ಜಗತ್ತಿನ ಸಂತೋಷಮಯ ದೇಶಗಳಲ್ಲಿ ಫಿನ್ಲೆಂಡ್‌ ಅಗ್ರ: ಭಾರತಕ್ಕೆ ಎಷ್ಟನೇ ಸ್ಥಾನ?

Date:

ಜಗತ್ತಿನ ಸಂತುಷ್ಟ ದೇಶಗಳ ಪಟ್ಟಿಯಲ್ಲಿ ಫಿನ್ಲೆಂಡ್‌ ಮೊದಲ ಸ್ಥಾನದಲ್ಲಿದೆ ಸತತ 9 ವರ್ಷಗಳಿಂದ ಈ ರಾಷ್ಟ್ರ ಅಗ್ರ ಸ್ಥಾನದಲ್ಲಿದೆ. ಉಳಿದ ನಾರ್ಡಿಕ್‌ ರಾಷ್ಟ್ರಗಳಾದ ಡೆನ್ಮಾರ್ಕ್‌, ನಾರ್ವೆ, ಐಸ್‌ಲ್ಯಾಂಡ್‌ ದೇಶಗಳು ಸಹ ಈ ಸಮೀಕ್ಷೆಯಲ್ಲಿ ಪೈಪೋಟಿಯ ಸ್ಥಾನ ಕಾಯ್ದುಕೊಂಡಿವೆ. ಇನ್ನೂ ಕೊನೆಯ ಸ್ಥಾನದಲ್ಲಿ ಅಫ್ಘಾನ್‌, ಮಲಾವಿಯಾ, ಜಿಂಬಾಬ್ವೆ, ಈಜಿಪ್ಟ್‌ ದೇಶಗಳಿವೆ. ಕೆನಡ, ಯುಎಸ್‌ , ಆಸ್ಟ್ರೇಲಿಯಾ ದೇಶಗಳು ಕಳೆದ ಒಂದು ದಶಕದಿಂದ ಜಾಗತಿಕ ಸಂತುಷ್ಟತೆಯ ಪಟ್ಟಿಯಲ್ಲಿ ಇಳಿಮುಖ ಕಂಡಿವೆ.

- Advertisement -

ಅತಿಯಾದ ಸೋಷಿಯಲ್‌ ಮೀಡಿಯ ಬಳಕೆಯು ಯುವಕರ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಾಮಾಜಿಕ ಜಾಲತಾಣಗಳ ಗೀಳು ಹದಿಹರೆಯದವರ ಜೀವನ ಶೈಲಿಯನ್ನು ಕೆಟ್ಟ ರೀತಿಯಲ್ಲಿ ಪ್ರಭಾವಿಸುತ್ತಿದೆ ಎಂದು ಆಕ್ಸ್‌ಫರ್ಡ್‌ ಯೂನಿವರ್ಸಿಟಿಯ ಅಧ್ಯಯನ ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

‌ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಒಟ್ಟು 147 ರಾಷ್ಟ್ರಗಳಲ್ಲಿ ಭಾರತ 116 ನೇ ಸ್ಥಾನದಲ್ಲಿದೆ. ಭಾರತದ ಜಾಗತಿಕ ಸಂತುಷ್ಟತೆಯ  ಮಟ್ಟವು ಪ್ರತಿವರ್ಷದ ಸಮೀಕ್ಷೆಯಲ್ಲೂ ನೂರರ ನಂತರದ ಸ್ಥಾನದಲ್ಲೇ ಇದೆ. ಕಳೆದ ವರ್ಷ 118 ನೇ ಸ್ಥಾನದಲ್ಲಿದ್ದು ಈ ಬಾರಿ 2 ಅಂಕಿಗಳ ಏರಿಕೆ ಕಂಡಿದೆ.‌

India Ranks Low in the World Happiness Report 2025

ಜಾಗತಿಕ ಸಂತೋಷ ಅಳೆಯುವುದು ಯಾರು ಮತ್ತು ಹೇಗೆ?

ಆಕ್ಸಫರ್ಡ್‌ ಯೂನಿವರ್ಸಿಟಿ ಕೈಗೊಳ್ಳುವ ವೆಲ್‌ ಬೀಯಿಂಗ್‌ ಸಂಶೋಧನ ತಂಡವು ಈ ವರದಿಯನ್ನು ಬಿಡುಗಡೆ ಮಾಡಿದೆ.

ಜಾಗತಿಕ ಸಂತುಷ್ಟ ವರದಿ (World Happiness Report) ದೇಶಗಳ ಸಂತೋಷವನ್ನು ಮುಖ್ಯವಾಗಿ  ಗ್ಯಾಲಪ್‌ ವರ್ಡ್‌ ಪೋಲ್ ದತ್ತಾಂಶಗಳ ಆಧಾರದ ಮೇಲೆ ಅಳೆಯುತ್ತದೆ. ಇದು 6 ಪ್ರಮುಖ ಅಂಶಗಳನ್ನು ಪರಿಗಣಿಸುತ್ತದೆ: ತಲಾ ಜಿಡಿಪಿ, ಸಾಮಾಜಿಕ ಬೆಂಬಲ, ಆರೋಗ್ಯಕರ ಜೀವಿತಾವಧಿ, ಜೀವನದ ಆಯ್ಕೆಗಳಲ್ಲಿ ಸ್ವಾತಂತ್ರ್ಯ, ಉದಾರ ಮನೋಭಾವ ಮತ್ತು ಭ್ರಷ್ಟಾಚಾರದ ಮಟ್ಟ.

ಸಂತೋಷವನ್ನು ನಿರ್ಧರಿಸುವ ಮಾನದಂಡಗಳು ಯಾವುವು?

  • ಜಿಡಿಪಿ ತಲಾ ಆದಾಯ ದೇಶದ ಆರ್ಥಿಕ ಸಮೃದ್ಧಿ. ಒಂದು ದೇಶದ ಆರ್ಥಿಕ ಭದ್ರತೆ ದೇಶದ ಜನರ ಉತ್ತಮ ಜೀವಿತಕ್ಕೆ ಪುಷ್ಟಿ ಕೊಡುತ್ತದೆ. ಹಾಗಾಗಿ ತಲಾ ಆದಾಯವನ್ನು ಈ ಸಮೀಕ್ಷೆಯ ಮುಖ್ಯ ಅಂಶವಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
  • ಸಾಮಾಜಿಕ ಬೆಂಬಲ ಕಷ್ಟದ ಸಮಯದಲ್ಲಿ ಸಹಾಯ ಮಾಡುವ ಸ್ನೇಹಿತರು/ಕುಟುಂಬದ ಲಭ್ಯತೆ ಜೊತೆಗೆ ಸಾಮಾಜಿಕ ಸಂರಚನೆಯನ್ನು ಸಮೀಕ್ಷೆಗೆ ಒಳಪಡಿಸುತ್ತಾರೆ.
  • ಉತ್ತಮ ಜೀವಿತಾವಧಿ ಜನರ ಆರೋಗ್ಯ ಮತ್ತು ಆಯುಷ್ಯ.ದೇಶದ ಜನರ ಆರೋಗ್ಯ ಸ್ಥಿತಿಗತಿ ಹಾಗೂ ಜೀವಿತಾವಧಿಯ ಲೆಕ್ಕ ಹಾಕಲಾಗುತ್ತದೆ.
  • ಸ್ವಂತ ನಿರ್ಧಾರದ ಸ್ವಾತಂತ್ರ್ಯ ಜೀವನದಲ್ಲಿ ಇಷ್ಟ ಬಂದದ್ದನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ.
  • ಉದಾರತೆ  ರಾಷ್ಟ್ರದ ಜನರ ಉದಾರ ಮನೋಭಾವವನ್ನು ಸಂಶೋಧನೆಗೆ ಒಳಪಡಿಸಿ ಅವರಿಗಿರುವ ದಾನ ಮಾಡುವ ಪ್ರವೃತ್ತಿಯನ್ನು ಪರಿಗಣಿಸಲಾಗುತ್ತದೆ.
  • ಭ್ರಷ್ಟಾಚಾರದ ಗ್ರಹಿಕೆ ಸರ್ಕಾರದ ವ್ಯವಹಾರಗಳಲ್ಲಿನ ಪಾರದರ್ಶಕತೆ ಹಾಗೂ ಭ್ರಷ್ಟಾಚಾರದ ಕುರಿತ  ಅರಿವು  ಇರುವ ದೇಶಗಳು ಸಂತೋಷಮಯ ರಾಷ್ಟ್ರಗಳ ಸರಣಿಯಲ್ಲಿ ಮೊದಲಿರುತ್ತದೆ.
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...