ಕಾವೇರಿ ಕಣಿವೆಯಲ್ಲಿ ಅಪರೂಪದ ‘ಕಾಗೆ ಮೀನು’ ಪತ್ತೆ

Date:

ಕೊಚ್ಚಿಯ ವಿಜ್ಞಾನಿಗಳ ತಂಡ ಕಾವೇರಿ ಕಣಿವೆಯಲ್ಲಿ ಅಳಿವಿನಂಚಿನ ಅಪರೂಪದ ಮೀನು ಪತ್ತೆಯಾಗಿದ್ದು, ಕಾಗೆ ಮೀನು ಅಥವಾ ಲೆಬಿಯೊ ಕಾಗೆ ಎಂಬ ಹೆಸರಿನಿಂದ ಗುರುತಿಸಲಾಗಿರುವ ಈ ಮೀನಿನ ಪ್ರಭೇದವವು ಸೈಪ್ರಿನಾಡ್‌ ಸಿಹಿನೀರಿನ ಕುಟುಂಬಕ್ಕೆ ಸೇರಿದೆ.

- Advertisement -

ಮಂಡ್ಯದ ಗಗನಚುಕ್ಕಿ ಮತ್ತು ಚಾಮರಾಜನಗರದ ಭರಚುಕ್ಕಿ ಜಲಪಾತಗಳ ಕಣಿವೆಯಲ್ಲಿ ಈ ಮೀನುಗಳು ಕಂಡುಬಂದಿದ್ದು, ಕಡುಗಪ್ಪು ಬಣ್ಣದಿಂದ ಕಂಗೊಳಿಸುವ ಈ ಮೀನು ಬರೋಬ್ಬರಿ ಒಂದು ಕೆಜಿ ತೂಕವಿರುತ್ತದೆ ಎನ್ನಲಾಗಿದೆ. ಈ ಮೀನು ಕಲ್ಬಸು ಮೀನಿನ ತಳಿಯನ್ನೇ ಹೋಲುತ್ತದೆ. ಆದ್ದರಿಂದ ಜನ ಕಲ್ಬಸು ಎಂದೇ ಭಾವಿಸಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಇದನ್ನೂ ಓದಿ> ಕಾವೇರಿ ಆರತಿಗಲ್ಲ – ನದಿ ಸಂರಕ್ಷಣೆಗೆ ಆದ್ಯತೆ ಕೊಡಿ!

ಕೊಚ್ಚಿಯ ರಾಹುಲ್‌ ಜಿ ಕುಮಾರ್‌, ಕೃಷ್ಣ ಪ್ರಸೂನ್‌, ವಿ ಬಶೀರ್‌, ಚಿಕ್ಕಮಗಳೂರಿನ ಚರಣ್‌ ರವಿ ವಿಜ್ಞಾನಿಗಳ ತಂಡ ಹುಡುಕಿರುವ ಈ ಮೀನು ತಳಿಯ ಕುರಿತ ಸಂಶೋಧನ ಪ್ರಬಂಧವು ʼಜರ್ನಲ್‌ ಆಫ್‌ ಫಿಶ್‌ ಬಯಲಾಜಿʼಯಲ್ಲಿ ಪ್ರಕಟವಾಗಿದೆ. 2019 ರಿಂದ ಸಂಶೋಧನಾ ನಿರತರಾಗಿದ್ದ ಕೊಚ್ಚಿಯ ಐಸಿಎಆರ್‌ ವಿಜ್ಞಾನಿಗಳ ತಂಡಕ್ಕೆ ಪ್ರಸ್ತುತ ವರ್ಷಾರಂಭದಲ್ಲಿ ಈ ಮೀನು ಸಿಕ್ಕಿದೆ.

Advertisements

“ಮೀನಿನ ಬಣ್ಣ ಕಪ್ಪಗಿರುವುದರಿಂದ ಜನರು ಇದನ್ನು ಹೆಚ್ಚಾಗಿ ಸೇವಿಸುವುದಿಲ್ಲ. ಈ ಕಾರಣದಿಂದ ಇಲಾಖೆಯು ಇದರ ಮರಿ ಉತ್ಪಾದನೆಗೆ ಮುಂದಾಗಿಲ್ಲ. ಸುಮಾರು ಹತ್ತು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಈ ತಳಿ ಪ್ರಸ್ತುತ ಅಳಿವಿನಂಚಿನಲ್ಲಿದೆ” ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

4 ವರ್ಷಗಳಲ್ಲಿ 111 ಸಂಸದರು, ಶಾಸಕರ ಪಕ್ಷಾಂತರ: ಶೇ. 26ರಷ್ಟು ನಾಯಕರನ್ನು ಸೇರಿಸಿಕೊಂಡ ಬಿಜೆಪಿ!

ದೇಶದ ರಾಜಕೀಯ ಕ್ಷೇತ್ರದಲ್ಲಿ ಜನಪ್ರತಿನಿಧಿಗಳ ಪಕ್ಷಾಂತರ ಪರ್ವ ತಡೆಯಿಲ್ಲದೆ ಮುಂದುವರಿದಿದೆ. ಅದರಲ್ಲೂ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ...

ಮಳೆ ಅಬ್ಬರ: ಉತ್ತರ ಪ್ರದೇಶದಲ್ಲಿ 10 ಮಂದಿ ಸಾವು; ಒಡಿಶಾದಲ್ಲಿ ಪ್ರವಾಹ

ದೇಶದ ಹಲವು ರಾಜ್ಯಗಳಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಉತ್ತರ ಪ್ರದೇಶ...

26 ಬಾರಿ ಸೋತರೂ ಕುಗ್ಗದ ಛಲ; 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕ ಹುದ್ದೆ ಪಡೆದ ವೃದ್ಧ

ಸರಿಯಾದ ಪ್ರಯತ್ನ ಮತ್ತು ಛಲವಿದ್ದರೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು...