ಬೀದರ್ | ಎಸ್ಐಆರ್ ವಿರೋಧಿ ಸಮಾವೇಶಕ್ಕೆ ಭಗವಂತ ಖೂಬಾಗೆ ಆಹ್ವಾನ

Date:

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಸಾರ್ವಜನಿಕವಾಗಿ ಚರ್ಚೆಗೆ ಸಿದ್ಧ ಎಂದು ಹೇಳಿಕೆ ನೀಡಿರುವ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಜೂ.20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ‘SIR ವಿರೋಧಿ ಕರ್ನಾಟಕ’ ವೇದಿಕೆಯ ಪ್ರತಿರೋಧ ಸಮಾವೇಶದಲ್ಲಿ ಭಾಗವಹಿಸಿ ನಾಗರಿಕ ಸಮಾಜದ ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದು ಎಸ್ಐಆರ್ ವಿರೋಧಿ ಕರ್ನಾಟಕ ವೇದಿಕೆ ಆಗ್ರಹಿಸಿದೆ.

- Advertisement -

ಈ ಸಂಬಂಧ ಎಸ್ಐಆರ್ ವಿರೋಧಿ ಕರ್ನಾಟಕದ ಬೀದರ್ ಜಿಲ್ಲಾ ಸಂಯೋಜಕರಾದ ಓಂಪ್ರಕಾಶ್ ರೊಟ್ಟೆ, ಜಗದೀಶ್ವರ ಬಿರಾದಾರ ಅವರು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರ ಗೃಹ ಕಚೇರಿಗೆ ತೆರಳಿ ಅವರ ಆಪ್ತ ಕಾರ್ಯದರ್ಶಿ ಅಮರ ಹಿರೇಮಠ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಭದ್ರತಾ ಸಮೀಕರಣಗಳ ಕೇಂದ್ರದಲ್ಲಿ ನಿಂತಿದ್ದಾರೆ. ಮೆಕ್ಕಾವನ್ನೇ ಗುರಿಯಾಗಿಸಿ ಡ್ರೋನ್ ಕಳುಹಿಸಲಾಗಿದೆ ಎಂಬ ಸೌದಿ ಆರೋಪದ...

ಬಾಗಲಕೋಟೆ | ಆಲಮಟ್ಟಿ ಒಳಹರಿವು ಶೂನ್ಯ: ಬಾಗಿನ ಅರ್ಪಣೆಗೆ...

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಆಲಮಟ್ಟಿ ಜಲಾಶಯದ ಒಳಹರಿವು ಶೂನ್ಯಕ್ಕೆ ತಲುಪಿದೆ. ಜಲಾಶಯ ಭರ್ತಿಯಾಗಿ ಈಗ ನೀರಿನ ಮಟ್ಟ ಇಳಿಕೆಯಾಗುತ್ತಿದ್ದರೂ, ಇದುವರೆಗೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸದಿರುವುದು ಬಾಗಲಕೋಟೆ ಜಿಲ್ಲೆಯ...

ದೇವರು, ಪುರಾಣ, ಕರ್ಮಕಾಂಡಗಳು ಮನುಷ್ಯನನ್ನು ಗುಲಾಮನನ್ನಾಗಿ ಮಾಡುತ್ತವೆಂದು ಹೇಳಿದ...

ಪೆರಿಯಾರ್ ದೇವರನ್ನು ವಿರೋಧಿಸಿದ್ದು ದೇವರ ಮೇಲಿನ ದ್ವೇಷಕ್ಕಲ್ಲ; ಬದಲಿಗೆ ದೇವರ ಹೆಸರಿನಲ್ಲಿ ನಡೆಯುವ ಮೋಸ, ಶೋಷಣೆಯ ವಿರುದ್ಧ. ಅವರು ಮುಖ್ಯಮಂತ್ರಿ ಸ್ಥಾನವನ್ನು ತಿರಸ್ಕರಿಸಿದರು. ಜೀವನಪೂರ್ತಿ ಯಾವುದೇ ಅಧಿಕಾರದ ಕುರ್ಚಿಯನ್ನೂ ಏರಲಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ...

ಇತ್ತೀಚೆಗೆ ಬೀದರ್‌ನಲ್ಲಿ ನಡೆದ ಎಸ್ಐಆರ್ ವಿರೋಧಿ ಜಾಥಾದಲ್ಲಿ ಬಸವಮಂಟಪದ ಸತ್ಯದೇವಿ ಮಾತೆ ಅವರು ಎಸ್ಐಆರ್ ಪ್ರಕ್ರಿಯೆಯಿಂದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಮತದಾನದ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಭಗವಂತ ಖೂಬಾ ಅವರು, ‘SIR ಕುರಿತು ಯಾವುದೇ ಸಂದೇಹ ಅಥವಾ ಗೊಂದಲಗಳಿದ್ದರೆ ಚರ್ಚೆಗೆ ಸಿದ್ಧ’ ಎಂದು ಹೇಳಿದ್ದರು.

“ಈ ಹೇಳಿಕೆಯನ್ನು ಸ್ವಾಗತಿಸಿರುವ SIR ವಿರೋಧಿ ಕರ್ನಾಟಕ ವೇದಿಕೆ, ಕಳೆದ ಹಲವು ತಿಂಗಳುಗಳಿಂದ ಚುನಾವಣಾ ಆಯೋಗ, ಅಧಿಕಾರಿಗಳು ಹಾಗೂ ಸರ್ಕಾರದೊಂದಿಗೆ SIR ಕುರಿತು ಚರ್ಚೆ ನಡೆಸಲು ಮತ್ತು ವಿವಿಧ ಪ್ರಶ್ನೆಗಳಿಗೆ ಉತ್ತರ ಪಡೆಯಲು ಪ್ರಯತ್ನಿಸುತ್ತಿದ್ದರೂ ಯಾವುದೇ ಅಧಿಕೃತ ಪ್ರತಿಕ್ರಿಯೆ ದೊರಕಿಲ್ಲ ಎಂದು ತಿಳಿಸಿದೆ.

SIR ಕುರಿತ ಪ್ರಶ್ನೆಗಳು ಕೇವಲ ಸತ್ಯದೇವಿ ಮಾತೆ ಅವರಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಪ್ರಜ್ಞಾವಂತ ನಾಗರಿಕರು, ಸಾಹಿತಿಗಳು, ಚಿಂತಕರು, ಹೋರಾಟಗಾರರು ಹಾಗೂ ಸಾಮಾಜಿಕ ಕಾರ್ಯಕರ್ತರಿಗೂ ಹಲವು ಗಂಭೀರ ಪ್ರಶ್ನೆಗಳಿವೆ. ಆದ್ದರಿಂದ ಭಗವಂತ ಖೂಬಾ ಅವರು ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸಿ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು” ಎಂದು ವೇದಿಕೆ ಒತ್ತಾಯಿಸಿದೆ.

ಭಗವಂತ ಖೂಬಾಗೆ 4 ಪ್ರಶ್ನೆ ಕೇಳಿದ ವೇದಿಕೆ

1.ಚುನಾವಣಾಆಯೋಗಯಾವಾಗಲೂನಿಷ್ಪಕ್ಷಪಾತವಾಗಿರಬೇಕು. ಆದ್ದರಿಂದಲೇ, ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ‌ ಸಮಿತಿಯಲ್ಲಿ ದೀರ್ಘಕಾಲದಿಂದ ಆಳುವಸರ್ಕಾರದ ನಾಯಕರು, ವಿಪಕ್ಷದ ನಾಯಕರು ಹಾಗೂ‌ ಸುಪ್ರೀಂ‌ ಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಇರಬೇಕೆಂಬ ನಿಯಮವಿತ್ತು. ಆದರೆ, ನಿಮ್ಮ ಸರ್ಕಾರ ಈ ನಿಯಮವನ್ನು ಬದಲಾಯಿಸಿ, ಸುಪ್ರೀಂ ಕೋರ್ಟ್‌‌ಮುಖ್ಯನ್ಯಾಯಮೂರ್ತಿಗಳನ್ನು ಹೊರಗಿಟ್ಟು, ಆಳುವ ಪಕ್ಷದ್ದೇ‌ ಇಬ್ಬರು‌ ಮತ್ತು‌ ವಿರೋಧ ಪಕ್ಷದ ಒಬ್ಬರು ಇರುವಂತೆ ತಿದ್ದುಪಡಿ‌ ಮಾಡಿದ್ದೀರಿ.ಇಂತಹ ಬದಲಾವಣೆ ಮಾಡುವ ಅಗತ್ಯವೇನಿತ್ತು? ಈ ಬದಲಾವಣೆಗೆ ಕಾರಣವೇನು? ಆಳುವ ಪಕ್ಷದ ಬಹುಮತ ಹೊಂದಿರುವಂತೆ ಸಮಿತಿ ರಚಿವುದು ಸರಿಯೇನು? ಚುನಾವಣಾ ಆಯುಕ್ತರನ್ನು ಏಕಪಕ್ಷೀಯವಾಗಿ ಆಯ್ಕೆ ಮಾಡುವುದು ಯಾವುದೇ ಸ್ಪರ್ಧೆಯ ಅಂಪೇರ್ ಅನ್ನು ಆಯ್ಕೆ ಮಾಡುವ ವಿಧಾನವೇನು?

2. ಎಸ್ಐಆರ್ ಈ ಹಿಂದೆಯೂ ನಡೆದಿದೆ ಎಂದು ನೀವು ಮತ್ತು ನಿಮ್ಮ ಸರ್ಕಾರದವರು ವಾದಿಸುತ್ತಿದ್ದೀರಿ. ಈ ಹಿಂದೆ ನಡೆದ ಎಸ್ಐಆರ್ನಲ್ಲಿ ಈಗ ಕೇಳುತ್ತಿರುವಂತೆ‌ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಮತದಾರರು 2025ರ ಪಟ್ಟಿ, 2002ರ ಪಟ್ಟಿಯನ್ನುಕೊಡಬೇಕುಎಂಬರೀತಿಯನಿಯಮಗಳಿದ್ದವೇ? ಅಲ್ಲದೆ, ರಾಜ್ಯದ ನಾಗರಿಕರ ಬಳಿ ಇರುವ ದಾಖಲೆಗಳು ಎಸ್ಐಆರ್ಗೆ ಅನ್ವಯವಾಗುತ್ತಿಲ್ಲ. ಚುನಾವಣಾ ಆಯೋಗ ಹೇಳುವ 11 ಕ್ಲಿಷ್ಟಕರವಾದ ದಾಖಲೆಗಳನ್ನೇ ಕೊಡಬೇಕು. ಬರೀಮತದಾರರದ್ದುಮಾತ್ರವಲ್ಲ. ಅವರತಂದೆ-ತಾಯಿಯರ ದ್ದನ್ನೂ ಕೊಡಬೇಕೆಂದು ಈಗ ಕೇಳಲಾಗಿದೆ. ಇಂತಹ ನಿಯಮಗಳು ಈ ಹಿಂದೆ ಇದ್ದವೇ. ಹಿಂದೆ ಎಂದಿಗೂ ಇರಲಿಲ್ಲ. ಆದರೆ, ಈ ಬಾರಿ ಇಂತಹ ನಿಯಮಗಳನ್ನು ಹೇರಿ, ಪ್ರಕ್ರಿಯೆಯನ್ನು ಗೋಜಲುಮಯ ಮಾಡುತ್ತಿರುವ ಉದ್ದೇಶವೇನು?

3. ನುಸುಳುಕೋರರನ್ನು ಗುರುತಿಸಿ ಹೋರ ಹಾಕಲು ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ನಿಮ್ಮ ಪಕ್ಷ ಹೇಳಿಕೊಳ್ಳುತ್ತಿದೆ. ಇದುವರೆಗೂ 13 ರಾಜ್ಯಗಳಲ್ಲಿ ಎಸ್ಐಆರ್ ನಡೆದಿದೆ. ಈ ರಾಜ್ಯಗಳಲ್ಲಿ ಎಷ್ಟು ಮಂದಿ ನುಸುಳುಕೋರರನ್ನು ಪತ್ತೆಹಚ್ಚಲಾಗಿದೆ. ಈ ರಾಜ್ಯಗಳಲ್ಲಿ ಒಟ್ಟು 6.5 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಹೊರಹಾಕಲಾಗಿದೆ. ಇವರೆಲ್ಲರೂ ನುಸುಳುಕೋರರೇ? ಅದನ್ನು ನೀವು ಸಾಬೀತುಪಡಿಸಬಲ್ಲಿರೇ?

ಇದನ್ನೂ ಓದಿ : ಬೀದರ್‌ | ಮೂವರು ಮಕ್ಕಳ ಮದುವೆ, ಶಿಕ್ಷಣದ ಜವಾಬ್ದಾರಿ ವಹಿಸಿಕೊಳ್ಳುವೆ : ಶಾಸಕ ಪ್ರಭು ಚವ್ಹಾಣ

4. ಈವರೆಗೆ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್‌ ಆಗಿರುವವರಲ್ಲಿ ಹೆಚ್ಚಿನವರು ವಿವಾಹಿತ ಮಹಿಳೆಯರು, ವಲಸೆ ಕಾರ್ಮಿಕರು, ಅಲೆಮಾರಿ ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರು. ಇದನ್ನು ನಾವು ಸಾಕ್ಷಿಸಮೇತ‌ ಸಾಬೀತು ಮಾಡುತ್ತೇವೆ. ಈ ಸಮುದಾಯಗಳೇ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಡಿಲೀಟ್ ಆಗಲು ಕಾರಣವೇನು? ಅದಕ್ಕೆ ಜವಾಬ್ದಾರರು ಯಾರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹತ್ತು ಹೊಸ ಯೋಜನೆಗಳ ಘೋಷಣೆ

ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಸಿಎಂ‌ ಡಿ ಕೆ ಶಿವಕುಮಾರ್...

ʼಕ್ಯಾಷ್‌ಲೆಸ್‌ ಎಕಾನಮಿʼ ಹೆಸರಲ್ಲಿ ಸುಲಿಗೆ; ನೋಟು ಬ್ಯಾನ್‌ನಿಂದ UPI ವರೆಗೆ ಮೋದಿ ಸರ್ಕಾರದ ಎಡವಟ್ಟುಗಳು

ಈ ಅಸಮರ್ಪಕ ಆರ್ಥಿಕ ಹೊಡೆತದ ವಿರುದ್ಧ ‘ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ’...

ಕಸ್ತೂರಿ ರಂಗನ್ ವರದಿ: ಸಿಎಂಗೆ ಮನವಿ ಸಲ್ಲಿಸಲು ಪಕ್ಷ, ಸಂಘಟನೆಗಳಿಗೆ ಅವಕಾಶವಿದೆ; ಟಿ.ಡಿ ರಾಜೇಗೌಡ 

ಕಸ್ತೂರಿರಂಗನ್ ವರದಿ ಕುರಿತು ತಮ್ಮ ಅಭಿಪ್ರಾಯ, ಆಕ್ಷೇಪಣೆ ಹಾಗೂ ಬೇಡಿಕೆಗಳನ್ನು ಮುಖ್ಯಮಂತ್ರಿ...

ದವಡೆ ಜಜ್ಜಿಸಿಕೊಂಡ ಆಪರೇಷನ್ ಎಪಿಕ್ ಫ್ಯೂರಿ: ಇರಾನ್ ಕಾಳಗದಲ್ಲಿ ಅಮೆರಿಕಕ್ಕೆ ಆದ ನಷ್ಟಗಳೇನೇನು?

ಬೃಹತ್ ಮೊತ್ತದ ಬಜೆಟ್, ದುಬಾರಿ ಬೆಲೆಯ ಯುದ್ಧ ವಿಮಾನಗಳು ಮತ್ತು ಅತ್ಯಾಧುನಿಕ...