಗರದ ಹೊರಭಾಗದ ಮಾದಾರ ಚೆನ್ನಯ್ಯ ಪೀಠದ ಪಕ್ಕದ ಆವರಣದಲ್ಲಿ 50 ವರ್ಷಗಳ ಸಾರ್ಥಕ ರಾಜಕೀಯ ಜೀವನ ಪೂರೈಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮವು ನಾಡಿನ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ರಾಜ್ಯ ಬಿಜೆಪಿ ನಾಯಕರು, ರಾಷ್ಟ್ರ ನಾಯಕರು ಹಾಗೂ ಲಕ್ಷಾಂತರ ಮಂದಿ ಅಭಿಮಾನಿಗಳು ಸಮ್ಮುಖದಲ್ಲಿ ಆಚರಿಸಲಾಯಿತು.

- Advertisement -
1004298932
Oplus_131072

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಶುಭ ಹಾರೈಸಿ ಮಾತನಾಡಿದ ಮಾದಾರ ಚೆನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಶ್ರೀ “ವೀರಶೈವ ಲಿಂಗಾಯತ, ಸುತ್ತೂರು, ಆದಿಚುಂಚನಗಿರಿ ಸೇರಿದಂತೆ ಅನೇಕ ಮಠಮಾನ್ಯಗಳು ಅಕ್ಷರ, ಅನ್ನ ದಾಸೋಹ ನೀಡುತ್ತಿವೆ. ಆದರೆ ಯಡಿಯೂರಪ್ಪ ಸಿಎಂ ಆಗದಿದ್ದರೆ ಶೋಷಿತ ಸಮುದಾಯದ ಪೀಠಗಳು ಮುನ್ನೆಲೆಗೆ ಬರದೇ ಹಿಂದೆ ಉಳಿಯುತ್ತಿದ್ದವು.‌ ಎಲ್ಲಾ ಶೋಷಿತ ವರ್ಗಗಳ ಮಠಗಳಿಗೆ ಅನುದಾನ ನೀಡುವ ಮೂಲಕ ಶೋಷಿತ ವರ್ಗಗಳ ಶಿಕ್ಷಣ, ಸಾಮಾಜಿಕ ಜಾಗೃತಿಗೆ ಕಾರಣರಾದವರು ಯಡಿಯೂರಪ್ಪ. ಇದರಿಂದ ಪ್ರಬಲವಾಗಿ ಶಿಕ್ಷಣ, ಇತರೆ ಸೇವೆಗಳ ಮೂಲಕ ಸಮಾಜ ಕಟ್ಟಲು ಕೆಲಸ ಮಾಡಲು ಶೋಷಿತ ವರ್ಗಗಳ ಮಠಗಳಿಗೆ ಅವಕಾಶ ನೀಡಿದರು” ಎಂದು ಸ್ಮರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...
1004298925

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀ ಮಾತನಾಡಿ “ಚಿತ್ರದುರ್ಗ ಈ ಬಯಲು ರಾಜ್ಯದ ಸಮಸ್ತ ಜನರ ಸಮಾವೇಶ. ಇದು ಯಡಿಯೂರಪ್ಪನವರ ಜನಪ್ರಿಯತೆ. ಪುರಸಭೆಯಿಂದ ಮುಖ್ಯಮಂತ್ರಿವರೆಗೆ ಬೆಳೆದ ಗ್ರಾಮೀಣ ಪ್ರತಿಭೆ ಯಡಿಯೂರಪ್ಪ ಇಂದು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಜನಸಾಮಾನ್ಯರ ಸಾಮಾಜಿಕ ಸಮಸ್ಯೆಗಳಿಗೆ ಅವರ ಸ್ಪಂದನೆ, ಅತಿವೃಷ್ಟಿಯಂತಹ ಸಂದರ್ಭದಲ್ಲಿ ಅವರು ಏಕಾಂಗಿ ಹೋರಾಟ ಸ್ಮರಣೀಯ. ಅವರಿಗೆ ಕರ್ನಾಟಕ ಜನರ ಅಭಿಮಾನ ಶಾಶ್ವತವಾಗಿ ಉಳಿಯುತ್ತದೆ” ಪ್ರಶಂಸಿಸಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀ ಮಾತನಾಡಿ “ನಾಡಿನ ಧೀಮಂತ ರೈತ ನಾಯಕ ಬಿಎಸ್ವೈ ಅವರದು ಮೌಲ್ಯಯುತ ಬದುಕು. ಅವರ ಸಮೃದ್ಧ ಸೇವೆ, ಜನರ ದೀನದಲಿತರ ನೋವು ಅರ್ಥ ಮಾಡಿಕೊಂಡು ಸೇವೆ ಮಾಡಿದವರು. ನೊಂದ ರೈತರ ದನಿಯಾದವರು. ಶಿಕ್ಷಣಕ್ಕಾಗಿ ಗ್ರಾಮೀಣ ಮಕ್ಕಳಿಗೆ ವೈಜ್ಞಾನಿಕ ಅನುದಾನ ಬಿಡುಗಡೆ ಮಾಡಿ ಉತ್ತಮ ಸೇವೆ ಸಲ್ಲಿಸಿದವರು ಯಡಿಯೂರಪ್ಪ” ಎಂದು ತಿಳಿಸಿದರು.

1004298931

ಬಾಳೆಹೊನ್ನೂರಿನ ಪಂಚಪೀಠದ ರಂಭಾಪುರಿ ಶ್ರೀಗಳು ಮಾತನಾಡಿ “ರಾಜಕೀಯ ಕ್ಷೇತ್ರದಲ್ಲಿ ಐವತ್ತು ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿ, ಎಲ್ಲಾ ಜಾತಿ ಧರ್ಮಗಳ ಪ್ರೀತಿ ವಿಶ್ವಾಸ ಗಳಿಸಿಕೊಂಡವರು ಯಡಿಯೂರಪ್ಪ. ನಿರಂತರ ಹೋರಾಟದಿಂದ ರೈತರ, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಬೆಳೆದವರು. ಎಲ್ಲಾ ಸಮುದಾಯಗಳ ಮಠಾಧೀಶರು ಇಂದು ಬಂದಿದ್ದಾರೆ ಎಂದರೆ ಅದು ಅವರ ಕೆಲಸದ ಮೇಲೆ ಅಭಿಮಾನದಿಂದ” ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೋರಾಟ ಕುರಿತ ‘ಸದನ ಶಿಕಾರಿ’, ಕೆಂದಾವರೆ ಕಮಲ ಅರಳಿದ ಕಥೆ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಯಕ್ರಮದ ಮಧ್ಯೆ ಲವಲವಿಕೆಯಿಂದ ಮಠಾಧೀಶರ ಬಳಿ ತೆರಳಿ ವಂದನೆ ಸಲ್ಲಿಸುತ್ತಿದ್ದುದು ಕಂಡುಬಂದಿತು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಂಬೇಡ್ಕರ್ ವಾದಿಗಳು ಅನ್ಯಾಯ, ಅಸಮಾನತೆ ವ್ಯವಸ್ಥೆ ವಿರೋಧಿಸಿ: ಅಹಿಂಸಾ ಚೇತನ್

ಕಾರ್ಯಕ್ರಮದಲ್ಲಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಶ್ರೀಶೈಲ ಪೀಠದ ವಾಗೀಶ ಪಂಡಿತಾರಾಧ್ಯ ಶ್ರೀಗಳು, ಕಾಶಿ ಪೀಠದ ಶ್ರೀಗಳು, ಮುರುಘಾ ಮಠದ ಬಸವಕುಮಾರ ಶ್ರೀಗಳು, ವಚನಾನಂದಶ್ರೀ, ಕುಂಚಿಟಿಗ ಪೀಠದ ಶಾಂತವೀರ ಶ್ರೀ, ಕಾಗಿನೆಲೆ ಶಾಖಾ ಪೀಠದ ಪುರುಷೋತ್ತಮಾನಂದ ಪುರಿ ಶ್ರೀ, ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಗಳು, ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ದಿಂಗಾಲೇಶ್ವರ ಶ್ರೀಗಳು, ಕೇಂದ್ರ ಸಚಿವರಾದ ಸೋಮಣ್ಣ, ಸಂಸದರಾದ ಶೋಭಾ ಕರಂದ್ಲಾಜೆ, ಬಸವರಾಜ್ ಬೊಮ್ಮಾಯಿ ಗೋವಿಂದ್ ಕಾರಜೋಳ, ಪ್ರಹ್ಲಾದ್ ಜೋಷಿ, ಡಾ.ಮಂಜುನಾಥ್, ಶಾಸಕರಾದ ಎಂ ಚಂದ್ರಪ್ಪ, ಮುನಿರತ್ನ, ಶ್ರೀನಿವಾಸ್ ಪೂಜಾರಿ, ಅಶ್ವಥ್ ನಾರಾಯಣ, ಸೇರಿದಂತೆ ಬಿಎಸ್ ವೈ ಪುತ್ರರಾದ ಶಾಸಕ ಬಿವೈ ವಿಜಯೇಂದ್ರ ಸಂಸದ ಬಿ ವೈ ರಾಘವೇಂದ್ರ , ಪ್ರತಿಪಕ್ಷ ನಾಯಕ ಆರ್ ಅಶೋಕ್ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಂಸದ ಸಿದ್ದೇಶ್ವರ, ಮುಖಂಡರಾದ ಸದಾನಂದ ಗೌಡ, ಶ್ರೀರಾಮುಲು, ಸಿಟಿ ರವಿ, ತಿಪ್ಪಾರೆಡ್ಡಿ, ರೇಣುಕಾಚಾರ್ಯ ಜಗದೀಶ್ ಶೆಟ್ಟರ್ ಬಿಸಿ ಪಾಟೀಲ್ ಸೇರಿದಂತೆ ಲಕ್ಷಾಂತರ ಮಂದಿ ಭಾಗವಹಿಸಿದ್ದರು.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಗೆ ಬಿಜೆಪಿ‌ ಸೇರುವಂತೆ ಗ್ಯಾನೇಶ್ ಕುಮಾರ್ ಆಹ್ವಾನಿಸಿದ್ದರು: ನಿವೃತ್ತ ಐಎಎಸ್ ಜಿಜಿ ಥಾಮ್ಸನ್

ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರು 2016ರಲ್ಲಿ ಸರ್ಕಾರಿ ಸೇವೆಯಲ್ಲಿದ್ದಾಗ...

Bhalki Ground Report | ಮುಸ್ಲಿಮರ ಮತ ಹಕ್ಕಿಗೆ ಕನ್ನ: ಬಗೆದಷ್ಟು ಬಯಲಾಗ್ತಿದೆ ‘ಫಾರ್ಮ್-7’ರ ಸಂಚು?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಈಶ್ವರ ಬಿ.ಖಂಡ್ರೆ ಅವರು ಪ್ರತಿನಿಧಿಸುವ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ ʼನೀರೋʼ; ಭಾರತ ಉರಿಯುತ್ತಿರುವಾಗ ಭಜನೆ ಮಾಡಿದ ʼಮೋದಿʼ!

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ,...

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 11 ಮಂದಿ ಬಲಿ, 30 ಜನರಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ...