“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

Date:

ಪ್ರೇಮ್‌ ನಿರ್ದೇಶನದ “ಕೆಡಿ ದಿ ಡೆವಿಲ್‌” ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಹೆಣ್ಣು ಮಕ್ಕಳ ಘನತೆಗೆ ಧಕ್ಕೆ ತರುವ ಈ ಚಿತ್ರದ ಹಾಡುಗಳು ಭಾರೀ ಟೀಕೆಗೆ ಗುರಿಯಾಗಿದೆ.

- Advertisement -

ಧ್ರುವ ಸರ್ಜಾ ನಟನೆಯ ಕೆಡಿ ದಿ ಡೆವಿಲ್‌ ಸಿನಿಮಾದ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿದೆ. ʼಸರ್ಸೆ ನಿನ್ನ ಸೆರಗ ಸರಸೆʼ ಎಂಬ ಹಾಡು ಭಾರತದಲ್ಲಿ ಇದುವರೆಗೂ ಬಿಡುಗಡೆಗೊಂಡ ಹಾಡುಗಳಲ್ಲೇ ಅಸಭ್ಯ ಹಾಡು ಎಂಬ ಟೀಕೆಗೆ ಪಾತ್ರವಾಗಿದೆ. ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹಾಡಿನಲ್ಲಿ ಹೆಣ್ಣನ್ನು ಅವಮಾನಿಸುವ ಅಂಶಗಳೇ ಇದ್ದು ಹಿಂದೆ “ತಾಯಿನೇ ಎಲ್ಲಾ ಮಿಗಿಲ್ಯಾರು ಇಲ್ಲ..” ಎಂದು ಹಾಡಿದ್ದ ಪ್ರೇಮ್‌ ಈಗ ಇಂತಹ ಹಾಡಿನ ಗೀತರಚನೆ ಮಾಡಿರುವುದು ಅಭಿಮಾನಿಗಳಲ್ಲಿ ಅಸಮಧಾನ ಉಂಟುಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ಇನ್ನೂ ಚಿತ್ರ ತಂಡದಲ್ಲಿ ಸಂಜಯ್‌ ದತ್‌ , ಶಿಲ್ಪಾ ಶೆಟ್ಟಿ, ರಮೇಶ್‌ ಅರವಿಂದ್‌ , ವಿ. ರವಿಚಂದ್ರನ್‌ ನಂತಹ ಹಿರಿಯ ಪಾತ್ರವರ್ಗವಿದ್ದೂ ಸಿನಿತಂಡ ಹೀಗೊಂದು ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಸರ್ಸೆ ನಿನ್ನ ಸೆರ್ಗ ಹಾಡಿನಲ್ಲಿ ನೊರ ಫತೇಹಿ ಮತ್ತು ಸಂಜಯ್‌ ದತ್‌ ಹೆಜ್ಜೆ ಹಾಕಿದ್ದು, ಹಾಡಿನ ಉದ್ದಕ್ಕೂ ಡಬಲ್‌ ಮೀನಿಂಗ್‌ ಸಾಲುಗಳು ಹೆಣ್ಣನ್ನು ಭೋಗದ ವಸ್ತುವಾಗಿ ಬಿಂಬಿಸುವ ದೃಶ್ಯಗಳೇ ತುಂಬಿ ಹೋಗಿವೆ. ಸಾಮಾಜಿಕ ಜಾಲತಾಣದಲ್ಲಿ ಜೋಗಿ ಸಿನಿಮಾದ ಮೂಲಕ  ಹೆಣ್ಣಿನ ವಾತ್ಸಲ್ಯದ ಮಿಡಿತಗಳ ತೆರೆಯ ಮುಂದೆ ತಂದಿದ್ದ ಪ್ರೇಮ್‌, ಕೆಡಿ ಸಿನಿಮಾದಲ್ಲಿ ಈ ಬಗೆಯ ಸ್ರೀ ಸಂವೇದನೆಯನ್ನು ಸಂಪೂರ್ಣವಾಗಿ ಕಳೆದು ಕೊಂಡಿದ್ದಾರೆ.‌

ನೊರಾ

ಇದೆ ಸಿನಿಮಾದ ʼಅಣ್ಣತಮ್ಮ ಜೋಡೆತ್ತು ಕಣ್ರೋʼ ಎನ್ನುವ ಹಾಡಿನಲ್ಲೂ ಹೆಣ್ಣನ್ನು ನಿಂದಿಸುವ ಬಯ್ಗುಳಗಳ ʼರಂಡೆ ಮುಂಡೇರ ಕಣ್ಣು ನಿಮ್ಮ ಮೇಲೆ ಬೀಳ್ದಿರ್ಲಿ ಕಂಡ್ರೋʼ ಸಾಲು ಬಳಸಿದ್ದಾರೆ ಈ ಹಾಡನ್ನು ಪ್ರೇಮ್‌ ಹಾಡಿರುವುದು ಒಬ್ಬ ಸೃಜನಶೀಲ ವ್ಯಕ್ತಿ ತನ್ನಲ್ಲಿರುವ ಕಲಾ ಅಭಿವಯಕತಿಯನ್ನು ಹೇಗೆ ಬಳಸಬಾರದು ಎಂಬುದಕ್ಕೆ ಉದಾಹರಣೆ.

ಇನ್ನು ಧ್ರುವ ಸರ್ಜಾ ಇತ್ತೀಚಿಗೆ ವಿವಾದದ ಮೂಲಕ ಸುದ್ದಿಯಾಗುವುದೇ ಹೆಚ್ಚು, ಈ ಹಿಂದೆ ಮಾರ್ಟಿನ್‌ ಸಿನಿಮಾ ಚೆನ್ನಾಗಿಲ್ಲ ಎಂದು ವಿಮರ್ಶೆ ಮಾಡಿದವರ ಮೇಲೆ ಧೃವ ಹರಿಹಾಯ್ದಿದ್ದರು. ಪೊಗರು ಸಿನಿಮಾದ ಕೆಲ ದೃಶ್ಯಗಳು ನಿರ್ದಿಷ್ಟ ಸಮುದಾಯವನ್ನು ಅವಹೇಳಣ ಮಾಡುವಂತಿದೆ ಎಂಬ ವಿವಾದವೂ ಸರ್ಜಾ ಬೆನ್ನು ಹತ್ತಿತ್ತು. ಧ್ರುವ ಸರ್ಜಾ ನಟನೆಯ ಇತ್ತೀಚಿನ ಸಿನಿಮಾಗಳಲ್ಲಿ ಚಿತ್ರದ ಸಾಹಿತ್ಯ ಮತ್ತು ಹಾಡು ಎರಡೂ ಹಿಂಸೆಯನ್ನು ವೈಭವೀಕರಿಸುವ, ಅವಾಚ್ಯ ಸಂಭಾಷಣೆಗಳನ್ನು ಬಳಸಿ ಮಾಸ್‌ ಎಂಬ ಪರಿಕಲ್ಪನೆಯ ಸುತ್ತ ಸುತ್ತುವ ಅಸೂಕ್ಷ್ಮ ವಸ್ತುಗಳನ್ನೇ ಆಧರಿಸಿವೆ ಎನ್ನಬಹುದು.

WhatsApp Image 2026 03 17 at 2.07.14 PM

ಪ್ರಸ್ತುತ ಇತರೆ ರಾಜ್ಯದ ಸಿನಿ ಪ್ರೇಕ್ಷಕರಿಂದಲೂ ಟೀಕೆಗೆ ಒಳಗಾಗಿರುವ ʼಸರ್ಸೆ ನಿನ್ನ ಸೆರಗ..ʼ ಹಾಡು ಕನ್ನಡಿಗರ ಸಿನಿ ಅಭಿರುಚಿಯನ್ನೇ ಟೀಕಿಸುವ ಹಂತಕ್ಕೆ ತಲುಪಿದೆ. ಸಾಮಾಜಿಕ ಜಾಲತಾಣದ ಎಕ್ಸ್‌ ಖಾತೆಯೊಂದರಲ್ಲಿ ಈ ಕುರಿತು ಬರೆದ ನೆಟ್ಟಿಗನೊಬ್ಬʼ ಕನ್ನಡ ಸಿನಿಮಾ ಲೈಂಗಿಕ ಗೀಳನ್ನು ಪ್ರಚೋದಿಸುತ್ತವೆʼ ಎಂದು ಬರೆದುಕೊಂಡಿದ್ದಾರೆ.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿಯಿಂದ ಗುಜರಾತ್‌ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಆಯೋಜನೆಯ ಹಿಂದಿನ ಮರ್ಮವೇನು?

ಹಲವು ದಶಕಗಳಿಂದ ಅತ್ಯಂತ ಶಿಸ್ತುಬದ್ಧವಾಗಿ ನಡೆದುಕೊಂಡು ಬಂದಿದ್ದ ಸಂಪ್ರದಾಯ ಹಾಗೂ ನಿಯಮಗಳನ್ನು...

ಮೈಸೂರು ಯುವ ದಸರಾ: ಉದ್ಘಾಟಕರಾಗಿ ನಟ ಪ್ರಭುದೇವ್‌ಗೆ ಅಧಿಕೃತ ಆಹ್ವಾನ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಸಿದ್ಧತೆಗಳು ಬಿರುಸುಗೊಂಡಿದ್ದು, ದಸರೆಯ ಪ್ರಮುಖ ಆಕರ್ಷಣೆಗಳಲ್ಲಿ...

ನಟ ದುನಿಯಾ ವಿಜಯ್‌ ಮತ್ತು ಪತ್ನಿ ನಾಗರತ್ನಗೆ ವಿಚ್ಛೇದನ ಮಂಜೂರು ಮಾಡಿದ ಹೈಕೋರ್ಟ್

ಸ್ಯಾಂಡಲ್‌ವುಡ್ ನಟ ‘ದುನಿಯಾ ವಿಜಯ್’ ಮತ್ತು ಅವರ ಪತ್ನಿ ನಾಗರತ್ನರ ದೀರ್ಘಕಾಲದ...