ಸ್ವತಂತ್ರ ಭಾರತಕ್ಕೆ 8 ದಶಕಗಳ ಸಂಭ್ರಮ; ಯೋಜನೆಗಳ ಅಬ್ಬರದಲ್ಲಿ ಕರಗುತ್ತಿದೆಯೇ ಬಡವನ ಜೀವ?

Date:

ನಮ್ಮ ದೇಶವಾಸಿಗಳ ಅನಾರೋಗ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಆರ್ಥಿಕತೆಯ ಮೇಲೆ ಬಹು ದೊಡ್ಡ ಹೊಡೆತ ಬಿದ್ದಿರುವುದನ್ನು ವರದಿಯೊಂದು ಬಹಿರಂಗಪಡಿಸಿದೆ. ಬೈನ್ ಕಂಪನಿ ಮತ್ತು Net healthನ ವರದಿಯಂತೆ, ನಮ್ಮ ದೇಶ ಪ್ರತಿವರ್ಷ ಸುಮಾರು 0.8 ರಿಂದ 1 ಟ್ರಿಲಿಯನ್ ಡಾಲರ್‌ (80 ಸಾವಿರ ಕೋಟಿಯಿಂದ 1 ಲಕ್ಷ ಕೋಟಿ)ಗಳಷ್ಟು ಆರ್ಥಿಕ ನಷ್ಟವನ್ನು ಎದುರಿಸುತ್ತಿದೆ. ಇಂತಹ ಆರ್ಥಿಕ ನಷ್ಟಕ್ಕೆ ಕಾರಣ, ಜನರು ಕೆಲಸ ಮಾಡಲು ಸಾಧ್ಯವಾಗದಿರುವುದರ ಜೊತೆಗೆ ಅನಾರೋಗ್ಯದಿಂದಾಗಿ ಕೆಲಸ ಮಾಡುವ ಸಾಮರ್ಥ್ಯಕಳೆದುಕೊಳ್ಳುತ್ತಿದ್ದಾರೆ.

- Advertisement -

ನಾವು ಸ್ವತಂತ್ರ ದೇಶವಾಗಿ ಮೂರು ತಲೆಮಾರುಗಳು ಸಾಗಿ ಹೋಗಿದೆ. ನನಗೀಗ ನಾವು ಹಿಂದುಸ್ತಾನಿಗಳೋ, ಭಾರತೀಯರೋ ಅಥವಾ ಇಂಡಿಯನ್ನರೋ ಎಂಬ ಪ್ರಶ್ನೆಯೂ ಕಾಡುತ್ತಿದೆ. ದೇಶ ಸ್ವಾತಂತ್ರ್ಯ ದಿನಾಚರಣೆಗೆ ಶೃಂಗಾರಗೊಂಡಿದೆ. ನಮ್ಮ ಪಡೆಗಳು ಕವಾಯತು ನಡೆಸುವ ಮೂಲಕ ದೇಶದ ಸುರಕ್ಷತೆ ಮತ್ತು ಘನತೆಯ ಬಗ್ಗೆ ಬೀಗುವಂತೆ ಮಾಡಲು ಸಿದ್ಧಗೊಳ್ಳುತ್ತಿದೆ. ಗೊತ್ತಿರಲಿ, ನಮ್ಮ ದೇಶ ಕೃಷಿ ಅವಲಂಬಿತ ಆರ್ಥಿಕತೆಯನ್ನೇ ಮೊದಲಿಗೆ ಹೆಚ್ಚಾಗಿ ನಂಬಿತ್ತು. ಆದರೆ, ಇವತ್ತು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿ ರೂಪಾಂತರಗೊಂಡಿದೆ. ನಮ್ಮ ಐ ಟಿ ವಲಯ ಜಾಗತಿಕ ಶಕ್ತಿಯಾಗಿ ಬೆಳೆದಿದೆ. ಉತ್ಪಾದನಾ ಕೇಂದ್ರಗಳು ಹಗಲಿರುಳು ಚಟುವಟಿಕೆಯಿಂದ ಕೂಡಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ದೊಡ್ಡ ಸಾಧನೆ ಮಾಡಿದ್ದೆ. ಇದೆಲ್ಲಕ್ಕಿಂತ ಮಿಗಿಲಾಗಿ 1.45 ಶತಕೋಟಿ ಜನಸಂಖ್ಯೆಯ ನಡುವೆ ನೂರಾರು ಭಾಷೆಗಳನ್ನು, ಸಾವಿರಾರು ಸಾಂಸ್ಕೃತಿಕ ಎಳೆಗಳನ್ನು ಹೊಂದಿದ್ದರೂ, ದೇಶವಾಸಿಗಳೆಲ್ಲರೂ ಕೂಡಿಕೊಂಡು ಚುನಾವಣೆಯನ್ನು ವಿಶ್ವಾಸವಾಗಿ ನಡೆಸುತ್ತಿದ್ದಾರೆ.

“ವೈವಿಧ್ಯತೆಯಲ್ಲಿ ಏಕತೆ” ಎಂಬ ನುಡಿಗಟ್ಟು ಕೇವಲ ಘೋಷಣೆಯಲ್ಲ. ಅದು ನಮ್ಮೆಲ್ಲರ ವಾಸ್ತವ ಎಂಬಂತೆಯೂ ಬದುಕುತ್ತಿದ್ದೇವೆ. ಆದರೂ ನಿಜವಾದ ಪ್ರಾಮಾಣಿಕ ಆಚರಣೆಗೆ ಆತ್ಮವಲೋಕನ ಅಗತ್ಯ ಎಂಬುದು ನನ್ನ ಬಲವಾದ ನಂಬಿಕೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಸಂವಿಧಾನದಲ್ಲಿ ಪ್ರತಿಪಾದಿಸಲಾದ “ಸಮಾನತೆ” ಯ ಭರವಸೆ ಕಾಗದದ ಮೇಲೆಯೇ ಉಳಿದಿದೆ. ಅಕ್ಷರ, ಆಹಾರ, ಆರೋಗ್ಯ ಆರ್ಥಿಕತೆ ಕೆಲವೇ ಕೆಲವರ ಸ್ವತ್ತಾಗಿದೆ. ಇದರಲ್ಲಿ ಮತಕ್ಕಾಗಿ ಅಕ್ಷರ, ಆಹಾರ ಕುರಿತಂತೆ ಹಲವು ಯೋಜನೆಗಳು ಬಂದಿವೆಯಾದರೂ ಆರೋಗ್ಯ ಮಾತ್ರ ಮರೀಚಿಕೆಯಾಗುಳಿದಿದೆ. ಹಾಗಾದರೆ, ಕಳೆದ 80 ವರ್ಷಗಳಿಂದ ದೇಶವಾಸಿಗಳ ಆರೋಗ್ಯಕ್ಕಾಗಿ ಹೂಡಿರುವ ಹೂಡಿಕೆ ತಲುಪಿರುವುದಾದರೂ ಎಲ್ಲಿಗೆ ?

ನಮ್ಮ ದೇಶವಾಸಿಗಳ ಅನಾರೋಗ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಆರ್ಥಿಕತೆಯ ಮೇಲೆ ಬಹು ದೊಡ್ಡ ಹೊಡೆತ ಬಿದ್ದಿರುವುದನ್ನು ವರದಿಯೊಂದು ಬಹಿರಂಗಪಡಿಸಿದೆ. ಬೈನ್ ಕಂಪನಿ ಮತ್ತು ನೆಟ್‍ಹೆಲ್ತ್‌ನ ವರದಿಯಂತೆ, ನಮ್ಮ ದೇಶ ಪ್ರತಿವರ್ಷ ಸುಮಾರು 0.8 ರಿಂದ 1 ಟ್ರಿಲಿಯನ್ ಡಾಲರ್‌ಗಳಷ್ಟು ಆರ್ಥಿಕ ನಷ್ಟವನ್ನು ಎದುರಿಸುತ್ತಿದೆ. ಇಂತಹ ಆರ್ಥಿಕ ನಷ್ಟಕ್ಕೆ ಕಾರಣ, ಜನರು ಕೆಲಸ ಮಾಡಲು ಸಾಧ್ಯವಾಗದಿರುವುದರ ಜೊತೆಗೆ ಅನಾರೋಗ್ಯದಿಂದಾಗಿ ಕೆಲಸ ಮಾಡುವ ಸಾಮರ್ಥ್ಯಕಳೆದುಕೊಳ್ಳುತ್ತಿದ್ದಾರೆ. ನಿಜಕ್ಕೂ ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ದೇಶ ಮಾಡಬೇಕೆಂದರೆ, ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಬೇಕಿದೆ. ಜನರ ಆರೋಗ್ಯ ಸುಧಾರಿಸಿದರೆ ಮಾತ್ರ ದೇಶದ ಆರ್ಥಿಕ ಪ್ರಗತಿ ಉಂಟಾಗುತ್ತದೆ.

ಹೌದು, ಒಂದು ದೇಶದ ಪ್ರಗತಿಯು ಕೇವಲ ಕೈಗಾರಿಕೆ, ತಂತ್ರಜ್ಞಾನ ಅಥವಾ ಹೂಡಿಕೆಯ ಮೇಲಷ್ಟೇ ಅವಲಂಬಿತವಾಗಿಲ್ಲ. ಬದಲಾಗಿ ಅಲ್ಲಿನ ದೇಶವಾಸಿಗಳು ಎಷ್ಟು ಆರೋಗ್ಯವಾಗಿದ್ದಾರೆ ಎಂಬುದರ ಮೇಲೆ ಅಲ್ಲಿನ ಪ್ರಗತಿ ಅವಲಂಬಿತವಾಗಿರುತ್ತದೆ. ಜನರು ಆರೋಗ್ಯವಾಗಿದ್ದರೆ ಗಟ್ಟಿಯಾಗಿ ನಿಂತು ಕೆಲಸ ಮಾಡುತ್ತಾರೆ. ಆಗ ಸಹಜವಾಗಿ ದೇಶದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡುವರು.

ನೆನಪಿಡಿ ಆಡಳಿತಗಾರರೇ, ಸದ್ಯ ಬಹು ದೊಡ್ಡ ಅವಕಾಶ ಎದುರಿಗಿದೆ. ಅಂದರೆ, ದೇಶದ ಮುಂದೆ ದೊಡ್ಡ ಪ್ರಮಾಣದ ದುಡಿಯುವ ವಯಸ್ಸಿನ ಜನರಿದ್ದಾರೆ. ಇದರ ಪ್ರಯೋಜನ 2019 ಮತ್ತು 2053 ರ ನಡುವೆ ನಮ್ಮ ದೇಶ ಪಡೆಯಲಿದೆ. ಆದರೆ ಇಂತಹ ದೊಡ್ಡ ಪ್ರಮಾಣದ ಜನಸಂಖ್ಯೆ ಅನಾರೋಗ್ಯದಿಂದ ಬಳಲುತ್ತಿದೆ. ಹೀಗಾಗಿ ಇಂತಹ ಅವಕಾಶ ವ್ಯರ್ಥವಾಗುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ ಜನರನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ.

national health mission

ಹಾಗಂತ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಮೇಲೆ ಸರ್ಕಾರ ಹಣ ಹೂಡಿಕೆ ಮಾಡುತ್ತಿಲ್ಲ ಎಂದು ದೂಷಿಸುವ ಪ್ರಯತ್ನ ನನ್ನದಲ್ಲ. ಜೊತೆಗೆ ಕಳೆದ 8 ದಶಕಗಳಿಂದ ದೇಶವನ್ನು ಮುನ್ನೆಡಿಸಿದ ರಾಜಕೀಯ ಪಕ್ಷಗಳ ಮೇಲೆ ಆಪಾದನೆಯನ್ನು ಎಸಗುತ್ತಿಲ್ಲ. 2026-27ನೇ ಸಾಲಿನ ಬಜೆಟ್‍ನಲ್ಲಿ ಆರೋಗ್ಯ ವಲಯಕ್ಕೆ ನಿರ್ಮಲಾ ಸೀತಾರಾಮನ್ ಅವರು 1.06 ಲಕ್ಷ ಕೋಟಿ ಹಣವನ್ನು ಹಂಚಿಕೆ ಮಾಡಿದ್ದಾರೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿ ಕಂಡಾಗ ಶೇಕಡ 9 ರಷ್ಟು ಹೆಚ್ಚಳ ಆಗಿರುವುದು ಕಂಡು ಬರುತ್ತದೆ. ಆದರೆ ಬಳಕೆಯಲ್ಲಿ ಸಿಬ್ಬಂದಿ ಮತ್ತು ಗುಣಮಟ್ಟದಲ್ಲಿನ ನಿರಂತರ ಅಂತರವು ಕೇವಲ ಹಣ ಹಂಚಿಕೆ ಮಾಡಿ ದೇಶದ ಸಾರ್ವಜನಿಕ ಆರೋಗ್ಯ ವಲಯವನ್ನು ಸರಿಪಡಿಸಲು ಸಾಧ್ಯವಿಲ್ಲ ಎಂಬುದನ್ನು ಸಾರುತ್ತಿದೆ.
ಕಳೆದೊಂದು ದಶಕದಿಂದ ಆರೋಗ್ಯ ಕ್ಷೇತ್ರಕ್ಕೆ ಬಜೆಟ್‍ನಲ್ಲಿ ಹಣ ಹಂಚಿಕೆ ಪ್ರಮಾಣವನ್ನು ಏರಿಸಿದ್ದು ಮಾತ್ರವಲ್ಲದೆ 1,83,833 ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗಿದೆ.

157 ಹೊಸ ವೈದ್ಯಕೀಯ ಕಾಲೇಜುಗಳನ್ನು ಸಹ ತೆರೆಯಲಾಗಿದೆ. ಆದರೂ ಶೇಕಡ 50ರಷ್ಟು ನಮ್ಮ ದೇಶವಾಸಿಗಳು ಸರ್ಕಾರಿ ಆಸ್ಪತ್ರೆಯತ್ತ ತಲೆಹಾಕುತ್ತಿಲ್ಲ . ಇದಕ್ಕೆ ಗುಣಮಟ್ಟದ ಕೊರತೆ, ಅನಾರೋಗ್ಯದಿಂದ ನಿತ್ರಾಣನಾಗಿದ್ದರೂ ಕಾಯಲೇ ಬೇಕಾದ ಸ್ಥಿತಿ, ಮುಖ್ಯವಾಗಿ ವೈದ್ಯಕೀಯ ಸಿಬ್ಬಂದಿ ಕೊರತೆ ಬಹಳವಾಗಿ ಕಾಡುತ್ತಿದೆ.

ಇಲ್ಲಿ ಗಮನಿಸಬೇಕಾದ ಬಹುದೊಡ್ಡ ಅಂಶ ಒಂದಿದೆ. ಅದು ರಾಷ್ಟ್ರೀಯ ಆರೋಗ್ಯ ಮಿಷನ್ 2026-27 ನೇ ಸಾಲಿನಲ್ಲಿ 39,390 ಕೋಟಿಗಳಷ್ಟು ಪಡೆದುಕೊಂಡಿದೆ. ಇದು ನಿರೀಕ್ಷಿತ ವೆಚ್ಚಕ್ಕಿಂತ ಶೇಕಡ 6.1 ರಷ್ಟು ಅಧಿಕವಾಗಿದೆ.

ಆದರೂ ರಾಷ್ಟ್ರೀಯ ಆರೋಗ್ಯ ಅಭಿಯಾನ NHMಗೆ ಹಂಚಿಕೆಯಾದ ನಿಧಿಯನ್ನು ಸಂಪೂರ್ಣವಾಗಿ ಬಳಕೆ ಮಾಡುತ್ತಿಲ್ಲ ಎಂಬುದನ್ನು ಕೂಡ ಗಮನಿಸಬೇಕಿದೆ. 2022-23 ಸಾಲಿನಲ್ಲಿ 65 ರಷ್ಟು ಮಾತ್ರ ವ್ಯಯಿಸಲಾಗಿದೆ. 2024-25ರ ಸಾಲಿನಲ್ಲಿ ಶೇಕಡ 62ರಷ್ಡು ಕುಸಿದಿದೆ. ಇದನ್ನು ನವದೆಹಲಿಯ ಫೌಂಡೇಶನ್ ಫಾರ್ ರೆಸ್ಪಾನ್ಸಿವ್ ಗವರ್ನನ್ಸ್ ಸಂಸ್ಥೆ ತಿಳಿಸಿದೆ. ದುರಂತ ಎಂದರೆ ದೇಶದ ಆಡಳಿತವನ್ನು ನಿಯಂತ್ರಿಸುವ ಉತ್ತರ ಪ್ರದೇಶ ಹಾಗೂ ಪಂಜಾಬ್ ನಂತಹ ರಾಜ್ಯಗಳು ಹಂಚಿಕೆಯಾದ NHMನಿಧಿಯಲ್ಲಿ ಅರ್ಧದಷ್ಟು ಮಾತ್ರ ಬಳಸಿವೆ. ಹೀಗಾಗಿಯೇ ಸಾರ್ವಜನಿಕ ಸೇವೆಯ ಬಳಕೆ ಕುಸಿತಕ್ಕೆ ಒಂದು ಪ್ರಮುಖ ಕಾರಣವಾಗಿದೆ.

2021-22 ರಲ್ಲಿ ದೇಶದ ಆರೋಗ್ಯ ವೆಚ್ಚದಲ್ಲಿ 39 ರಷ್ಟನ್ನು ಜೇಬಿನಿಂದ ತೆಗೆದು ವ್ಯಯಿಸಲಾಗಿದೆ. ಇದು 2014-15ರಲ್ಲಿ ಶೇಕಡ 63ರಷ್ಟಿತ್ತು. ಮನೆಯ ಆರೋಗ್ಯ ವೆಚ್ಚ 2014-15ರಲ್ಲಿ ರೂ 3.02 ಲಕ್ಷ ಕೋಟಿಯಿಂದ 2021-22 ರಲ್ಲಿ 3.56 ಲಕ್ಷ ಕೋಟಿಯಷ್ಟು ಏರಿಕೆ ಕಂಡಿದೆ. ಒಂದೊಮ್ಮೆ ಜನ ಚಿಕಿತ್ಸೆ ಪಡೆಯದಿರಲು ನಿರ್ಧರಿಸಿದರೆ OOPE (Out of Pocket Expenditure)ಕಡಿಮೆಯಾಗುತ್ತದೆ.

2021-22ರ ರಾಷ್ಟ್ರೀಯ ಲೆಕ್ಕ ಪತ್ರ ವರದಿಯಂತೆ, ದೇಶದ ಪ್ರಧಾನಿಯನ್ನೇ ನಿಯಂತ್ರಿಸುವಷ್ಟು ಶಕ್ತಿಶಾಲಿಯಾಗಿರುವ, ಬಿಹಾರದಲ್ಲಿ ಸರಾಸರಿ ವಾರ್ಷಿಕ ಆರೋಗ್ಯ ಖರ್ಚಿಗೆ 984 ರೂಗಳಷ್ಟನ್ನು ವ್ಯಯಿಸಲಾಗಿದೆ. ಇದನ್ನು ಗಮನಿಸಿದಾಗ ಬಿಹಾರಕ್ಕಿಂತ ಕೇರಳ ಆರೋಗ್ಯ ರಕ್ಷಣೆಗಾಗಿ ವಹಿಸಿರುವ ಕಾಳಜಿ ಅರ್ಥವಾಗುತ್ತದೆ.

ಇನ್ನೂ ಜುಲೈ 2022 ರಿಂದ ಜೂನ್ 2023 ರವರೆಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಾದ ಹೆರಿಗೆ ಸೇರಿದಂತೆ ಆಸ್ಪತ್ರೆಗೆ ದಾಖಲಾಗುವ ಪ್ರತಿ ಮನೆಯವರು ಮಾಡಿರುವ ಸರಾಸರಿ ಜೇಬಿನಿಂದ ಖರ್ಚು ಮಾಡುವ ಅಂದರೆ, OOPE ಕ್ರಮವಾಗಿ 4,129 ರೂಗಳಿಂದ 5,290 ರೂ.ಗಳಷ್ಟಿದೆ. ಇದನ್ನು ಅಂಕಿಅಂಶ ಮತ್ತು ಕಾರ್ಯಕ್ರಮ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ ನಡೆಸಿದ ಸಮಗ್ರ ವಾರ್ಷಿಕ ಮಾಡ್ಯುಲರ್ CAM ಸಮೀಕ್ಷೆಯೇ ತಿಳಿಸಿದೆ.

ಇದರಂತೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಒಂದು ವರ್ಷದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸರಾಸರಿ ವೆಚ್ಚ ಕ್ರಮವಾಗಿ 4,496 ಮತ್ತು 6,877 ರೂ.ಗಳಷ್ಟಿದೆ. ಹೀಗಾಗಿ, ಒಟ್ಟು ಆಸ್ಪತ್ರೆ ವೆಚ್ಚದಲ್ಲಿ OOPE ನ ಪಾಲನ್ನು ಲೆಕ್ಕ ಹಾಕಿ ಕಂಡಾಗ ನಗರ ಪ್ರದೇಶಗಳಲ್ಲಿ ಜನರು ತಮ್ಮ ಒಳರೋಗಿಗಳ ಆರೈಕೆ ವೆಚ್ಚದ ಶೇಕಡ 77 ರಷ್ಟನ್ನು ತಮ್ಮ ಜೇಬಿನಿಂದ ತೆಗೆದು ಖರ್ಚು ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿದು ಸುಮಾರು ಶೇಕಡ 92ರಷ್ಟಿದೆ.

CAM ಸಮೀಕ್ಷೆಯ ವರದಿಯನ್ನು ರಾಷ್ಟ್ರೀಯ ಮಾದರಿ ಸಮೀಕ್ಷೆಯು OOPE 79ನೇ ಭಾಗವಾಗಿ ನಡೆದಿದೆ. ಇನ್ನೂ OOPE ನ 78 ನೇ ಸುತ್ತಿನ ಭಾಗವಾಗಿ 2020-21 ರಲ್ಲಿ ನಡೆಸಲಾದ ಬಹು ಸೂಚಕ ಸಮೀಕ್ಷೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ನಿಯತಾಂಕಗಳನ್ನು ಸೇರಿಸಲಾಗಿರಲಿಲ್ಲ.

2017-18ರಲ್ಲಿ ನಡೆದ ಎನ್‍ಎಸ್‍ಎಸ್‍ನ 75ನೇ ಸುತ್ತಿನ ಸಮೀಕ್ಷೆಯಲ್ಲಿ, ಗ್ರಾಮೀಣ ಭಾರತದಲ್ಲಿ ಸರಾಸರಿ 16,676 ರೂ. ಮತ್ತು ನಗರ ಭಾರತದಲ್ಲಿ 26,475 ರೂಗಳಷ್ಟನ್ನು ಆಸ್ಪತ್ರೆಗೆ ದಾಖಲಾಗುವವರ ವೈದ್ಯಕೀಯ ವೆಚ್ಚಕ್ಕಾಗಿ ವ್ಯಯಿಸಲಾಗಿದೆ ಎಂಬುದನ್ನು ತೋರಿಸಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಆರೋಗ್ಯ ಖಾತೆ , NHA (National Health Authority)ಅಂದಾಜಿನಂತೆ , ಭಾರತದಲ್ಲಿ ಒಟ್ಟು ಆರೋಗ್ಯ ವೆಚ್ಚದ THE OOPE 2021-2022ರ ಹಣಕಾಸು ವರ್ಷದಲ್ಲಿ ಶೇಕಡ 39.4 ರಷ್ಟಿತ್ತು. ಇದು 2014-2015ರ ಹಣಕಾಸು ವರ್ಷದಲ್ಲಿ ಶೇಕಡ 64.2 ರಷ್ಟು ಕಡಿಮೆಯಾಗಿದೆ.

ಇಷ್ಟಲ್ಲದೆ ನಮ್ಮ ದೇಶದ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಕೂಡ ಕೊರತೆಯಿಂದ ನರಳುತ್ತಿದೆ. ಇದು ಎಷ್ಟರಮಟ್ಟಿಗೆ ಎಂದರೆ, ದೇಶದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶೇಕಡ 80ರಷ್ಟು ತಜ್ಞ ವೈದ್ಯರ ಕೊರತೆ ಇದೆ. ಅಂದರೆ 5 ಜನ ಪ್ರಮುಖ ತಜ್ಞತೆ ಉಳ್ಳವರಾದ ಶಸ್ತ್ರ ಚಿಕಿತ್ಸಕ, ಪ್ರಸೂತಿ ತಜ್ಞರು, ಸ್ತ್ರೀರೋಗ ತಜ್ಞರು ಮತ್ತು ಮಕ್ಕಳ ತಜ್ಞರಲ್ಲಿ ಒಬ್ಬರು ಮಾತ್ರ ಆರೋಗ್ಯ ಕೇಂದ್ರ ಇರುವಲ್ಲಿ ತಂಗುತ್ತಿದ್ದಾರೆ. 2005ರಲ್ಲಿ ಶೇಕಡ 35ರಷ್ಟಿದ್ದ ಕೊರತೆಯೂ 2022-23ರ ವೇಳೆಗೆ ಶೇಕಡ 58ರಷ್ಟು ಕೊರತೆಯನ್ನು ಎದುರಿಸುತ್ತಿದೆ. ಇನ್ನೂ ಹೇಳಬೇಕೆಂದರೆ ಬಹಳ ಪ್ರಮುಖರಾದ ರೇಡಿಯೋ ಗ್ರಾಫರ್ ಗಳ ಕೊರತೆ ಕೂಡ ಸಾಕಷ್ಟಿದೆ. ಇದರಿಂದಾಗಿ ವೈದ್ಯರುಗಳು ಇಮೇಜಿಂಗ್ ಅಧ್ಯಯನ ಮಾಡಲು ಸಾಧ್ಯವಾಗುತ್ತಿಲ್ಲ.
ಜೊತೆಗೆ ಗ್ರಾಮವಾಸಿಗಳು ಜಿಲ್ಲಾ ಆಸ್ಪತ್ರೆಗಳನ್ನು ಎಡತಾಕಿ ಮಾಡಿಸಿಕೊಳ್ಳಲು ಪಡಬಾರದ ಪಾಡು ಪಡುತ್ತಿದ್ದಾರೆ. ಗೊತ್ತಿರಲಿ 2022ರಂತೆ ಸರ್ಕಾರಿ ಆಲೋಪತಿ ವೈದ್ಯರೊಬ್ಬರು ನಿತ್ಯ 7908 ಜನ ರೋಗಿಗಳನ್ನು ತಪಾಸಣೆ ಮಾಡಿ ಚಿಕಿತ್ಸೆ ಕೊಡಬೇಕಿದೆ. 2023ರ ಅಧ್ಯಯನ ಒಂದರಂತೆ, ನಮ್ಮ ದೇಶದಲ್ಲಿ ಪ್ರತಿ 1,666 ಜನರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಹಾಸಿಗೆ ಇದೆ.

