ಬೆಳಗಾವಿ | ಕರಕುಶಲ ಕರ್ಮಿಗಳ ಬದುಕಿಗೆ ಬೆಳಕಾಗಿದ್ದ ಸಮಾಜ ಸೇವಕ ಜಿ.ಎನ್ ಗೋಪಿಕೃಷ್ಣ ಇನ್ನಿಲ್ಲ

Date:

ಬೆಳಗಾವಿ ಯಲ್ಲಿ ನೆಲೆಸಿದ್ದ ಸಮಾಜ ಸೇವಕ ಜಿ. ಎನ್ ಗೋಪಿಕೃಷ್ಣ ಅವರು ಗದಗ ಜಿಲ್ಲೆ ಲಕ್ಷೇಶ್ವರ ದಲ್ಲಿ ಭಾನುವಾರ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

- Advertisement -

ಬಳ್ಳಾರಿ ಮೂಲದವರಾದ ಗೋಪಿಕೃಷ್ಣ ಅವರು ಬೆಳಗಾವಿ ಸೇರಿದಂತೆ ವಿವಿಧ ನಗರ ಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮುಂಬಯಿ ಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಲ್ ಸೈನ್ಸ್ (ಟಿ ಐ ಎಸ್ ಎಸ್ ) ನಲ್ಲಿ ಗ್ರಾಮೀಣ ಅಭಿವೃದ್ಧಿ ಹಾಗೂ ಸಮಾಜ ಸೇವೆ ಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರು. ನಿವೃತ್ತಿ ಯ ನಂತರ ಅವರು ಬೆಳಗಾವಿಯ ಕ್ಯಾಂಪ್ ಪ್ರದೇಶ ದಲ್ಲಿ ನೆಲೆಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಭದ್ರತಾ ಸಮೀಕರಣಗಳ ಕೇಂದ್ರದಲ್ಲಿ ನಿಂತಿದ್ದಾರೆ. ಮೆಕ್ಕಾವನ್ನೇ ಗುರಿಯಾಗಿಸಿ ಡ್ರೋನ್ ಕಳುಹಿಸಲಾಗಿದೆ ಎಂಬ ಸೌದಿ ಆರೋಪದ...

ಬಾಗಲಕೋಟೆ | ಆಲಮಟ್ಟಿ ಒಳಹರಿವು ಶೂನ್ಯ: ಬಾಗಿನ ಅರ್ಪಣೆಗೆ...

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಆಲಮಟ್ಟಿ ಜಲಾಶಯದ ಒಳಹರಿವು ಶೂನ್ಯಕ್ಕೆ ತಲುಪಿದೆ. ಜಲಾಶಯ ಭರ್ತಿಯಾಗಿ ಈಗ ನೀರಿನ ಮಟ್ಟ ಇಳಿಕೆಯಾಗುತ್ತಿದ್ದರೂ, ಇದುವರೆಗೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸದಿರುವುದು ಬಾಗಲಕೋಟೆ ಜಿಲ್ಲೆಯ...

ದೇವರು, ಪುರಾಣ, ಕರ್ಮಕಾಂಡಗಳು ಮನುಷ್ಯನನ್ನು ಗುಲಾಮನನ್ನಾಗಿ ಮಾಡುತ್ತವೆಂದು ಹೇಳಿದ...

ಪೆರಿಯಾರ್ ದೇವರನ್ನು ವಿರೋಧಿಸಿದ್ದು ದೇವರ ಮೇಲಿನ ದ್ವೇಷಕ್ಕಲ್ಲ; ಬದಲಿಗೆ ದೇವರ ಹೆಸರಿನಲ್ಲಿ ನಡೆಯುವ ಮೋಸ, ಶೋಷಣೆಯ ವಿರುದ್ಧ. ಅವರು ಮುಖ್ಯಮಂತ್ರಿ ಸ್ಥಾನವನ್ನು ತಿರಸ್ಕರಿಸಿದರು. ಜೀವನಪೂರ್ತಿ ಯಾವುದೇ ಅಧಿಕಾರದ ಕುರ್ಚಿಯನ್ನೂ ಏರಲಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ...

ಅವರು ಆಕ್ಸ್ ಫ್ಯಾಮ ಸೇವಾ ಸಂಸ್ಥೆಯ ಭಾರತೀಯ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. ದೇಶಾದ್ಯಂತ ಅಸಂಖ್ಯ ಕರ ಕುಶಲ ಕರ್ಮಿಗಳು, ಸೇವಾ ಸಂಸ್ಥೆಗಳು, ಹಾಗೂ ಮಹಿಳಾ ಸಂಘಟನೆ ಗಳಿಗೆ ನಿಯಮಿತ ಧನ ಸಹಾಯ, ಹಾಗೂ ತರಬೇತಿ ಸಹಾಯ ಮಾಡುತ್ತಿದ್ದರು.

ಆ ನಂತರ ಫ್ಯಾಬ ಇಂಡಿಯಾ ಖಾದಿ ಸಂಸ್ಥೆಯ ನಿರ್ದೇಶಕ ಮಂಡಳಿ ಸದಸ್ಯ ರಾಗಿದ್ದರು. ವಿವಿಧ ರಾಜ್ಯ ಗಳ ಖಾದಿ, ಕೈ ಮಗ್ಗ, ಹಾಗೂ ಕರ ಕುಶಲ ಕರ್ಮಿಗಳ ಉತ್ಪನ್ನ ಗಳಿಗೆ ಬ್ರಾಂಡಿಂಗ್ ಹಾಗೂ ಆಧುನಿಕ ಡಿಸೈನಿಂಗ್ ದೊರೆಯುವಂತೆ ನೋಡಿಕೊಂಡರು. ಅವುಗಳ ಉತ್ಪಾದಕರಿಗೆ ಭಾರತದಲ್ಲಿ ಹಾಗೂ ವಿದೇಶ ದಲ್ಲಿ ಮಾರುಕಟ್ಟೆ ವಿಸ್ತಾರ ಮಾಡಲು ಸಹಾಯ ಮಾಡುತ್ತಿದ್ದರು.

ಕಳೆದ ವರ್ಷ ಬೆಂಗಳೂರು ವಿಶ್ವವಿದ್ಯಾಲಯ ದ ಆವರಣ ದಲ್ಲಿ ಒಂದು ತಿಂಗಳ ಮಟ್ಟಿಗೆ ಕರ್ನಾಟಕದ ಕುರಿಗಾರರು ಹಾಗೂ ಉಣ್ಣೆಯ ವಸ್ತ್ರ ಗಳನ್ನು ತಯಾರು ಮಾಡುವ ಸಮುದಾಯ ಗಳಿಗೆ ತಮ್ಮ ಉತ್ಪನ್ನ ಗಳನ್ನು ಪ್ರದರ್ಶನ ಮಾಡಲು ಅನುವು ಮಾಡಿಕೊಡಲು `ಲಿವಿಂಗ್ ಲೈಟ್ಲಿ’ ಎನ್ನುವ ಪ್ರದರ್ಶನ ಆಯೋಜನೆ ಮಾಡಿದ್ದರು.

ದೇಶ ವಿದೇಶ ಗಳಲ್ಲಿ ಸಮಾಜ ಸೇವೆ ಹಾಗೂ ಕರ ಕುಶಲ ಕರ್ಮಿಗಳ ಸಂಪರ್ಕ ಜಾಲ ವನ್ನು ಸೃಷ್ಟಿಸಿ ಕೊಂಡಿದ್ದರು. ತಮ್ಮ ಪರಿಚಯದ ವಿವಿಧ ರೂಪದ ಸಂಪನ್ಮೂಲ ವ್ಯಕ್ತಿ ಗಳನ್ನು ಕರ್ನಾಟಕ ದ ವಿವಿಧ ಜಿಲ್ಲೆಗಳಿಗೆ ಆಹ್ವಾನಿಸಿ ಅವರಿಂದ ಸ್ಥಳೀಯ ವಿದ್ಯಾರ್ಥಿ ಗಳು ಹಾಗೂ ಕರಕುಶಲ ಕರ್ಮಿಗಳಿಗೆ ತರಬೇತಿ ಕೊಡಿಸುತ್ತಿದ್ದರು. ಇತ್ತೀಚೆಗಷ್ಟೇ ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಡಿಸೈನರ್ ಲಾಯಡ ರಿಚರ್ಡ್ ಅವರನ್ನು ಕರೆಯಿಸಿ ಮಹಿಳೆಯರಿಗಾಗಿ ಕಸೂತಿ ಕಲೆಯ ಮೂರು ತಿಂಗಳ ಶಿಬಿರ ವನ್ನು ಉದ್ಘಾಟನೆ ಮಾಡಿದ್ದರು.

ಬೆಳಗಾವಿ ಯ ಯರಗಟ್ಟಿಯ ಸಮೀಪ ಮೇಕಲ್ಮರಡಿ ಗ್ರಾಮ ದಲ್ಲಿ ಮಿತಾನ ಸಂಸ್ಥೆ ಸ್ಥಾಪಿಸಿ ಅದರಲ್ಲಿ ಸುತ್ತ ಮುತ್ತ ಹಳ್ಳಿಯ ಹೆಣ್ಣುಮಕ್ಕಳಿಗೆ ವಿವಿಧ ರೀತಿಯ ಗೃಹ ಅಲಂಕಾರದ ವಸ್ತುಗಳು ಹಾಗೂ ಬ್ಯಾಗು, ಪಾಕೀಟು ಹಾಗೂ ಇತರ ವಸ್ತು ಗಳನ್ನು ತಯಾರಿಸಿ ರಫ್ತು ಮಾಡುವ ತರಬೇತಿ ನೀಡಿದರು. ಈ ಸಂಸ್ಥೆಯ ಸದಸ್ಯರು ಕಳೆದ 20 ವರ್ಷ ಗಳಿಂದ ತಮ್ಮ ಉತ್ಪನ್ನ ಗಳನ್ನು ಅಮೆರಿಕ, ಯುರೋಪ್ ಹಾಗೂ ಮಧ್ಯ ಪ್ರಾಚ್ಯ ದೇಶಗಳಿಗೆ ರಫ್ತು ಮಾಡುತ್ತಾ ಇದ್ದಾರೆ.

ಬೆಳಗಾವಿ ಯ ಕಡೋಳಿ ಗ್ರಾಮದ ಬೀರೇಶ್ವರ ದೇವಸ್ಥಾನದ ಪಕ್ಕದಲ್ಲಿ ಗ್ರಾಮೀಣ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪಿಸಿ ಮಹಿಳೆಯರಿಗೆ ಕುರಿ ಉಣ್ಣೆಯ ಹಾಗೂ ಚರ್ಮದ ವಸ್ತು ಗಳನ್ನು ತಯಾರು ಮಾಡುವ ತರಬೇತಿ ನೀಡಿದರು.

ತುಮಕೂರು ಜಿಲ್ಲೆಯ ದೇವರಾಯನ ದುರ್ಗ ದ ಸಮೀಪ ಕರ ಕುಶಲ ಕರ್ಮಿಗಳಿಗೆ ಒಂದು ಉತ್ಪಾದನೆ ಹಾಗೂ ಮಾರುಕಟ್ಟೆ ಕೇಂದ್ರ ವನ್ನು ಸ್ಥಾಪಿಸಿದ್ದರು.

ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ರೈತರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಅವರು ಬೆಳೆಯುವ ಖಪಲಿ ಗೋಧಿ ಯ ರವೆ ಯನ್ನು ಮೆಟ್ರೊ ನಗರಿಗಳ ಗ್ರಾಹಕರಿಗೆ ನೇರವಾಗಿ ತಲುಪಿಸಲು ಒಂದು ಸಂಘಟನೆ ಹುಟ್ಟು ಹಾಕಿದ್ದರು.

ಬೆಳಗಾವಿಯ ಅಥಣಿ ಯ ಲ್ಲಿ ತಯಾರು ಆಗುವ ಕೊಲ್ಹಾಪುರಿ ಚಪ್ಪಲ್ ಗಳ ವಿನ್ಯಾಸ ವನ್ನು ಯುರೋಪಿನ ಫ್ಯಾಷನ್ ಉದ್ದಿಮೆ ಪ್ರಾಡಾ ಕಂಪೆನಿ ತಯಾರಕರ ಪೂರ್ವಾನುಮತಿ ಇಲ್ಲದೆ ಬಳಸಲು ಆರಂಭಿಸಿದಾಗ ಗೋಪಿಕೃಷ್ಣ ಅವರು ತಮ್ಮ ಪ್ರಭಾವ ಬಳಸಿ ರಾಜ್ಯ ಸರಕಾರ, ಕಂಪೆನಿ ಹಾಗೂ ಕೆಲಸಗಾರರ ಸಭೆ ನಡೆಸಿದ್ದರು. ಆ ನಂತರ ಪ್ರಾಡಾ ದ ಇಂಜಿನಿಯರ್ ಗಳು ಅಥಣಿ ಬಂದು ಇಲ್ಲಿನ ಕೆಲಸಗಾರರಿಗೆ ತರಬೇತಿ ನೀಡಲು ಆರಂಭ ಮಾಡಿತು.

ಅವರ ನಿಧನಕ್ಕೆ ಕೊಲ್ಹಾಪುರಿ ಚಪ್ಪಲು ಕೆಲಸಗಾರರ ಒಕ್ಕೂಟ, ಕಡೋಲಿ ತರಬೇತಿ ಕೇಂದ್ರ ಹಾಗೂ ಇತರರು ಶೋಕ ವ್ಯಕ್ತ ಪಡಿಸಿದ್ದಾರೆ.

ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಬಸ್‌ಗೆ ಬೈಕ್ ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು

ಬೆಳಗಾವಿ ಜಿಲ್ಲೆಯ ಸವದತ್ತಿ ನಗರದ ಹೊರವಲಯದ ಧಾರವಾಡ ರಸ್ತೆಯಲ್ಲಿ ಸೋಮವಾರ ರಾತ್ರಿ...

ಬೆಳಗಾವಿ | ಭೀಕರ ಅಗ್ನಿ ದುರಂತ:ಒಂದೇ ಕುಟುಂಬದ ನಾಲ್ವರು ಸಜೀವ ದಹನ

ಗಣೇಶೋತ್ಸವದ ಸಂಭ್ರಮದ ನಡುವೆಯೇ ಬೆಳಗಾವಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು,...

ಬೆಳಗಾವಿ | ಕಾಲುವೆಗೆ ನೀರು ಹರಿಸದ ಆಕ್ರೋಶ: ಟವ‌ರ್ ಏರಿ ರೈತನ ಪ್ರತಿಭಟನೆ

ಕಾಲುವೆಗೆ ನೀರು ಹರಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರೊಬ್ಬರು ಟವರ್ ಏರಿ ಪ್ರತಿಭಟನೆ...

ಬೆಳಗಾವಿ | ಕಾರಿಗೂ ಹೆಲ್ಮೆಟ್ ಕಡ್ಡಾಯವೇ? ಎ ಐ ಕ್ಯಾಮೆರಾ ಹೊಸ ನಿಯಮ

ಇಷ್ಟು ದಿನ ಬೈಕ್‌ ಸವಾರರಿಗೆ ಮಾತ್ರ ಹೆಲ್ಮೆಟ್ ಕಡ್ಡಾಯ ಎಂದುಕೊಂಡಿದ್ದವರಿಗೆ ಇದೀಗ...