ಕೋಮುವಾದ ಹರಡುವ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ: ಪಿಣರಾಯಿ ವಿಜಯನ್ ಆಕ್ರೋಶ

Date:

2023ರ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣೆಯಾಗಿದ್ದು, ‘ದಿ ಕೇರಳ ಸ್ಟೋರಿ’ ಚಿತ್ರದ ನಿರ್ದೇಶಕ ಸುದಿಪ್ತೋ ಸೇನ್‌ಗೆ ‘ಅತ್ಯುತ್ತಮ ನಿರ್ದೇಶಕ’ ಮತ್ತು ಚಿತ್ರಕ್ಕೆ ‘ಅತ್ಯುತ್ತಮ ಛಾಯಾಗ್ರಹಣ’ ಪ್ರಶಸ್ತಿ ನೀಡಿರುವುದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಚಿತ್ರವು ಕೋಮುವಾದವನ್ನು ಪ್ರಚೋದಿಸಿ, ಕೇರಳಕ್ಕೆ ಅವಮಾನ ಮಾಡುವ ಯತ್ನ ಮಾಡಿದೆ ಎಂದು ಆರೋಪಿಸಿರುವ ವಿಜಯನ್, ಈ ಆಯ್ಕೆಯಿಂದ ರಾಷ್ಟ್ರೀಯ ಸಮಗ್ರತೆ ಮತ್ತು ಕೋಮು ಸಾಮರಸ್ಯಕ್ಕೆ ಹೆಸರಾದ ಭಾರತೀಯ ಚಿತ್ರರಂಗವನ್ನು ತೀರ್ಪುಗಾರರು ಅವಮಾನಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಇದನ್ನು ಓದಿದ್ದೀರಾ? ನಟಿ ರಮ್ಯಾಗೆ ಅತ್ಯಾಚಾರದ ಬೆದರಿಕೆ; ಯಥಾ ಹೀರೋ ತಥಾ ಫ್ಯಾನ್ಸು

‘ದಿ ಕೇರಳ ಸ್ಟೋರಿ’ 2023ರಲ್ಲಿ ಬಿಡುಗಡೆಯಾಗಿದ್ದು, ಕೇರಳದ 32,000 ಮಹಿಳೆಯರನ್ನು ಮತಾಂತರಗೊಳಿಸಿ ಭಯೋತ್ಪಾದನಾ ಸಂಘಟನೆಗೆ ಸೇರಿಸಲಾಗಿದೆ ಎಂಬ ವಿವಾದಾತ್ಮಕ ಟೀಸರ್‌ನಿಂದಾಗಿ ರಾಜ್ಯದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಈ ಚಿತ್ರ ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿತ್ತು.

ರಾಷ್ಟ್ರೀಯ ಪ್ರಶಸ್ತಿ ವಿಜೇತರು (ಪ್ರಮುಖ ವಿಭಾಗಗಳು):

  • ಅತ್ಯುತ್ತಮ ನಟ: ಶಾರುಖ್ ಖಾನ್, ವಿಕ್ರಾಂತ್ ಮಾಸ್ಸೆ
  • ಅತ್ಯುತ್ತಮ ನಟಿ: ರಾಣಿ ಮುಖರ್ಜಿ
  • ಅತ್ಯುತ್ತಮ ಪೋಷಕ ನಟಿ: ಊರ್ವಶಿ (ಉಲ್ಲೊಜೊಕ್ಕು), ಜಾನಕಿ (ವಾಶ್)
  • ಅತ್ಯುತ್ತಮ ಪೋಷಕ ನಟ: ವಿಜಯರಾಘವನ್ (ಪೂಕಲಂ), ಮುತ್ತುಪೆಟ್ಟೈ (ಪಾರ್ಕಿಂಗ್)
  • ಅತ್ಯುತ್ತಮ ಚಿತ್ರಗಳು:
  • ಕನ್ನಡ: ಕಂದೀಲು: ಭರವಸೆಯ ಕಿರಣ
  • ಮಲಯಾಳಂ: ಉಲ್ಲೊಜೊಕ್ಕು
  • ತಮಿಳು: ಪಾರ್ಕಿಂಗ್
  • ಹಿಂದಿ: ಕಥಲ್: ಎ ಜಾಕ್‌ಫ್ರೂಟ್ ಆಫ್ ಮಿಸ್ಟರಿ
  • ಗುಜರಾತಿ: ವಾಶ್
  • ತೆಲುಗು: ಭಗವಂತ ಕೇಸರಿ
  • ಮರಾಠಿ: ಶ್ಯಾಮ್ಚಿ ಆಯಿ
  • ಬಂಗಾಳಿ: ಡೀಪ್ ಫ್ರಿಡ್ಜ್
  • ಅಸ್ಸಾಮಿ: ರಂಗತಪು 1982
  • ಪಂಜಾಬಿ: ಗಾಡ್ಡೇ ಗಾಡ್ಡೇ ಚಾ
  • ಒಡಿಯಾ: ಪುಷ್ಕರ
  • ಅತ್ಯುತ್ತಮ ಛಾಯಾಗ್ರಹಣ: ದಿ ಕೇರಳ ಸ್ಟೋರಿ
  • ಅತ್ಯುತ್ತಮ ನಿರ್ದೇಶನ: ಸುದಿಪ್ತೋ ಸೇನ್ (ದಿ ಕೇರಳ ಸ್ಟೋರಿ)
  • ಅತ್ಯುತ್ತಮ ಸಂಗೀತ ನಿರ್ದೇಶನ: ವಾತಿ (ತಮಿಳು)
  • ಅತ್ಯುತ್ತಮ ಸಾಹಸ ನಿರ್ದೇಶನ: ಹನು-ಮಾನ್ (ತೆಲುಗು)
  • ಅತ್ಯುತ್ತಮ ಧ್ವನಿ ವಿನ್ಯಾಸ: ಅನಿಮಲ್
  • ಅತ್ಯುತ್ತಮ ಸಂಕಲನ: ಪೂಕಲಂ (ಮಲಯಾಳಂ)
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೇಣುಕಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿ ವಿಚಾರಣೆಗೆ ದರ್ಶನ್‌ ಪರ ವಕೀಲರ ಆಕ್ಷೇಪ

ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ, 'ಮಾಫಿ ಸಾಕ್ಷಿ'ಯ...

ಪುರುಷರಿಗೂ ‘ಪೀರಿಯಡ್ಸ್’ ಬರಬೇಕು; ಗಂಡಸರಿಗೆ ‘ಮುಟ್ಟಾಗಿದ್ದರೆ’ ಕೆಲಸದ ನಿಯಮಗಳೇ ಬದಲಾಗುತ್ತಿದ್ದವು: ನಟಿ ಶೃತಿ ಹಾಸನ್

ಪುರುಷರಿಗೂ ಪೀರಿಯಡ್ಸ್ ಬರುವಂತಾಗಿದ್ದರೆ ಪರಿಸ್ಥಿತಿ ತೀರಾ ಭಿನ್ನವಾಗಿರುತ್ತಿತ್ತು. ಉದ್ಯೋಗ ಒಪ್ಪಂದಗಳಲ್ಲಿ 'ಋತುಚಕ್ರದ...

ಆಸ್ಕರ್ 2026: ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ ವಿಭಾಗಕ್ಕೆ ಮರಾಠಿಯ ‘ಗೋಂಧಳ್’ ಆಯ್ಕೆ

2026ರಲ್ಲಿ ನಡೆಯಲಿರುವ 99ನೇ ಸಾಲಿನ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿಯ (ಆಸ್ಕರ್) 'ಅತ್ಯುತ್ತಮ...