ಚುನಾವಣಾ ಸಮೀಕ್ಷೆ | ಮುಕ್ತ ಚರ್ಚೆ ನಡೆಸಲು ಬಿ.ಎಲ್‌ ಸಂತೋಷ್‌ಗೆ ‘ಈದಿನ.ಕಾಮ್‌’ ಆಹ್ವಾನ

Date:

ಕರ್ನಾಟಕದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈದಿನ.ಕಾಮ್ Scientific random sampling ಮೂಲಕ ರಾಜ್ಯಾದ್ಯಂತ ನಡೆಸಿದ ಚುನಾವಣಾಪೂರ್ವ ಸಮೀಕ್ಷೆಯ ಫಲಿತಾಂಶವನ್ನು ಈಗಾಗಲೇ ಪ್ರಕಟಿಸಿದೆ.

- Advertisement -

ಕೃತಕವಾಗಿ ಜನಾಭಿಪ್ರಾಯ ಉತ್ಪಾದಿಸುವ ಕೆಲಸ ನಡೆಯುವಾಗ ಬಲಾಢ್ಯರು, ಪಟ್ಟಭದ್ರ ಹಿತಾಸಕ್ತಿ ಉಳ್ಳವರ ಅನಿಸಿಕೆಗಳೇ ಜನಾಭಿಪ್ರಾಯ ಎಂದು ಬಿಂಬಿತವಾಗುತ್ತವೆ. ಹಾಗಾಗಿ ಜನರ ನಿಜವಾದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಜನರಿಗೇ ತಿಳಿಸುವ ಕೆಲಸ ಮಾಡುವುದು ಮಾಧ್ಯಮದ ಕರ್ತವ್ಯ ಎಂದು ಈದಿನ.ಕಾಮ್ ಬಲವಾಗಿ ನಂಬುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಅದೇ ಉದ್ದೇಶದಿಂದ ಈ ಚುನಾವಣಾಪೂರ್ವ ಸಮೀಕ್ಷೆಯನ್ನು ಈದಿನ.ಕಾಮ್‌ ನಡೆಸಿದೆ. ಯಾರು ಸೋಲುತ್ತಾರೆ, ಯಾರು ಗೆಲ್ಲುತ್ತಾರೆ ಎಂಬುದಕ್ಕಿಂತ ಜನರ ಸಮಸ್ಯೆಗಳು, ಯಾವ ಜಾತಿ ಸಮುದಾಯಗಳು/ಆರ್ಥಿಕ ಸ್ತರಗಳವರು ಏನು ಯೋಚಿಸುತ್ತಾರೆ ಎಂಬುದನ್ನು ಪರಿಶೀಲಿಸುವುದಕ್ಕೆ ನಾವು ಒತ್ತು ಕೊಟ್ಟಿದ್ದೆವು. ಹಾಗೆ ನೋಡಿದರೆ ಯಾರು ಮುಖ್ಯಮಂತ್ರಿ ಮುಖ ಎಂಬ ಪ್ರಶ್ನೆಯೇ ನಮ್ಮಲ್ಲಿ ಇರಲಿಲ್ಲ.

ಈಗ ನಾವು ಪ್ರಕಟಿಸಿದ ಸರ್ವೇ ಫಲಿತಾಂಶದ ಕುರಿತು ಭಿನ್ನ ಅಭಿಪ್ರಾಯಗಳು, ಟೀಕೆ, ವಿಮರ್ಶೆಗಳು ಹಾಗೂ ಮೆಚ್ಚುಗೆಗಳು ಬಂದಿವೆ. ಸಮೀಕ್ಷೆ ನಡೆಸಿರುವ ವಿಧಾನ ವೈಜ್ಞಾನಿಕವಾಗಿದೆ ಎಂದು ಹಲವರು ಹೇಳಿದ್ದಾರೆ. ಅವನ್ನು ನಾವು ಗೌರವಿಸಿ, ಸ್ವಾಗತಿಸುತ್ತೇವೆ; ಅಗತ್ಯವಿದ್ದರೆ ತಿದ್ದಿಕೊಳ್ಳುತ್ತೇವೆ.

