ಬ್ರೆಜಿಲ್‌ ಚುನಾವಣೆ | ಬಲಪಂಥೀಯ ಬೊಲ್ಸೊನಾರೊ ಮುನ್ನಡೆ; ಲೂಲಾ ಜೊತೆ ಅ.25ರಂದು ರನ್‌ಆಫ್

Date:

ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯ ಮೊದಲ ಹಂತದಲ್ಲಿ ಬಲಪಂಥೀಯ ನಾಯಕ ಫ್ಲಾವಿಯೊ ಬೊಲ್ಸೊನಾರೊ ಗೆಲುವು ಸಾಧಿಸಿದ್ದಾರೆ. ಆದರೆ ಸ್ಪಷ್ಟ ಬಹುಮತ ಪಡೆಯಲು ವಿಫಲರಾಗಿರುವ ಹಿನ್ನೆಲೆಯಲ್ಲಿ, ಎಡಪಂಥೀಯ ಹಾಲಿ ಅಧ್ಯಕ್ಷ ಲುಯಿಜ್ ಇನಾಸಿಯೊ ಲೂಲಾ ಡ ಸಿಲ್ವಾ ಅವರೊಂದಿಗೆ ಅಕ್ಟೋಬರ್ 25ರಂದು ಎರಡನೇ ಹಂತದ (ರನ್‌ಆಫ್) ಚುನಾವಣೆ ನಡೆಯಲಿದೆ.

- Advertisement -

ಬಹುತೇಕ ಮತಗಳ ಎಣಿಕೆ ಪೂರ್ಣಗೊಂಡಾಗ ಫ್ಲಾವಿಯೊ ಬೊಲ್ಸೊನಾರೊ ಸುಮಾರು 47% ಮತ ಪಡೆದಿದ್ದರೆ, ಲೂಲಾ 45% ಮತ ಗಳಿಸಿದ್ದಾರೆ. ಚುನಾವಣಾ ಪ್ರಚಾರದ ಅವಧಿಯಲ್ಲಿ ಲೂಲಾ ಸ್ವಲ್ಪ ಮುನ್ನಡೆ ಹೊಂದಿದ್ದರು. ಹೀಗಾಗಿ ಮೊದಲ ಹಂತದಲ್ಲಿ ಫ್ಲಾವಿಯೊ ಸಾಧಿಸಿರುವ ಫಲಿತಾಂಶ ಗಮನ ಸೆಳೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

45 ವರ್ಷದ ಫ್ಲಾವಿಯೊ, ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರ ಪುತ್ರ. 2022ರ ಅಧ್ಯಕ್ಷೀಯ ಚುನಾವಣೆಯಲ್ಲಿ ಲೂಲಾ ವಿರುದ್ಧ ಸೋತ ಬಳಿಕ ಅಧಿಕಾರವನ್ನು ಮರಳಿ ಪಡೆಯಲು ವಿಫಲ ದಂಗೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಜೈರ್ ಬೊಲ್ಸೊನಾರೊ 27 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸದಂತೆ ಜೈರ್ ಅವರಿಗೆ ಈಗಾಗಲೇ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ಅವರು ತಮ್ಮ ಹಿರಿಯ ಪುತ್ರ ಫ್ಲಾವಿಯೊ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿಯಾಗಿ ಬೆಂಬಲಿಸಿದ್ದರು.

ಫ್ಲಾವಿಯೊ ಅವರ Liberal Party (PL) ಇದುವರೆಗೆ ನಡೆದ ಚುನಾವಣಾ ಫಲಿತಾಂಶಗಳ ಪ್ರಕಾರ ಅತಿ ಹೆಚ್ಚು ಗವರ್ನರ್‌ಗಳು, ಸೆನೆಟರ್‌ಗಳು ಹಾಗೂ ಫೆಡರಲ್ ಡೆಪ್ಯುಟಿಗಳನ್ನು ಗೆದ್ದಿದೆ. ಹೀಗಾಗಿ ಮುಂದಿನ ಸಂಸತ್‌ನಲ್ಲಿ PL ಹೆಚ್ಚು ಪ್ರಭಾವ ಬೀರುವ ಸಾಧ್ಯತೆಯಿದೆ.

Advertisements

ಫ್ಲಾವಿಯೊ ಅವರ ತಾಯಿ ಹಾಗೂ ಜೈರ್ ಬೊಲ್ಸೊನಾರೊ ಅವರ ಪತ್ನಿ ಮಿಶೆಲ್ ಬೊಲ್ಸೊನಾರೊ ಕೂಡ ಭಾನುವಾರ ಸೆನೆಟ್‌ಗೆ ಆಯ್ಕೆಯಾಗಿದ್ದಾರೆ. ಜೈರ್ ಬೊಲ್ಸೊನಾರೊ ಅವರ ಬೆಂಬಲಿಗರು 2023ರ ಜನವರಿ 8ರಂದು ಸರ್ಕಾರಿ ಕಟ್ಟಡಗಳ ಮೇಲೆ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಬಂಧಿತರಾಗಿರುವವರಿಗೂ, ತಾನು ಅಧಿಕಾರಕ್ಕೆ ಬಂದರೆ ಕ್ಷಮಾದಾನ ನೀಡುವುದಾಗಿ ಫ್ಲಾವಿಯೊ ಭರವಸೆ ನೀಡಿದ್ದಾರೆ.

ಲ್ಯಾಟಿನ್ ಅಮೆರಿಕದ ಹಲವು ದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಲಪಂಥೀಯ ನಾಯಕರು ಅಧಿಕಾರಕ್ಕೆ ಬಂದಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದೊಂದಿಗೆ ಹೊಂದಾಣಿಕೆ ಹೊಂದಿರುವ ರಾಜಕೀಯ ಶಕ್ತಿಗಳು ಪ್ರಾಬಲ್ಯ ಸಾಧಿಸಿವೆ. ಇದೀಗ ಲ್ಯಾಟಿನ್ ಅಮೆರಿಕದ ಅತಿದೊಡ್ಡ ದೇಶ ಹಾಗೂ ಆರ್ಥಿಕತೆಯಾಗಿರುವ ಬ್ರೆಜಿಲ್ ಯಾವ ರಾಜಕೀಯ ದಿಕ್ಕಿನತ್ತ ಸಾಗಲಿದೆ ಎಂಬುದನ್ನು ಅಕ್ಟೋಬರ್ 25ರ ರನ್‌ಆಫ್ ನಿರ್ಧರಿಸಲಿದೆ.

ರನ್‌ಆಫ್ ಚುನಾವಣೆ ಎಂದರೇನು?

ಮೊದಲ ಹಂತದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿ ಅಗತ್ಯವಿರುವ ಶೇ.50ಕ್ಕಿಂತ ಹೆಚ್ಚು ಮತಗಳನ್ನು ಪಡೆಯದಿದ್ದರೆ, ಅತಿ ಹೆಚ್ಚು ಮತ ಪಡೆದ ಇಬ್ಬರು ಅಭ್ಯರ್ಥಿಗಳ ನಡುವೆ ಮತ್ತೊಮ್ಮೆ ಚುನಾವಣೆ ನಡೆಯುತ್ತದೆ. ಇದನ್ನೇ ರನ್‌ಆಫ್ ಅಥವಾ ಎರಡನೇ ಹಂತದ ಚುನಾವಣೆ ಎಂದು ಕರೆಯಲಾಗುತ್ತದೆ. ಈ ಹಂತದಲ್ಲಿ ಇಬ್ಬರ ಪೈಕಿ ಹೆಚ್ಚು ಮತ ಪಡೆಯುವ ಅಭ್ಯರ್ಥಿಯೇ ಅಂತಿಮವಾಗಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಬ್ರೆಜಿಲ್‌ನಲ್ಲೂ ಮೊದಲ ಹಂತದಲ್ಲಿ ಫ್ಲಾವಿಯೊ ಬೊಲ್ಸೊನಾರೊ ಮತ್ತು ಲೂಲಾ ಇಬ್ಬರೂ ಶೇ.50ರ ಗಡಿ ದಾಟದ ಹಿನ್ನೆಲೆಯಲ್ಲಿ, ಇವರಿಬ್ಬರ ನಡುವೆ ಅಕ್ಟೋಬರ್ 25ರಂದು ಎರಡನೇ ಹಂತದ ಮತದಾನ ನಡೆಯಲಿದೆ

ಇತ್ತ ವೈಟ್ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚುನಾವಣೆ ಅತ್ಯಂತ ನಿಕಟವಾಗಿರಲಿದೆ ಎಂದು ಹೇಳಿದರೂ, ಮೊದಲ ಹಂತದಲ್ಲಿ ಫ್ಲಾವಿಯೊ ಬೊಲ್ಸೊನಾರೊ ಸಾಧಿಸಿರುವುದು “ಬಹಳ ದೊಡ್ಡ ಗೆಲುವು” ಎಂದು ಬಣ್ಣಿಸಿದ್ದಾರೆ.

ಇನ್ನೊಂದೆಡೆ, ಫ್ಲಾವಿಯೊ ಮೊದಲ ಹಂತದಲ್ಲಿ ಲೂಲಾ ಅವರನ್ನು ಹಿಂದಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ಮೂರು ವಾರಗಳ ಬಳಿಕ ನಡೆಯಲಿರುವ ರನ್‌ಆಫ್‌ನಲ್ಲಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ ಚಲಾಯಿಸಿದ ಬಳಿಕ 80 ವರ್ಷದ ಲೂಲಾ, ಈ ಚುನಾವಣೆ ಪ್ರಜಾಪ್ರಭುತ್ವ ಮತ್ತು “ಅನಾಗರಿಕತೆ” ನಡುವಿನ ಆಯ್ಕೆ ಎಂದು ಹೇಳಿದ್ದಾರೆ. ಮೊದಲ ಹಂತದ ಫಲಿತಾಂಶ ನಿರೀಕ್ಷೆಗಿಂತ ಭಿನ್ನವಾಗಿದೆ ಎಂದು ಒಪ್ಪಿಕೊಂಡಿರುವ ಲೂಲಾ, ಆದರೆ ಚುನಾವಣೆ ಇನ್ನೂ ಮುಗಿದಿಲ್ಲ. “ಮೊದಲ ಹಂತದಲ್ಲೇ ಗೆಲ್ಲುತ್ತೇನೆ ಎಂಬ ವಿಶ್ವಾಸ ನನಗಿತ್ತು. ಆಟ ಈಗಷ್ಟೇ ಆರಂಭವಾಗಿದೆ. ನಾವು ಹೆಚ್ಚುವರಿ ಸಮಯದಲ್ಲಿದ್ದೇವೆ. ಹೆಚ್ಚುವರಿ ಸಮಯದಲ್ಲಿ ಬ್ರೆಜಿಲ್ ಜನರ ಬೆಂಬಲವನ್ನು ಗೆಲ್ಲುತ್ತೇವೆ” ಎಂದು ಅವರು ಹೇಳಿದ್ದಾರೆ.

ಲೂಲಾ ತಮ್ಮ ರಾಜಕೀಯ ಪರಂಪರೆಯನ್ನು ಹಲವು ಸಾಮಾಜಿಕ ಕಲ್ಯಾಣ ಯೋಜನೆಗಳ ಮೂಲಕ ರೂಪಿಸಿಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾದ ‘ಬೋಲ್ಸಾ ಫಮಿಲಿಯಾ’ ಯೋಜನೆಯಡಿ ಮಕ್ಕಳನ್ನು ಶಾಲೆಯಲ್ಲಿ ಮುಂದುವರಿಸುವುದು ಹಾಗೂ ಲಸಿಕೆ ಸೇರಿದಂತೆ ಅಗತ್ಯ ಆರೋಗ್ಯ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ.

ಜೊತೆಗೆ ಹಲವು ಹೊಸ ವಿಶ್ವವಿದ್ಯಾಲಯಗಳ ನಿರ್ಮಾಣಕ್ಕೂ ಲೂಲಾ ಸರ್ಕಾರ ಒತ್ತು ನೀಡಿದೆ. ಈ ಯೋಜನೆಗಳು ಕೋಟ್ಯಂತರ ಬ್ರೆಜಿಲಿಯನ್ನರನ್ನು ಬಡತನದಿಂದ ಹೊರತರಲು ನೆರವಾಗಿವೆ ಎಂದು ಹೇಳಲಾಗುತ್ತದೆ. ಆದರೆ ತೈಲ ಶೋಧನೆ ಮತ್ತು ಕೊರೆಯುವಿಕೆಗೆ ಲೂಲಾ ಬೆಂಬಲ ನೀಡಿರುವುದು ಪರಿಸರವಾದಿಗಳ ಆಕ್ಷೇಪಕ್ಕೆ ಕಾರಣವಾಗಿದೆ. ಇದೇ ವೇಳೆ, ಪರಿಸರ ಸಂರಕ್ಷಣಾ ನಿಯಮಗಳನ್ನು ಬಿಗಿಗೊಳಿಸುವುದು ಹಾಗೂ ಅಮೆಜಾನ್ ಅರಣ್ಯನಾಶದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಅವರ ಸರ್ಕಾರ ಕ್ರಮ ಕೈಗೊಂಡಿದೆ. ಜೈರ್ ಬೊಲ್ಸೊನಾರೊ ಅವರ ಅಧ್ಯಕ್ಷೀಯ ಅವಧಿಯಲ್ಲಿ ಅಮೆಜಾನ್ ಅರಣ್ಯನಾಶ ಗಣನೀಯವಾಗಿ ಹೆಚ್ಚಾಗಿತ್ತು.

ಇನ್ನೊಂದೆಡೆ, ಫ್ಲಾವಿಯೊ ಬೊಲ್ಸೊನಾರೊ ಅವರು ಸಾರ್ವಜನಿಕ ಸಾಲಕ್ಕೆ ಮಿತಿ ನಿಗದಿಪಡಿಸುವುದು, ಸರ್ಕಾರಿ ವೆಚ್ಚ ಕಡಿತಗೊಳಿಸುವುದು ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಪರಿಷ್ಕರಿಸುವುದು ತಮ್ಮ ಆರ್ಥಿಕ ನೀತಿಯ ಪ್ರಮುಖ ಅಂಶಗಳಾಗಿವೆ ಎಂದು ಹೇಳಿದ್ದಾರೆ.

ಸಾರ್ವಜನಿಕ ವಲಯದ ಗಾತ್ರವನ್ನು ಕಡಿಮೆ ಮಾಡುವುದು, ತೆರಿಗೆ ಇಳಿಸುವುದು ಹಾಗೂ ಅಪರಾಧದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಅವರು ಭರವಸೆ ನೀಡಿದ್ದಾರೆ. ಇದರ ಜೊತೆಗೆ ಬ್ಯಾಟರಿ, ಎಲೆಕ್ಟ್ರಾನಿಕ್ಸ್ ಮತ್ತು ಶುದ್ಧ ಇಂಧನ ತಂತ್ರಜ್ಞಾನಗಳಂತಹ ಕ್ಷೇತ್ರಗಳಿಗೆ ಪ್ರಮುಖವಾಗಿರುವ ಕ್ರಿಟಿಕಲ್ ಮಿನರಲ್ಸ್ ವಲಯವನ್ನು ಬಲಪಡಿಸುವುದಾಗಿ ಹೇಳಿದ್ದಾರೆ.

ಈ ಬಾರಿ ಚುನಾವಣಾ ಪ್ರಚಾರದಲ್ಲಿ ಭ್ರಷ್ಟಾಚಾರವೂ ಪ್ರಮುಖ ವಿಷಯವಾಗಿದೆ. ಜೈಲಿನಲ್ಲಿರುವ ಬ್ಯಾಂಕರ್ ಡ್ಯಾನಿಯಲ್ ವೋರ್ಕಾರೊಗೆ ಸಂಬಂಧಿಸಿದ ದೊಡ್ಡ ಹಣಕಾಸು ವಂಚನೆ ಪ್ರಕರಣದಲ್ಲಿ ರಾಜಕೀಯ ವಲಯದ ಹಲವು ಪ್ರಮುಖ ವ್ಯಕ್ತಿಗಳ ಹೆಸರುಗಳು ಕೇಳಿಬಂದಿವೆ. ಫ್ಲಾವಿಯೊ ಅವರು ತಮ್ಮ ತಂದೆಯ ಜೀವನದ ಕುರಿತು ನಿರ್ಮಿಸಲಾಗುತ್ತಿರುವ ಚಲನಚಿತ್ರಕ್ಕೆ ಹಣಕಾಸು ನೆರವು ನೀಡುವಂತೆ ವೋರ್ಕಾರೊ ಅವರನ್ನು ಕೇಳಿದ್ದಾಗಿ ಒಪ್ಪಿಕೊಂಡಿದ್ದಾರೆ.

ಇನ್ನೊಂದೆಡೆ, ಸಂಘಟಿತ ಅಪರಾಧ, ಮಾದಕವಸ್ತು ಕಳ್ಳಸಾಗಣೆ ಮತ್ತು ಬೀದಿ ಅಪರಾಧಗಳು ಕೂಡ ಮತದಾರರ ಪ್ರಮುಖ ಕಾಳಜಿಗಳಾಗಿವೆ. ಬ್ರೆಜಿಲ್‌ನಲ್ಲಿ ಕೊಲೆ ಪ್ರಮಾಣ ಇಳಿಕೆಯಾಗಿದ್ದರೂ, ಮೊಬೈಲ್ ಫೋನ್ ಕಳವು ಸೇರಿದಂತೆ ಸಾರ್ವಜನಿಕವಾಗಿ ಹೆಚ್ಚು ಗೋಚರಿಸುವ ಅಪರಾಧಗಳು ಹೆಚ್ಚಾಗಿವೆ.

ಫ್ಲಾವಿಯೊ ಅವರು ಬ್ರೆಜಿಲ್‌ನ ಅಪರಾಧ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸುವುದು ಮತ್ತು ಎಲ್ ಸಾಲ್ವಡಾರ್ ಮಾದರಿಯ ಗರಿಷ್ಠ ಭದ್ರತೆಯ ಜೈಲುಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ. ಜೈರ್ ಬೊಲ್ಸೊನಾರೊ ಅವರ ಅಧ್ಯಕ್ಷೀಯ ಅವಧಿಯಲ್ಲಿ ಬಂದೂಕು ಹೊಂದುವ ಮೇಲಿನ ಕೆಲವು ನಿರ್ಬಂಧಗಳನ್ನು ಸಡಿಲಿಸಲಾಗಿತ್ತು.

ಲೂಲಾ ಅವರು ಅಮೆರಿಕವು ಬ್ರೆಜಿಲ್‌ನ ಗ್ಯಾಂಗ್‌ಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಗುರುತಿಸಿರುವುದನ್ನು ವಿರೋಧಿಸಿದ್ದಾರೆ. ಸಂಘಟಿತ ಅಪರಾಧ ಜಾಲಗಳ ಹಣಕಾಸು ವ್ಯವಸ್ಥೆಗಳನ್ನು ನಿಯಂತ್ರಿಸುವುದು, ಕೊಲೆ ಪ್ರಕರಣಗಳ ತನಿಖೆ ಸುಧಾರಿಸುವುದು ಮತ್ತು ಜೈಲು ವ್ಯವಸ್ಥೆಯಲ್ಲಿ ಹೂಡಿಕೆ ಹೆಚ್ಚಿಸುವ ಕ್ರಮಗಳನ್ನು ಕೈಗೊಂಡಿದ್ದಾರೆ. ಬ್ರೆಜಿಲ್‌ನ ಸುಪ್ರೀಂ ಎಲೆಕ್ಟೋರಲ್ ಕೋರ್ಟ್ ಅಧ್ಯಕ್ಷರು, ಚುನಾವಣೆಯಲ್ಲಿ ಯಾವುದೇ ಅಂತಾರಾಷ್ಟ್ರೀಯ ಹಸ್ತಕ್ಷೇಪದ ಸಾಕ್ಷ್ಯ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.

ಲೂಲಾ ತಮ್ಮ ಪ್ರಚಾರದಲ್ಲಿ ಬ್ರೆಜಿಲ್‌ನ ಸಾರ್ವಭೌಮತ್ವವನ್ನು ಪ್ರಮುಖ ವಿಚಾರವನ್ನಾಗಿಸಿದ್ದರು. ಅಮೆರಿಕವು ಬ್ರೆಜಿಲ್ ಚುನಾವಣೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ ಎಂದು ಕೆಲ ಸಂದರ್ಭಗಳಲ್ಲಿ ಆರೋಪಿಸಿದ್ದರು. ಆದರೆ ಅಮೆರಿಕ ಇದನ್ನು ನಿರಾಕರಿಸಿದೆ.

ಇದನ್ನೂ ಓದಿ: Form 6 ಬದಲಾಯಿಸಿದ್ದು ಯಾರು, ದಾಖಲೆ ಕೊಡಿ; ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಳೆದ ವರ್ಷ ಜೈರ್ ಬೊಲ್ಸೊನಾರೊ ವಿರುದ್ಧದ ದಂಗೆ ಪ್ರಕರಣವನ್ನು ಉಲ್ಲೇಖಿಸಿದ್ದ ಟ್ರಂಪ್, ಬ್ರೆಜಿಲ್ ಮೇಲೆ ಸುಂಕ ವಿಧಿಸುವುದು ಹಾಗೂ ಕೆಲವು ಅಧಿಕಾರಿಗಳು ಮತ್ತು ನ್ಯಾಯಾಧೀಶರ ವಿರುದ್ಧ ನಿರ್ಬಂಧ ಹೇರಿರುವುದನ್ನು ಸಮರ್ಥಿಸಿಕೊಂಡಿದ್ದರು. ಫ್ಲಾವಿಯೊ ಗೆದ್ದರೆ ಮಾದಕವಸ್ತು ಕಳ್ಳಸಾಗಣೆ ವಿರುದ್ಧದ ಅಮೆರಿಕ ನೇತೃತ್ವದ “Shield of the Americas” ಮೈತ್ರಿಕೂಟದೊಂದಿಗೆ ಬ್ರೆಜಿಲ್ ಹೆಚ್ಚು ನಿಕಟವಾಗಿ ಕೆಲಸ ಮಾಡುವ ಸಾಧ್ಯತೆಯಿದೆ.

ಹೆಚ್ಚಿನ ವೈಯಕ್ತಿಕ ಸಾಲ ಮತ್ತು ನಿಧಾನಗೊಳ್ಳುತ್ತಿರುವ ಆರ್ಥಿಕ ಬೆಳವಣಿಗೆ ಈ ಚುನಾವಣೆಯ ಪ್ರಮುಖ ಆರ್ಥಿಕ ವಿಚಾರಗಳಾಗಿವೆ. ಲೂಲಾ ಅವಧಿಯಲ್ಲಿ ನಿರುದ್ಯೋಗ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಇಳಿದಿದ್ದರೂ, ಜೀವನ ವೆಚ್ಚ, ಖರೀದಿ ಸಾಮರ್ಥ್ಯ ಕುಸಿತ ಮತ್ತು ಕುಟುಂಬಗಳ ಸಾಲದ ಹೊರೆ ಬಗ್ಗೆ ಮತದಾರರಲ್ಲಿ ಆತಂಕವಿದೆ.

