ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಬಂಧಿಸಿದ ಜಾಹೀರಾತು ನಿಯಮ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ನಗರ ಪಾಲಿಕೆ ನೋಟೀಸ್ ಜಾರಿ ಮಾಡಿರುವುದು ಸಂಚಲನ ಸೃಷ್ಟಿಸಿದೆ.
ಸೆಕ್ಷನ್ 158 ಅಡಿಯಲ್ಲಿ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಗೆ ಜಿಬಿಎ ಜಾಹೀರಾತು ವಿಭಾಗದ ಅಧಿಕಾರಿಗಳು 2020ರ ಕಾಯ್ದೆ ಹಾಗೂ ಬೈಲಾ ಪ್ರಕಾರ, ಎರಡು ಪುಟಗಳ ನೋಟೀಸ್ ನೀಡಿ, 7 ದಿನಗಳೊಳಗೆ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದ್ದಾರೆ.
ಆರೋಪ ಏನು?
ಕ್ರೀಡಾಂಗಣದೊಳಗೆ ಮತ್ತು ಹೊರಗೆ ದೊಡ್ಡ LED ಬೋರ್ಡ್‌ಗಳು ಮತ್ತು ಜಾಹೀರಾತು ಫಲಕಗಳು ಅಳವಡಿಸಲಾಗಿದೆ. ಆದರೆ ಇದಕ್ಕೆ ಮುಖ್ಯ ಆಯುಕ್ತರ ಲಿಖಿತ ಅನುಮತಿ ಪಡೆಯಿಲ್ಲ ಎಂಬ ಆರೋಪ ಕೇಳಿಬಂದಿದೆ. ಜಾಹೀರಾತು ಪ್ರದರ್ಶನಕ್ಕೆ ಅಗತ್ಯವಾದ ಶುಲ್ಕವನ್ನು ಪಾವತಿಸಿಲ್ಲ ಎಂದು ಅರೋಪವೂ ಇದೆ.
ಕಾಯ್ದೆ ಹೇಳುವುದೇನು?
ಸೆಕ್ಷನ್ 158 ಪ್ರಕಾರ, ಯಾವುದೇ ಜಾಹೀರಾತು ಪ್ರದರ್ಶನಕ್ಕೆ ಮುಖ್ಯ ಆಯುಕ್ತರ ಲಿಖಿತ ಅನುಮತಿ ಕಡ್ಡಾಯವಾಗಿದೆ. ಅನುಮತಿ ಪಡೆಯದೆ ಜಾಹೀರಾತುಗಳನ್ನು ಪ್ರದರ್ಶನ ಮಾಡುವುದು ಕಾನೂನುಬಾಹಿರ. ಉಲ್ಲಂಘನೆ ಮಾಡಿದರೆ, 2 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ ಮತ್ತು 1 ವರ್ಷವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಇದನ್ನೂ ಓದಿ : ಕೇರಳದಲ್ಲಿ ಬೇರೂರುವ ಬಿಜೆಪಿ ಕನಸಿಗೆ ಕುತ್ತು ತಂದ ವಿದೇಶಿ ದೇಣಿಗೆ ತಿದ್ದುಪಡಿ ಮಸೂದೆ
ನಗರಪಾಲಿಕೆ ನೋಟೀಸ್‌ನಲ್ಲಿ ಏನಿದೆ ?
7 ದಿನಗಳೊಳಗೆ ಅನಧಿಕೃತ LED ಬೋರ್ಡ್‌ಗಳನ್ನು ತೆರವುಗೊಳಿಸಬೇಕು, ಇಲ್ಲವಾದಲ್ಲಿ, ಜಿಬಿಎಯೇ ತೆರವುಗೊಳಿಸಿ ದಂಡವನ್ನು ವಸೂಲಿ ಮಾಡುತ್ತದೆ. ಮಾತ್ರವಲ್ಲದೇ, ಕ್ರಿಮಿನಲ್ ಪ್ರಕರಣವೂ ದಾಖಲಿಸುವ ಎಚ್ಚರಿಕೆಯನ್ನು ನೀಡಲಾಗಿದೆ.
ಇನ್ನು, ಕೆಎಸ್ ಸಿಎಗೆ ನೋಟೀಸ್ ಜಾರಿ ಮಾಡಿದರೂ ಮಾಧ್ಯಮಗಳಿಗೆ ನೋಟೀಸ್ ಪ್ರತಿ ಬಿಡುಗಡೆ ಮಾಡುವುದಕ್ಕೆ ಅಧಿಕಾರಿಗಳು ಹಿಂಜರಿಕೆ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡವಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಕೆಲವು ಅಧಿಕಾರಿಗಳಿಗೆ KSCA ಜೊತೆ ನಿಕಟ ಸಂಪರ್ಕ ಇದೆ ಎಂಬ ಮಾತು ಕೂಡ ಇದೆ. ಕಳೆದ ವರ್ಷವೂ ನೋಟೀಸ್ ನೀಡಲಾಗಿತ್ತು, ಆದರೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎನ್ನುವ ಮಾಹಿತಿಯೂ ಇದೆ.