ಇದು ವಿಶ್ವ ಆರೋಗ್ಯ ಸಂಸ್ಥೆ ಮಾಡಿರುವ ಶಿಫಾರಸ್ಸಿಗಿಂತ 8 ಪಟ್ಟು ಹೆಚ್ಚಿದೆ. 2024-25 ಆರೋಗ್ಯ ಸಚಿವಾಲಯದ ವಾರ್ಷಿಕ ವರದಿಯೊಂದು, ದೇಶದ ಸಾರ್ವಜನಿಕ ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಅಗಾಧ ಪ್ರಮಾಣದ ಕೊರತೆ ಇದೆ ಎಂಬುದನ್ನು ಒಪ್ಪಿಕೊಂಡಿದೆ. ಇದನ್ನು ಸರಿಪಡಿಸಲು ರಾಷ್ಟ್ರೀಯ ಆರೋಗ್ಯ ಮಿಷನ್ ಪ್ರಯತ್ನಿಸುತ್ತಿದೆ ಎಂಬ ಸಬೂಬು ಸದ್ಯ ಅಧಿಕಾರಿಗಳಿಂದ ಸಿಗುತ್ತಿದೆ.

ಇದೇನೆ ಇರಲಿ, ಜಗತ್ತಿನ ಹಲವು ದೇಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ , ಯಾವ ದೇಶದ ಜನರು ಹೆಚ್ಚು ಕಾಲ ಬದುಕುತ್ತಾರೋ ಆ ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿರುವುದು ಕಾಣಿಸುತ್ತದೆ. ಒಂದೊಮ್ಮೆ ಆರೋಗ್ಯಕರ ವರ್ಷವನ್ನು ಕಾಪಾಡಿದರೆ, ದೇಶದ ಆದಾಯವನ್ನು ಸುಮಾರು ಶೇಕಡ 7.5 ರಷ್ಟು ಹೆಚ್ಚಿಸಿಕೊಳ್ಳಬಹುದಾಗಿದೆ.

1950 ರಲ್ಲಿ ನಮ್ಮ ದೇಶದ ಜನರ ಸರಾಸರಿ ಜೀವಿತಾವಧಿ 50 ವರ್ಷಗಳಷ್ಟಿತ್ತು. ಅದೀಗ ಸುಮಾರು 61 ವರ್ಷಗಳಷ್ಟಕ್ಕೆ ಬಂದು ನಿಂತಿದೆ.
ಇದನ್ನು ಕನಿಷ್ಠ 70 ವರ್ಷಗಳಷ್ಟು ಹೆಚ್ಚಿಸಿದರೆ, ನಮ್ಮ ದೇಶದ ಆರ್ಥಿಕತೆಯು ಬಹಳ ವೇಗವಾಗಿ ಬೆಳೆಯತ್ತದೆ. ಇದನ್ನು ಚೀನಾ, ದಕ್ಷಿಣ ಕೊರಿಯಾ ಮತ್ತು ಪೋಲೆಂಡ್‍ನಂತಹ ದೇಶಗಳ ಅಭಿವೃದ್ದಿಯಲ್ಲಿ ಕಾಣಬಹುದಾಗಿದೆ. ಇವು ತಮ್ಮ ನಾಗರಿಕರ ಆರೋಗ್ಯವನ್ನು ಸುಧಾರಣೆಗೊಳಿಸಿವೆ.ಇದರಿಂದಲೇ ಸಹಜವಾಗಿ ಆರ್ಥಿಕತೆಗೆ ನೇರವಾಗಿ ಕೊಡುಗೆಯನ್ನು ನೀಡಿದೆ. ಇದನ್ನು ಇತ್ತೀಚಿನ ವರ್ಷಗಳಲ್ಲಿ ಅವರು ಉತ್ತಮ ಆರ್ಥಿಕ ಪ್ರಗತಿಯನ್ನು ಸಾಧಿಸಿರುವುದನ್ನು ಗಮನಿಸಬೇಕಿದೆ.

ನಾನಿಲ್ಲಿ ಕಳೆದ 80 ವರ್ಷಗಳಿಂದ ಸರ್ಕಾರ ಸಾರ್ವಜನಿಕ ಆರೋಗ್ಯವಲಯಕ್ಕೆ ಹಣ ಹಂಚಿಕೆ ಮಾಡುತ್ತಿಲ್ಲ. ಯೋನೆಗಳನ್ನು ರೂಪಿಸಿಲ್ಲ ಎನ್ನುತ್ತಿಲ್ಲ. 2026 ರ ಫೆಬ್ರವರಿ ಒಂದರ ಹೊತ್ತಿಗೆ 1,8,833 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು, ಉಪ ಕೇಂದ್ರಗಳನ್ನು ಹಾಗೂ ನಗರ ಆರೋಗ್ಯ ಕೇಂದ್ರಗಳನ್ನು ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನಾಗಿಸಿ ಮೇಲ್ದರ್ಜೆಗೇರಿಸಲಾಗಿದೆ . ಪ್ರತಿಯೊಂದು ಕೇಂದ್ರಗಳು 3ಸಾವಿರದಿಂದ ದಿಂದ 5ಸಾವಿರ ದಷ್ಟು ಜನರಿಗೆ ಉಪಯೋಗವಾಗುವ ವಿಶ್ವಾಸ ಹೊಂದಲಾಗಿದೆ.

ಇಲ್ಲಿ ಮತ್ತೊಂದು ದುರಂತ ಎಂದರೆ 2024-25 ರಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಹಂಚಿಕೆ ಮಾಡಿದ್ದ ಹಣದಲ್ಲಿ ಕೇವಲ ಶೇಕಡ 40ರಷ್ಟು ಮಾತ್ರ ವ್ಯಯಿಸಲಾಗಿರುವುದನ್ನು ಸರ್ಕಾರೇತರ ಸಂಘಟನೆಯೊಂದು ತಿಳಿಸಿದೆ.

