ಮೊಡವೆ ಮುಕ್ತಗೊಳಿಸುತ್ತೇವೆಂದು ಮತ್ತಷ್ಟು ಫಜೀತಿ; ಕ್ಲಿನಿಕ್‌ಗೆ ಡಬಲ್‌ ದಂಡ

Date:

  • ಚಿಕಿತ್ಸಾ ವೆಚ್ಚ ₹30 ಸಾವಿರ ಸೇರಿದಂತೆ ಸಂತ್ರಸ್ತೆ ಪಾವತಿಸಿದ ಹಣ ಹಿಂದಿರುಗಿಸಲು ತಾಕೀತು
  • ₹1,03,633 ಹಣ ವಸೂಲಿ ಮಾಡಿದ್ದ ‘ಪ್ರಭಾಸ್ ವಿ ಕೇರ್ ಹೆಲ್ತ್‌ ಸೆಂಟರ್’ಗೆ ಭಾರೀ ದಂಡ

ಮುಖದಲ್ಲಾಗಿದ್ದ ಮೊಡವೆಗಳನ್ನು ತೆರವುಗೊಳಿಸಲು ಚಿಕಿತ್ಸೆಗೆ ಒಳಗಾಗಿದ್ದ ಯುವತಿಯೊಬ್ಬರು ಚರ್ಮ ಸೋಂಕು ಮತ್ತು ಕೂದಲು ಉದರುವಿಕೆಗೆ ತುತ್ತಾಗಿದ್ದಾರೆ. ಅವರಿಗೆ ಅವ್ಯವಸ್ಥಿತವಾದ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆ ‘ಪ್ರಭಾಸ್ ವಿ ಕೇರ್ ಹೆಲ್ತ್‌ ಸೆಂಟರ್’ ಮುಖ್ಯಸ್ಥರಿಗೆ ಕರ್ನಾಟಕ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ ಭಾರೀ ದಂಡ ವಿಧಿಸಿದೆ.

28 ವರ್ಷದ ಸಂತ್ರಸ್ತ ಯುವತಿ 2021ರ ಡಿಸೆಂಬರ್ 24ರಂದು ವೈಟ್‌ಫೀಲ್ಡ್ ಮುಖ್ಯ ರಸ್ತೆಯಲ್ಲಿರುವ ‘ವಿ ಕೇರ್ ಹೆಲ್ತ್‌ ಸೆಂಟರ್’ನಲ್ಲಿ ತನ್ನ ಮುಖದ ಮೇಲಿನ ಮೊಡವೆ ತೆಗಿಸಲು ಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲಿನ ವೈದ್ಯರು ‘ಸ್ಟೆಮ್‌ ಸೆಲ್‌ ಚಿಕಿತ್ಸೆ’ ನೀಡುತ್ತೇವೆ, ಆಸ್ಪತ್ರೆಗೆ 10 ಭಾರಿ ಬೇಟಿ ಮಾಡಿ, ಅಷ್ಟೊರೊಳಗೆ ಚಿಕಿತ್ಸೆ ನೀಡಿ, ಮುಖ ತಿಳಿಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು ಅವರ ಮಾತಿನಂತೆ ಯುವತಿ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ವೈದ್ಯರು ನೀಡಿದ ಅವೈಜ್ಞಾನಿಕ ಚಿಕಿತ್ಸೆಯಿಂದಾಗಿ ಯುವತಿ ಚರ್ಮ ಸೋಂಕಿಗೆ ಒಳಗಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದರಿಂದ ಮನನೊಂದ ಮಹಿಳೆ, ಕಾನೂನು ಬಾಹಿರವಾದ ಚಿಕಿತ್ಸೆ ನೀಡಿದ ಕ್ಲಿನಿಕ್ ವಿರುದ್ಧ ಶಾಂತಿನಗರದ ಬಳಿ ಇರುವ ಬೆಂಗಳೂರು 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ 2022ರ ಆಗಸ್ಟ್‌ನಲ್ಲಿ ದೂರು ನೀಡಿದ್ದರು. ವಿಚಾರಣೆ ನಡೆಸಿದ ಆಯೋಗವು ಮಹಿಳೆಗೆ ಸಂಪೂರ್ಣ ಚಿಕಿತ್ಸೆಯ ವೆಚ್ಚ ₹30 ಸಾವಿರ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಪಾವತಿಸಿದ್ದ ಇತರ ವೆಚ್ಚವನ್ನು ಹಿಂತಿರಿಗಿಸಲು ಆಸ್ಪತ್ರೆಗೆ ತಾಕೀತು ಮಾಡಿದೆ.

ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು | ಒಂದೇ ದಿನದಲ್ಲಿ 2,151 ಮಂದಿಗೆ ಕೋವಿಡ್ ದೃಢ

ಮೊದಲಿಗೆ ಸಂತ್ರಸ್ತೆ ಚಿಕಿತ್ಸೆಗೆ ಒಳಗಾಗುವ ಮುನ್ನವೇ ₹54,686 ಪಾವತಿಸಿದ್ದರು. ನಂತರ ಆರನೆ ಸಲದ ಭೇಟಿಯೊಳಗೆ ಚಿಕಿತ್ಸೆಗೆ ಒಟ್ಟು ₹1,03,633  ಖರ್ಚಾಗಿತ್ತು. ಅಷ್ಟರಲ್ಲಿ ಮುಖದಲ್ಲಿ ಮೊಡವೆ ಹೆಚ್ಚಳ, ಚರ್ಮ ಸೋಂಕು, ಕೂದಲು ಉದುರುವಿಕೆ ಹಾಗೂ ತಲೆನೋವು ಅಧಿಕಗೊಡಿತ್ತು. ಈ ಬಗ್ಗೆ ವೈದ್ಯರಿಗೆ ತಿಳಿಸಿದರೂ ವೈದ್ಯರು ಗಮನ ಹರಿಸಿರಲಿಲ್ಲ. ವೈದ್ಯರು ಮತ್ತು ಆಸ್ಪತ್ರೆ ಆಡಳಿತದ ವಿರುದ್ಧ ಸಿಟ್ಟಾದ ಯುವತಿ, ‘ವಿಕೇರ್ ಹೆಲ್ತ್ ಕ್ಲಿನಿಕ್‌’ನ ಸಿಇಒ ವಿರುದ್ಧ ದೂರು ನೀಡಿದ್ದರು.

ಆರುತಿಂಗಳ ಕಾಲ ವಿಚಾರಣೆ ನಡೆಸಿದ ಆಯೋಗವು, ವಿಚಾರಣೆಗೆ ಬಾರದ ‘ಪ್ರಭಾಸ್ ವಿ ಕೇರ್ ಹೆಲ್ತ್‌ ಸೆಂಟರ್’ದ ವಿರುದ್ಧ ಆಯೋಗವು ಕಿಡಿಕಾರಿತ್ತು. ಸಂತ್ರಸ್ತೆ ಖರ್ಚು ಮಾಡಿದ್ದ ಹಣ ಮತ್ತು ಮತ್ತಷ್ಟು ಚರ್ಮ ಸೋಂಕಿಗೆ ಒಳಾಗುವಂತೆ ಮಾಡಿದ್ದ ಕಾರಣ ಅದರ ವೆಚ್ಚವನ್ನು ನೀಡಲು ಫೆ.27 ರಂದು ತೀರ್ಪು ನೀಡಿದೆ. ಕರ್ನಾಟಕ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗದ ವೆಚ್ಚ ₹5 ಸಾವಿರ ಸಹ ಕ್ಲಿನಿಕ್ ಪಾವತಿಸಬೇಕಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿಫಾ ವೈರಸ್ | ಸೋಂಕಿತ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ; ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ

ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್ ಸೋಂಕಿನಿಂದ ಇಬ್ಬರು ಮೃತಪಟ್ಟಿರುವುದು ಖಚಿತವಾಗುತ್ತಿದ್ದಂತೆಯೇ...

ಭಾರತ, ಟರ್ಕಿಯಲ್ಲಿ ನಕಲಿ ಯಕೃತ್ತಿನ ಔಷಧಿ ಮಾರಾಟ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಡೆಫಿಟೋಲಿಯೊ ಹೆಸರಿನಲ್ಲಿ ನಕಲಿ ಯಕೃತ್ತಿನ ಔಷಧಿ ಭಾರತ ಹಾಗೂ ಟರ್ಕಿಯಲ್ಲಿ ಮಾರಾಟವಾಗುತ್ತಿದೆ...

2 ವರ್ಷದ ಮಗುವಿಗೆ ಮರುಜೀವ ನೀಡಿದ ಬೆಂಗಳೂರು-ದೆಹಲಿ ವಿಮಾನದಲ್ಲಿದ್ದ ಐವರು ವೈದ್ಯರು

ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ವಿಸ್ತಾರಾ ವಿಮಾನದಲ್ಲಿ ಹೃದಯ ಸ್ತಂಭನದಿಂದ ಉಸಿರಾಟ ನಿಲ್ಲಿಸಿದ...