‘ವೆಟ್ಟುವಂ’ | ಪಾ ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ!

Date:

ನಿರ್ದೇಶಕ ಪಾ ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ವೆಟ್ಟುವಂ’ ಚಿತ್ರವನ್ನು ‘ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್’ ಸಂಸ್ಥೆಯ ಸಹಯೋಗದೊಂದಿಗೆ, ಪಾ ರಂಜಿತ್ ಅವರ ‘ನೀಲಂ ಪ್ರೊಡಕ್ಷನ್ಸ್’ ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ ‘ವರ್ಲ್ಡ್ ಆಫ್ ವೆಟ್ಟುವಂ’ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಇದೀಗ, ಶುಕ್ರವಾರ ಸಂಜೆ, ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಲಿದೆ.

- Advertisement -

‘ವರ್ಲ್ಡ್ ಆಫ್ ವೆಟ್ಟುವಂ’ ಟೀಸರ್‌ ತಮಿಳು ಮಾತ್ರವಲ್ಲದೆ ಕನ್ನಡ, ಹಿಂದಿ, ತೆಲುಗು ಹಾಗೂ ಮಲಯಾಳಂ  ಭಾಷೆಗಳಲ್ಲೂ ಬಿಡುಗಡೆಯಾಗಿದೆ. ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಟೀಸರ್‌ನ ಕನ್ನಡ ಆವೃತ್ತಿಗೆ ನಟ ಕಿಚ್ಚ ಸುದೀಪ್, ಹಿಂದಿ ಆವೃತ್ತಿಗೆ ನಟ ಪಂಕಜ್ ತ್ರಿಪಾಠಿ, ತೆಲುಗು ಆವೃತ್ತಿಗೆ ನಟ ರಾಣಾ ದಗ್ಗುಬಾಟಿ ಹಾಗೂ ಮಲಯಾಳಂ ಆವೃತ್ತಿಗೆ ನಟ ಸೌಬಿನ್ ಸಾಹಿರ್ ಧ್ವನಿ ನೀಡಿದ್ದಾರೆ. ನಿರ್ದೇಶಕ ಪಾ ರಂಜಿತ್ ತಮಿಳು ಅವತರಣಿಕೆಗೆ ಧ್ವನಿ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

UPI ಮೇಲಿನ ಶುಲ್ಕದ ನೆರಳು: ಜನರ ವಿಶ್ವಾಸವಿಲ್ಲದ ಡಿಜಿಟಲ್...

ಡಿಜಿಟಲ್ ಭಾರತವೆಂದರೆ ಕೇವಲ ಮೊಬೈಲ್‌ನಲ್ಲಿ ಕಾಣಿಸುವ QR ಕೋಡ್ ಅಲ್ಲ; ಬದಲಿಗೆ ಅದು ಕೋಟ್ಯಂತರ ಜನರ ಬದುಕು. ಆ ಬದುಕಿನ ಮೇಲೆ ಯಾವುದೇ ಹೆಚ್ಚುವರಿ ಹೊರೆ ಬೀಳದಂತೆ ನೋಡಿಕೊಳ್ಳುವುದು ಸರ್ಕಾರದ ನಿಜವಾದ ಜವಾಬ್ದಾರಿ. ಒಂದು...

ಚಾಮರಾಜ ಕ್ಷೇತ್ರದ ಮೇಲೆ ‘ನಿರುದ್ಯೋಗಿ’ ಪ್ರತಾಪ್ ಸಿಂಹ ಕಣ್ಣು;...

ಎರಡು ಬಾರಿ ಸಂಸದರಾಗಿದ್ದ ಪ್ರತಾಪ್ ಸಿಂಹ ಈಗ 2028ರ ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಟಿ. ನರಸೀಪುರದ ಗಣೇಶೋತ್ಸವದಿಂದ ಹಿಡಿದು ಮೈಸೂರಿನ ಹಲವು ಧಾರ್ಮಿಕ–ಸಾಂಸ್ಕೃತಿಕ ವಿವಾದಗಳವರೆಗೆ ಮತ್ತೆ ಮುಂಚೂಣಿಯಲ್ಲಿ...

ಬೆಳಗಾವಿ | ಕೆಡಿಪಿ ಸಭೆಗೆ 13 ಶಾಸಕರು ಗೈರು:...

ಬೆಳೆ ಹಾನಿ ಸಂಭವಿಸಿದರೆ ರೈತರಿಗೆ ಬೆಳೆ ವಿಮೆ, ಪರಿಹಾರ ಹಾಗೂ ನೀರಿನ ನೆರವು ಅಗತ್ಯವಾಗುತ್ತದೆ. ಈ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಮುಂದೆ ಸಮಗ್ರವಾಗಿ ಪ್ರಸ್ತಾಪಿಸಿ ಪರಿಹಾರಕ್ಕೆ ಒತ್ತಾಯಿಸುವ ಜವಾಬ್ದಾರಿ ಆಯಾ ಕ್ಷೇತ್ರದ ಜನಪ್ರತಿನಿಧಿಗಳ...

ಅಪೋಕಲಿಪ್ಸ್ ಹಿನ್ನೆಲೆಯಲ್ಲಿ, ಭವ್ಯವಾದ ಆಕ್ಷನ್ ದೃಶ್ಯಗಳೊಂದಿಗೆ ತಯಾರಾಗಿರುವ ‘ವೆಟ್ಟುವಂ’, ವಿವಿಧ ಗುಂಪುಗಳ ನಡುವಿನ ಪೈಪೋಟಿ, ಘರ್ಷಣೆಗಳು ಹಾಗೂ ಅವುಗಳಿಂದ ಉಂಟಾಗುವ ಅನಿರೀಕ್ಷಿತ ಘಟನೆಗಳನ್ನು ಕಥೆ ಒಳಗೊಂಡಿದೆ. ವಿಶಿಷ್ಟವಾದ ಜಾಗತಿಕ ಪರಿಸರದಲ್ಲಿ ರೂಪುಗೊಂಡಿರುವ ಈ ಚಿತ್ರವು ಭವ್ಯವಾದ ದೃಶ್ಯಾವಳಿಗಳನ್ನು ಮತ್ತು ಬಲವಾದ ಆಕ್ಷನ್ ಕಥಾಹಂದರವನ್ನು ಹೊಂದಿದೆ.

ಚಿತ್ರದಲ್ಲಿರುವ ಆಕ್ಷನ್ ದೃಶ್ಯಗಳನ್ನು ‘ಅಡಿಮುರೈ’ ಮತ್ತು ‘ಮಲ್ಲಕಂಬ’ ಸೇರಿದಂತೆ ಸಾಂಪ್ರದಾಯಿಕ ಆತ್ಮರಕ್ಷಣೆ ಮತ್ತು ಸಮರ ಕಲೆಗಳ ಆಧಾರದ ಮೇಲೆ ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ ಚಿತ್ರದಲ್ಲಿ ನಟಿಸಿರುವ ಎಲ್ಲ ನಟರು ಈ ಕಲೆಗಳ ತರಬೇತಿ ಪಡೆದಿದ್ದಾರೆ. ಇದರಿಂದಾಗಿ ಆಕ್ಷನ್ ದೃಶ್ಯಗಳಿಗೆ ನೈಸರ್ಗಿಕ ಸ್ಪರ್ಶ ಸಿಕ್ಕಿದ್ದು, ವಿಭಿನ್ನವಾದ ದೃಶ್ಯ ಅನುಭವವನ್ನು ತೆರೆಯ ಮೇಲೆ ಸೃಷ್ಟಿಸಲಾಗಿದೆ.

Advertisements

ಆರ್ಯ, ದಿನೇಶ್, ಶಬೀರ್, ಶೋಭಿತಾ ಧುಲಿಪಾಲ, ಕಲೈಯರಸನ್ ಸೇರಿದಂತೆ ಪ್ರಮುಖ ನಟರು ನಟಿಸಿರುವ ಈ ಚಿತ್ರವು ಭವ್ಯ ಪ್ರಪಂಚ, ಅದ್ಭುತ ಆಕ್ಷನ್ ಹಾಗೂ ಕಮರ್ಷಿಯಲ್ ಅಂಶಗಳೊಂದಿಗೆ ಮೂಡಿಬಂದಿದೆ.

ಪಾ. ರಂಜಿತ್ ಭಾರತದಲ್ಲಿ ಗಮನ ಸೆಳೆಯುತ್ತಿರುವ ನಿರ್ದೇಶಕರಾಗಿರುವುದರಿಂದ, ‘ವೆಟ್ಟುವಂ’ ಚಿತ್ರದ ಘೋಷಣೆಯು ಸಿನಿರಂಗದಲ್ಲಿ ಗಮನಾರ್ಹ ನಿರೀಕ್ಷೆ ಸೃಷ್ಟಿಸಿದೆ.

ಚಿತ್ರದ ತಾಂತ್ರಿಕ ತಂಡದಲ್ಲಿ ಕಲಾ ನಿರ್ದೇಶಕರಾಗಿ ಎಸ್.ಎಸ್. ಮೂರ್ತಿ, ಛಾಯಾಗ್ರಾಹಕರಾಗಿ ರೂಪೇಶ್ ಶಾಜಿ, ಸಂಕಲನಕಾರರಾಗಿ ಸೆಲ್ವಾ ಆರ್.ಕೆ., ಸಂಗೀತ ನಿರ್ದೇಶಕರಾಗಿ ಜಿ.ವಿ. ಪ್ರಕಾಶ್ ಕುಮಾರ್ ಮತ್ತು ಸಾಹಸ ನಿರ್ದೇಶಕರಾಗಿ ದಿಲೀಪ್ ಸುಬ್ಬರಾಯನ್ ಕಾರ್ಯನಿರ್ವಹಿಸಿದ್ದಾರೆ.

‘ವರ್ಲ್ಡ್ ಆಫ್ ವೆಟ್ಟುವಂ’ ಟೀಸರ್‌ ಮೂಲಕ ಸಿನಿಮಾದಲ್ಲಿನ ವಿಶಿಷ್ಟ ಪ್ರಪಂಚವು ಪ್ರೇಕ್ಷಕರಿಗೆ ಪರಿಚಯವಾಗಿದ್ದು, ಇಂದು ಸಂಜೆ ಬಿಡುಗಡೆಯಾಗಲಿರುವ ಫಸ್ಟ್ ಲುಕ್, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ವರದಿ: ರಂಗನಾಥ್ ಆರ್. ವಿ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದ 17 ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರೀ ಮಳೆ: ಹವಾಮಾನ ಇಲಾಖೆ

ರಾಜ್ಯದ ವಾತಾವರಣದಲ್ಲಿ ಭಾರೀ ಬದಲಾವಣೆಗಳು ಕಂಡುಬಂದಿವೆ.  ಕಳೆದ ಎರಡು ದಿನಗಳಿಂದ ಬೆಂಗಳೂರು...

Formula E Case: ಎಸಿಬಿ ನ್ಯಾಯಾಲಯಕ್ಕೆ ಕೆಟಿಆರ್ ಹಾಜರು; ‘ದುರುದ್ದೇಶಪೂರಿತ ಪ್ರಚಾರ’ ಎಂದು ವಾಗ್ದಾಳಿ

ಫಾರ್ಮುಲಾ ಇ ರೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಆರ್‌ಎಸ್ ಕಾರ್ಯಾಧ್ಯಕ್ಷ ಹಾಗೂ ತೆಲಂಗಾಣ...

ಪಂಜಾಬ್: ಬಿಜೆಪಿ ನಾಯಕ ರವನೀತ್ ಸಿಂಗ್ ಬೆಂಗಾವಲು ಪಡೆಯ ಮೇಲೆ ದಾಳಿ

ಪಂಜಾಬ್‌ನಲ್ಲಿ ಆಯೋಜಿಸಲಾಗಿದ್ದ ಬಿಜೆಪಿಯ ಮಾದಕವಸ್ತು ವಿರೋಧಿ ಅಭಿಯಾನದಲ್ಲಿ ಪಾಲ್ಗೊಳ್ಳಲು ಪಠಾಣ್‌ಕೋಟ್‌ನತ್ತ ತೆರಳುತ್ತಿದ್ದ...

ರಾಜಸ್ಥಾನ ಸ್ಥಳೀಯ ಚುನಾವಣೆ: 86 ಗೆದ್ದರೂ ಮಿಷನ್-200 ಸಾಧಿಸಲು ಬಿಜೆಪಿ ಹರಸಾಹಸ; ‘ಆಪರೇಷನ್ ಲೋಟಸ್’ ಸದ್ದು!

ರಾಜಸ್ಥಾನದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಒಟ್ಟು 200...