ಕೇರಳದಲ್ಲಿ ಬೇರೂರುವ ಬಿಜೆಪಿ ಕನಸಿಗೆ ಕುತ್ತು ತಂದ ವಿದೇಶಿ ದೇಣಿಗೆ ತಿದ್ದುಪಡಿ ಮಸೂದೆ

Date:

ಇತರೆ ರಾಜ್ಯಗಳಲ್ಲಿ ಕ್ರೈಸ್ತರು ಮತಾಂತರ ಮಾಡುವವರು, ಹಿಂದೂ ವಿರೋಧಿಗಳೆಂದು ಕರೆಯುವ ಬಿಜೆಪಿ ಕೇರಳದಲ್ಲಿ ಕ್ರೈಸ್ತರ ಮತಕ್ಕೆ ಬಲೆ ಬೀಸುತ್ತಲೇ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರುಗಳು ಚರ್ಚ್‌ಗಳ ಮುಖ್ಯಸ್ಥರನ್ನು ಭೇಟಿಯಾಗುತ್ತಿದ್ದಾರೆ. ಈ ಹಿಂದೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯ ಗೆಲುವೂ ಬಿಜೆಪಿಗೆ ಹುಮ್ಮಸ್ಸು ನೀಡಿತ್ತು. ಆದರೆ ಇದೀಗ ಆ ಎಲ್ಲ ತಂತ್ರಗಳಿಗೆ ಈ ಮಸೂದೆ ಮುಳುವಾಗಿದೆ.

ತಾನು ನೆಲೆಯೂರಬೇಕಾದರೆ ಯಾವ ಮೈತ್ರಿಯನ್ನೂ ಮಾಡಲು ಸಿದ್ಧವಾಗಿರುವ ಬಿಜೆಪಿಯ ಮುಂದಿನ ಗುರಿ ಕೇರಳ. ಹಲವು ವರ್ಷಗಳಿಂದ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಸಿಪಿಐಎಂ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟದ ಆಡಳಿತವನ್ನೇ ಕಂಡಿರುವ ಕೇರಳದಲ್ಲಿ ತನ್ನ ಶಕ್ತಿಯನ್ನು ವಿಸ್ತರಿಸಿಕೊಳ್ಳಲು ಬಿಜೆಪಿ ಹಲವಾರು ವರ್ಷಗಳಿಂದ ಸತತ ಪ್ರಯತ್ನ ಮಾಡುತ್ತಲೇ ಇದೆ. ಎಂದಿನಂತೆ ಕೋಮುದ್ವೇಷ, ವಿಭಜನೆಯ ವಿಷಬೀಜವನ್ನು ಬಿತ್ತುವ ಕಾರ್ಯ ಮಾಡಿದೆ. ಇದರೊಂದಿಗೆ ಕೊಂಚ ಭಿನ್ನವಾಗಿ ಕ್ರೈಸ್ತರ ಮತವನ್ನು ಓಲೈಸುವ ಯತ್ನವನ್ನೂ ಮಾಡುತ್ತಿದೆ. ಆದರೆ ಕೇರಳದಲ್ಲಿ ಬೇರೂರುವ ಬಿಜೆಪಿ ಕನಸಿಗೆ ವಿದೇಶಿ ದೇಣಿಗೆ ತಿದ್ದುಪಡಿ ಮಸೂದೆ ಕುತ್ತು ತಂದಿದೆ.

- Advertisement -

ವಿದೇಶಿ ದೇಣಿಗೆಯ ದುರುಪಯೋಗ ತಡೆಯುವ ನೆಪ ನೀಡಿ ಕೇಂದ್ರ ಸರ್ಕಾರ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (FCRA) ತಿದ್ದುಪಡಿ ಮಸೂದೆ, 2026 ಅನ್ನು ಮಂಡಿಸಿದೆ. ಇತರೆ ಮಸೂದೆಗಳಂತೆ ಈ ಮಸೂದೆಯೂ ಸದ್ದಿಲ್ಲದೆ ಮಂಡನೆ, ಅಂಗೀಕಾರವಾಗಬಹುದು, ಜನರಿಗೆ ಕಾಯ್ದೆ ಜಾರಿಯಾದಾಗಲೇ ಅದರ ಬಿಸಿ ತಟ್ಟಬಹುದು ಎಂದುಕೊಂಡಿದ್ದ ಬಿಜೆಪಿ ಕೇರಳ ಚುನಾವಣೆಯನ್ನು ಮರೆಯಿತು. ಕೇರಳದಲ್ಲಿ ಕ್ರೈಸ್ತ ಮತವನ್ನು ಕಳೆದುಕೊಳ್ಳಬಹುದು ಎಂಬ ಸಣ್ಣ ಸುಳಿವೂ ಬಿಜೆಪಿಗೆ ಇದ್ದಂತೆ ಕಾಣಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...

ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಕ್ರೈಸ್ತ ಸಮುದಾಯದ ಮತಗಳು ‘ಗೇಮ್‌ ಚೇಂಜರ್’ ಆಗಬಹುದೇ?

ಏನಿದು ವಿದೇಶಿ ದೇಣಿಗೆ ತಿದ್ದುಪಡಿ ಮಸೂದೆ?

ದೇಶದಲ್ಲಿರುವ ಎನ್‌ಜಿಒಗಳು ಮತ್ತು ಧಾರ್ಮಿಕ ಸಂಸ್ಥೆಗಳ ಮೇಲೆ ಸರ್ಕಾರ ತನ್ನ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸುವ ಉದ್ದೇಶದಿಂದ ಈ ಮಸೂದೆ ತಿದ್ದುಪಡಿ ಮಾಡಿದೆ. ಈ ಮಸೂದೆಯ ಅತಿ ಹೆಚ್ಚು ಚರ್ಚಿತ ವಿಷಯ ನಿಯೋಜಿತ ಪ್ರಾಧಿಕಾರ ಎಂಬ ಹೊಸ ವ್ಯವಸ್ಥೆ. ಯಾವುದೇ ಸಂಸ್ಥೆಯ ಎಫ್‌ಸಿಆರ್‌ಎ ಪರವಾನಗಿ ರದ್ದಾದರೆ, ಅಮಾನತುಗೊಂಡರೆ ಅಥವಾ ನವೀಕರಣಗೊಳ್ಳದಿದ್ದರೆ ಆ ಸಂಸ್ಥೆಯು ವಿದೇಶಿ ಹಣದಿಂದ ನಿರ್ಮಿಸಿದ ಕಟ್ಟಡ, ಆಸ್ಪತ್ರೆ, ಶಾಲೆ ಮೊದಲಾದ ಆಸ್ತಿಗಳನ್ನು ಈ ಪ್ರಾಧಿಕಾರವು ತನ್ನ ವಶಕ್ಕೆ ಪಡೆಯಬಹುದು. ಈ ಆಸ್ತಿಗಳನ್ನು ಮಾರಾಟ ಮಾಡುವ ಅಥವಾ ಬಳಸಿಕೊಳ್ಳುವ ಅಧಿಕಾರ ಈ ಪ್ರಾಧಿಕಾರಕ್ಕೆ ಇರುತ್ತದೆ.

ಧಾರ್ಮಿಕ ಪ್ರಾರ್ಥನಾ ಮಂದಿರಗಳನ್ನೂ ಪ್ರಾಧಿಕಾರ ತನ್ನ ಸುಪರ್ದಿಗೆ ಪಡೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲದೆ ಯಾವುದೇ ರಾಜ್ಯ ಸರ್ಕಾರ ಅಥವಾ ತನಿಖಾ ಸಂಸ್ಥೆಯು ಎನ್‌ಜಿಒಗಳ ವಿರುದ್ಧ ಎಫ್‌ಸಿಆರ್‌ಎ ಉಲ್ಲಂಘನೆಗಾಗಿ ತನಿಖೆ ಆರಂಭಿಸುವ ಮೊದಲು ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯ! ಈ ನಿಯಮಗಳೇ ಕ್ರೈಸ್ತ ಮಿಷನರಿಗಳು ಮತ್ತು ಬಿಜೆಪಿ ನಡುವೆ ಬಿರುಕಿಗೆ ಮುಖ್ಯ ಕಾರಣ.

ಕ್ರೈಸ್ತ ಸಮುದಾಯದ ಅಸಮಾಧಾನಕ್ಕೆ ಕಾರಣವೇನು?

ಕೇಂದ್ರ ಸರ್ಕಾರವು ಈ ಮಸೂದೆ ಮೂಲಕ ಅಲ್ಪಸಂಖ್ಯಾತ, ಅದರಲ್ಲೂ ಕ್ರೈಸ್ತ ಸಮುದಾಯ ನಡೆಸುತ್ತಿರುವ ಅನಾಥಾಶ್ರಮಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನು ಗುರಿಯಾಗಿಸಿದೆ ಎಂಬ ಆರೋಪ ಸದ್ಯ ಕೇಳಿಬರುತ್ತಿದೆ. ಕೇರಳದ ಅನೇಕ ಶಾಲೆಗಳು, ಆಸ್ಪತ್ರೆಗಳು ಮತ್ತು ದತ್ತಿ ಸಂಸ್ಥೆಗಳನ್ನು ಕ್ರೈಸ್ತ ಮಿಷನರಿಗಳು ನಡೆಸುತ್ತಿವೆ. ಇವುಗಳಿಗೆ ವಿದೇಶದಿಂದ ದೊಡ್ಡ ಮಟ್ಟದ ದೇಣಿಗೆ ಬರುತ್ತಿವೆ. ತಿದ್ದುಪಡಿ ಪ್ರಕಾರ ಒಂದು ಎನ್‌ಜಿಒ ಪರವಾನಗಿ ನವೀಕರಣಗೊಳ್ಳದಿದ್ದರೆ, ಅದರ ಆಸ್ತಿಪಾಸ್ತಿಗಳನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆಯಬಹುದು. ಇದು ಚರ್ಚ್‌ಗಳ ಆತಂಕಕ್ಕೆ ಕಾರಣವಾಗಿದೆ.

ಅದಕ್ಕೆ ಕಾರಣವೂ ಇದೆ. ಈ ಕಾಯ್ದೆ ಮಂಡನೆಯಾದ ಬಳಿಕ ದೇಶದಲ್ಲಿ ಒಟ್ಟು 21,933 ಸಂಸ್ಥೆಗಳು ತಮ್ಮ ಎಫ್‌ಸಿಆರ್‌ಎ ಪರವಾನಗಿಯನ್ನು ಕಳೆದುಕೊಂಡಿವೆ. ಸದ್ಯ ಕೇವಲ 15,000 ದಿಂದ 16,000 ಸಂಸ್ಥೆಗಳು ಮಾತ್ರ ಮಾನ್ಯವಾದ ಎಫ್‌ಸಿಆರ್‌ಎ ಪರವಾನಗಿಯನ್ನು ಹೊಂದಿವೆ, ವಿದೇಶಿ ದೇಣಿಗೆಯನ್ನು ಪಡೆಯಲು ಅರ್ಹವಾಗಿದೆ. ದೇಶದ ಅತ್ಯಂತ ಹಳೆಯ ಮತ್ತು ಪ್ರಭಾವಶಾಲಿ ಕ್ರೈಸ್ತ ಸಂಸ್ಥೆಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಅಥವಾ ನವೀಕರಿಸಲಾಗಿಲ್ಲ. ನೊಬೆಲ್ ಪುರಸ್ಕೃತೆ ಮದರ್ ತೆರೇಸಾ ಅವರು ಸ್ಥಾಪಿಸಿದ ಪ್ರಸಿದ್ಧ ‘ಮಿಷನರೀಸ್ ಆಫ್ ಚಾರಿಟಿ’ ಸಂಸ್ಥೆಯ ಪರವಾನಗಿಯನ್ನು ತಡೆಹಿಡಿಯಲಾಗಿತ್ತು. ಆದರೆ ಜಾಗತಿವಾಗಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಪರವಾನಗಿ ನವೀಕರಿಸಲಾಗಿದೆ.

ಮಹಿಳೆಯರು ಮತ್ತು ದಲಿತರು ತಾರತಮ್ಯದ ವಿರುದ್ಧದ ಹೋರಾಡುವ ಆಕ್ಸ್‌ಫ್ಯಾಮ್ ಇಂಡಿಯಾ, ಸಾಮಾಜಿಕ ಸೇವೆ ಮಾಡುತ್ತಿರುವ ಸಿನೋಡಿಕಲ್ ಬೋರ್ಡ್ ಆಫ್ ಸೋಶಿಯಲ್ ಸರ್ವಿಸ್ (CNI SBSS), ಮಾನವ ಹಕ್ಕುಗಳು ಮತ್ತು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿರುವ ಇಂಡೋ-ಗ್ಲೋಬಲ್ ಸೋಶಿಯಲ್ ಸರ್ವಿಸ್ ಸೊಸೈಟಿ (IGSSS), ವಿಪತ್ತು ನಿರ್ವಹಣೆ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಹೆಸರು ಮಾಡಿರುವ ಚರ್ಚ್ ಆಕ್ಸಿಲರಿ ಫಾರ್ ಸೋಶಿಯಲ್ ಆಕ್ಷನ್ (CASA), ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಇವಾಂಜೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾ (EFI), ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ವಾಲಂಟರಿ ಹೆಲ್ತ್ ಅಸೋಸಿಯೇಷನ್ ಆಫ್ ಇಂಡಿಯಾ (VHAI) ಹೀಗೆ ಹಲವು ಕ್ರೈಸ್ತ ಮಿಷನರಿಗಳು ಹಾಗೂ ಮಾನವ ಹಕ್ಕು ಸಂಸ್ಥೆಗಳು ತಮ್ಮ ಪರವಾನಗಿಯನ್ನು ಕಳೆದುಕೊಂಡು ಈಗ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿವೆ.

ಇದನ್ನು ಓದಿದ್ದೀರಾ? ಕೇರಳ ಚುನಾವಣೆಗೂ ಮುನ್ನ ಪಕ್ಷಗಳ ಸಂಕಟ: ಬಂಡಾಯ- ಪಕ್ಷಾಂತರ- ಉಚ್ಚಾಟನೆ ಸಂಕಷ್ಟ

ಈ ಎಲ್ಲ ಬೆಳವಣಿಗೆ ನಡುವೆ ಸಿರೋ-ಮಲಬಾರ್ ಚರ್ಚ್ ಮತ್ತು ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್‌ನಂತಹ ಪ್ರಬಲ ಧಾರ್ಮಿಕ ಸಂಸ್ಥೆಗಳ ಬಿಷಪ್‌ಗಳು ಈ ಮಸೂದೆಯನ್ನು ಬಹಿರಂಗವಾಗಿ ಟೀಕಿಸಿದ್ದಾರೆ. ಇದು ಅಲ್ಪಸಂಖ್ಯಾತ ಸಂಸ್ಥೆಗಳನ್ನು ಗುರಿಯಾಗಿಸುವ ಪ್ರಯತ್ನ ಎಂದು ದೂರಿದ್ದಾರೆ. ಜತೆಗೆ ಕೇರಳದ ಪ್ರಮುಖ ರಾಜಕೀಯ ಮೈತ್ರಿಕೂಟಗಳಾದ ಎಲ್‌ಡಿಎಫ್ ಮತ್ತು ಯುಡಿಎಫ್‌ ಈ ಮಸೂದೆಯನ್ನು ಬಿಜೆಪಿಯ ವಿರುದ್ಧ ಪ್ರಚಾರಕ್ಕೆ ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಇದು ಬಿಜೆಪಿ ಕೋಲು ಕೊಟ್ಟು ಪೆಟ್ಟು ತಿಂದಂತೆ. ಈಗಾಗಲೇ ಈ ಮಸೂದೆಯು ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಗೆ ಅಡ್ಡಿಯಾಗುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಬಿಜೆಪಿಯಿಂದ ‘ಡ್ಯಾಮೇಟ್ ಕಂಟ್ರೋಲ್’ ಪ್ರಯತ್ನ

ಇತರೆ ರಾಜ್ಯಗಳಲ್ಲಿ ಕ್ರೈಸ್ತರು ಮತಾಂತರ ಮಾಡುವವರು, ಹಿಂದೂ ವಿರೋಧಿಗಳೆಂದು ಕರೆಯುವ ಬಿಜೆಪಿ ಕೇರಳದಲ್ಲಿ ಕ್ರೈಸ್ತರ ಮತಕ್ಕೆ ಬಲೆ ಬೀಸುತ್ತಲೇ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರುಗಳು ಚರ್ಚ್‌ಗಳ ಮುಖ್ಯಸ್ಥರನ್ನು ಭೇಟಿಯಾಗುತ್ತಿದ್ದಾರೆ. ಈ ಹಿಂದೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯ ಗೆಲುವೂ ಬಿಜೆಪಿಗೆ ಹುಮ್ಮಸ್ಸು ನೀಡಿತ್ತು. ಆದರೆ ಇದೀಗ ಆ ಎಲ್ಲ ತಂತ್ರಗಳಿಗೆ ಈ ಮಸೂದೆ ಮುಳುವಾಗಿದೆ. ಕೇಂದ್ರ ತಿರುವಾಂಕೂರುನಂತಹ ಕ್ರೈಸ್ತ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಬಿಜೆಪಿಯ ವಿರುದ್ಧ ಮತಗಳ ಧ್ರುವೀಕರಣ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ಹೀಗಿರುವಾಗ ಬಿಜೆಪಿ ಡ್ಯಾಮೇಜ್ ಕಂಟ್ರೋಲ್‌ಗೆ ಪ್ರಯತ್ನಿಸುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಮತ್ತು ಇತರ ನಾಯಕರು “ಈ ಮಸೂದೆಯು ಕೇವಲ ಅಕ್ರಮ ಹಣ ವರ್ಗಾವಣೆ ತಡೆಯಲು ತರಲಾಗಿದೆಯೇ ಹೊರತು, ಯಾವುದೇ ಸಮುದಾಯವನ್ನು ಗುರಿಯಾಗಿಸಿಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಕ್ರೈಸ್ತ ಧರ್ಮಗುರುಗಳನ್ನು ಭೇಟಿಯಾಗಿ ಮಾತನಾಡುತ್ತಿದೆ. ಆದರೆ, ಈವರೆಗೂ ಪೂರ್ಣ ಯಶಸ್ಸು ಕಂಡಿಲ್ಲ.

ಇವೆಲ್ಲವೂ ನೇರವಾಗಿ ಕೇರಳ ಚುನಾವಣೆಯ ಮೇಲೆ ಪ್ರಭಾವ ಬೀರುವುದು ಖಚಿತ. ಕೇರಳದಲ್ಲಿ ಬಿಜೆಪಿ ಗದ್ದುಗೆ ಪಡೆಯುವುದು ದೂರದ ಕನಸು. ಆದರೆ, ಪ್ರಬಲವಾಗಿ ಬೇರೂರುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಲೇ ಇದೆ. ಬಿಜೆಪಿ ಕೇರಳದಲ್ಲಿ ಮೂರನೇ ಪ್ರಬಲ ಶಕ್ತಿಯಾಗಿ ಹೊರಹೊಮ್ಮಬೇಕಾದರೆ ಕ್ರೈಸ್ತರ ಮತಗಳು ಅತ್ಯಗತ್ಯ. ಆದರೆ, ಈ ಮಸೂದೆಯಿಂದಾಗಿ ಬಿಜೆಪಿಯತ್ತ ಒಲವು ತೋರಿಸುತ್ತಿದ್ದ ಸಮುದಾಯದ ಕೆಲವು ಮತದಾರರಲ್ಲಿ ಮತ್ತೆ ಅಭದ್ರತೆ ಉಂಟಾಗಿದೆ. ಇದರಿಂದಾಗಿ ಪಾಲಾ, ಕಂಜಿರಪ್ಪಳ್ಳಿ ಮತ್ತು ತಿರುವಲ್ಲದಂತಹ ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವಿನ ಲೆಕ್ಕಾಚಾರ ಉಲ್ಟಾ ಆಗಬಹುದು.

ಹೀಗೆ, ಕಳೆದ ಹಲವು ವರ್ಷಗಳಿಂದ ಬಿಜೆಪಿ ಕೇರಳದಲ್ಲಿ ನಡೆಸಿ ಪ್ರಯತ್ನಕ್ಕೆ ಈಗ ಎಫ್‌ಸಿಆರ್‌ಎ ತಿದ್ದುಪಡಿ ತಣ್ಣೀರು ಎರಚಿದೆ. ಒಂದು ಕಡೆ ಬಿಜೆಪಿ ಕೇರಳದಲ್ಲಿ ತನ್ನ ಮತಬ್ಯಾಂಕ್ ವಿಸ್ತರಿಸಲು ಯತ್ನಿಸುತ್ತಿರುವಾಗ, ಮತ್ತೊಂದೆಡೆ ಈ ಕಾನೂನು ಸಮುದಾಯದ ಸಂಸ್ಥೆಗಳಿಗೆ ಬೆದರಿಕೆಯಾಗಿದೆ. ಈ ವಿರೋಧಾಭಾಸವೇ ಕೇರಳದಲ್ಲಿ ಬಿಜೆಪಿಯ ಪ್ರಗತಿಗೆ ದೊಡ್ಡ ಅಡ್ಡಿಯಾಗುವ ಸಾಧ್ಯತೆ ಹೆಚ್ಚು.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

KPSC ನೇಮಕಾತಿ ಹಗರಣ: SIT ರಚನೆಗೆ ಸುಪ್ರೀಂ ತಡೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಗೆ...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು, ಗೋವಾ, ಕೋಲ್ಕತ್ತದಲ್ಲಿ ಸಿಜೆಪಿ ‘ಮೋರ್ಚಾ’

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌: ಯಾಕೀ ವಿವಾದ?

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ....

ನಾಳೆ ‘ಕೊಂದವರು ಯಾರು?’ ರಾಷ್ಟ್ರೀಯ ವಿಚಾರ ಸಂಕಿರಣ: ಪಿತೃಪ್ರಧಾನತೆ, ಹೊಣೆಗಾರಿಕೆ ಕುರಿತು ಚರ್ಚೆಗೆ ವೇದಿಕೆ

ಕರ್ನಾಟಕದ ‘ನಾವೆದ್ದು ನಿಲ್ಲದಿದ್ದರೆ' ಸಂಘಟನೆಯು ಆರಂಭಿಸಿರುವ 'ಕೊಂದವರು ಯಾರು? Who Killed...