ಕಿರುತೆರೆಯಲ್ಲಿ ಮಿಂಚಿ, ಅಭಿಮಾನಿಗಳನ್ನು ಸಂಪಾದಿಸಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟ ಜಯರಾಮ್ ಕಾರ್ತಿಕ್ (ಜೆಕೆ) ಸಿನಿರಂಗ ತೊರೆಯಲು ನಿರ್ಧರಿಸಿದ್ದಾರೆ.
ತಮಗೆ ಗೌರವ ಇಲ್ಲದ ಕಡೆ ಇರುವುದಿಲ್ಲ. ಚೆನ್ನಾಗಿದ್ದಾಗಲೇ ಚಿತ್ರರಂಗವನ್ನು ಬಿಟ್ಟು ಹೊರಹೋಗುತ್ತೇನೆ ಎಂದು ಅವರು ಹೇಳಿದ್ದಾರೆ.
“ಹಿಂದಿ ಸಿನಿಮಾ ರಂಗದಲ್ಲಿ ಅವಕಾಶ ಸಿಕ್ಕಿತ್ತು. ಒಂದು ಸಿನಿಮಾಗೆ ನನ್ನನ್ನು ಆಯ್ಕೆ ಮಾಡಿದ್ದರು. ಆದರೆ, ಕೆಲವರು ಇಲ್ಲಿಂದಲೇ ಕರೆ ಮಾಡಿ, ನನ್ನನ್ನು ಸಿನಿಮಾ ತಂಡದಿಂದ ಕೈಬಿಡುವಂತೆ ಒತ್ತಡ ಹಾಕಿದರು. ಹಿಂದಿ ಸಿನಿಮಾದಲ್ಲಿದ್ದ ಅವಕಾಶವನ್ನು ತಪ್ಪಿಸಿದರು” ಎಂದು ಜೆಕೆ ಆರೋಪಿಸಿದ್ದಾರೆ.
“ಇದೆಲ್ಲವನ್ನು ಯಾರು ಮಾಡುತ್ತಿದ್ದಾರೆ? ಎಂಬುದನ್ನು ಸಾಬೀತು ಮಾಡಲು ಕೈಯಲ್ಲಿ ಮೊಬೈಲ್ ಹಿಡಿದು, ಎಲ್ಲವನ್ನು ರೆಕಾರ್ಡ್ ಮಾಡಬೇಕಾಗುತ್ತದೆ. ಅಂತಹ ಕೆಲಸವನ್ನು ನಾವು ಮಾಡುವುದಿಲ್ಲ. ಯಾರ್ಯಾರು ಏನೇನ್ ಮಾಡ್ತಿದ್ದಾರೆ ಅಂತ ಅವರಿಗೇ ಗೊತ್ತು” ಎಂದು ಹೇಳಿದ್ದಾರೆ.
“2022ರೊಳಗೆ ಚಿತ್ರರಂಗದಿಂದ ನಮ್ಮ ಮುಗಿಸುತ್ತೇವೆಂದು ಚಾಲೆಂಜ್ ಮಾಡಿದ್ದರು. ಅವರು ಯಾಕೆ ಹಾಗೆ ಮಾಡಿದರೋ ಗೊತ್ತಿಲ್ಲ. ನಾನಂತು ಯಾರಿಗೂ ಏನನ್ನೂ ಮಾಡಿಲ್ಲ. ಜನರ ಪ್ರೀತಿ ಸಕ್ಕಿದೆ. ಚೆನ್ನಾಗಿದ್ದಾಗಲೇ ಇಂಡಸ್ಟ್ರಿ ತೊರೆಯುತ್ತೇನೆ” ಎಂದಿದ್ದಾರೆ.
“ಸದ್ಯ ನನ್ನ ಕೈಯಲ್ಲಿ ಎರಡು ಸಿನಿಮಾಗಳಿವೆ. ಐರಾ ಮತ್ತು ಕಾರಾ. ಆ ಎರಡು ಸಿನಿಮಾಗಳನ್ನು ರಿಲೀಸ್ ಮಾಡಿದ ಬಳಿಕ, ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತೇನೆ” ಎಂದು ಹೇಳಿದ್ದಾರೆ.