ನಟ ಶಿವರಾಜ್‌ಕುಮಾರ್ ಜನ ಪರವಾಗಿ ನಿಲ್ಲಬೇಕು; ನಟ ಪ್ರಕಾಶ್‌ ರಾಜ್ ಕರೆ

Date:

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರಿಗೆ ನೋಟಿಸ್ ನೀಡಿದೆ. ಶಿವರಾಜ್‌ಕುಮಾರ್, ಬೇರೆ ಯಾರೇ ಗಣ್ಯರು ಇರಬಹುದು ನಾನು ಅವರನ್ನು ಕೇಳುತ್ತೇನೆ. ಚುನಾವಣಾ ಅಧಿಕಾರಿಗಳು ಮನೆಗೆ ಬಂದ ಕೂಡಲೇ ನೀವು ನಮೂನೆ-6 ಅನ್ನು ಹಾಕಿ ಬಿಡುತ್ತೀರೇ? ಮತಹಕ್ಕು ಕಳೆದುಕೊಳ್ಳುತ್ತಿರುವ ಜನರ ಪರವಾಗಿ ನೀವು ನಿಲ್ಲುವುದಿಲ್ಲವೇ ಎಂದು ಬಹುಭಾಷಾ ನಟ ಪ್ರಕಾಶ್‌ ರಾಜ್ ಪ್ರಶ್ನಿಸಿದ್ದಾರೆ.

- Advertisement -

ಶನಿವಾರ, ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಎಸ್‌ಐಆರ್ ವಿರೋಧಿ ಒಕ್ಕೂಟ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. “ಇದು ಯಾವುದೋ ಒಬ್ಬರ ವ್ಯಕ್ತಿತ್ವ ಅಲ್ಲ, ಇದು ಭಾರತ ದೇಶದಲ್ಲಿ ಎಲ್ಲರಿಗೂ ಆಗುತ್ತಿರುವ ಸಮಸ್ಯೆ. ನಾಚಿಕೆ ಮಾನ ಮರ್ಯಾದೆ, ಸಮಾನತೆ ಅನ್ನುವುದು ಇಲ್ಲದೇ, ಚುನಾವಣಾ ಆಯೋಗ ದೊಡ್ಡ ದೊಡ್ಡವರ ಹೆಸರು ಆಕಸ್ಮಿಕವಾಗಿ ತಪ್ಪಾಗಿ ತೆಗೆದರೆ ಅವರವರ ಮನೆಗೆ ಹೋಗಿ ಮಾಹಿತಿ ತುಂಬಿಸಿಕೊಳ್ಳುತ್ತಿದ್ದಾರೆ. ಬೇರೆ ನಾಗರಿಕರು ಅವರಿಗಿಂತ ಕಮ್ಮಿನೇ? ಅವರು ಮನುಷ್ಯರು ಅಲ್ಲವೇ? ಅದೇನು ಕೆಲವರಿಗೆ ಹೊಸ ಮಣೆ ಹಾಕುತ್ತೀರಾ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

“ಎಎಸ್‌ಡಿಡಿಒ ವರ್ಗದಲ್ಲಿ ಡಿಲೀಟ್ ಆದವರು, ನಮೂನೆ-6 ತುಂಬಿ ಮರು ನೊಂದಾಯಿಸಿಕೊಳ್ಳಿ ಎಂದು ಆಯೋಗ ಹೇಳುತ್ತಿದೆ. ಇದರಲ್ಲಿ ‘ನಾನು ತಪ್ಪು ಮಾಹಿತಿ ನೀಡಿದ್ದಲ್ಲಿ ಒಂದು ವರ್ಷದ ಶಿಕ್ಷೆಯ ಜೊತೆಗೆ ದಂಡಕ್ಕೆ ಒಳಪಡಬೇಕಾಗುತ್ತದೆ ಎಂಬ ಅರಿವು ನನಗಿದೆ’ ಎಂದು ಘೋಷಣಾ ಪತ್ರಕ್ಕೆ ಸಹಿ ಹಾಕಿಸಲಾಗುತ್ತಿದೆ. ಆದರೆ, ಅದೇ ಸಂದರ್ಭದಲ್ಲಿ ನಮೂನೆ-6 ತುಂಬುವಾಗ ‘ನಾನು ಮೊದಲ ಬಾರಿಗೆ ನನ್ನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಅರ್ಜಿ ನೀಡುತ್ತಿದ್ದೇನೆ’ ಎಂಬ ಸುಳ್ಳು ಘೋಷಣೆ ಕೊಡಿ ಎಂದು ಕೇಳಲಾಗುತ್ತಿದೆ. ಇದು ಅಕ್ರಮ ಅಪರಾಧ. ಚುನಾವಣಾ ಆಯೋಗವೇ ಇಂತಹ ಹಸಿಸುಳ್ಳಿನ ಅಕ್ರಮ ಕೆಲಸವನ್ನು ಮತದಾರರಿಂದ ಮಾಡಿಸಬಹುದೇ” ಎಂದು ಅವರು ಪ್ರಶ್ನಿಸಿದರು.

“ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹಲವು ಗೊಂದಲಗಳು, ತಪ್ಪುಗಳು ನಡೆಯುತ್ತಿವೆ. ಎಸ್‌ಐಆರ್ ಅನ್ನುವುದು ಒಂದು ವಂಚನೆ. ಆ.24ರಂದು ಚುನಾವಣಾ ಆಯೋಗ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಿರುವ ಕರಡುಪಟ್ಟಿಯಲ್ಲಿ ಸಾಕಷ್ಟು ತಪ್ಪುಗಳಿವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮತಗಟ್ಟೆಯಲ್ಲಿ ಕರಡು ಪಟ್ಟಿಯನ್ನು ಹೋಲಿಕೆ ಮಾಡಿ ನೋಡಿದಾಗ ಒಂದೇ ಎಪಿಕ್ ನಂಬರ್ ಇದ್ದರೂ ಕನ್ನಡ ಮತ್ತು ಇಂಗ್ಲಿಷ್ ಪಟ್ಟಿಗಳಲ್ಲಿ ಬೇರೆ ಬೇರೆ ಹೆಸರುಗಳು ಕಾಣಿಸುತ್ತಿವೆ, ಮತಪಟ್ಟಿಯಲ್ಲಿ ಹಲವು ಲೋಪಗಳಿವೆ” ಎಂದು ಅವರು ಆರೋಪ ಮಾಡಿದರು.

“ಎಸ್‌ಐಆರ್ ನಿಂದ ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಸಾಮಾನ್ಯ ನಾಗರಿಕರು ಕಚೇರಿಗಳ ಮುಂದೆ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇವತ್ತು ಕರ್ನಾಟಕದ ಪ್ರಜೆಗಳು ಲೈನ್‌ನಲ್ಲಿ ನಿಂತುಕೊಂಡು ತಮ್ಮ ಮತದಾನದ ಹಕ್ಕಿಗಾಗಿ ಬೇಡಿಕೊಳ್ಳುವ ಸ್ಥಿತಿ ಬಂದಿದೆ. ಭಾರತದಲ್ಲಿ ಮತದಾನದ ಹಕ್ಕು ಎಲ್ಲರಿಗೂ ಸಮಾನವಾಗಿರಬೇಕು. ಶ್ರೀಮಂತ–ಬಡ, ಪ್ರಸಿದ್ಧ–ಸಾಮಾನ್ಯ ಎಂಬ ಯಾವುದೇ ಭೇದ ಇರಬಾರದು. ಭಾರತ ದೇಶದಲ್ಲಿ ನೀವು ಶ್ರೀಮಂತರೋ, ಬಡವರೋ, ಗಣ್ಯರು ಹೌದೋ ಅಲ್ಲವೋ ಎಲ್ಲ ಪ್ರಜೆಗಳೂ ಒಂದೇ” ಎಂದು ಪ್ರಕಾಶ್‌ರಾಜ್ ಹೇಳಿದರು.

“ಸೆ.22 ರಿಂದ 30ರ ವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ‘ಎಸ್‌ಐಆರ್ ಅಧ್ಯಯನ ಅಭಿಯಾನ’ ನಡೆಸಲಾಗುವುದು. ತಂಡಗಳು ರಾಜ್ಯದಾದ್ಯಂತ ಸಂಚರಿಸಿ ಮತದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ತಿಂಗಳ ಅಂತ್ಯದಲ್ಲಿ ಸಮಗ್ರ ವರದಿ ಬಿಡುಗಡೆ ಮಾಡಲಾಗುವುದು. ಎಸ್‌ಐಆರ್ ಜಾರಿಯಲ್ಲಿರುವ ಅಥವಾ ಜಾರಿಯಾಗಿರುವ ವಿವಿಧ ರಾಜ್ಯಗಳ ಜೀವಂತ ಸಾಕ್ಷö್ಯಗಳನ್ನು ಒಟ್ಟುಗೂಡಿಸಿ ಅ.15 ರಂದು ದಿಲ್ಲಿಯಲ್ಲಿ ರಾಷ್ಟ್ರೀಯ ಪಬ್ಲಿಕ್ ಹಿಯರಿಂಗ್’ ನಡೆಸಲಾಗುತ್ತದೆ” ಪ್ರಕಾಶ್ ರಾಜ್ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು ‘ರನ್‌ಆಫ್’ ವ್ಯವಸ್ಥೆ, ಭಾರತಕ್ಕೂ ಇದು ಅಗತ್ಯವೇ?

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ, ಪೊಲೀಸರು, ಕಟ್ಟಡ ಕಾರ್ಮಿಕರಿಗೂ ಆಘಾತ!

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್,...

ವಿಜಯಪುರ | ಅಂತಿಮ ಮತದಾರರ ಪಟ್ಟಿ ಪ್ರಕಟ: ನಾಗಠಾಣದಲ್ಲಿ ಅತಿ ಹೆಚ್ಚು ಮತದಾರರು

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು...