ಬರದ ಹೊಡೆತಕ್ಕೆ ಕರ್ನಾಟಕ ತತ್ತರ; ₹18 ಸಾವಿರ ಕೋಟಿ ನಷ್ಟ, ಸಿಗುವುದೇ ಕೇಂದ್ರದ ನೆರವು?

Date:

ಕರ್ನಾಟಕ ಮತ್ತೊಮ್ಮೆ ಪ್ರಕೃತಿಯ ಮುನಿಸಿಗೆ ತತ್ತರಿಸಿದೆ. ಮುಂಗಾರು ಕೈಕೊಟ್ಟ ಪರಿಣಾಮ ಬರದ ಛಾಯೆ ಆವರಿಸಿದೆ. ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ. ಮಳೆ ಕೊರತೆಯಿಂದ ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಂಟಾಗಿರುವ ನಷ್ಟದ ಅಂದಾಜು ₹18 ಸಾವಿರ ಕೋಟಿ ಮೀರಿದೆ. ಸದ್ಯ ಕೇಂದ್ರದಿಂದ ಪರಿಹಾರದ ನಿರೀಕ್ಷೆಯಲ್ಲಿರುವ ರಾಜ್ಯಕ್ಕೆ 2023ರ ಬರ ಪರಿಹಾರದ ಅನುಭವವೂ ದೊಡ್ಡ ಸವಾಲಾಗಿದೆ.

- Advertisement -

ಸದ್ಯ ಘೋಷಿಸಲಾಗಿರುವ 101 ತಾಲೂಕುಗಳ ಪೈಕಿ 89 ತಾಲೂಕುಗಳನ್ನು ತೀವ್ರ ಬರಪೀಡಿತ ಎಂದೂ, ಉಳಿದ 12 ತಾಲೂಕುಗಳನ್ನು ಮಧ್ಯಮ ಬರಪೀಡಿತ ಎಂದೂ ವರ್ಗೀಕರಿಸಲಾಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಬರದ ವ್ಯಾಪ್ತಿ ವಿಸ್ತರಿಸಿ, ಬರಪೀಡಿತ ತಾಲೂಕುಗಳ ಸಂಖ್ಯೆ 180 ರಿಂದ 200ರ ಗಡಿ ದಾಟಬಹುದೆಂದು ಸರ್ಕಾರವೇ ಅಂದಾಜಿಸಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ 25ಕ್ಕೂ ಜಿಲ್ಲೆಗಳಲ್ಲಿ ವಾಡಿಕೆಗಿಂತ ತೀವ್ರ ಕಡಿಮೆ ಮಳೆಯಾಗಿದೆ. ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮಳೆಯ ಕೊರತೆ ಶೇಕಡಾ ಐವತ್ತರ ಗಡಿ ದಾಟಿದೆ. ರಾಜಧಾನಿ ಬೆಂಗಳೂರಿನಲ್ಲೂ ಕೂಡ ವಾಡಿಕೆಗಿಂತ ಶೇಕಡಾ ನಾಲುವತ್ತಕ್ಕಿಂತ ಹೆಚ್ಚು ಮಳೆ ಕೊರತೆ ದಾಖಲಾಗಿದೆ. ಕೆಲವು ಪ್ರದೇಶಗಳಲ್ಲಿ ಸತತ ಮೂರರಿಂದ ನಾಲ್ಕು ವಾರಗಳ ಕಾಲ ತೊಟ್ಟು ನೀರು ಬೀಳದೆ, ಬೆಳೆ ಹಾಗೂ ತೋಟಗಾರಿಕಾ ಉತ್ಪಾದನೆ ಶೇಕಡಾ ಐವತ್ತರಷ್ಟು ಕುಸಿಯುವ ಭೀತಿ ಎದುರಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಸರ್ಕಾರ ಹೇಳಿರುವ ₹18 ಸಾವಿರ ಕೋಟಿ ನಷ್ಟವೆಂದರೆ ರೈತರಿಗೆ ನೇರವಾಗಿ ಹಂಚಿಕೆಯಾಗುವ ಪರಿಹಾರದ ಮೊತ್ತವಲ್ಲ. ಬರದಿಂದ ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಉಂಟಾಗಿರುವ ಒಟ್ಟಾರೆ ಆರ್ಥಿಕ ನಷ್ಟದ ಪ್ರಾಥಮಿಕ ಅಂದಾಜು. ಕೇಂದ್ರದಿಂದ ದೊರೆಯುವ ಪರಿಹಾರ ಮಾತ್ರ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ ಅಥವಾ ಎನ್.ಡಿ.ಆರ್.ಎಫ್. ನಿಯಮಾವಳಿಗಳ ಕಠಿಣ ಮಾನದಂಡಗಳ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಇದಕ್ಕೆ 2023ರ ಬರಗಾಲವೇ ಪ್ರತ್ಯಕ್ಷ ಉದಾಹರಣೆಯಾಗಿದೆ. ಅಂದು ರಾಜ್ಯದಲ್ಲಿ ಸುಮಾರು ಮೂವತ್ತೊಂಬತ್ತು ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟ ಸಂಭವಿಸಿತ್ತು. ಆಗ ಕರ್ನಾಟಕ ಸರ್ಕಾರ ₹18,171 ಕೋಟಿ ಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಆದರೆ ತಿಂಗಳುಗಟ್ಟಲೆ ಅನುದಾನ ಬಿಡುಗಡೆಯಾಗದ ಕಾರಣ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾಯಿತು. ಕಾನೂನು ಹೋರಾಟದ ಫಲವಾಗಿ ಕೇಂದ್ರವು ₹3,498 ಕೋಟಿಯಷ್ಟನ್ನು ಬಿಡುಗಡೆ ಮಾಡಿತ್ತು. ಅಂದರೆ ರಾಜ್ಯ ಕೇಳಿದ ಒಟ್ಟು ಮೊತ್ತದ ಐದನೇ ಒಂದು ಭಾಗಕ್ಕಿಂತಲೂ ಕಡಿಮೆ ನೆರವು ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಅದೇ ಹಳೆಯ ಕಥೆ ಮರುಕಳಿಸುವುದೇ ಎಂಬ ಆತಂಕ ರೈತರಲ್ಲಿ ಮತ್ತು ಸರ್ಕಾರದಲ್ಲಿ ಮನೆ ಮಾಡಿದೆ. ₹18 ಸಾವಿರ ಕೋಟಿ ನಷ್ಟವಾಗಿದೆ ಎಂದು ರಾಜ್ಯ ಹೇಳುತ್ತಿರುವಾಗ, ಅದರಲ್ಲಿ ಎಷ್ಟು ಮೊತ್ತಕ್ಕೆ ಕೇಂದ್ರದ ನೆರವು ದೊರೆಯಲಿದೆ ಎಂಬುದು ಈಗ ಕುತೂಹಲದ ವಿಚಾರ.

ಮಳೆ ಕೈಕೊಟ್ಟಾಗ ಅದರ ಪರಿಣಾಮ ಬೆಳೆ ಒಣಗುವುದಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆ, ಗ್ರಾಮೀಣ ಉದ್ಯೋಗದ ಕುಸಿತ, ರೈತರ ಸಾಲದ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳು ಒಂದರ ಹಿಂದೆ ಒಂದರಂತೆ ಎದುರಾಗುತ್ತವೆ. ಈಗಾಗಲೇ ರಾಜ್ಯದ ಸುಮಾರು 2,559 ಗ್ರಾಮ ಪಂಚಾಯಿತಿಗಳಲ್ಲಿ ತೀವ್ರ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂಬ ಅಂದಾಜಿದೆ. ಕೆಲವು ಪ್ರದೇಶಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಇದೇ ವೇಳೆ ರಾಜ್ಯದ ಒಟ್ಟು ಮೇವು ಸಂಗ್ರಹ ಸುಮಾರು 151 ಲಕ್ಷ ಟನ್‌ಗಳಷ್ಟಿದ್ದು, ಸರಾಸರಿ 33 ವಾರಗಳ ಅವಶ್ಯಕತೆಯನ್ನು ಪೂರೈಸುವಷ್ಟು ಸಂಗ್ರಹವಿದೆ ಎನ್ನಲಾಗುತ್ತಿದೆ. ಆದರೆ 40ರಿಂದ 50 ತಾಲೂಕುಗಳಲ್ಲಿ ಈ ಸಂಗ್ರಹ 20 ವಾರಗಳಿಗಿಂತಲೂ ಕಡಿಮೆ ಇರುವುದರಿಂದ ಮುಂದಿನ ತಿಂಗಳುಗಳಲ್ಲಿ ಮೇವು ಸಮಸ್ಯೆಯೂ ಗಂಭೀರವಾಗುವ ಸಾಧ್ಯತೆಯಿದೆ.

ಬರಪೀಡಿತ ರೈತರಿಗೆ ಬೆಳೆ ವಿಮೆ ಒಂದು ಆಸರೆಯಾಗಬಹುದು ಎಂಬ ನಿರೀಕ್ಷೆಯಿದೆ. ಈ ಬಾರಿ ಸುಮಾರು 49 ಲಕ್ಷ ರೈತರು ಬೆಳೆ ವಿಮೆ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಆದರೆ ವಿಮಾ ಪರಿಹಾರ ಮತ್ತು ಸರ್ಕಾರದ ಬರ ಪರಿಹಾರ ಒಂದೇ ಅಲ್ಲ. ಬೆಳೆಯ ನಷ್ಟದ ಪ್ರಮಾಣ, ವಿಮಾ ಕಂಪನಿಗಳ ನಿಬಂಧನೆಗಳು ಮತ್ತು ತಾಂತ್ರಿಕ ಮಾನದಂಡಗಳ ಆಧಾರದ ಮೇಲೆಯೇ ವಿಮಾ ಮೊತ್ತ ವಿತರಣೆಯಾಗುತ್ತದೆ. ಹೀಗಾಗಿ ರೈತರು ಅನುಭವಿಸಿದ ಸಂಪೂರ್ಣ ನಷ್ಟಕ್ಕೆ ಪರಿಹಾರ ಸಿಗುವುದು ಅನುಮಾನವೇ. ಈ ಬಿಕ್ಕಟ್ಟಿನ ನಡುವೆ ರಾಜ್ಯ ಸರ್ಕಾರ ‘ನೇಗಿಲ ಯೋಗಿ ಯೋಜನೆ’ಯನ್ನು ಘೋಷಿಸಿದೆ. 3 ಎಕರೆ ಅಥವಾ ಅದಕ್ಕಿಂತ ಕಡಿಮೆ ಜಮೀನು ಹೊಂದಿದ್ದು, ಬಡತನ ಅಥವಾ ಅಸಮರ್ಥತೆಯಿಂದ ಉಳುಮೆ ಮಾಡಲಾಗದೆ ಜಮೀನು ಪಾಳುಬಿಡುವ ರೈತರಿಗೆ ಉಚಿತವಾಗಿ ಟ್ರ್ಯಾಕ್ಟರ್ ಅಥವಾ ಎತ್ತುಗಳ ಮೂಲಕ ಉಳುಮೆ ಮಾಡಿಸಿಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಪ್ರಸಕ್ತ ಸಾಲಿನಲ್ಲಿ ಪ್ರಾಯೋಗಿಕವಾಗಿ ಪ್ರತಿ ಜಿಲ್ಲೆಯ ಒಂದೊಂದು ತಾಲೂಕಿನಲ್ಲಿ ಜಾರಿಗೆ ಬರುವ ಈ ಯೋಜನೆಗಾಗಿ ನೂರ ಐವತ್ತಕ್ಕೂ ಅಧಿಕ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

ಉಳುಮೆ ಮಾಡಿಕೊಡುವುದರ ಜತೆಗೆ ಬೀಜ, ನೀರು, ಮಾರುಕಟ್ಟೆ ಬೆಲೆ ಮತ್ತು ಜೀವನಾಧಾರದ ಭದ್ರತೆಗೂ ಆದ್ಯತೆ ನೀಡಲಾಗುತ್ತಿದೆ. ಇದರೊಂದಿಗೆ ರೈತರ ದೀರ್ಘಾವಧಿ ಆದಾಯ ಹೆಚ್ಚಿಸುವ ದೃಷ್ಟಿಯಿಂದ ಸರ್ಕಾರ ‘ತೇಗ ಸಿರಿ’ ಯೋಜನೆಯನ್ನು ಘೋಷಿಸಿದೆ. ರಸ್ತೆ ಬದಿಗಳಲ್ಲಿ ಅರಣ್ಯ ಇಲಾಖೆಯ ಮೂಲಕ ತೇಗದ ಸಸಿಗಳನ್ನು ನೆಟ್ಟು, ಮರ ಬೆಳೆದ ಬಳಿಕ ಬರುವ ಲಾಭದಲ್ಲಿ ಶೇಕಡಾ ಎಪ್ಪತ್ತರಷ್ಟು ಭಾಗವನ್ನು ರೈತರಿಗೆ ನೀಡುವ ಯೋಜನೆ ಇದಾಗಿದೆ. ಇದಕ್ಕಾಗಿ ₹493 ಕೋಟಿ ಮೀಸಲಿಡಲಾಗಿದೆ. ಆದರೆ ತೇಗದಂತಹ ಮರಗಳು ಆದಾಯ ನೀಡಲು ಹಲವು ವರ್ಷಗಳೇ ಬೇಕಾಗುವುದರಿಂದ ಪ್ರಸ್ತುತ ಬೆಳೆ ಕಳೆದುಕೊಂಡು ಬೀದಿಬದಿ ನಿಂತಿರುವ ರೈತನ ತಕ್ಷಣದ ಹಸಿವು ಮತ್ತು ಸಾಲದೂಟಕ್ಕೆ ಇದು ಪರಿಹಾರವಾಗಲಾರದು. ರೈತರ ಮೇಲಿನ ಸಾಲದ ಹೊರೆ ವಿಪರೀತವಾಗಿ ಹೆಚ್ಚಾಗಿದ್ದು, ಸಾಲ ಮನ್ನಾದ ಕುರಿತಾದ ಚರ್ಚೆಗಳೂ ಮುನ್ನೆಲೆಗೆ ಬಂದಿವೆ.

ಇದನ್ನೂ ಓದಿ: ತುಮಕೂರು | 33 ಡಿಗ್ರಿ ತಲುಪಿದ ಉಷ್ಣಾಂಶ; ರೈತರಿಗೆ ಬೆಳೆ ರಕ್ಷಣೆಯೇ ಸವಾಲು

ಕರ್ನಾಟಕದಲ್ಲಿ ಬರ ಎನ್ನುವುದು ಹೊಸ ಸಂಕಷ್ಟವಲ್ಲ. ಕೆಲ ವರ್ಷ ಅತಿವೃಷ್ಟಿ, ಮತ್ತೊಂದು ವರ್ಷ ಮಳೆ ಕೊರತೆ. ಇಂತಹ ಸಂದರ್ಭದಲ್ಲಿ ಪ್ರತಿಬಾರಿ ಬರ ಘೋಷಿಸಿ ಪರಿಹಾರ ನೀಡುವುದಷ್ಟೇ ದೀರ್ಘಕಾಲಿಕ ಪರಿಹಾರವಾಗಲು ಸಾಧ್ಯವಿಲ್ಲ. ಮಳೆನೀರಿನ ಸಂಗ್ರಹ, ಕೆರೆಗಳ ಪುನಶ್ಚೇತನ, ಅಂತರ್ಜಲ ಮರುಪೂರಣ, ಸೂಕ್ಷ್ಮ ನೀರಾವರಿ, ಬರ ನಿರೋಧಕ ಬೆಳೆ ಪದ್ಧತಿ ಮತ್ತು ಸ್ಥಳೀಯ ಜಲಮೂಲಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ವಿಶೇಷವಾಗಿ ಕಡಿಮೆ ಮಳೆಯ ಪ್ರದೇಶಗಳಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುದನ್ನು ಮಾರುಕಟ್ಟೆ ಬೇಡಿಕೆಯಷ್ಟೇ ಅಲ್ಲ, ಲಭ್ಯವಿರುವ ನೀರಿನ ಪ್ರಮಾಣವನ್ನೂ ಆಧರಿಸಿ ನಿರ್ಧರಿಸುವ ವ್ಯವಸ್ಥೆ ಅಗತ್ಯ. ರಾಜ್ಯ ಸರ್ಕಾರ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸುವುದರ ಜತೆಗೆ, ಪ್ರಕ್ರಿಯೆ ವೇಗವಾಗಿ ನಡೆಯುವಂತೆ ಒತ್ತಡ ಹೇರಬೇಕಿದೆ. ಕೇಂದ್ರದ ನೆರವು ಬರುವವರೆಗೆ ರಾಜ್ಯದ ಸ್ವಂತ ಸಂಪನ್ಮೂಲಗಳಿಂದ ಸಾಧ್ಯವಾದಷ್ಟು ತುರ್ತು ನೆರವನ್ನು ಒದಗಿಸುವುದು, ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಎದುರಾಗುವ ಪ್ರದೇಶಗಳನ್ನು ಮುಂಚಿತವಾಗಿ ಗುರುತಿಸುವುದು ಕೂಡ ಮುಖ್ಯವಾಗುತ್ತದೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಕಲಬುರಗಿಯಲ್ಲಿ ಎಸ್ಎಫ್ಐ 17ನೇ ರಾಜ್ಯ ಸಮ್ಮೇಳನ: ಬಸವರಾಜ ಎಸ್

ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸಲು, ಕೋಮು ಸೌಹಾರ್ದತೆಗಾಗಿ,...

ಉದ್ಯೋಗ ಮಾಹಿತಿ: SSLC, ITI ಪಾಸಾದವರಿಗೆ ಅವಕಾಶ; BHELನಲ್ಲಿ 660 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರಿ ವಲಯದ 'ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್' (BHEL) ಸಂಸ್ಥೆ ಬೃಹತ್...

ಬಾಗಲಕೋಟೆ | ಆಶಾ ಕಾರ್ಯಕರ್ತೆಯರಿಗೆ ರೂ.15000 ಮಾಸಿಕ ವೇತನ ನಿಗದಿಪಡಿಸಲು ಆಗ್ರಹ

ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿರುವ ಸಂದರ್ಭದಲ್ಲಿ, ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ...