ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದ ಪ್ರಜಾ ಸೇವೆ ಕಾರ್ಯಕ್ರಮದಲ್ಲಿ ಚಿಕ್ಕಮತ್ತೂರು ಗ್ರಾಮವನ್ನು ಎಲ್.ಟಿ.ಎಂ ವನ್ಯಜೀವಿ ವಿಭಾಗ (ಶರಾವತಿ ವನ್ಯ ಜೀವಿ ಆಭಯಾರಣ್ಯ) ದಿಂದ ಕೈಬೀಡುವ ಕುರಿತು ಸಾಗರ ತಾಲ್ಲೂಕು, ಆವಿನಹಳ್ಳಿ ಹೋಬಳಿ, ಚಿಕ್ಕಮತ್ತೂರು ಗ್ರಾಮದ 1972ರಲ್ಲಿ ವನ್ಯಜೀವಿ ಸಂರಕ್ಷಾಣಾ ಖಾಯಿದೆ ಜಾರಿಗೆ ಬಂದಿರುತ್ತದೆ.
ಅದರಂತೆ ಈ ಶರಾವತಿ ಆಭಯಾರಣ್ಯ ಎಂದು ಘೋಷಿಸಿರುತ್ತಾರೆ. ಆದರೆ ಚಿಕ್ಕಮತ್ತೂರು ಗ್ರಾಮವು ವನ್ಯಜೀವಿ ಸಂರಕ್ಷಾಣಾ ಕಾಯ್ದೆಯ ವ್ಯಾಪ್ತಿಗೆ ಸೇರಿರುವುದಿಲ್ಲ. 2019ರಲ್ಲಿ ಹೆಚ್ಚುವರಿಯಾಗಿ ಗ್ರಾಮವನ್ನು ಶರಾವತಿ ಆಭಯಾರಣ್ಯಕ್ಕೆ ಸೇರಿಸಿರುತ್ತಾರೆ.
1972ರ ವನ್ಯ ಜೀವುಗಳ ಕಾಯ್ದೆಯ ಪ್ರಕಾರ ಕಂದಾಯ ಗ್ರಾಮವನ್ನು ವನ್ಯ ಜೀವಿಗಳ ವ್ಯಾಪ್ತಿಗೆ ಸೇರಿಸುವಂತಿಲ್ಲ. ಅದರೂ ಚಿಕ್ಕಮತ್ತೂರು ಗ್ರಾಮವನ್ನು ವನ್ಯಜೀವಿ ವಿಭಾಗಕ್ಕೆ ಸೇರಿಸಿರುತ್ತಾರೆ. ಚಿಕ್ಕಮತ್ತೂರು ಗ್ರಾಮವೂ ಕಂದಾಯ ಗ್ರಾಮ ಮತ್ತು ಜನ ವಸತಿ ಗ್ರಾಮವಾಗಿರುತ್ತದೆ. ಆದರಿಂದ ಚಿಕ್ಕಮತ್ತೂರು ಗ್ರಾಮವನ್ನು ಎಲ್.ಟಿ.ಎಂ ವನ್ಯಜೀವಿ ವಿಭಾಗ (ಶರಾವತಿ ವನ್ಯಜೀವಿ ಆಭಯಾರಣ್ಯ) ದಿಂದ ಕೈಬೀಡಬೇಕಾಗಿ ಗ್ರಾಮಸ್ಥರು, ಚಿಕ್ಕಮತ್ತೂರು ಗ್ರಾಮ, ಆವಿನಹಳ್ಳಿ ಹೋಬಳಿ, ಸಾಗರ ತಾಲ್ಲೂಕು, ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿಕೊಂಡರು.
ಸಾಗರ ತಾಲ್ಲೂಕು, ಆವಿನಹಳ್ಳಿ ಹೋಬಳಿ, ಚಿಕ್ಕಮತ್ತೂರು ಗ್ರಾಮ ಸರ್ವೆ ನಂ: 107ರಲ್ಲಿ 700 ಎಕರೆ ಜಾಗವನ್ನು ಮೀಸಲು ಅರಣ್ಯ ಪ್ರದೇಶವೆಂದು 1980ರಲ್ಲಿ ಕರ್ನಾಟಕ ಸರ್ಕಾರದ ಗೇಜಿಟೆಡ್ ನೋಟಿಫಿಕೇಷನ್‌ನಲ್ಲಿ ಆದೇಶವನ್ನು ಹೊರಡಿಸಲಾಗಿತ್ತು.
ಈ ಆದೇಶದಂತೆ ಮತ್ತು ಸುರ್ಪಿಂ ಕೋರ್ಟ್ ಆದೇಶದಂತೆ ಅರಣ್ಯ ವ್ಯವಸ್ಥಾಪನ ಅಧಿಕಾರಿಯನ್ನು ನೇಮಿಸಿರುತ್ತಾರೆ. ಆದರೆ ಚಿಕ್ಕಮತ್ತೂರು ಗ್ರಾಮದಲ್ಲಿ ಸುಮಾರು ನೂರಾರು ವರ್ಷಗಳಿಂದ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿರುತ್ತಾರೆ. ಹಾಗೇಯೇ ಶಾಲೆ, ಕೃಷಿ ಜಮೀನು, ದೇವಸ್ಥಾನ, ಅಂಗನವಾಡಿ ಕೇಂದ್ರಗಳು ಮತ್ತು ಸರ್ಕಾರಿ ರಸ್ತೆ, ವಿದ್ಯುತ್ ಸಂಪರ್ಕಗಳು ಮತ್ತು ಸರ್ಕಾರದ ಮೂಲ ಸೌಕರ್ಯಗಳನ್ನು ಪಡೆದುಕೊಂಡಿರುವ ಗ್ರಾಮವಾಗಿರುತ್ತದೆ. 1963-64ರಲ್ಲಿ ಸೇಕ್ಷನ್ 4 ಅಧಿಸೂಚನೆ ಪೂರ್ವದಲ್ಲಿ ಈ ಭೂಮಿಯನ್ನು ಮುಳುಗಡೆ ಸಂಸ್ರಸ್ತರಿಗೆ ಮಿಸಲಿಟ್ಟ ಜಾಗವಾಗಿರುತ್ತದೆ. ಮತ್ತು 1980ರ ಪೂರ್ವದಲ್ಲಿ ಕೃಷಿಗಾಗಿ ಸರ್ಕಾರದಿಂದ ಜಮೀನನ್ನು ಮಂಜೂರು ಮಾಡಿರುತ್ತಾರೆ.
ಸರ್ವೆ ನಂ: 107 ಈ ಜಮೀನನ್ನು 1980ರ ನಂತರವೂ ಕೂಡಾ ಮಂಜೂರಾಗಿರುತ್ತದೆ. ನಂತರ ಅರಣ್ಯ ಹಕ್ಕು ಸಮಿತಿ ಅರ್ಜಿಗಳು, ಬಗರ್ ಹುಕಂ ಅರ್ಜಿಗಳು ಮತ್ತು ಮುಳುಗಡೆ ಸಂತ್ರಸ್ತರ ಅರ್ಜಿಗಳನ್ನು ಸರ್ಕಾರಕ್ಕೆ ಕೊಟ್ಟಿರುತ್ತಾರೆ. ಅದರೆ ಈ ಜಾಗದಲ್ಲಿ ಹಲವಾರು ಕೃಷಿ ಅವಲಂಬಿತ ಕುಟುಂಬದವರು, ಮುಳುಗಡೆ ಸಂತ್ರಸ್ತರು ವಾಸವಾಗಿ ಜೀವನ ರೂಪಿಸಿಕೊಂಡಿರುವುದರಿಂದ ಈ ಚಿಕ್ಕಮತ್ತೂರು ಗ್ರಾಮವನ್ನು ಮೀಸಲು ಅರಣ್ಯ ಸೇಕ್ಷನ್ 4 ನಿಂದ ಕೈಬೀಡಬೇಕಾಗಿ ಈ ಮೂಲಕ ಗ್ರಾಮಸ್ಥರು ಮನವಿ ಮಾಡಿಕೊಂಡರು.