ಹೀಗಾಗಿ ಅಕ್ಟೋಬರ್ 25ರಂದು ನಡೆಯಲಿರುವ ರನ್‌ಆಫ್‌ನಲ್ಲಿ ಲೂಲಾ ಅವರ ಸಾಮಾಜಿಕ ಕಲ್ಯಾಣ ಯೋಜನೆಗಳು, ಪರಿಸರ ನೀತಿ ಮತ್ತು ಆರ್ಥಿಕ ಪರಂಪರೆ ಒಂದೆಡೆಯಾದರೆ, ಫ್ಲಾವಿಯೊ ಅವರ ಸಾರ್ವಜನಿಕ ಸಾಲ ನಿಯಂತ್ರಣ, ಸರ್ಕಾರಿ ವೆಚ್ಚ ಕಡಿತ, ಅಪರಾಧ ನಿಯಂತ್ರಣ ಮತ್ತು ಕೈಗಾರಿಕಾ ನೀತಿ ಮತ್ತೊಂದೆಡೆಯ ಪ್ರಮುಖ ಚುನಾವಣಾ ಅಜೆಂಡಾಗಳಾಗಿವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಬರದ ಹೊಡೆತಕ್ಕೆ ಬೆಳೆ ನಿರ್ನಾಮ! ಎಕರೆಗೆ ರೂ.30 ಸಾವಿರ ಖರ್ಚು, ಕೈ ಸೇರದ ಫಸಲು

ಬಾಗಲಕೋಟೆ ಜಿಲ್ಲೆಯ ರೈತರು ಬಿತ್ತನೆ, ಗೊಬ್ಬರ, ಕೂಲಿ ಸೇರಿದಂತೆ ಎಕರೆಗೆ ರೂ.25ರಿಂದ...

SIR | ಮಲ್ಲೇಶ್ವರಂನಲ್ಲಿ ಬಿಜೆಪಿಯಿಂದ ಭಾರೀ ಅಕ್ರಮ; ಮೇಲಧಿಕಾರಿಗಳೇ ಶಾಮೀಲು ಶಂಕೆ- ʼಈ ದಿನʼಕ್ಕೆ ಸಿಕ್ಕಿದೆ ಸಾಕ್ಷ್ಯ

ಬಿಜೆಪಿಯ ಬಿಎಲ್‌ಎಗಳು ಸಲ್ಲಿಸಿರುವ ಅರ್ಜಿಗಳಲ್ಲಿ ನೂರಕ್ಕೆ ನೂರು ಹೆಸರುಗಳು ಮುಸ್ಲಿಮರದ್ದು. ಕಳೆದ...

ಸಾಗರ | ಡಾ. ಹೆಚ್. ಗಣಪತಿಯಪ್ಪ ಸ್ಮಾರಕ ಅಭಿವೃದ್ಧಿಗೆ ಶಾಸಕರಿಗೆ ಮನವಿ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ದಿವಂಗತ ಹೆಚ್.ಗಣಪತಿಯಪ್ಪ...

SIR ನಲ್ಲಿ ದೊಡ್ಡ ಪ್ರಮಾಣದ Form 7 ಅರ್ಜಿಗಳ ಸಲ್ಲಿಕೆ  ಆರೋಪ; ಕ್ರಮಕ್ಕೆ ತೆಲಂಗಾಣ ಚುನಾವಣಾ ಆಯುಕ್ತರ ಆದೇಶ

ಹೈದರಾಬಾದ್: ಪ್ರಸ್ತುತ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ  ದೊಡ್ಡ ಪ್ರಮಾಣದಲ್ಲಿ ನಕಲಿ Form...