ನ್ಯಾಯಕ್ಕಾಗಿ ಹೋರಾಡಿದ್ದಕ್ಕೆ ಟಿ-ಸೀರೀಸ್, ಜೀ ಮ್ಯೂಸಿಕ್ ನನ್ನನ್ನು ಬ್ಯಾನ್ ಮಾಡಿದ್ದವು: ಸೋನು ನಿಗಮ್

Date:

ಗಾಯಕರ ಹಕ್ಕುಸ್ವಾಮ್ಯ (ಕಾಪಿರೈಟ್) ಮತ್ತು ರಾಯಲ್ಟಿ ಹಕ್ಕುಗಳ ಪರವಾಗಿ ಧ್ವನಿ ಎತ್ತಿದ್ದಕ್ಕಾಗಿ ಟಿ-ಸೀರೀಸ್ ಮತ್ತು ಜೀ ಮ್ಯೂಸಿಕ್‌ನಂತಹ ಪ್ರಮುಖ ಆಡಿಯೋ ಕಂಪನಿಗಳು ನನ್ನನ್ನು ಬ್ಯಾನ್ ಮಾಡಿದ್ದವು ಎಂದು ಖ್ಯಾತ ಗಾಯಕ ಸೋನು ನಿಗಮ್ ತಮ್ಮ ವೃತ್ತಿಜೀವನದ ಅತ್ಯಂತ ಕಷ್ಟಕರ ಹಂತವನ್ನು ಬಿಚ್ಚಿಟ್ಟಿದ್ದಾರೆ. ಕೋಮಲ್ ನಾಹ್ತಾ ಅವರ ‘ಗೇಮ್ ಚೇಂಜರ್ಸ್: ದಿ ಮ್ಯೂಸಿಕ್ ಸೀರೀಸ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು, ಈ ಹಕ್ಕುಗಳ ಹೋರಾಟಕ್ಕಾಗಿ ತಾವು ವೃತ್ತಿಪರವಾಗಿ ಭಾರಿ ಬೆಲೆ ತೆರಬೇಕಾಯಿತು. ಆದರೆ, ಈ ಹೋರಾಟವು ಅಂತಿಮವಾಗಿ ಭಾರತೀಯ ಸಂಗೀತ ಉದ್ಯಮದ ಚಿತ್ರಣವನ್ನೇ ಬದಲಾಯಿಸಿತು ಎಂದು ಹೇಳಿದ್ದಾರೆ.

- Advertisement -

ತಮ್ಮ ವೃತ್ತಿಜೀವನದ ಉತ್ತುಂಗದ ದಿನಗಳನ್ನು ಸ್ಮರಿಸಿದ ಸೋನು, “ನನ್ನ ಕಾಲವೊಂದು ಬಂತು, ಅದು ಕಳೆಯಿತು, ಈಗ ಮತ್ತೆ ಆ ಕಾಲ ಮರಳಿ ಬಂದಿದೆ. ನಾನು ಉತ್ತುಂಗದಲ್ಲಿದ್ದಾಗ ಜನ ನನ್ನ ಆಲ್ಬಮ್‌ಗಳಿಗೆ ಹುಚ್ಚೆದ್ದು ಬೆಂಬಲಿಸುತ್ತಿದ್ದರು. ನನ್ನ ಪೋಸ್ಟರ್‌ಗಳು ಕೂಡ ಮಾರಾಟವಾಗುತ್ತಿದ್ದವು. ಆದರೆ, ನಾನು ಯಾವಾಗ ಗಾಯಕರ ಹಕ್ಕುಸ್ವಾಮ್ಯದ ವಿಷಯವನ್ನು ಪ್ರಸ್ತಾಪಿಸಿದೆನೋ, ಆಗ ಟಿ-ಸೀರೀಸ್ ನನ್ನನ್ನು ಬ್ಯಾನ್ ಮಾಡಿತು. ಜೀ ಮ್ಯೂಸಿಕ್ ಕೂಡ ನನ್ನೊಡನೆ ಕೆಲಸ ಮಾಡುವುದನ್ನು ನಿಲ್ಲಿಸಿತು. ‘ಅವನೊಬ್ಬ ಹೋರಾಟಗಾರನಾಗಿದ್ದಾನೆ’ (ಆಕ್ಟಿವಿಸ್ಟ್) ಎಂದು ಅವರು ನನ್ನನ್ನು ದೂರವಿಟ್ಟರು” ಎಂದು ಕಹಿ ಘಟನೆಯನ್ನು ನೆನಪಿಸಿಕೊಂಡರು. ಅಷ್ಟೇ ಅಲ್ಲದೆ, ನ್ಯಾಯಸಮ್ಮತವಲ್ಲದ ಒಪ್ಪಂದಗಳಿಗೆ ಸಹಿ ಹಾಕಲು ನಿರಾಕರಿಸಿದಾಗ, ತಾವು ಹಾಡಿದ್ದ ಹಾಡುಗಳನ್ನು ತೆಗೆದುಹಾಕಿ ಬೇರೆ ಗಾಯಕರಿಂದ ಹಾಡಿಸಲಾಯಿತು ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ:...

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು ಮುನ್ನಲೆಗೆ ತರುವ ಬಿಜೆಪಿ ತಂತ್ರವಾದರೆ, ಮತ್ತೊಂದೆಡೆ ವಿಜಯೇಂದ್ರ ನಾಯಕತ್ವದ ಶಕ್ತಿ ಪ್ರದರ್ಶನ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆಗೆ ಗೈರಾಗಿರುವಂತಹ...

AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ...

ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ ಆಳವಾದ ಅಧ್ಯಯನಕ್ಕೆ ಬಿದ್ದಿದೆ ಕತ್ತರಿ. ತಂತ್ರಜ್ಞಾನದಿಂದ ನಮಗೆ ಹಲವು ಅನುಕೂಲವಿದೆ ಎಂಬುದು ಸ್ಫುಟ. ಆದರೆ ಅನುಕೂಲವನ್ನು ಸ್ವೀಕರಿಸುವ ಜತೆಗೆ, ಅದರಿಂದಾಗುವ...

ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕೆ ತಮ್ಮ ವೃತ್ತಿಬದುಕಿಗೆ ಇಷ್ಟೊಂದು ದೊಡ್ಡ ಪೆಟ್ಟು ಬೀಳಬಹುದು ಎಂದು ತಾವೆಂದೂ ಊಹಿಸಿರಲಿಲ್ಲ ಎಂದಿರುವ ಸೋನು ನಿಗಮ್, “ಯಾವಾಗ ನನಗೆ ಅವಕಾಶದ ಬಾಗಿಲುಗಳು ಮುಚ್ಚುತ್ತಿದ್ದವು ಎಂಬುದು ಅರಿವಾಯಿತೋ, ಆಗ ಅವರು ನನಗೆ ಹಾಡಲು ಅವಕಾಶ ನೀಡದಿರಬಹುದು, ಆದರೆ ವೇದಿಕೆ ಮೇಲೆ ಲೈವ್ ಆಗಿ ಹಾಡುವುದನ್ನು (ಲೈವ್ ಕನ್ಸರ್ಟ್) ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ನಾನು ಅರಿತುಕೊಂಡೆ” ಎಂದಿದ್ದಾರೆ.

“ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಅಂದು ನನ್ನನ್ನು ಬ್ಯಾನ್ ಮಾಡಿದ್ದ ಅದೇ ಮ್ಯೂಸಿಕ್ ಕಂಪನಿಗಳು ಇಂದು ಗಾಯಕರಿಗೆ ರಾಯಲ್ಟಿ ಪಾವತಿಸುತ್ತಿವೆ. ನಾವೀಗ ಒಟ್ಟಿಗೆ ಕುಳಿತು ಊಟ ಮಾಡುವಷ್ಟು ಆತ್ಮೀಯರಾಗಿದ್ದೇವೆ. ಯಾರಾದರೊಬ್ಬರು ಬೆಕ್ಕಿಗೆ ಗಂಟೆ ಕಟ್ಟಲೇಬೇಕಿತ್ತು. ದಿಗ್ಗಜ ಗಾಯಕಿ ಲತಾ ಮಂಗೇಶ್ಕರ್ ಅವರು ಆರಂಭಿಸಿದ್ದ, ಆದರೆ ಪೂರ್ಣಗೊಳಿಸಲಾಗದ ಈ ಹೋರಾಟವನ್ನು ಮುಂದುವರಿಸಲೆಂದೇ ದೇವರು ನನ್ನನ್ನು ಆರಿಸಿದ್ದ” ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ. 2012ರಲ್ಲಿ ಜಾರಿಗೆ ಬಂದ ಕೃತಿಸ್ವಾಮ್ಯ (ತಿದ್ದುಪಡಿ) ಕಾಯ್ದೆಯು ಗಾಯಕರ ಹಕ್ಕುಗಳನ್ನು ಮತ್ತಷ್ಟು ಬಲಪಡಿಸಿತು. ತಾನು ಕೇಳಿದ್ದು ನ್ಯಾಯಬದ್ಧವಾಗಿದೆ ಮತ್ತು ತಾನು ತಪ್ಪು ಮಾಡಿರಲಿಲ್ಲ ಎಂಬುದು ಸಂಗೀತ ಕಂಪನಿಗಳಿಗೆ ಈಗ ಮನವರಿಕೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಮ್ಮನ್ನು ದೂರವಿಟ್ಟವರನ್ನು ಕ್ಷಮಿಸಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೋನು, “ಬೇರೆಯವರನ್ನು ಕ್ಷಮಿಸಲು ನಾನಾರು? ನಾನು ಅಷ್ಟು ದೊಡ್ಡವನಲ್ಲ” ಎಂದು ವಿನಮ್ರವಾಗಿ ಉತ್ತರಿಸಿದ್ದಾರೆ. ಸದ್ಯ ‘ಲಾಲ್ ಸಿಂಗ್ ಚಡ್ಡಾ’, ‘ಶಹಜಾದಾ’, ‘ಬಾರ್ಡರ್-2’ ಮುಂತಾದ ಚಿತ್ರಗಳಲ್ಲಿ ಸಾಲುಸಾಲು ಹಾಡುಗಳೊಂದಿಗೆ ಮತ್ತೆ ಬ್ಯುಸಿಯಾಗಿರುವ ಅವರು, “ಮತ್ತೆ ಜನ ನನ್ನ ಹಾಡುಗಳನ್ನು ಗುನುಗುತ್ತಿದ್ದಾರೆ. 30 ವರ್ಷಗಳ ಹಿಂದಿನ ಹಾಡುಗಳಿಗೂ ಹೊಸ ಕೇಳುಗರು ಹುಟ್ಟಿಕೊಳ್ಳುತ್ತಿದ್ದಾರೆ. ಎಲ್ಲವೂ ಸಮಯದ ಆಟ, ಈಗ ಎಲ್ಲರಿಗೂ ಅವಕಾಶದ ಬಾಗಿಲು ತೆರೆದಿದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ ಶಕ್ತಿಗೆ ಕತ್ತರಿ

ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ...

ಮೋದಿಯ ಮೋಸದ UPI ಶುಲ್ಕ ನೀತಿ; ತೀವ್ರ ವಿರೋಧದ ನಡುವೆಯೂ ಜಾರಿಗೆ ಮುಂದಾದ ಕೇಂದ್ರ

₹2,000ಕ್ಕಿಂತ ಹೆಚ್ಚಿನ UPI ವಹಿವಾಟುಗಳಿಗೆ ಪ್ರಸ್ತಾಪಿಸಿರುವ ಶೇ 0.4ರಷ್ಟು ಮರ್ಚೆಂಟ್ ಡಿಸ್ಕೌಂಟ್...

ಕಲಬುರಗಿ | ಪಿಎಸ್‌ಐ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾದ ಪೊಲೀಸ್ ಪೇದೆ

ಖಾಕಿ ಧರಿಸಿ ರಕ್ಷಣೆ ಮಾಡಬೇಕಾದವರೇ ಅಪರಾಧ ಕೃತ್ಯಕ್ಕೆ ಇಳಿದಿರುವ ಘಟನೆ...

ಪ್ರಜಾಪ್ರಭುತ್ವದ ಅಣಕ: ಪಕ್ಷಾಂತರಕ್ಕಾಗಿ ಶಾಸಕರ ರಾಜೀನಾಮೆ ಮತ್ತು ಮರು ಸ್ಪರ್ಧೆಗೆ ಮದ್ರಾಸ್ ಹೈಕೋರ್ಟ್ ಕಿಡಿ

ಚುನಾವಣೆಯಲ್ಲಿ ಗೆದ್ದ ಕೆಲವೇ ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷಾಂತರಗೊಂಡು...