ಎತ್ತಿನಹೊಳೆ ಹೆಸರಲ್ಲಿ ಮತ್ತೊಂದು ಧೋಖಾ: ಬೃಹತ್ ಕೈಗಾರಿಕಾ‌ ಕಾಮಗಾರಿಗಳಿಗೆ ನೀರೊದಗಿಸುವ ಟೆಂಡರ್

Date:

ಎತ್ತಿನಹೊಳೆ ಯೋಜನೆ ಕುರಿತ ವೈಜ್ಞಾನಿಕ ಸಂಸ್ಥೆಗಳ ಸಂಶೋಧನಾ ವರದಿಗಳನ್ನು ಕಡೆಗಣಿಸಿ ನೀರಿನ ಹಂಚಿಕೆಯನ್ನು 8 ಟಿಎಂಸಿಯಿಂದ 24 ಟಿಎಂಸಿಗೆ ಏರಿಸಿದ್ದಲ್ಲದೆ, ಯೋಜನಾ ವೆಚ್ಚವನ್ನೂ 8 ಸಾವಿರ ಕೋಟಿಗಳಿಂದ 24 ಸಾವಿರ ಕೋಟಿಗಳಿಗೆ ಏರಿಸಿಕೊಂಡು ರಾಜ್ಯದ ಜನಸಾಮಾನ್ಯರ ತೆರಿಗೆ ಹಣವನ್ನು ಪೋಲು ಮಾಡುವ ಮೂಲಕ ಮತ್ತೊಂದು ದೋಖಾ ನಡೆದಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೆಯ ರೆಡ್ಡಿ ಆರ್‌ ಆರೋಪಿಸಿದರು.

- Advertisement -

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಎರಡೇ ವರ್ಷಗಳಲ್ಲಿ ಎತ್ತಿನಹೊಳೆ ಕುಡಿಯುವ ನೀರು ಯೋಜನೆಯನ್ನು ಪೂರ್ಣಗೊಳಿಸಿ ಲವಣಾಂಶಗಳಿಂದ ಕಲುಷಿತವಾಗಿರುವ ಅಂತರ್ಜಲದ ನೀರನ್ನು ಕುಡಿದು ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗುತ್ತಿರುವ ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದಾಗಿ ಸರ್ಕಾರ ಹೇಳಿತ್ತು. ನಂತರದಲ್ಲಿ ಈ ಯೋಜನೆಯನ್ನು ಬೆಂಗಳೂರು ನಗರವೂ ಸೇರಿದಂತೆ ಒಟ್ಟು ಏಳು ಜಿಲ್ಲೆಗಳಿಗೆ ವಿಸ್ತರಿಸಿತು. ಎತ್ತಿನಹೊಳೆ ಯೋಜನೆಯಲ್ಲಿ ಉತ್ತಮ ಗುಣಮಟ್ಟ ಮತ್ತು ನೀರಿನ ಸಾಂದ್ರತೆ ಕೇವಲ 8 ಟಿಎಂಸಿ ಮಾತ್ರ ಇರುವುದಾಗಿ CWC ಕೇಂದ್ರೀಯ ಜಲ ಆಯೋಗ, NIH ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ, IISc ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಹಲವಾರು ವೈಜ್ಞಾನಿಕ ಸಂಶೋಧನಾ ವರದಿಗಳಿದ್ದರೂ ಕೂಡ ಸರ್ಕಾರ ಇವುಗಳನ್ನು ಕಡೆಗಣಿಸಿ 8 ಟಿಎಂಸಿಯಿಂದ 24 ಟಿಎಂಸಿಗೆ ನೀರಿನ ಹಂಚಿಕೆಯನ್ನು ವಿಸ್ತರಿಸಿದೆ” ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮ್ಯಾಕಲ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

“ಇತ್ತೀಚೆಗೆ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಡಿ ಕೆ ಶಿವಕುಮಾರ್ ಅವರು ಹಿಂದಿನ ಮುಖ್ಯ ಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿರಾಗಿದ್ದಾಗ ಸ್ವತಃ ಎತ್ತಿನಹೊಳೆಯ ನೀರಿನ ಇಳುವರಿಯು 8 ಟಿಎಂಸಿ ಗೆ ಇಳಿದಿರುವುದಾಗಿ ಸದನದಲ್ಲಿಯೇ ಉತ್ತರಿಸಿದ್ದರೂ ಕೂಡ ಜಾಣಕುರುಡಿನ ಕೆಲವು ರಾಜಕಾರಣಿಗಳು ಇದ್ಯಾವುದನ್ನೂ ಪರಿಗಣಿಸದೇ 2027ರ ಡಿಸೆಂಬರ್ ಒಳಗೆ ಕಟ್ಟ ಕಡೆಯ ಕೋಲಾರ ಜಿಲ್ಲೆಗೆ ಕುಡಿಯುವ ನೀರು ಹರಿಸುವುದಾಗಿ ಶಪಥ ಮಾಡುವ ಮೂಲಕ ಮತ್ತೆ ಮತ್ತೆ ಜನರ ಕಿವಿಗೆ ದಾಸವಾಳದ ಹೂ ಮುಡಿಸಿಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.

“ಯೋಜನೆ ಆರಂಭವಾಗಿದ್ದೇ ನೀರಾವರಿ ಹೋರಾಟದ ಫಲವಾಗಿ. ಆದರೆ ಯೋಜನೆಯ ಫಲಾನುಭವಿ ಜಿಲ್ಲೆಗಳ ಪೈಕಿ ಕಟ್ಟಕಡೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಒಂದು ಹನಿ ನೀರನ್ನೂ ತರಲು ಸಾಧ್ಯವಾಗದು ಎಂಬ ಆತಂಕದಿಂದಲೇ ಸುಮಾರು 15 ವರ್ಷಗಳಿಂದ ಎತ್ತಿನಹೊಳೆಯ ಕುಡಿಯುವ ನೀರಿಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಿರುವ ನಮ್ಮ ಜಿಲ್ಲೆಗಳಿಗೆ ಸರ್ಕಾರವು ಮಗದೊಮ್ಮೆ ಧೋಖಾ ಮಾಡಿದೆ.
ನಮಗೆ ಬೆಂಗಳೂರಿನ ಅರೆಸಂಸ್ಕರಿತ ತ್ಯಾಜ್ಯ ನೀರೇ ಗತಿ ಎಂಬಂತೆ ಬಂಡವಾಳಶಾಹಿಗಳ ಮುಂದೆ ಮಂಡಿಯೂರಿರುವ ಸರ್ಕಾರ ಬೆಂಗಳೂರಿನ ಸುತ್ತಮುತ್ತ ರೈತರ ಭೂಮಿಗಳನ್ನು ಕಸಿದುಕೊಂಡು ನಿರ್ಮಿಸುತ್ತಿರುವ ಕೈಗಾರಿಕಾ ಪ್ರದೇಶಗಳ ಬೃಹತ್ ಕಾಮಗಾರಿಗಳಿಗಾಗಿ ಎತ್ತಿನಹೊಳೆಯ ನೀರನ್ನು ಸರಬರಾಜು ಮಾಡಲು KIADB ಟೆಂಡರ್ ಕರೆದಿರುವುದು ಬೆಳಕಿಗೆ ಬಂದಿದೆ” ಎಂದು ಕಳವಳ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? RSS-BJPಯ ಷಡ್ಯಂತ್ರ ಸೋಲಿಸಲು 2ನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ: ಬಿ ಕೆ ಹರಿಪ್ರಸಾದ್

“ಸರ್ಕಾರವು ತಕ್ಷಣ ಟೆಂಡರ್‌ ಹಿಂಪಡೆಯಬೇಕು ಮತ್ತು ಮುಖ್ಯಮಂತ್ರಿ ಕೆ ಶಿವಕುಮಾರ್ ಅವರೇ ಹೇಳಿರುವಂತೆ 2027ರ ಡಿಸೆಂಬರ್ ಒಳಗೆ ಪ್ರತಿಯೊಂದು ಗ್ರಾಮಕ್ಕೂ ಎತ್ತಿನಹೊಳೆಯ ನೀರನ್ನು ಹರಿಸಬೇಕು, ಈ ನಿಟ್ಟಿನಲ್ಲಿ ಈಗಲಾದರೂ ಮೂರೂ ಜಿಲ್ಲೆಗಳ ರಾಜಕೀಯ ಪಕ್ಷಗಳು ತಮ್ಮ ತಮ್ಮ ಹಿತಾಸಕ್ತಿಗಳನ್ನು ಬದಿಗಿಟ್ಟು ಒಗ್ಗಟ್ಟಾಗಿ ಇಂತಹ ಮಹಾ ಮೋಸದ ವಿರುದ್ಧ ಧ್ವನಿ ಎತ್ತಲು ಆಗ್ರಹಿಸುತ್ತೇವೆ. ಶಾಶ್ವತ ನೀರಾವರಿ ಹೋರಾಟ ಸಮಿತಿಯು ಜಲಾಗ್ರಹ ಜಂಟಿ ಕ್ರಿಯಾ ಸಮಿತಿಯ ಸಭೆಯನ್ನು ಕರೆದು ಮೂರೂ ಜಿಲ್ಲೆಗಳನ್ನೂ ಒಗ್ಗೂಡಿಸಿ ಬೃಹತ್ ಹೋರಾಟವನ್ನು ರೂಪಿಸಲಾಗುವುದು” ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೆಯ ರೆಡ್ಡಿ ಆರ್‌ ಎಚ್ಚರಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಕೃಷಿ ಮೇಳದಲ್ಲಿ ಫಲಪುಷ್ಪ ಪ್ರದರ್ಶನ

ಕೃಷಿ ವಿವಿಯಲ್ಲಿ ಸೆ.25ರಿಂದ 28ರವರೆಗೆ ನಡೆಯುವ ಕೃಷಿ ಮೇಳದಲ್ಲಿ ಹೈಟೆಕ್ ತೋಟಗಾರಿಕೆ...

ಸರಗೂರು | ಕಾಡಾನೆ ದಾಳಿಗೆ ಬೈಕ್ ಸವಾರ ಬಲಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ ಸಮೀಪ ಇಂದು ಬೆಳಗ್ಗೆ...

ವಿಧಾನಸಭೆಯಲ್ಲಿ ಕಸ್ತೂರಿ ರಂಗನ್ ವರದಿ, ಬರ ಕುರಿತು ಗಂಭೀರ ಚರ್ಚೆ, ಪರಿಷತ್ತಿನಲ್ಲಿ ಗದ್ದಲ

ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರ ಪರಿಸ್ಥಿತಿ ಹಾಗೂ ಕೇಂದ್ರ ಸರ್ಕಾರ ಇತ್ತೀಚೆಗೆ...

ಗಗನಕ್ಕೇರಿದ ದಿನಬಳಕೆ ವಸ್ತುಗಳ ದರ: ‘ಕ್ಯಾ ಹುವಾ ತೇರಾ ವಾದಾ’ – ಪ್ರಧಾನಿ ಮೋದಿಗೆ ಕಾಂಗ್ರೆಸ್ ಪ್ರಶ್ನೆ

ದೇಶದಲ್ಲಿ ಪ್ರಮುಖ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿರುತ್ತಿದೆ. ಇದನ್ನು ಖಂಡಿಸಿ ಕಾಂಗ್ರೆಸ್...