ಬಂಗಾಳದಲ್ಲಿ ಎರಡೂವರೆ ಲಕ್ಷ ಅರೆಸೇನಾ ಪಡೆಗಳಿದ್ದೂ ಹಿಂಸಾಚಾರ ಭುಗಿಲೆದ್ದರೆ ಅದರ ಜವಾಬ್ದಾರಿ ಹೊರುವವರು ಯಾರು?

Date:

ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ಚುನಾವಣಾ ನಂತರದ ಹಿಂಸಾಚಾರ, ಸಾವು-ನೋವುಗಳ ನೇರ ಜವಾಬ್ದಾರಿಯನ್ನು ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಗ್ಯಾನೇಶ್ ಕುಮಾರ್ ಮತ್ತು ದೇಶದ ಗೃಹಮಂತ್ರಿ ಅಮಿತ್ ಶಾ ಅವರೇ ಹೊರಬೇಕು. ನಿರ್ಭೀತವಾಗಿ ಮತ ಚಲಾಯಿಸಿರಿ, ಮತದಾನದ ನಂತರ 15 ದಿನಗಳ ಕಾಲ ಅರೆಸೇನಾ ಪಡೆ ಬಂಗಾಳದಲ್ಲೇ ಮುಂದುವರೆಯಲಿದೆ ಎಂದು ಅಮಿತ್ ಶಾ ಅಭಯ ನೀಡಿದ್ದರು. ಎರಡೂವರೆ ಲಕ್ಷದಷ್ಟು ಅರೆಸೇನಾ ಪಡೆಯ ಅಪಾರ ಸಂಖ್ಯೆಯನ್ನು ಇಟ್ಟುಕೊಂಡೂ ಹಿಂಸಾಚಾರವನ್ನು ನಿಯಂತ್ರಿಸಲು ಅಸಾಧ್ಯವಾಯಿತು ಎಂದರೆ ಅದು ಒಂದೋ ಅಮಿತ್ ಶಾ ಮತ್ತು ಗ್ಯಾನೇಶ್ ಕುಮಾರ್ ಅಸಾಮರ್ಥ್ಯವನ್ನು ತೋರುತ್ತದೆ. ಇಲ್ಲವೇ ಟಿಎಂಸಿ ವಿರುದ್ಧ ಬಿಜೆಪಿಯ ಕಾರ್ಯಕರ್ತ ಪಡೆ ಹೊಂದಿದ್ದ ಹಗೆಯನ್ನು ತೀರಿಸಿಕೊಳ್ಳಲು ಬೇಕೆಂದೇ ನೀಡಿದ ಅವಕಾಶ ಎಂದು ಭಾವಿಸಬೇಕಾಗುತ್ತದೆ.

- Advertisement -

ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆಯು ಪ್ರಜಾಪ್ರಭುತ್ವದ ಹಬ್ಬವಾಗುವ ಬದಲು, ಆತಂಕ ಮತ್ತು ಹಿಂಸಾಚಾರದ ಕಣವಾಗಿ ಮಾರ್ಪಟ್ಟಿದೆ. ಚುನಾವಣೆಗೂ ಮುನ್ನ ಹಾಗೂ ಮೇ 4ರಂದು ಫಲಿತಾಂಶ ಪ್ರಕಟವಾದ ನಂತರವೂ ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಗಲಭೆಗಳು, ಸಾಂವಿಧಾನಿಕ ಸಂಸ್ಥೆಗಳ ಕಾರ್ಯವೈಖರಿಯನ್ನು ತೀವ್ರವಾಗಿ ಪ್ರಶ್ನಿಸುವಂತೆ ಮಾಡಿವೆ. ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಸಿಆರ್‌ಪಿಎಫ್ ಹಾಗೂ ಇತರ ಕೇಂದ್ರೀಯ ಯೋಧರಿದ್ದರೂ ಹಿಂಸಾಚಾರ ಮುಂದುವರಿಕೆ ಆತಂಕಕಾರಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಚುನಾವಣಾ ಪೂರ್ವದ ಹಿಂಸಾಚಾರದ ಜೊತೆಗೆ ಮೇ 4ರಂದು ಫಲಿತಾಂಶ ಹೊರಬಿದ್ದ ಬೆನ್ನಲ್ಲೇ, ಹಿಂಸಾಚಾರ ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಂಡಿದೆ. ಹೊಸ ಸರ್ಕಾರ ಇನ್ನೂ ಅಧಿಕೃತವಾಗಿ ಅಸ್ತಿತ್ವಕ್ಕೆ ಬಾರದ ಕಾರಣ, ಪ್ರಸ್ತುತ ರಾಜ್ಯದ ಸಂಪೂರ್ಣ ಕಾನೂನು ಮತ್ತು ಸುವ್ಯವಸ್ಥೆ ನೇರವಾಗಿ ಚುನಾವಣಾ ಆಯೋಗದ ಸುಪರ್ದಿಯಲ್ಲೇ ಇದೆ. ಆದರೆ, ಚುನಾವಣೆಗೂ ಮುನ್ನ ಸಣ್ಣಪುಟ್ಟ ಘಟನೆಗಳಿಗೂ ಕಠಿಣವಾಗಿ ಪ್ರತಿಕ್ರಿಯಿಸುತ್ತಿದ್ದ ಸಿಇಸಿ, ಈಗ ಇಷ್ಟೊಂದು ದೊಡ್ಡ ಮಟ್ಟದ ಹಲ್ಲೆ, ಬೆಂಕಿ ಹಚ್ಚುವ ಕೃತ್ಯಗಳು ನಡೆಯುತ್ತಿದ್ದರೂ ಸಂಪೂರ್ಣ ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸಿದೆ.

ಚುನಾವಣೆಗೂ ಪೂರ್ವದಲ್ಲೇ ಆಯೋಗದ ಹಲವು ನಡೆಗಳು ವಿವಾದಕ್ಕೆ ಗ್ರಾಸವಾಗಿದ್ದವು. ರಾಜ್ಯ ಪೊಲೀಸ್ ವ್ಯವಸ್ಥೆ ಮತ್ತು ಸ್ಥಳೀಯ ಆಡಳಿತವನ್ನು ಸಂಪೂರ್ಣವಾಗಿ ಬದಿಗೊತ್ತಿ, ಕೇವಲ ಕೇಂದ್ರೀಯ ವೀಕ್ಷಕರ ವರದಿಗಳ ಆಧಾರದ ಮೇಲೆ(ಕೇಂದ್ರ ಸರ್ಕಾರದ ಅಣತಿಯಂತೆ) ಸಿಇಸಿ ಏಕಪಕ್ಷೀಯ ಆದೇಶಗಳನ್ನು ಹೊರಡಿಸುತ್ತಿತ್ತು. ವಾಸ್ತವಿಕ ನೆಲೆಗಟ್ಟನ್ನು ಅರಿಯದೆ, ಏಕಾಏಕಿ ನೂರಾರು ಉನ್ನತ ಅಧಿಕಾರಿಗಳ ವರ್ಗಾವಣೆ ಹಾಗೂ ‘ಹಿಂದೆ ಗಲಭೆಗಳಲ್ಲಿ ಭಾಗಿಯಾಗಿದ್ದವರನ್ನು ಮುಂಜಾಗ್ರತೆಯಾಗಿ ಬಂಧಿಸಿ’ ಎಂಬ ಪೂರ್ವಗ್ರಹದ ಸೂಚನೆಗಳು ಆಡಳಿತ ಯಂತ್ರದಲ್ಲಿ ತೀವ್ರ ಗೊಂದಲ ಸೃಷ್ಟಿಸಿದವು. ಸಮರ್ಪಕ ಸಮನ್ವಯವಿಲ್ಲದೆ ಕೈಗೊಂಡ ಇಂತಹ ದಿಢೀರ್ ಕ್ರಮಗಳು ಚುನಾವಣಾ ಪೂರ್ವ ಹಿಂಸಾಚಾರವನ್ನು ಸೆರಗಿಗೆ ಕಟ್ಟಿಕೊಂಡವು.

ಸ್ಥಳೀಯ ಗುಪ್ತಚರ ವರದಿಗಳನ್ನು ಕಡೆಗಣಿಸಿ, ಕೇವಲ ಭದ್ರತಾ ಪಡೆಗಳ ನಿಯೋಜನೆಯೊಂದೇ ಎಲ್ಲದಕ್ಕೂ ಪರಿಹಾರ ಎಂಬಂತೆ ಆಯೋಗ ವರ್ತಿಸಿದ್ದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು. ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾದ ಆಯೋಗವು, ಆಜ್ಞೆಗಳನ್ನು ಮಾತ್ರ ನೀಡುವ ‘ಸರ್ವಾಧಿಕಾರಿ’ಯಂತೆ ವರ್ತಿಸಿತು. ಕೇಂದ್ರ ಪಡೆಗಳ ನಿಯೋಜನೆ ಮತ್ತು ನಿರ್ವಹಣೆಯಲ್ಲಿ ರಾಜ್ಯದ ಅಧಿಕಾರಿಗಳಿಗೆ ಯಾವುದೇ ಪಾತ್ರವಿಲ್ಲದಂತೆ ಮಾಡಿದ್ದು, ಭದ್ರತಾ ಲೋಪಕ್ಕೆ ಪ್ರಮುಖ ಕಾರಣವಾಯಿತು.

ಇದನ್ನು ಓದಿದ್ದೀರಾ? ಟಿವಿಕೆ ತೆಕ್ಕೆಗೆ ಜಾರಿದ ಕಾಂಗ್ರೆಸ್, ಆಪ್ತಮಿತ್ರ ಸ್ಟಾಲಿನ್ ಬೆನ್ನಿಗೆ ಚೂರಿ ಹಾಕಿತೇ?

ಇಂದು ರಾಜ್ಯದಲ್ಲಿ ಎರಡೂವರೆ ಲಕ್ಷದಷ್ಟು ಅರೆಸೇನಾ ಪಡೆಗಳ ಪಹರೆಯಿದೆ. ಭಾರತದ ಚುನಾವಣಾ ಇತಿಹಾಸದಲ್ಲೇ ಅರೆಸೇನಾ ಪಡೆಗಳ ಅತಿ ದೊಡ್ಡ ನಿಯೋಜನೆಯಿದು. ಶತ್ರುಸೀಮೆಯೊಂದಕ್ಕೆ ಲಗ್ಗೆ ಹಾಕಿದ ಪರಿಯಲ್ಲಿ ಬಂಗಾಳಕ್ಕೆ ಲಗ್ಗೆ ಹಾಕಿಸಲಾಯಿತು. ಫಲಿತಾಂಶದ ನಂತರ ಬಹುತೇಕ ಪಡೆಗಳನ್ನು ಉಳಿಸಿಕೊಳ್ಳಲಾಗಿತ್ತು. ಆದರೂ, ರಾಜಕೀಯ ಕಾರ್ಯಕರ್ತರ ಮೇಲಿನ ಮಾರಣಾಂತಿಕ ಹಲ್ಲೆಗಳು ರಾಜಾರೋಷವಾಗಿ ನಡೆಯುತ್ತಲೇ ಇವೆ. ಹತ್ಯೆಗಳು ಕೂಡ ಆಬಾಧಿತ. ರಕ್ಷಣೆ ನೀಡಬೇಕಾದ ಪಡೆಗಳು ಕೇವಲ ಮೂಕ ಪ್ರೇಕ್ಷಕರಂತೆ ನಿಂತಿರುವುದು, ಆಡಳಿತ ಯಂತ್ರವು ಈ ಹಿಂಸಾಚಾರವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದೆಯೇ ಎಂಬ ಸಂಶಯವನ್ನು ಹುಟ್ಟುಹಾಕಿದೆ.

ಆಯೋಗದ ಈ ನಿಷ್ಕ್ರಿಯತೆಯ ಹಿಂದೆ ಕೇಂದ್ರ ಸರ್ಕಾರದ ಪರೋಕ್ಷ ಬೆಂಬಲವಿದೆ ಎಂಬ ವಿಪಕ್ಷಗಳ ಆರೋಪಗಳನ್ನು ತಳ್ಳಿಹಾಕುವಂತಿಲ್ಲ. ಚುನಾವಣೆಯಲ್ಲಿ ತಮ್ಮ ಪರವಾದ ವಾತಾವರಣ ನಿರ್ಮಿಸಲು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದ ವ್ಯವಸ್ಥೆ, ಇದೀಗ ಫಲಿತಾಂಶದ ನಂತರ ಉದ್ದೇಶಪೂರ್ವಕವಾಗಿಯೇ ರಾಜ್ಯವನ್ನು ಪ್ರತೀಕಾರ ತೀರಿಸುವ ಹಿಂಸಾಚಾರಕ್ಕೆ ಅವಕಾಶ ನೀಡಲಾಗಿದೆಯೇ ಎಂಬ ಅನುಮಾನಗಳು ದಟ್ಟವಾಗಿವೆ. ಸಾಂವಿಧಾನಿಕ ಸಂಸ್ಥೆಯೊಂದು ಆಡಳಿತಾರೂಢರ ಕೈಯಲ್ಲಿನ ರಾಜಕೀಯ ದಾಳವಾಗಿ ಬಳಕೆಯಾಗುತ್ತಲಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ.

ಚುನಾವಣಾ ಪ್ರಕ್ರಿಯೆಯನ್ನು ಶಾಂತಿಯುತವಾಗಿ ಮುಕ್ತಾಯಗೊಳಿಸುವ ಜವಾಬ್ದಾರಿ ಹೊತ್ತಿದ್ದ ಆಯೋಗ, ಮತಎಣಿಕೆಯ ತನಕ ಶಾಂತಿ ಕಾಪಾಡಿದ್ದೂ, ಆನಂತರ ನಿಯಂತ್ರಣ ತಪ್ಪಿದ್ದು ಕಾಕತಾಳೀಯ ಎಂದು ನಂಬುವುದು ಕಷ್ಟ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಜಾದಲ್ಲಿ ಮೃತರ ಸಂಖ್ಯೆ 74,000 ದಾಟಿದೆ: ಆರೋಗ್ಯ ಸಚಿವಾಲಯ

ಇಸ್ರೇಲ್ ನಡೆಸುತ್ತಿರುವ ದೀರ್ಘಕಾಲದ ಕ್ರೌರ್ಯದಿಂದಾಗಿ ಗಾಜಾ ಪಟ್ಟಿಯಲ್ಲಿ ಮೃತರ ಸಂಖ್ಯೆ 74,000...

ಅಸ್ಸಾಂ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡಲು ನಮ್ಮ ಬಂಧನ: ಸಿಜೆಪಿ ನಾಯಕ ಅಶುತೋಷ್ ರಂಕಾ ಆರೋಪ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಚಾಲಕ ಅಶುತೋಷ್ ರಂಕಾ ಮತ್ತು ಅವರ...

ದಕ್ಷಿಣ ಆಫ್ರಿಕಾದ ಹಲವೆಡೆ ಸಾಮೂಹಿಕ ಗುಂಡಿನ ದಾಳಿ; 27 ಮಂದಿ ಭೀಕರ ಸಾವು

ದಕ್ಷಿಣ ಆಫ್ರಿಕಾದ ವಿವಿಧ ಪಟ್ಟಣಗಳಲ್ಲಿ ಭೀಕರ ಸಾಮೂಹಿಕ ಗುಂಡಿನ ದಾಳಿಗಳು ನಡೆದಿದ್ದು,...