ಉಡುಪಿ | ಕಾದ ಸಮುದ್ರ: ಬರಿದಾದ ಮೀನುಗಾರರ ಬದುಕು

Date:

ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು, ಜೀವನ ಭದ್ರತೆಯಿಲ್ಲದ ಕಾಯಕದಲ್ಲಿ ತೊಡಗಿರುವ ಸಾವಿರಾರು ಕುಟುಂಬಗಳ ಕಣ್ಣೀರೊರೆಸುವ ಕೈಗಳಾಗಬೇಕಿದೆ. ಜತೆಗೆ ಮೀನುಗಾರರ ಕಲ್ಯಾಣ ಮಂಡಳಿಯ ಸ್ಥಾಪನೆ ಮತ್ತು ವೈಜ್ಞಾನಿಕ ಪರಿಹಾರ ಕ್ರಮಗಳು ಶೀಘ್ರವಾಗಿ ಜಾರಿಗೆ ಬರದಿದ್ದರೆ, ಕರಾವಳಿಯ ಶ್ರೀಮಂತ ಉದ್ಯಮ ಇತಿಹಾಸದ ಪುಟ ಸೇರುವ ದಿನಗಳು ದೂರವಿಲ್ಲ.

ಕರಾವಳಿಯ ಮೀನುಗಾರರ ಬದುಕು ಸಮುದ್ರದ ಅಲೆಗಳಷ್ಟೇ ಚಂಚಲ. ಏರುತ್ತಿರುವ ತಾಪಮಾನವು ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಹೀಗೆ ಹಲವು ಕ್ಷೇತ್ರಗಳಿಗೆ ಶಾಪವಾಗಿ ಪರಿಣಮಿಸುತ್ತಿದೆ. ಹೆಚ್ಚುತ್ತಿರುವ ಬಿಸಿಲಿನಿಂದ ಉಡುಪಿಯ ಮೀನುಗಾರರ ಬದುಕು ತಲ್ಲಣಕ್ಕೊಳಗಾಗಿದ್ದು, ಅವಧಿಗೂ ಮುನ್ನವೇ ಮಲ್ಪೆ ಬಂದರಿನಲ್ಲಿ ದೋಣಿಗಳು ಲಂಗರು ಹಾಕಿ ನಿಂತಿವೆ.

- Advertisement -

ಕಳೆದ ವರ್ಷ ಅತಿಯಾದ ಮಳೆಯಿಂದ ಅವಧಿಗೂ ಮುನ್ನ ದೋಣಿಗಳನ್ನು ಬಂದರಿನಲ್ಲಿ ನಿಲ್ಲಿಸುವ ಸ್ಥಿತಿ ಒದಗಿತ್ತು.
ಈ ಬಾರಿ ಅತಿಯಾದ ಬಿಸಿಲಿನಿಂದ ಸಮುದ್ರದ ಮೇಲ್ಮೈ ಬಿಸಿಯಾಗಿದ್ದು, ಶಾಖ ತಡೆಯಲಾರದೆ ಮೀನುಗಳು ನೀರಿನಾಳಕ್ಕೆ ಇಳಿಯುವುದರಿಂದ ಮೀನುಗಾರರು ದಿನಂಪ್ರತಿ ಖಾಲಿ ಬಲೆಯೊಂದಿಗೆ ಮನೆಗೆ ಹಿಂದಿರುಗುವ ಪರಿಸ್ಥಿತಿ ಒದಗಿದೆ ಎಂಬುದು ಮೀನುಗಾರರ ಅಳಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಈ ಕುರಿತು ಈ ದಿನ.ಕಾಮ್‌ ಜತೆಗೆ ಮಾತನಾಡಿದ ಮೀನುಗಾರರು, “ಕೆಂಡದಂತಹ ಬಿಸಿಲನ್ನೂ ಲೆಕ್ಕಿಸದೆ ಸಮುದ್ರಕ್ಕೆ ಇಳಿಯುತ್ತೇವೆ. ಆದರೂ ಯಾವುದೇ ಪ್ರಯೋಜನವಿಲ್ಲ. ಈಗಾಗಲೇ ಒಂದಷ್ಟು ಪರ್ಸಿನ್‌ ಬೋಟ್‌ಗಳನ್ನು ದಡದಲ್ಲಿ ನಿಲ್ಲಿಸಲಾಗಿದೆ. ವರ್ಷದ ಆರಂಭದಲ್ಲಿ ಯತೇಚ್ಛವಾಗಿ ದೊರೆಯುತ್ತಿದ್ದ ಬಂಗುಡೆ, ಭೂತಾಯಿ ಮೀನುಗಳು ಕೂಡ ಈಗ ಬಲೆಗೆ ಸಿಗುತ್ತಿಲ್ಲ. ಆದ್ದರಿಂದ ಮೀನಿನ ದರವೂ ಏರಿಕೆಯಾಗಿದೆ. ಭರಪೂರ ಶಿಕಾರಿಯ ಸಮಯ ಮೀನಿಗೆ ಬೆಲೆ ಇರುವುದಿಲ್ಲ, ಈಗ ಕೆಜಿ ಭೂತಾಯಿ ಮೀನಿಗೆ 400 ರೂಪಾಯಿ ಇದೆ. ಆದರೆ ಬಲೆಯಲ್ಲಿ ಮೀನುಗಳಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.

ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿದ ಮೀನುಗಾರ ನವೀನ್‌, “ತಾಪಮಾನ ಅಧಿಕವಾದ್ದರಿಂದ ಶಿಕಾರಿಯಾಗುತ್ತಿಲ್ಲ. ಮೀನುಗಳು ಸಮುದ್ರದ ತಳಭಾಗ ಸೇರುತ್ತಿವೆ. ಪ್ರತಿವರ್ಷ ಬೇಸಿಗೆಯಲ್ಲೂ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಇರುತ್ತದೆ. ಈ ಸಮಯದಲ್ಲಿ ಬೈಗೆ ಮೀನಿಗೆ ಬೇಡಿಕೆ ಹೆಚ್ಚು, ನಮ್ಮ ಆದಾಯದ ಮೂಲವೇ ಭೂತಾಯಿ ಮೀನು. ಈಗ ಭೂತಾಯಿಯ ಬೆಲೆ ಮುಗಿಲು ಮುಟ್ಟಿದೆ. ಆದರೆ ನಮ್ಮ ಬಲೆಗಳಲ್ಲಿ ಮೀನಿಲ್ಲ. ಮೀನು ಇದ್ದರೆ ಬದುಕು, ಮೀನಿಲ್ಲದೆ ನಮಗೆ ಬದುಕಿಲ್ಲ” ಎಂದು ಸಂಕಟ ವ್ಯಕ್ತಪಡಿಸಿದರು.

“ಪ್ರತಿ ತಿಂಗಳು 5ನೇ ತಾರೀಖು ಸಮುದ್ರಕ್ಕೆ ಇಳಿವ ಮುನ್ನ ಪೂಜೆ ಸಲ್ಲಿಸುತ್ತೇವೆ, ಅದೊಂದು ರೂಢಿ. ಪ್ರಸಾದವನ್ನು ಸಮುದ್ರಕ್ಕೆ ಚೆಲ್ಲಿದರೆ ಶಿಕಾರಿಯಾಗುತ್ತದೆ ಎಂಬುದು ನಂಬಿಕೆ. ಈ ಬಾರಿಯೂ ಪೂಜೆ ಸಲ್ಲಿಸಿ ಪ್ರಸಾದ ನೀರಿಗೆ ಬೀರಿದ್ದೆವು. ಆದರೂ ಹೇಳಿಕೊಳ್ಳುವಂತಹ ಮೀನು ಶಿಕಾರಿಯಾಗಲಿಲ್ಲ. ಪ್ರತಿ ವರ್ಷ ಮೇ ತಿಂಗಳ ಕೊನೆಯಲ್ಲಿ ಲಂಗರು ಹಾಕುತ್ತಿದ್ದೆವು. ಈ ಬಾರಿ ಮಾರ್ಚ್‌ ಏಪ್ರಿಲ್‌ ತಿಂಗಳಲ್ಲಿಯೇ ದೋಣಿಗಳಿಗೆ ಲಂಗರು ಹಾಕಿ ನಿಲ್ಲಿಸುವ ದುಃಸ್ಥಿತಿ ಬಂದೊದಗಿದೆ. ಮೇ 14ರಂದು ನಾನೂ ಲಂಗರು ಹಾಕುತ್ತೇನೆ. ಸದ್ಯ 8 ಬೋಟ್‌ಗಳು, 10 ದೋಣಿಗಳು ನೀರಿಗೆ ಇಳಿಯುತ್ತಿದ್ದು, ದಿನವೂ ಡಿಸೇಲ್‌ಗೆ 45 ರಿಂದ 75 ಸಾವಿರ ರೂಪಾಯಿ ವೆಚ್ಚಮಾಡಿ ಖಾಲಿ ಕೈಯಲ್ಲಿ ಹಿಂದಿರುಗುತ್ತಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

ಮೀನುಗಾರರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಕವಿರಾಜ್‌ ಮಾತನಾಡಿ, “ಮೀನುಗಾರರ ಕಲ್ಯಾಣ ಮಂಡಳಿ ಸ್ಥಾಪನೆ ಮಾಡುವಂತೆ ವರುಷದ ಒಳಗೆ ಎರಡು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಇಲ್ಲಿಯವರೆಗೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಲ್ಯಾಣ ಮಂಡಳಿ ಸ್ಥಾಪನೆಯಾದರೆ ಮೀನುಗಾರರ ಮಕ್ಕಳಿಗೆ ಶೈಕ್ಷಣಿಕ ನೆರವು ಒದಗಿಸುವುದರ ಜತೆಗೆ ಆಹಾರ ಭದ್ರತೆ ಹಾಗೂ ವಸತಿ ಕಲ್ಪಿಸಿಕೊಡುವ ಯೋಜನೆಯಲ್ಲಿದ್ದೇವೆ. ಮೀನುಗಾರ ಕಾರ್ಮಿಕರಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸುವ ಬೇಡಿಕೆಯನ್ನು ಮುಂದಿಟ್ಟಿದ್ದೇವೆ” ಎಂದು ತಿಳಿಸಿದರು.

“ಬೋಟ್‌ ಒಂದು ಸಲ ಸಮುದ್ರಕ್ಕೆ ಇಳಿಯಲು ಮಂಜುಗಡ್ಡೆ, ಡೀಸೆಲ್‌, ಕಾರ್ಮಿಕರ ಆಹಾರ ಎಲ್ಲಾ ಸೇರಿದಂತೆ 5 ಲಕ್ಷ ರೂ. ವೆಚ್ಚ ತಗಲುತ್ತದೆ. 5 ರಿಂದ 6 ದಿನ ಸಮುದ್ರದಲ್ಲೇ ತಂಗಬೇಕು. ಇಷ್ಟೆಲ್ಲ ವ್ಯಯಿಸಿದ ನಂತರ ಖಾಲಿ ಕೈಯಲ್ಲಿ ಹಿಂದಿರುಗಿದರೆ ಮೀನುಗಾರರು ಸಾಲಗಾರರಾಗಿ, ಬದುಕು ಹೈರಾಣಾಗುತ್ತದೆ. ಆದ್ದರಿಂದಲೇ ಅವಧಿಗೂ ಮುನ್ನವೇ ದೋಣಿಗಳನ್ನು ಲಂಗರು ಹಾಕಿ ನಿಲ್ಲಿಸಲಾಗಿದೆ. ಇನ್ನು ಮಳೆಗಾಲ ಶುರುವಾದರೆ ಸಮುದ್ರಕ್ಕೆ ಇಳಿಯುವಂತಿಲ್ಲ. ಮೂರು ತಿಂಗಳು ಕೆಲಸವಿಲ್ಲದೆ ಖಾಲಿ ಕೂರಬೇಕು. ಮೀನುಗಾರರಿಗೆ ಬೇರೆ ಯಾವುದೇ ಆದಾಯದ ಮೂಲಗಳು ಇಲ್ಲದಿರುವುದರಿಂದ ಸರ್ಕಾರ ಮೀನುಗಾರರ ಬದುಕಿನ ಕುರಿತು ಕೊಂಚ ಕರುಣೆ ತೋರಬೇಕು” ಎಂದು ಮನವಿ ಮಾಡಿದರು.

ಇದನ್ನೂ ಓದಿ> ಉಡುಪಿ | ಸಮಾನತೆ-ಸಹಬಾಳ್ವೆ ಬಲಪಡಿಸುವಲ್ಲಿ ಬಂಧುತ್ವ ವೇದಿಕೆಯ ಆಶಯಗಳು ಪ್ರಮುಖ: ಡಾ. ಎ.ಬಿ. ರಾಮಚಂದ್ರಪ್ಪ

ಭಾರತ ಮೀನುಗಾರ ಕಾರ್ಮಿಕ ಸಂಘದ ಕಾರ್ಯದರ್ಶಿ ಸುನಿಲ್‌ ಬಜಾಲ್‌ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ಕಾರ್ಮಿಕರಿಗೆ ಕೆಲಸ ಇಲ್ಲ. ಸಮುದ್ರಕ್ಕೆ ಇಳಿಯುವ ಮೀನುಗಾರರು ಯಾವುದೇ ಜೀವ ಭದ್ರತೆಯೂ ಇಲ್ಲದೆ ಜೀವವನ್ನು ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ. ಮೀನುಗಾರಿಕೆ ಇಲಾಖೆ ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು. ಕಾರ್ಮಿಕ ಇಲಾಖೆ ತನ್ನ ಖಜಾನೆಯಲ್ಲಿನ ಹಣವನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಎಲ್ಲ ವಲಯದ ಕಾರ್ಮಿಕರನ್ನು ಸಂಘಟಿಸಿ ಮೀನುಗಾರ ಕಾರ್ಮಿಕರ ಪರವಾದ ಪ್ರತಿಭಟನೆಗೆ ಮುಂದಾಗುತ್ತೇವೆ” ಎಂದು ಎಚ್ಚರಿಸಿದರು.

ಪ್ರಕೃತಿಯ ಮುನಿಸು ಮತ್ತು ಸರ್ಕಾರದ ನಿರ್ಲಕ್ಷ್ಯದ ನಡುವೆ ಉಡುಪಿಯ ಮೀನುಗಾರರ ಬದುಕು ಇಂದು ‘ನಾವಿಕನಿಲ್ಲದ ನೌಕೆʼಯ ಸ್ಥಿತಿಯಂತಾಗಿದೆ. ಬರಿದಾಗುತ್ತಿರುವ ಬಲೆಗಳು ಮತ್ತು ಕಾದ ಸಮುದ್ರದ ಬಿಸಿ, ಕಡಲ ಮಕ್ಕಳ ಬದುಕಿನ ಕಸುವು ಕಿತ್ತುಕೊಳ್ಳುವಂತೆ ಸುಯ್ಯುವ ಮಳೆ ಒಂದೆಡೆಯಾದರೆ, ಹೆಚ್ಚುತ್ತಿರುವ ಇಂಧನ ಬೆಲೆಯಿಂದ ಮೀನುಗಾರರ ಕಸುಬು ಅಪಾಯದಲ್ಲಿ ಸಿಲುಕಿದೆ.

ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು, ಜೀವನ ಭದ್ರತೆಯಿಲ್ಲದ ಕಾಯಕದಲ್ಲಿ ತೊಡಗಿರುವ ಸಾವಿರಾರು ಕುಟುಂಬಗಳ ಕಣ್ಣೀರೊರೆಸುವ ಕೈಗಳಾಗಬೇಕಿದೆ. ಜತೆಗೆ ಮೀನುಗಾರರ ಕಲ್ಯಾಣ ಮಂಡಳಿಯ ಸ್ಥಾಪನೆ ಮತ್ತು ವೈಜ್ಞಾನಿಕ ಪರಿಹಾರ ಕ್ರಮಗಳು ಶೀಘ್ರವಾಗಿ ಜಾರಿಗೆ ಬರದಿದ್ದರೆ, ಕರಾವಳಿಯ ಶ್ರೀಮಂತ ಉದ್ಯಮ ಇತಿಹಾಸದ ಪುಟ ಸೇರುವ ದಿನಗಳು ದೂರವಿಲ್ಲ.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ ʼನೀರೋʼ; ಭಾರತ ಉರಿಯುತ್ತಿರುವಾಗ ಭಜನೆ ಮಾಡಿದ ʼಮೋದಿʼ!

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ,...

KPSC ಹಗರಣ | ಅಮಾನತಿನಲ್ಲಿರುವ ಐಎಎಸ್‌ ಗಂಗ್ವಾರ್‌ಗೆ ಜಾಮೀನು ನಿರಾಕರಣೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ...

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು: ಜನವಾದಿ ಮಹಿಳಾ ಸಂಘಟನೆ ಆಗ್ರಹ

ದೇಶದ ಚುನಾವಣಾ ಪ್ರಜಾಪ್ರಭುತ್ವದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ಮುಖ್ಯ ಚುನಾವಣಾ...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...