ಹುಮನಾಬಾದ್ | ನದಿಗೆ ರಾಸಾಯನಿಕ ತ್ಯಾಜ್ಯ: 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆ

Date:

ಬೀದರ್ ಜಿಲ್ಲೆಯ ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳು ಗುರುಗಂಗಾ, ಮಾಂಜ್ರಾ ನದಿಗೆ ರಾಸಾಯನಿಕ ತ್ಯಾಜ್ಯ ಹರಿಯ ಬಿಡುತ್ತಿರುವ ಬಗ್ಗೆ ಜನರು ಪ್ರತಿಭಟನೆ ನಡೆಸುತ್ತಿದ್ದು, ಈ ಕೂಡಲೇ 3 ಕೈಗಾರಿಕೆ ಮುಚ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಬೀದರ್ ಜಿಲ್ಲೆ ಪ್ರಕೃತಿ ವಿಕೋಪ ಮೇಲುಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

- Advertisement -

ಈ ಸಂಬಂಧ ಜಿಲ್ಲಾಧಿಕಾರಿಯವರಿಗೆ ಲಿಖಿತ ಸೂಚನೆ ನೀಡಿರುವ ಅವರು, ಮೆ. 6H ಇಂಡಸ್ಟ್ರೀಸ್, ಮೆ. ಸತ್ಯದೀಪ್ತ ಕೆ. ಇಂಡಸ್ಟ್ರೀ ಮತ್ತು ಮೆ. ಹಿಮಾಲಯ ಕೈಗಾರಿಕೆಗಳಿಗೆ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಮುಚ್ಚುವ ಆದೇಶ ಹೊರಡಿಸಿ, ಅನುಸರಣಾ ವರದಿಯನ್ನು 24 ಗಂಟೆಯೊಳಗಾಗಿ ಈ ಕಚೇರಿಗೆ ಸಲ್ಲಿಸುವಂತೆ ಆ.10ರಂದು ಬರೆದ ಪತ್ರದಲ್ಲಿ ಸೂಚಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ಮಾಣಿಕನಗರದ ಹಳ್ಳಕ್ಕೆ, ಗುರುಗಂಗಾ ಮತ್ತು ಮಾಂಜ್ರಾ ನದಿಗಳಿಗೆ ಹುಮನಾಬಾದ್ ಕೈಗಾರಿಕಾ ಪ್ರದೇಶದ ಕೆಲವು ಕಾರ್ಖಾನೆಗಳಿಂದ ವಿಷಯುಕ್ತ ರಾಸಾಯನಿಕ ತ್ಯಾಜ್ಯ ಹರಿಸುತ್ತಿರುವ ಕಾರಣ ನದಿ ಕಲುಷಿತವಾಗಿ ಗಬ್ಬುವಾಸನೆ ಬೀರುತ್ತಿದ್ದು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಜನ, ಜಾನುವಾರುಗಳಿಗೆ ಮಾರಕವಾದ ಕಾಯಿಲೆಗಳು ಬರುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದು ʼಗುರುಗಂಗಾ ಉಳಿಸಿʼ ಎಂದು ಜಾಥಾ, ಸಭೆ, ಪ್ರತಿಭಟನೆ ಹಾಗೂ ಅಭಿಯಾನ ಆರಂಭಿಸಿದ್ದಾರೆ ಲಿಖಿತ ಪತ್ರದಲ್ಲಿ ಸೂಚನೆಯಲ್ಲಿ ತಿಳಿಸಿದ್ದಾರೆ.

ಈ ಹಳ್ಳದ ನೀರು ಕಾರಂಜಾ ಹಿನ್ನೀರು ಸೇರುವ ಕಾರಣ ಕುಡಿಯುವ ನೀರು ಕಲುಷಿತವಾಗಿ ಸಾರ್ವಜನಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಆಗುತ್ತದೆ. ಈ ಹಿನ್ನೆಲೆಯಲ್ಲಿ ತತ್‌ಕ್ಷಣವೇ ಈ ಮಾಲಿನ್ಯಕಾರಕ ಕೈಗಾರಿಕೆಗಳನ್ನು ಜಲ ಮೂಲಗಳ ಸಂರಕ್ಷಣೆಯ ಹಿತದೃಷ್ಟಿಯಿಂದ, ಸಮುದಾಯ ಆರೋಗ್ಯ ರಕ್ಷಣೆಯ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) 2023ರ ಸೆಕ್ಷನ್ 152ರಡಿಯಲ್ಲಿ ಸಾರ್ವಜನಿಕ ಉಪದ್ವ್ಯಾಪ (public nuisance) ತಡೆಯಲು ತುರ್ತು ಕ್ರಮ ವಹಿಸುವ ಅಗತ್ಯ ಮನಗಾಣಲಾಗಿದೆ ಎಂದು ಖಂಡ್ರೆ ತಿಳಿಸಿದ್ದಾರೆ.

ಈ ಸಂಬಂಧ ಮಾಧ್ಯಮಗಳಲ್ಲಿ ಬಂದ ವರದಿಗಳ ಹಿನ್ನೆಲೆಯಲ್ಲಿ ಬೀದರ್ ಜಿಲ್ಲಾ ಪ್ರಕೃತಿ ವಿಕೋಪ ಮೇಲುಸ್ತುವಾರಿ ಸಚಿವನಾಗಿ ನಾನು, ಅ.5ರಂದು ಜಿಲ್ಲಾಡಳಿತಕ್ಕೆ ಬರೆದ ಪತ್ರದಲ್ಲಿ ಸ್ಪಷ್ಟ ಸೂಚನೆ ನೀಡಿ ಈ ಭಾಗದ ನೀರಿನ ಪರೀಕ್ಷೆ ಮಾಡಿಸಿ, ತ್ಯಾಜ್ಯ ಹರಿಸುತ್ತಿರುವ ಕೈಗಾರಿಕೆಗಳ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಜರುಗಿಸಿ, ಜಲ ಮೂಲ ಸಂರಕ್ಷಿಸಲು ಮತ್ತು 48 ಗಂಟೆಗಳ ಒಳಗಾಗಿ ಕೈಗೊಂಡ ಕ್ರಮದ ವರದಿ ಸಲ್ಲಿಸಲು ಸೂಚನೆ ನೀಡಲಾಗಿತ್ತು.

ಈ ಹಿಂದೆ ತಾವೇ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾಗಿದ್ದಾಗ, ಈ ಬಗ್ಗೆ ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಿ, ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ 2024ರ ಜುಲೈ 29ರಂದು ಮಾಲಿನ್ಯ ಹರಡುತ್ತಿದ್ದ 9 ಕೈಗಾರಿಕೆಗಳನ್ನು ಸೀಜ್ ಮಾಡಲು ಹುಮನಾಬಾದ್ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದರೂ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಬೀದರ್‌ | ಕಾರ್ಖಾನೆಗಳ ವಿಷಕಾರಿ ತ್ಯಾಜ್ಯ ಹಳ್ಳದ ಒಡಲಿಗೆ: ಜನ-ಜಾನುವಾರು ಜೀವಕ್ಕೆ ಆಪತ್ತು!

ಮತ್ತೆ ಈ ಕೈಗಾರಿಕೆಗಳು ಕಾರ್ಯಾಚರಣೆ ಮಾಡಿದ್ದು, ಕೈಗಾರಿಕಾ ತ್ಯಾಜ್ಯ ಜಲ ಮೂಲಗಳನ್ನು ಸೇರುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಮೂಲಗಳು ಕಲುಷಿತವಾಗುತ್ತಿರುವ ಕಾರಣ ಜಲ, ಪರಿಸರ ಸಂರಕ್ಷಣೆ, ಸಾರ್ವಜನಿಕರ ಹಿತದೃಷ್ಟಿ ಮತ್ತು ಸಮುದಾಯ ಆರೋಗ್ಯ ರಕ್ಷಣೆಯ ಹಿನ್ನೆಲೆಯಲ್ಲಿ ತ್ಯಾಜ್ಯವನ್ನು ಹಳ್ಳಕ್ಕೆ ಹರಿಸುತ್ತಿರುವ ಕೈಗಾರಿಕೆಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಈಶ್ವರ ಖಂಡ್ರೆ ನಿರ್ದೇಶನ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾವೇರಿ ವಿವಾದ: 20 ಟಿಎಂಸಿ ಕೊರತೆ ಎಂದ ತಮಿಳುನಾಡು, ತೀವ್ರ ಬರಗಾಲದ ಸಂಕಷ್ಟ ಬಿಚ್ಚಿಟ್ಟ ಕರ್ನಾಟಕ

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ...

ಚಿಕ್ಕಮಗಳೂರು | ದರ್ಗಾ ಆವರಣದಲ್ಲಿ ದಫನ್‌ಗೆ ಅನುಮತಿ ನಿರಾಕರಣೆ ಖಂಡನೀಯ: SDPI

ಚಿಕ್ಕಮಗಳೂರು: ಹಜರತ್ ಬಾಬಾ ಬುಡನ್ ಅವರ ವಂಶಸ್ಥರಾದ ಸೈಯದ್ ಹುಸೇನ್ ಶಾ...

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ರದ್ದು, ಲೀಸ್‌ಗೆ ನೀಡಲು ಸಿಎಂ ಭರವಸೆ : ಶ್ರೀಮಂತ ಬಿರಾದರ್

ಬೀದರ್ ಜಿಲ್ಲೆಯ ರೈತರು‌, ಕಾರ್ಮಿಕರ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ...