ಹೊಸ ಪುಸ್ತಕ | ಕಂಚ ಐಲಯ್ಯ ಅವರ ʼಶೂದ್ರ ಬಂಡಾಯʼ ಪುಸ್ತಕ ಭಾನುವಾರ ಬಿಡುಗಡೆ

Date:

ಇದೇ ಭಾನುವಾರ ಬೆಂಗಳೂರಿನ ಕಸಾಪದಲ್ಲಿ ಬೆಳಿಗ್ಗೆ 10:30ಕ್ಕೆ ಬಿಡುಗಡೆಯಾಗಲಿರುವ ಕಂಚ ಐಲಯ್ಯ ಅವರ ‘ಶೂದ್ರ ಬಂಡಾಯ’ ಕೃತಿಗೆ ಅವರೇ ಬರೆದಿರುವ ಸುದೀರ್ಘ ಮುನ್ನುಡಿಯ ಒಂದು ಭಾಗ ಇಲ್ಲಿದೆ. ಕನ್ನಡಕ್ಕೆ ಜಯಲಕ್ಷ್ಮಿ ಬಿ ಅನುವಾದಿಸಿದ್ದಾರೆ. ಜೀರುಂಡೆ ಪ್ರಕಾಶನ ಹೊರತಂದಿರುವ ಈ ಕೃತಿಯನ್ನು ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಲಿದ್ದಾರೆ. ರಾಜಕೀಯ ವಿಶ್ಲೇಷಕ ಎ ನಾರಾಯಣ ಅವರು ಕೃತಿಯ ಪರಿಚಯ ಮಾಡಲಿದ್ದಾರೆ.

- Advertisement -

“ಜಾತಿವ್ಯವಸ್ಥೆಯ ನಿಜವಾದ ಗೆಲುವು ಬ್ರಾಹ್ಮಣರ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವುದರಲ್ಲಿ ಇಲ್ಲ, ಬದಲಾಗಿ ಕೆಳಜಾತಿಗೆ ಸೇರಿದ ಜನರು ಶ್ರೇಣೀಕರಣದಲ್ಲಿ ತಮ್ಮ ಕೆಳಮಟ್ಟದ ಸ್ಥಾನವನ್ನು ಸಹಜವಾಗಿ ಒಪ್ಪಿಕೊಳ್ಳುವಂತೆ ಅವರ ಪ್ರಜ್ಞೆಯನ್ನು
ರೂಪಿಸುವಲ್ಲಿ ಅಡಗಿದೆ.”

ಮಂಡಲ್ ಆಯೋಗದ ವರದಿ, 1980, ಭಾಗ 1, ಅಧ್ಯಾಯ 4, ಪುಟ 14. ಈ ಪುಸ್ತಕವು ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯ ಸಂಪೂರ್ಣವಾದ ಹೊಸ ಇತಿಹಾಸವನ್ನು ಓದುಗರ ಮುಂದಿಡುತ್ತದೆ. ಇದು ಭಾರತದ ಶೂದ್ರ/ ದಲಿತ/
ಆದಿವಾಸಿ ಶಕ್ತಿಯ ಕುರಿತು ಹೊಸ ದಾಖಲೆಗಳನ್ನು ಮುಂದಿಡುವ ಗುರಿ ಹೊಂದಿದೆ; ಹರಪ್ಪ ನಾಗರಿಕತೆಯಿಂದಲೂ ಅವರ ಅಂತಃಸಂಬಂಧಗಳು ಐತಿಹಾಸಿಕವಾಗಿ ಮಹತ್ವದ್ದಾಗಿವೆ. ಅವರು ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯ ತಳಹದಿಯನ್ನು ನಿರ್ಮಿಸಿದ ಏಕರೂಪೀ ಸಾಮಾಜಿಕ ಶಕ್ತಿಯಾಗಿದ್ದರು. ಒಂದು ಜನಾಂಗವಾಗಿ ಮತ್ತು ಸಂಸ್ಕೃತಿಯಾಗಿ
ಪೂರ್ವ ಇಂಡೋ-ಆರ್ಯನ್ನರು ಪಶುಪಾಲನೆ ಮತ್ತು ಕೃಷಿ ಅರ್ಥವ್ಯವಸ್ಥೆಯನ್ನು ನಿರ್ಮಿಸಿದ್ದರು, ಆದರೆ ಬ್ರಾಹ್ಮಣರ ಪ್ರಾಚೀನ ಸಂಸ್ಕೃತ ಗ್ರಂಥಗಳಾದ ವೇದ, ಉಪನಿಷತ್, ರಾಮಾಯಣ, ಮಹಾಭಾರತಗಳಲ್ಲಿ ಈ ಕೊಡುಗೆಗಳಿಗೆ ಯಾವ
ಸ್ಥಾನವನ್ನೂ ನೀಡಲಾಗಿಲ್ಲ. ಈ ಗ್ರಂಥಗಳು ಕೇವಲ ಆರ್ಯನ್ನರ ಯುದ್ಧ ನಾಗರಿಕತೆಯನ್ನು ಮಾತ್ರ ಉಲ್ಲೇಖಿಸಿ, ಭಾರತದ ಶೂದ್ರ/ದಲಿತ/ಆದಿವಾಸಿಗಳ ಕಾರ್ಮಿಕ ಶಕ್ತಿ ಮತ್ತು ಉತ್ಪಾದನಾ ತಂತ್ರಜ್ಞಾನಗಳ ಇತಿಹಾಸವನ್ನು ಹೊರಗಿಟ್ಟು ಅವರನ್ನು ಶೂದ್ರರು, ಬುದ್ಧಿಹೀನರು ಮತ್ತು ಕೀಳುಮಟ್ಟದ ಮನುಷ್ಯರೆಂತಲೂ ಖಂಡಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಶ್ರಮ ಮತ್ತು ಉತ್ಪಾದನೆಯು ಇವರ ಸಂಸ್ಕøತಿಯಲ್ಲಿ ಅಪವಿತ್ರವಾಗಿದ್ದು, ಋಗ್ವೇದದ ಬರಹಗಾರರು ಇದನ್ನು ಗೌರವಕ್ಕೆ ಅರ್ಹವಲ್ಲದ, ಕ್ರೋಢೀಕರಿಸಲು ಅಸಾಧ್ಯವಾದ ಮತ್ತು ಆಚರಿಸಲು ಯೋಗ್ಯವಲ್ಲದ್ದೆಂದು ಪರಿಗಣಿಸಿದ್ದರು. ಹೀಗೆ ಇವರು ಬಳಸುವ ಮೊದಲೇ ಬಹುಶಃ ಪೂರ್ವ ಋಗ್ವೇದದ ಜನರು ಶೂದ್ರ ಎಂಬ ಹೆಸರನ್ನು ಉತ್ಪಾದಕ ಸಮುದಾಯವನ್ನು ಸೂಚಿಸಲು ಬಳಸಿದ್ದರು. ಶೂದ್ರರ ಶ್ರಮ ಶಕ್ತಿ ಮತ್ತು ಉತ್ಪಾದನಾ ನಾಗರಿಕತೆಯ ಸಾಮರ್ಥ್ಯವು ತಮ್ಮ ಯುದ್ಧ ಮತ್ತು ಹಿಂಸೆಯ ಸಂಸ್ಕೃತಿಗೆ ಪ್ರತಿಕೂಲವೆಂದು ಅವರು ಪರಿಗಣಿಸಿದ್ದರು. ಪ್ರಸ್ತುತ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಾರತೀಯ ಜನತಾ ಪಕ್ಷ ವೇದಗಳ ಸಾಂಸ್ಕೃತಿಕ ಮತ್ತು ನಾಗರಿಕತೆಗಳ ಇತಿಹಾಸವನ್ನು ಸಕಾರಾತ್ಮಕವಾಗಿ ಹೇರಲು ಹೊರಟಿದೆಯೋ ಅದರಲ್ಲಿ ಭಾರತದ ಶೂದ್ರ/ ದಲಿತ/ ಆದಿವಾಸಿಗಳ ಇತಿಹಾಸದ ಬಗ್ಗೆ ಏನನ್ನೂ ವಿಚಾರ ಮಾಡಿಲ್ಲ. ದುರದೃಷ್ಟವಶಾತ್, ಶೂದ್ರ/ ದಲಿತ/ ಆದಿವಾಸಿ ಬುದ್ಧಿಜೀವಿಗಳು, ಆರ್‌ಎಸ್‍ಎಸ್/ ಬಿಜೆಪಿಯ ನವ ಬ್ರಾಹ್ಮಣವಾದ, ಉತ್ಪಾದಕ ವಿರೋಧಿ ನಿರೂಪಣೆಗಳ ವಿರುದ್ಧ ದಂಗೆ ಏಳಲಿಲ್ಲ. ಮುಖ್ಯವಾಗಿ ಶಾಸ್ತ್ರೀಯ ಬ್ರಾಹ್ಮಣವಾದಿ ವಿಚಾರಗಳಲ್ಲಿ ಆಳವಾಗಿ ಬೇರೂರಿರುವ ಕೃಷಿ ವಿರೋಧಿ ನಿರೂಪಣೆಗಳಲ್ಲಿ ಶೂದ್ರ ಪದವನ್ನು ನಕಾರಾತ್ಮಕವಾಗಿ ಬಳಸಲಾಗಿದೆ. ಪ್ರಸ್ತುತ ಹಿಂದುಳಿದ ವರ್ಗಗಳು (ಓಬಿಸಿಗಳು), ದಲಿತರು ಮತ್ತು ಶೂದ್ರರೆಲ್ಲರೂ ಒಂದು ಐತಿಹಾಸಿಕ, ಉತ್ಪಾದಕ, ಕಾರ್ಮಿಕ ಶಕ್ತಿಯಾಗಿದ್ದಾರೆ. ಶೂದ್ರರು ಮತ್ತು ಅವರ ಇತಿಹಾಸವನ್ನು ಹೊಸದಾಗಿ ಕ್ರಮಬದ್ಧ ರೀತಿಯಲ್ಲಿ ದಾಖಲು ಮಾಡಬೇಕಿದೆ.

2014ರಲ್ಲಿ ಆರ್‌ಎಸ್‍ಎಸ್ ಬಿಜೆಪಿ ಬ್ರಾಹ್ಮಣ ಬನಿಯಾ ಶಕ್ತಿಗಳು ಭಾರತವನ್ನು ಆಳಲು ಆರಂಭಿಸಿದ ನಂತರದಲ್ಲಿ ಶೂದ್ರ ಸಮಾಜದ ಪ್ರಜ್ಞೆಯ ಮೊದಲ ಯಶಸ್ವಿ ಬಂಡಾಯ ನಡೆಯಿತು. ಆರ್‌ಎಸ್‍ಎಸ್/ಬಿಜೆಪಿಯ ಬುಲ್ಡೋಜರ್ ಆಳ್ವಿಕೆಯ ಕುರಿತು ನಡೆದ ಈ ಹೋರಾಟವನ್ನು ನಾನು ಅತ್ಯಂತ ಜಾಗರೂಕತೆಯಿಂದ ಅಧ್ಯಯನ ಮಾಡಿದ ನಂತರ ನನಗೆ ಶೂದ್ರ ಬಂಡಾಯದ ಶಕ್ತಿಯ ಅರಿವಾಯಿತು. ಈ ಅರಿವಿನ ಫಲವಾಗಿಯೇ ಈ ಪುಸ್ತಕ ಹೊರಬಂದಿದೆ.

ದೆಹಲಿಯ ಆರ್‌ಎಸ್‍ಎಸ್/ಬಿಜೆಪಿ ಸರ್ಕಾರದ ಕೃಷಿ ಕಾನೂನಿನ ಮೂಲಕ ಶೂದ್ರ ಕೃಷಿ ಅರ್ಥವ್ಯವಸ್ಥೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಏಕಸ್ವಾಮ್ಯ ಬನಿಯಾ ಒಕ್ಕೂಟಗಳ ಮಹತ್ವಾಕಾಂಕ್ಷೆಯ ವಿರುದ್ಧ ನಡೆದ ರೈತರ ಹೋರಾಟವು ನಿಜಕ್ಕೂ ಅಭೂತಪೂರ್ವ ಆಂದೋಲನವಾಗಿ ಹೊರಹೊಮ್ಮಿತು. ಈ ದಂಗೆಯು ಉತ್ತರ ಭಾರತದ ಶೂದ್ರ ಕೃಷಿವಲಯದ ಸಾಮಾಜಿಕ-ರಾಜಕೀಯ ಪ್ರಜ್ಞೆಗೆ ಹೊಸರೂಪ ನೀಡಿತಲ್ಲದೇ, ಭಾರತಾದ್ಯಂತ ಇದು ಪ್ರತಿಧ್ವನಿಸುವಂತೆ ಮಾಡಿತು. ಭಾರತದ ರಾಜ್ಯಾಡಳಿತದಲ್ಲಿ ಆಹಾರ ಕೃಷಿ ಉತ್ಪಾದನಾ ವಲಯವು ಇಷ್ಟೊಂದು ಪ್ರಜ್ಞಾಪೂರ್ವಕವಾಗಿ ಮತ್ತು ದೃಢವಾಗಿ ಸಂಘಟಿತವಾದದ್ದು ಒಂದು ಐತಿಹಾಸಿಕ ಮೈಲುಗಲ್ಲಾಗಿದೆ. ಬಿಜೆಪಿಯು 2014ರ ಸಾಮಾನ್ಯ ಚುನಾವಣೆಯ ನಂತರ ಮಾರುಕಟ್ಟೆಗಳನ್ನು ಸ್ಥಳೀಯ ಸಂಸ್ಥೆಗಳಿಂದ ಏಕಸ್ವಾಮ್ಯ ಬಂಡವಾಳಶಾಹಿಗಳಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾದ ಅವಧಿಯಿಂದ ಹಿಡಿದು ದೆಹಲಿಯ ಅಧಿಕಾರದ ಚುಕ್ಕಾಣಿ ಹಿಡಿಯುವವರೆಗೂ ಹೆಸರಾಂತ ಉದ್ಯಮಿ ಗೌತಮ್ ಅದಾನಿಯನ್ನೆ ಬೆಂಬಲಿಸುತ್ತಾ ಬಂದಿದ್ದಾರೆ.

ಕಾಂಗ್ರೆಸ್ ಪಕ್ಷ ಮುಸ್ಲಿಂ ಅಲ್ಪ ಸಂಖ್ಯಾತರನ್ನು ಒಲೈಸಲು ತಮ್ಮನ್ನು ನಿರ್ಲಕ್ಷಿಸಿದೆ ಎಂದು ಭಾವಿಸಿ ಉತ್ತರಭಾರತದ ಶೂದ್ರ ಆಹಾರ ಉತ್ಪಾದಕರು ಬಿಜೆಪಿಯನ್ನು ಅಧಿಕಾರಕ್ಕೆ ಬರುವಂತೆ ಬೆಂಬಲಿಸಿದರು. “ದಿ ಶೂದ್ರಾಸ್ ಅಂಡ್ ಡೆಮೊಕ್ರಾಟಿಕ್
ಇಂಡಿಯಾ” ಎಂಬ ನನ್ನ ಪ್ರಬಂಧದಲ್ಲಿ, ಶೂದ್ರರು/ಓಬಿಸಿಗಳು (ಐತಿಹಾಸಿಕವಾಗಿ ಶೂದ್ರ ಸಮುದಾಯದ ಭಾಗವಾಗಿರುವ ಇತರೆ ಹಿಂದುಳಿದ ವರ್ಗಗಳು) ಹೇಗೆ ಕಾಂಗ್ರೆಸ್ಸಿನಿಂದ ಬೇರ್ಪಟ್ಟರು ಎಂಬ ವಿಷಯವನ್ನು ಹೆಚ್ಚು ಪರಿಶೀಲನೆಗೆ ಒಳಪಡಿಸಲಾಗಿದೆ. ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಹೊಂದಿರುವುದರಿಂದ ಹಾಗೂ ದೇಶದ ಮೊದಲ ಆಡಳಿತ ಪಕ್ಷವಾಗಿರುವುದರಿಂದ ಶೂದ್ರರು ಬಹಳ ಕಾಲದಿಂದಲೂ ಪಕ್ಷದೊಳಗೆ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಆದರೆ ಅವರಿಗೆ ಪಕ್ಷದೊಳಗೆ ಘನತೆಯ ಸ್ಥಾನ ಸಿಗದೆ ಇದ್ದುದರಿಂದ ಅವರೆಲ್ಲಾ 1960, 70 ಮತ್ತು 80ರ ಸಮಯದಲ್ಲಿ ಸ್ಥಾಪನೆಗೊಂಡ ಪ್ರಾದೇಶಿಕ ಪಕ್ಷಗಳತ್ತ ಮುಖ ಮಾಡಿದರು. ಈ ರಾಜಕೀಯ ಕುತಂತ್ರದಿಂದ ಅವರಿಗೆ ದೆಹಲಿಯ ಅಧಿಕಾರವಾಗಲೀ ಅಥವ ಅಖಿಲ ಭಾರತ ಮಟ್ಟದ ಪಕ್ಷ ರಚನೆಯಲ್ಲಾಗಲೀ ಒಂದು ಪ್ರತ್ಯೇಕ ಅಸ್ಮಿತೆ ಸಿಗಲಿಲ್ಲ. ಮುಸ್ಲಿಂ ವಿರೋಧಿ ಆರ್‌ಎಸ್‍ಎಸ್/ ಬಿಜೆಪಿಯು ಕಾಂಗೆಸ್ಸಿಗಿಂತ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬಹುದು ಎಂಬ ಭ್ರಮೆಯಿಂದ 2014ರಲ್ಲಿ ಆರ್‌ಎಸ್‍ಎಸ್/ಬಿಜೆಪಿಯು ಅಧಿಕಾರಕ್ಕೆ ಬರುವಂತೆ ಅವರು ಮತದಾನ ಮಾಡಿದರು. ಪಾಶ್ಚಿಮಾತ್ಯ ಶಿಕ್ಷಣ ಪಡೆದವರಿಗೆ ಮನ್ನಣೆ ನೀಡುವ ಕಾಂಗ್ರೆಸ್ಸಿನ ರಚನಾ ವಿನ್ಯಾಸವು ಹೆಸರಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳದ ಶ್ರೀಮಂತ ದ್ವಿಜರಿಗೆ ಮಣೆಹಾಕುತ್ತಿದೆ ಎಂಬುದನ್ನು ಶೂದ್ರ/ ಓಬಿಸಿಗಳು ಮನಗಂಡರು. ಹೆಚ್ಚಾಗಿ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಪಡೆದು ಗ್ರಾಮ, ಕೃಷಿ ಸಂಬಂಧಿತ ಸಾಂಸ್ಕೃತಿಕ ವಾತಾವರಣದಲ್ಲಿದ್ದ ಶೂದ್ರ/ಓಬಿಸಿಗಳು ಇಂಗ್ಲಿಷ್‌ ಮಾತನಾಡುವ ಕಾಂಗ್ರೆಸ್ಸಿನ ಬೌದ್ಧಿಕ ವಲಯವನ್ನು ತಲುಪುವುದು ಕಷ್ಟ ಎಂದು ತಿಳಿದರು.

ಕಾಂಗ್ರೆಸ್ ಪಕ್ಷವು ನೆಹರು ಅವರಿಂದ ಹಿಡಿದು ರಾಹುಲ್ ಗಾಂಧಿವರೆಗೂ ಶೂದ್ರ/ಓಬಿಸಿಗಳಿಗೆ ಕೆಲವೇ ಕೆಲವು ಸ್ಥಾನವನ್ನು ನೀಡಿ ಒಂದು ವಿದೇಶಿ ಶಿಕ್ಷಿತ ಮತ್ತು ಕುಟುಂಬ ಮುನ್ನಡೆಸುವ ಪಕ್ಷವಾಗಿ ಉಳಿದಿದೆ. 2014ರ ಚುನಾವಣೆಯಲ್ಲಿ
ಆರ್‍ಎಸ್‍ಎಸ್/ಬಿಜೆಪಿಯು ಓಬಿಸಿ ಗುರುತಿನಿಂದ ನರೇಂದ್ರ ಮೋದಿಯನ್ನು ಎತ್ತಿ ಹಿಡಿದಾಗ ಮತ್ತು ಸಂಘಟನಾ ಕೌಶಲಗಳನ್ನು ಅಳವಡಿಸಿಕೊಂಡ ನಂತರ ಶೂದ್ರ/ ಓಬಿಸಿಗಳು ಭವಿಷ್ಯದಲ್ಲಿ ತಮಗೆ ಒಳ್ಳೆಯ ದಿನಗಳು ಬರುತ್ತವೆ ಎಂಬ ಭರವಸೆಯಿಂದ ತಮ್ಮ ಮತವನ್ನು ಪ್ರಾದೇಶಿಕ ಮತ್ತು ಇತರ ರಾಷ್ಟ್ರೀಯ ಪಕ್ಷಗಳಿಂದ ಆರ್‌ಎಸ್‍ಎಸ್/ಬಿಜೆಪಿಯತ್ತ ವರ್ಗಾಯಿಸಿಕೊಂಡರು. ಆದರೂ, ಆರ್‌ಎಸ್‍ಎಸ್/ಬಿಜೆಪಿಯು ತಾವು ಅಧಿಕಾರಕ್ಕೆ ಬಂದನಂತರ ಗುಜರಾತಿ ಬನಿಯಾ ಬಂಡವಾಳಶಾಹಿಗಳಿಗೆ ಪೂರ್ತಿ ಋಣಿಯಾಗಿತ್ತು ಹಾಗೂ ಅಲ್ಲಿ ಆರು ವರ್ಷದವರೆಗೂ ಶೂದ್ರ/ಓಬಿಸಿಗಳಿಗೆ ಯಾವ
ಭರವಸೆಯೂ ಸಿಗಲಿಲ್ಲ. ಕೃಷಿ ಕಾನೂನು ಬಿಜೆಪಿಯ ನಿಜವಾದ ಮುಖವನ್ನು ಬಯಲು ಮಾಡಿತು ಮತ್ತು ಜನಹಿತದಲ್ಲಿ ಆಸಕ್ತಿಯೇ ಇಲ್ಲದ ಅವರು ರಾಷ್ಟ್ರೀಯತೆಯನ್ನು ಕ್ರೋನಿ ಬಂಡವಾಳಶಾಹಿಗಳ ಬೊಕ್ಕಸವನ್ನು ತುಂಬಿಸಲು ಬಳಕೆ ಮಾಡಿದರು.

“ಕೃಷಿ ಮಸೂದೆಗಳೆಂದೇ ಹೆಚ್ಚಾಗಿ ಕರೆಯುವ 2020ರ ಭಾರತೀಯ ಕೃಷಿ ಕಾಯಿದೆಯು ಭಾರತದ ಸಂಸತ್ತಿನಲ್ಲಿ ಸೆಪ್ಟೆಂಬರ್ 2020ರಲ್ಲಿ ಜಾರಿಗೆ ತರಲು ಹೊರಟ ಮೂರು ಕಾಯಿದೆಗಳ ಮೊತ್ತವಾಗಿದೆ. ಇದನ್ನು ಲೋಕಸಭೆಯು ಸೆಪ್ಟೆಂಬರ್ 17,
2020ರಲ್ಲಿ ಮತ್ತು ರಾಜ್ಯಸಭೆಯು ಸೆಪ್ಟೆಂಬರ್ 20, 2020ರಲ್ಲಿ ಅಂಗೀಕರಿಸಿತು. ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೆಪ್ಟೆಂಬರ್ 27, 2020ರಲ್ಲಿ ಇದನ್ನು ಅಂಗೀಕರಿಸಿದರು.” ಎರಡೂ ಸದನದಲ್ಲಿ ಕೃಷಿ ಕಾನೂನು ಜಾರಿ ಮಾಡಿದ ನಂತರ ಶೂದ್ರ ರೈತ ಚಳವಳಿಯು ಅದೇ ದಿನ ಪ್ರಾರಂಭವಾಯಿತು ಮತ್ತು ಅದು ಅವರು ಮಸೂದೆಯನ್ನು ಹಿಂತೆಗೆದುಕೊಳ್ಳುವವರೆಗೂ ಅಂದರೆ ಡಿಸೆಂಬರ್ 2021ರವರೆಗೂ ಮುಂದುವರಿಯಿತು. ರೈತರು, ಮುಖ್ಯವಾಗಿ ಶೂದ್ರರು ಈ ದಂಗೆಯಲ್ಲಿ ಗೆದ್ದನಂತರ, ಆರ್‌ಎಸ್‍ಎಸ್/ಬಿಜೆಪಿಯ ಕೇಂದ್ರ ಸರ್ಕಾರ ತನ್ನ ನೈತಿಕ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿತು.

ಈ ಪುಸ್ತಕವು ಕೃಷಿ ಕಾಯಿದೆ ಬಗ್ಗೆ ಅಲ್ಲವಾದ್ದರಿಂದ, ನಾನು ಈ ಮೂರು ಕೃಷಿ ಕಾಯಿದೆಯಲ್ಲಿರುವ ವಿಷಯಗಳ ಬಗ್ಗೆ ಚರ್ಚಿಸುವುದಿಲ್ಲ. ಇದು ಹಿಂದುತ್ವದ ಕೇಂದ್ರ ಸರ್ಕಾರದ ವಿರುದ್ಧ ಯಶಸ್ವಿಯಾಗಿ ದಂಗೆ ಎದ್ದ ಶೂದ್ರರ ಐತಿಹಾಸಿಕ ಪ್ರಜ್ಞೆಯ ಬಗ್ಗೆ ಚರ್ಚಿಸುತ್ತದೆ. ಕೃಷಿ ಕಾಯಿದೆ ಮತ್ತು ಬ್ರಾಹ್ಮಣ-ಬನಿಯಾ, ಹಿಂದುತ್ವ ಅಜೆಂಡಾದ ವಿರುದ್ಧ ನಡೆದ ದಂಗೆಯು ಮೊಟ್ಟಮೊದಲ ಬಾರಿಗೆ ಹೊಸ ಶೂದ್ರ ಅಸ್ಮಿತೆಯನ್ನು ಪ್ರದರ್ಶಿಸಿದೆ. ಐತಿಹಾಸಿಕ ವೈದಿಕ ಧರ್ಮದ ವಿರುದ್ಧ ತನ್ನದೇ ಆದ ಕೃಷಿ ಆಧಾರಿತ ತಾತ್ವಿಕ ನಿಲುವಿನೊಂದಿಗೆ ಅವರು ಭಾರತದ ಭವಿಷ್ಯಕ್ಕೆ ಹೊಸ ದಾರಿ ತೋರಿದರು.
ಇದು 1990ರಲ್ಲಿ ಆರಂಭವಾದ ಮಂಡಲ್ ಕ್ರಾಂತಿ ಆಳವಾಗಿ ಬೇರುಬಿಟ್ಟಿರುವುದರ ಪರಿಣಾಮವಾಗಿದೆ. ಆರ್‌ಎಸ್‍ಎಸ್/ಬಿಜೆಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದ್ವಿಜ ಶಕ್ತಿಗಳು ಮತ್ತು ಕಾಂಗ್ರೆಸ್‍ನ ರಾಜೀವ್ ಗಾಂಧಿಯು ಮಂಡಲ್ ಮೀಸಲಾತಿಯನ್ನು ವಿರೋಧಿಸಿದರು. 2020ರ ಹೊತ್ತಿಗೆ ಮಂಡಲ್ ಕ್ರಾಂತಿಯು ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿಯ ಆಚೆಗೆ ಮುಂದುವರಿದು, ಕೃಷಿಕ ಜಾತಿವಿರೋಧಿ ಸಿದ್ಧಾಂತಕ್ಕೆ ರೂಪ ನೀಡಲು ಪ್ರಾರಂಭಿಸಿತು. ಜಾತಿ ಪಾಳೇಗಾರಿಕೆ ಇಲ್ಲವಾದ ಬಳಿಕ ದ್ವಿಜ ಶಕ್ತಿಗಳು ಸಾಂಸ್ಥೀಕರಣಗೊಳಿಸಿದ ಜಾತಿ ಬಂಡವಾಳಶಾಹಿಯ ವಿರುದ್ಧ ಇದು
ಮೊಟ್ಟಮೊದಲ ಬಾರಿಗೆ ಸಮರ ಸಾರಿತು. ಈ ಸಮರ ಸಂವಿಧಾನದ ಚೌಕಟ್ಟಿನಲ್ಲಿಯೇ ನಡೆದದ್ದರಿಂದ ಇದು ಭಾರತದ ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಹೊಸ ಭರವಸೆಯನ್ನು ನೀಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡಿನಲ್ಲಿ ತೀವ್ರ ವಿರೋಧ: ‘ಆರ್‌ಟಿಐ ವಿನಾಯಿತಿ’ ನಿರ್ಧಾರದಿಂದ ಹಿಂದೆ ಸರಿದ ವಿಜಯ್ ಸರ್ಕಾರ

ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ'...

ಗಾಜಾದಲ್ಲಿ ಮೃತರ ಸಂಖ್ಯೆ 74,000 ದಾಟಿದೆ: ಆರೋಗ್ಯ ಸಚಿವಾಲಯ

ಇಸ್ರೇಲ್ ನಡೆಸುತ್ತಿರುವ ದೀರ್ಘಕಾಲದ ಕ್ರೌರ್ಯದಿಂದಾಗಿ ಗಾಜಾ ಪಟ್ಟಿಯಲ್ಲಿ ಮೃತರ ಸಂಖ್ಯೆ 74,000...

ಅಸ್ಸಾಂ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡಲು ನಮ್ಮ ಬಂಧನ: ಸಿಜೆಪಿ ನಾಯಕ ಅಶುತೋಷ್ ರಂಕಾ ಆರೋಪ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಚಾಲಕ ಅಶುತೋಷ್ ರಂಕಾ ಮತ್ತು ಅವರ...