ಇನ್ನಿಲ್ಲಿ 2018 ರಲ್ಲಿ ಪ್ರಾರಂಭಿಸಲಾದ AB-PMJAY ಅಡಿಯಲ್ಲಿ ಕೇಂದ್ರ ಸರ್ಕಾರ ಸುಮಾರು 50 ಕೋಟಿ ಭಾರತೀಯರಿಗೆ ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಆಧರಿಸಿ ದ್ವಿತೀಯ ಮತ್ತು ತೃತೀಯ ಹಂತದ ಆರೋಗ್ಯ ರಕ್ಷಣೆಗಾಗಿ 5 ಲಕ್ಷ ರೂ.ಗಳ ಆರೋಗ್ಯ ವಿಮಾ ರಕ್ಷಣೆಯನ್ನು ನೀಡುತ್ತದೆ ಎಂದು ಹೇಳಿಕೊಂಡಿದೆ. ಇತ್ತೀಚೆಗಷ್ಟೇ, 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರನ್ನು, ಆದಾಯ ಮಿತಿಯನ್ನು ಬದಿಗೆ ಸರಿಸಿ, ಸೇರಿಸಲು ವಿಸ್ತರಿಸಲಾಗಿದೆ.

ಆರೋಗ್ಯ ತಜ್ಞರಂತೆ, ಸರ್ಕಾರಿ ಪ್ರಾಯೋಜಿತ ಆರೋಗ್ಯ ರಕ್ಷಣಾ ಯೋಜನೆ ಹೊಂದದವರು ಇಂದಿಗೂ ಖಾಸಗಿ ಆರೋಗ್ಯ ವಿಮೆಯನ್ನೇ ಅವಲಂಬಿಸಿದ್ದಾರೆ.

ಇಷ್ಟಲ್ಲದೆ, ಆರೋಗ್ಯ ರಕ್ಷಣೆಗೆ ಆರ್ಥಿಕ ರಕ್ಷಣೆಯನ್ನು ಸೂಚಿಸುವ ನಿರ್ಣಾಯಕವಾದ ದುರಂತ ಆರೋಗ್ಯ ವೆಚ್ಚ CHE ಮತ್ತು ಆರೋಗ್ಯ ವೆಚ್ಚಗಳ ಕಾರಣದಿಂದಾಗಿ ಬಡತನಕ್ಕೆ ತಳ್ಳಲ್ಪಡುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಇಲ್ಲಿ CHE ಎಂಬುದು ಒಂದು ಮನೆಯ ಕುಟುಂಬಸ್ಥರ ಆರೋಗ್ಯ ರಕ್ಷಣೆಯ ವೆಚ್ಚವು ಆರೋಗ್ಯ ರಕ್ಷಣೆಗಾಗಿ ಪಾವತಿಸುವ ಸಾಮರ್ಥ್ಯಕ್ಕಿಂತ ಹೆಚ್ಚಾಗಿದ್ದರೆ ಅದನ್ನು ಮನೆಯ ಒಟ್ಟು ಖರ್ಚಿನ ಶೇಕಡ 10 ಕ್ಕಿಂತ ಹೆಚ್ಚಾದಾಗ ಸಂಭವಿಸುತ್ತದೆ . ಗೊತ್ತಿರಲಿ, ಆರೋಗ್ಯ ಸೇವೆಗಳ ಲಭ್ಯತೆಗೆ ಸಂಬಂಧಿಸಿದ ನಿಯತಾಂಕಗಳು ಬಹಳ ಮುಖ್ಯವಾಗಿದೆ.

ನಮ್ಮಲ್ಲಿ ಆರೋಗ್ಯ ಸಿಬ್ಬಂದಿಗಳ ಲಭ್ಯತೆ ಸೇರಿದಂತೆ 14 ಅಂತರರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ನಿಯತಾಂಕಗಳಿವೆ.

ನಮ್ಮಲ್ಲಿ ಸರ್ಕಾರಿ ಆರೋಗ್ಯ ಸೌಲಭ್ಯ ಬಳಸಿದಿರಲು ಹಲವು ಕಾರಣಗಳಿವೆ. ಅಂತಹವುಗಳಲ್ಲಿ ಶೇಕಡ 48ರಷ್ಟು ಕಳಪೆ ಗುಣಮಟ್ಟದಿಂದ ಕೂಡಿದೆ. ಶೇಕಡ 40ರಷ್ಟು ಸಮೀಪದಲ್ಲಿರುವ PHC ಗಳಲ್ಲಿ ಸೌಲಭ್ಯಗಳ ಕೊರತೆ ಇದೆ. ಒಟ್ಟಾರೆ, ಜಿಡಿಪಿಯ ಶೇಕಡವಾರು ಆರೋಗ್ಯ ವೆಚ್ಚವು 2013ರಲ್ಲಿ ಶೇಕಡ 1.3 ರಿಂದ 2022-23ರಲ್ಲಿ ಶೇಕಡಾ 2 .1 ರಷ್ಟಕ್ಕೆ ಏರಿದೆ.

2010ರ ವೇಳೆಗೆ ಒಟ್ಟು ದೇಶೀಯ ಉತ್ಪನ್ನದ ಶೇಕಡ 2ರಷ್ಟು ಗುರಿಯನ್ನು 2002ರ ರಾಷ್ಟ್ರೀಯ ಆರೋಗ್ಯನೀತಿಯೂ ಹೊಂದಿತ್ತು. 2004ರಲ್ಲಿ ಸಂಯುಕ್ತ ಪ್ರಗತಿಶೀಲ ಒಕ್ಕೂಟದ ಸರ್ಕಾರ ಇದ್ದಾಗ 5ವರ್ಷಗಳ ಆಡಳಿತಾವಧಿಯಲ್ಲಿ ಸಾರ್ವಜನಿಕ ಆರೋಗ್ಯ ವೆಚ್ಚವನ್ನು ಒಟ್ಟು ದೇಶೀಯ ಉತ್ಪನ್ನದ 2-3 ರಷ್ಟು ಹೆಚ್ಚಿಸುವ ಗುರಿ ಇತ್ತು.

12ನೇ ಪಂಚವಾರ್ಷಿಕ ಯೋಜನೆಯು 2017ರ ಮಾರ್ಚ್ ಹೊತ್ತಿಗೆ ಒಟ್ಟು ದೇಶೀಯ ಉತ್ಪನ್ನದ 1.87 ರಷ್ಡು ಗುರಿಯನ್ನು ಹೊಂದಿತ್ತು. 2017ರ ರಾಷ್ಟ್ರೀಯ ಆರೋಗ್ಯ ನೀತಿಯು 2025 ವೇಳೆಗೆ ಇಂತಹ ಗುರಿಯನ್ನು ಶೇಕಡ 2.5ರಷ್ಟಕ್ಕೆ ಹೆಚ್ಚಿಸಿತ್ತು.

ರಾಷ್ಟ್ರೀಯ ಆರೋಗ್ಯ ಖಾತೆಗಳ ದತ್ತಾಂಶದಂತೆ, ಆರೋಗ್ಯ ವೆಚ್ಚಕ್ಕಾಗಿ ಶೇಕಡ 58ರಷ್ಟು ಪಾಲನ್ನು ಭರಿಸುತ್ತಿದೆ. 15 ನೇ ಹಣಕಾಸು ಆಯೋಗದ ರಚನೆಯ ನಂತರ ಹೆಚ್ಚಿನ ಪ್ರಮಾಣದ ನಿಧಿಯು ರಾಜ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ಆಗಿದೆ. ದುರಂತ ಎಂದರೆ, ಆರೋಗ್ಯ ಕ್ಷೇತ್ರಕ್ಕೆ ಶಿಫಾರಸ್ಸು ಮಾಡಲಾದ ಹಣದಲ್ಲಿ ಶೇಕಡ 8ಕ್ಕಿಂತ ಕಡಿಮೆ ಹಣವನ್ನು ಹಂಚಿಕೆ ಮಾಡಲಾಗುತ್ತಿದೆ.

ಸದ್ಯ ನಮ್ಮ ಕೇಂದ್ರ ಸರ್ಕಾರ ತನ್ನ ಉಆP ಯ ಸುಮಾರು 2 ಪ್ರತಿಶತವನ್ನು ಜನಾರೋಗ್ಯಕ್ಕಾಗಿ ವ್ಯಯಿಸುತ್ತಿದೆ. ಮೊದಲಿಗೆ ಇಂತಹ ವೆಚ್ಚವನ್ನು ಶೇಕಡ 6 ರಿಂದ 7 ರಷ್ಟಕ್ಕೆ ಹೆಚ್ಚಿಸಬೇಕಿದೆ . ಆರೋಗ್ಯ ವೆಚ್ಚ ಹೆಚ್ಚಿಸಿದಾಗ, ಆಸ್ಪತ್ರೆ, ವೈದ್ಯರು, ಔಷಧಿಗಳು ಮತ್ತು ಆರೋಗ್ಯ ಸೇವೆಗಳನ್ನು ಸುಧಾರಿಸುತ್ತದೆ.

ಇನ್ನಿಲ್ಲಿ ಜನರು ಅನಾರೋಗ್ಯಕ್ಕೆ ಒಳಗಾಗುವ ಮೊದಲೇ ಅವರನ್ನು ಆರೋಗ್ಯವಾಗಿಡಲು ಶ್ರಮಿಸಬೇಕಿದೆ. ಇದಕ್ಕಾಗಿ ನಿಯಮಿತ ತಪಾಸಣೆ, ಆರಂಭಿಕ ಹಂತದಲ್ಲೇ ರೋಗನಿರ್ಣಯಿಸಬೇಕು. ಸಕಾಲಿಕ ಚಿಕಿತ್ಸೆಯಿಂದ ಗಂಭೀರ ರೋಗಗಳನ್ನು ತಡೆಗಟ್ಟಬಹುದು. ಇದಲ್ಲದೆ, ಡಿಜಿಟಲ್ ಆರೋಗ್ಯ ಸೇವೆ ಬಳಸುವುದರಿಂದ ದೂರದ ಪ್ರದೇಶಗಳ ಜನರು ಚಿಕಿತ್ಸೆ ಪಡೆಯುವುದು ಸುಲಭವಾಗುತ್ತದೆ.

ಗೊತ್ತಿರಲಿ, ಇತ್ತೀಚಿನ CAM ಸಮೀಕ್ಷೆಯು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲದ ವೈದ್ಯಕೀಯ ಸೇವೆಗಳಿಗಾಗಿ ಪ್ರತಿ ಮನೆಗೆ 30 ದಿನಗಳಲ್ಲಿ ಸರಾಸರಿ ಜೇಬಿನಿಂದ ಖರ್ಚು ಮಾಡಲಾಗುತ್ತಿದೆ. ಇದು ಕ್ರಮವಾಗಿ 539 ರೂ. ಮತ್ತು 606 ರೂ. ಎಂದು ತೋರಿಸುತ್ತಿದೆ.

ಮತ್ತೊಂದೆಡೆ, ನಮ್ಮವರು 30 ದಿನಗಳಲ್ಲಿ ಇಂತಹ ಸೇವೆಗಳಿಗಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 125 ಮತ್ತು 175 ರೂ.ಗಳಷ್ಟನ್ನು ಖರ್ಚು ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆಸ್ಪತ್ರೆಗೆ ದಾಖಲಾಗುವವರ ವೈಯಕ್ತಿಕ ವೆಚ್ಚ 1,035 ರೂ.ಗಳಷ್ಟಾಗಿದೆ .ಇದರಲ್ಲಿ 950 ರೂ. ಅಥವಾ ಶೇ. 91.3 ರಷ್ಟು ಜೇಬಿನಿಂದ ವ್ಯಯಿಸಲಾಗಿದೆ ಎಂಬುದನ್ನು ಅಂಕಿಅಂಶಗಳು ತೋರಿಸುತ್ತವೆ. ನಗರ ಭಾಗಗಳಲ್ಲಿ, ಪ್ರತಿ ವ್ಯಕ್ತಿಗೆ ಆಸ್ಪತ್ರೆಗೆ ದಾಖಲಾಗುವ ವೆಚ್ಚ 1,879 ರೂ.ಗಳಾಗಿದೆ. ಇದರಲ್ಲಿ 1,146 ರೂ. ಅಥವಾ ಶೇ. 60.9 ರಷ್ಟು ಜೇಬಿನಿಂದ ವ್ಯಯಿಸಿರುವುದು ಗೊತ್ತಾಗಿದೆ.

ಕೇರಳದಲ್ಲಿ ಹುಟ್ಟಿದ ಮಗುವಿಗಿಂತ ದೇಶದ ಇತರೆಡೆ ಜನಿಸಿದ ಮಗು ಕಡಿಮೆ ಆರೋಗ್ಯ ಸುರಕ್ಷೆ ಹೊಂದಿದೆ ಎಂದು ಹೇಳುತ್ತಿಲ್ಲ.
ಆಸ್ಪತ್ರೆಯ ಗುಣಮಟ್ಟ, ಸಿಬ್ಬಂದಿಯ ಹೊಣೆಗಾರಿಕೆ, ವ್ಯವಸ್ಥೆಯ ವಿನ್ಯಾಸ ಎಲ್ಲಿಯವರೆಗೂ ಸುಧಾರಣೆ ಕಾಣುವುದಿಲ್ಲವೋ ಅಲ್ಲಿಯವರೆಗೂ ಬಜೆಟ್‍ನಲ್ಲಿ ಹಣ ಹಂಚಿಕೆ ಮಾಡಿದ್ದರೂ ಬಳಕೆ ಕಡಿಮೆ ಇದೆ.

ಇವೆಲ್ಲವನ್ನೂ ಕಂಡಾಗ ಸರ್ಕಾರ ತನ್ನ ಆಯವ್ಯಯದಲ್ಲಿ ಹಣ ಹೆಚ್ಚಿಸಿ ಮೀಸಲಿಟ್ಟರೆ ಸಾಲದು , ಆರೋಗ್ಯ ವ್ಯವಸ್ಥೆಯನ್ನು ಹೇಗೆ ವಿನ್ಯಾಸಗೊಳಿಸಬೇಕೆಂದು ಚಿಂತಿಸಿಸುವ ಅಗತ್ಯ ಇರುವುದನ್ನು ತೋರಿಸುತ್ತದೆ. ಅಂದರೆ ಆಯವ್ಯಯದಲ್ಲಿ ಹಂಚಿಕೆಯಾಗುವ ಹಣ ಆರೋಗ್ಯ ಕೇಂದ್ರಗಳಿಗೆ ತಲುಪಬೇಕು. ಅದರಲ್ಲೂ ಮುಖ್ಯವಾಗಿ ರೋಗಿಗೆ ತಲುಪುವಂತಾಗಬೇಕು .

ಇನ್ನೂ ವೈದ್ಯಕೀಯ ಶಿಕ್ಷಣದಲ್ಲಿಯೂ ತನ್ನ ಹೂಡಿಕೆಯನ್ನು ಸರ್ಕಾರ ಹೆಚ್ಚಿಸಿದೆ. 2014ರಿಂದ ಇಲ್ಲಿಯವರೆಗೂ 157 ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ.

ಇದರಲ್ಲಿ 108 ಕಾರ್ಯ ನಿರ್ವಹಿಸುತ್ತಿರುವುದನ್ನು 2024 ರಲ್ಲಿ ಸರ್ಕಾರ ಲೋಕಸಭೆಗೆ ತಿಳಿಸಿತ್ತು . 2026-27 ರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣಕ್ಕಾಗಿ 1,877 ಕೋಟಿಗಳಷ್ಟು ಮೀಸಲಿಟ್ಟಿದೆ . ಸಹಾಯಕ ಆರೋಗ್ಯ ವೃತ್ತಿಪರರ AHP ಸಂಸ್ಥೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದೆಂದು ಆಯವ್ಯಯ ಭಾಷಣದಲ್ಲಿ ಹೇಳಿದ್ದರು.

ಅಂದರೆ 5 ವರ್ಷಗಳಲ್ಲಿ 10ಸಾವಿರ AHPಗಳನ್ನು ಸ್ಥಾಪಿಸುವ ಗುರಿ ಇಟ್ಟುಕೊಂಡಿದ್ದಾರೆ. ಅಲ್ಲದೆ , 10 ವಿಭಾಗಗಳಲ್ಲಿ ಖಾಸಗಿ ಮತ್ತು ಸರ್ಕಾರಿ ವಲಯಗಳ ಹೊಸ AHP ಸಂಸ್ಥೆಗಳನ್ನು ತೆರೆಯುವ ಉದ್ದೇಶವನ್ನು ಹೊಂದಿದ್ದಾರೆ .

ಇಷ್ಟಲ್ಲದೆ ಸರ್ಕಾರ 3 ಹೊಸ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳನ್ನು , 3 ಅಖಿಲ ಭಾರತ ಆಯುರ್ವೇದ ಸಂಸ್ಥೆಗಳನ್ನು ಮತ್ತು 1 ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸುವುದಾಗಿಯೂ ಹೇಳಿದ್ದರು .

ನೆನಪಿಡಿ, ಆರೋಗ್ಯವು ಖರ್ಚಲ್ಲ, ಬದಲಾಗಿ ದೇಶದ ಭವಿಷ್ಯಕ್ಕಾಗಿ ಹೂಡುವ ಹೂಡಿಕೆ . ಜನರು ಆರೋಗ್ಯವಾಗಿದ್ದರೆ ಮಾತ್ರ ನಮ್ಮ ದೇಶವು ಬಲಶಾಲಿ ಮಾತ್ರವಲ್ಲದೆ ಹೆಚ್ಚು ಸಮೃದ್ಧತೆಯಿಂದ ಕೂಡಿರುತ್ತದೆ.

ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶವಾಗಲು ಬಯಸಿದರೆ, ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡುವುದು ಬಹಳ ಮುಖ್ಯ. ಜನರ ಆರೋಗ್ಯ ಸುಧಾರಿಸಿದರೆ, ದೇಶವು ಸ್ವಯಂಚಾಲಿತವಾಗಿ ಪ್ರಗತಿ ಹೊಂದುತ್ತದೆ.

ಇವೆಲ್ಲವನ್ನೂ ನಿಮ್ಮ ಮುಂದಿಡುವಾಗ, ನನಗೆ ವಿನ್ಸಟನ್ ಚರ್ಚಿಲ್ ಹೇಳಿದ ಮಾತೊಂದು ನೆನಪಾಗುತ್ತಿದೆ. ಅದು “ಭಾರತೀಯರು ಆಳಲು ಅರ್ಹರಲ್ಲ. ಅವರು ಅಳಲು ಅರ್ಹರು” ಎಂದು ಹೇಳಿದ್ದ. 80 ವರ್ಷಗಳಲ್ಲಿ ನಾವಿದನ್ನು ಸುಳ್ಳು ಮಾಡಿದ್ದೇವೆಯೇ?

WhatsApp Image 2025 11 17 at 3.59.52 PM
ಡಾ. ಎಂ ಎಸ್ ಮಣಿ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುದ್ದೇಬಿಹಾಳ | ದಾಸೋಹಿ ರೈತ ಉತ್ಪಾದಕ ಸಹಕಾರಿ ಸಂಘದ ಆರ್ಥಿಕ ಚಟುವಟಿಕೆ: ಗವಿಸಿದ್ದೇಶ್ವರ ಶ್ರೀಗಳಿಂದ ಚಾಲನೆ

ರೈತರೇ ಮಾಲೀಕರಾಗಿ, ರೈತರ ಆರ್ಥಿಕ ಸಬಲೀಕರಣವನ್ನೇ ಕೇಂದ್ರವಾಗಿಟ್ಟುಕೊಂಡು ಅಸ್ತಿತ್ವಕ್ಕೆ ಬಂದಿರುವ ದಾಸೋಹಿ...

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ: ವೈರಲ್ ಆಯ್ತು ರಾಹುಲ್ ಗಾಂಧಿ ‘X’ ಪೋಸ್ಟ್

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ ಎಂದು ಕಾಂಗ್ರೆಸ್ ನಾಯಕ ಹಾಗೂ...

ಗವಿಸಿದ್ದೇಶ್ವರ ಸ್ವಾಮೀಜಿ ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ್ದಾರೆಂಬ ಸುಳ್ಳುಸುದ್ದಿ: ತಪ್ಪಿತಸ್ಥನ ವಿರುದ್ಧ FIR

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಆಹ್ವಾನವನ್ನು...