​’ಭಾರತ ಬದಲಾಗಿಲ್ಲ, ಪುರುಷರಿಗೆ ಇಂದಿಗೂ ವರ್ಜಿನ್ ಪತ್ನಿಯೇ ಬೇಕು’: ನಟಿ ನೀನಾ ಗುಪ್ತಾ ಕಟು ನುಡಿ

Date:

ದೇಶ ಎಷ್ಟೇ ಮುಂದುವರಿದಿದೆ ಎಂದು ಹೇಳಿಕೊಂಡರೂ ‘ಭಾರತ ಬದಲಾಗಿಲ್ಲ’ ಹಾಗೂ ಇಲ್ಲಿನ ಕುಟುಂಬಗಳಲ್ಲಿ ಇಂದಿಗೂ ಪಿತೃಪ್ರಭುತ್ವ ಮತ್ತು ಮಹಿಳೆಯರ ಮೇಲಿನ ನಿರ್ಬಂಧಗಳು ಹಾಗೆಯೇ ಉಳಿದಿವೆ ಎಂದು ಹಿರಿಯ ನಟಿ, ‘ಪಂಚಾಯತ್’ ಖ್ಯಾತಿಯ ನೀನಾ ಗುಪ್ತಾ ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -

ಇತ್ತೀಚೆಗೆ ಶುಭಂಕರ್ ಮಿಶ್ರಾ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು, ಮಹಿಳೆಯರು ಮದುವೆಯ ನಂತರ ಗಂಡನ ಮನೆಯಲ್ಲಿ ಎದುರಿಸುವ ಸಂಕಷ್ಟಗಳ ಬಗ್ಗೆ ತಮ್ಮದೇ ಕುಟುಂಬದ ಉದಾಹರಣೆಗಳನ್ನು ನೀಡಿ ವಿವರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

​ಭಾರತೀಯ ಸಮಾಜದಲ್ಲಿ ಪುರುಷರ ಮನಸ್ಥಿತಿ ಬಗ್ಗೆ ಮಾತನಾಡಿದ ನೀನಾ, ನಮ್ಮ ದೇಶದ ಪುರುಷರು ಇಂದಿಗೂ ‘ಕನ್ಯತ್ವ’ ಇರುವ (ವರ್ಜಿನ್) ಹುಡುಗಿಯನ್ನೇ ಮದುವೆಯಾಗಲು ಬಯಸುತ್ತಾರೆ ಎಂದು ಕಟುವಾಗಿ ನುಡಿದಿದ್ದಾರೆ. ಸಮಾಜ ಬದಲಾಗಿದೆ ಎಂಬ ವಾದವನ್ನು ತಳ್ಳಿಹಾಕಿದ ಅವರು, “ಏನು ಬದಲಾಗಿದೆ? ನೀವೇ ಹೇಳಿ. ನೀವು ಮತ್ತು ನಾನು ಅಲ್ಪಸಂಖ್ಯಾತರು. ಚೆನ್ನಾಗಿ ಬಟ್ಟೆ ಧರಿಸುವ, ಇಂಗ್ಲಿಷ್ ಮಾತನಾಡುವ ನಾವು ‘ನಿಜವಾದ ಭಾರತ’ವನ್ನು ಪ್ರತಿನಿಧಿಸುವುದಿಲ್ಲ. ವಾಸ್ತವದಲ್ಲಿ ಭಾರತ ಬದಲಾಗಿಲ್ಲ. ಇಲ್ಲಿನ ಮಹಿಳೆಯರು ಇಂದಿಗೂ ತಲೆಯ ಮೇಲೆ ಸೆರಗು ಹಾಕಿಕೊಂಡು ಮಾವನ ಕಾಲಿಗೆ ನಮಸ್ಕರಿಸುತ್ತಾರೆ,” ಎಂದು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ.

ಇದನ್ನು ಓದಿದ್ದೀರಾ? ಬ್ಯಾಟ್ ಬೀಸಿದ ‘ಫಿನಿಶರ್’ಗೆ ಕ್ಲೀನ್ ಬೌಲ್ಡ್ ಆದ ಸಂಸದೆ

​ಮಹಿಳೆಯರಿಗೆ ಮದುವೆಯ ನಂತರ ತಮ್ಮ ಇಷ್ಟದ ಸಣ್ಣಪುಟ್ಟ ವಿಷಯಗಳನ್ನೂ ಪೂರೈಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಇದೆ ಎಂಬುದಕ್ಕೆ ನೀನಾ ಗುಪ್ತಾ ತಮ್ಮ ಕುಟುಂಬದ ಎರಡು ಉದಾಹರಣೆಗಳನ್ನು ನೀಡಿದ್ದಾರೆ. ತಮ್ಮ ತಂದೆಯ ಕಡೆಯ ಸಂಬಂಧಿಯೊಬ್ಬರು ಮುಂಬೈನ ದೊಡ್ಡ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುವ ವ್ಯಕ್ತಿಯನ್ನು ಮದುವೆಯಾದರು. ಆ ಹುಡುಗಿ ಸಾಯಿಬಾಬಾ ಭಕ್ತೆ. ಆಕೆ ತನ್ನ ಕೋಣೆಯಲ್ಲಿ ಸಾಯಿಬಾಬಾ ಫೋಟೋ ಇಡಲು ಬಯಸಿದಾಗ, ಆಕೆಯ ಅತ್ತೆ ಅದಕ್ಕೆ ಒಪ್ಪಲಿಲ್ಲ, ಬದಲಿಗೆ ತಾವು ಪೂಜಿಸುವ ಗುರುಗಳ ಫೋಟೋವನ್ನೇ ಹಾಕುವಂತೆ ಒತ್ತಾಯಿಸಿದರು ಎಂದು ನೀನಾ ವಿವರಿಸಿದ್ದಾರೆ.

ಇದೇ ರೀತಿ ತಮ್ಮ ಸಹೋದರನ ಮಗಳಿಗೆ ಮದುವೆಯ ನಂತರ, ಆಕೆಯ ಮಲಗುವ ಕೋಣೆಯ ಬೆಡ್‌ಸೈಡ್ ಟೇಬಲ್ ಮೇಲೆ ತನ್ನ ತವರು ಮನೆಯವರ ಫೋಟೋ ಇಟ್ಟುಕೊಳ್ಳಲೂ ಅತ್ತೆ ಒಪ್ಪಿಗೆ ನೀಡಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

​ಹೀಗಿರುವಾಗ ಸಮಾಜ ಬದಲಾಗಿದೆ ಎಂದು ಹೇಗೆ ಹೇಳಲು ಸಾಧ್ಯ? ಮಹಿಳೆಯರ ಸ್ಥಿತಿಗತಿ ಬದಲಾಗಲು ನಾವಿನ್ನೂ ಬಹುದೂರ ಸಾಗಬೇಕಿದೆ ಎಂದು ನೀನಾ ಬಹಳ ಬೇಸರದಿಂದಲೇ ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಮುದ್ರತೀರ, ಪಾರ್ಟಿ ಆಚೆಗಿನ ನೈಜ ಗೋವಾವನ್ನು ದೇಶದ ಮುಂದೆ ತರುತ್ತೇವೆ: ನಿರ್ದೇಶಕ ಆದಿತ್ಯ ಜಾಂಭಳೆ

ಗೋವಾ ಎಂದರೆ ತಕ್ಷಣವೇ ಕಣ್ಣಮುಂದೆ ಬರುವ ಸಮುದ್ರತೀರಗಳು, ಪ್ರವಾಸೋದ್ಯಮ ಹಾಗೂ ಪಾರ್ಟಿಗಳ...

ಚಿತ್ರರಂಗದ ತೀರ್ಪುಗಾರರ ಮಂಡಳಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಚಿತ್ರರಂಗದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಬೇಕು ಎಂದು ರಾಷ್ಟ್ರಪತಿ...

ರೇಣುಕಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿ ವಿಚಾರಣೆಗೆ ದರ್ಶನ್‌ ಪರ ವಕೀಲರ ಆಕ್ಷೇಪ

ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ, 'ಮಾಫಿ ಸಾಕ್ಷಿ'ಯ...