ಇದೆಲ್ಲದರ ನಡುವೆ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, ‘ಇದು ಕೃತಕವಾಗಿ ತಯಾರಿಸಲಾದ (Cooked up) ಸಮೀಕ್ಷೆ’ಯೆಂದು ಹೇಳಿದ್ದಾರೆ. ಅವರ ಟೀಕೆ ನಿರಾಧಾರವಾದುದು. ಹಾಗಾಗಿ, ಅವರು ನಮ್ಮ ಸರ್ವೇ ವಿಧಾನ, ಡೇಟಾವನ್ನು ಖುದ್ದಾಗಿ ಪರಿಶೀಲಿಸಲು ನಮ್ಮ ಕಚೇರಿಗೆ ಬರಬೇಕೆಂದೂ, ಈ ಕುರಿತಂತೆ ಮುಕ್ತ, ಪಾರದರ್ಶಕ ಚರ್ಚೆಯನ್ನು ನಡೆಸಬೇಕೆಂದು ಪ್ರೀತಿಯಿಂದ ಆಹ್ವಾನಿಸುತ್ತಿದ್ದೇವೆ.

ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ, ವಿಜ್ಞಾನವಾಗಿ ಬೆಳೆಯುತ್ತಿರುವ ‘ಜನಾಭಿಪ್ರಾಯ ಸಂಗ್ರಹ’ದ (Psephology) ತಿಳಿವಳಿಕೆಯನ್ನು ಎಲ್ಲರೂ ಸೇರಿ ಇನ್ನಷ್ಟು ಬೆಳೆಸೋಣ. ಪೂರ್ವಗ್ರಹಗಳಿಂದ ಮುಕ್ತರಾಗಿ ಮುಕ್ತ ಚರ್ಚೆಯಲ್ಲಿ ಭಾಗಿಯಾಗೋಣ.

ಬಿ.ಎಲ್.ಸಂತೋಷ್ ಅವರ ಆಗಮನವನ್ನು ಎದುರು ನೋಡುತ್ತಿದ್ದೇವೆ…

ಸಂಪಾದಕರು,
ಈದಿನ.ಕಾಮ್ ಪರವಾಗಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2017ರಲ್ಲಿ ಚುನಾವಣಾ ಆಯೋಗವನ್ನು ನಂಬಿದ್ದೆವು, ಆದರೆ 2022ರಲ್ಲಿ ಎಸ್‌ಪಿ ಮತಗಳನ್ನು ಇಸಿ ಅಳಿಸಿದೆ: ಅಖಿಲೇಶ್ ಆರೋಪ

2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಬೆಂಬಲಿಗರ...

ಪಶ್ಚಿಮ ಬಂಗಾಳ | ಸುವೇಂದು ಅಧಿಕಾರಿಗೆ ‘ಅಲ್ಲಾಹ್ ಮೇಲಕ್ಕೆ ಟಿಕೆಟ್ ಕಾಯ್ದಿರಿಸಲಿ’ – ಹುಮಾಯೂನ್ ವಿವಾದಾತ್ಮಕ ಹೇಳಿಕೆ

ಪಶ್ಚಿಮ ಬಂಗಾಳದ ರೇಜಿನಗರ ಉಪಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ವಾಗ್ದಾಳಿಗಳು ತೀವ್ರ ಸ್ವರೂಪ...

ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಇಸಿಐ ವಿವರಣೆ ತಿರಸ್ಕರಿಸಿದ ಸಿಪಿಐಎಂ; ಸಿಇಸಿ ಪದಚ್ಯುತಿಗೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ...

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ: ವೈರಲ್ ಆಯ್ತು ರಾಹುಲ್ ಗಾಂಧಿ ‘X’ ಪೋಸ್ಟ್

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ ಎಂದು ಕಾಂಗ್ರೆಸ್ ನಾಯಕ ಹಾಗೂ...