ಚೀನಾ ಕಂಪೆನಿಗಳಿಂದ ದೇಣಿಗೆ‌ | ಮೊದಲ ಅಪರಾಧಿ ಸ್ಥಾನದಲ್ಲಿ ಮೋದಿ: ಕಾಂಗ್ರೆಸ್ ಕಿಡಿ

Date:

  • ಪಿಎಂ ಕೇರ್ಸ್ ಎಂಬ ಗೋಲ್ಮಾಲ್ ನಿಧಿಗೆ ಚೀನಾ ಕಂಪೆನಿಗಳಿಂದ ಕೋಟಿ ಕೋಟಿ ಹಣ ಸಂಗ್ರಹ
  • ಪಟೇಲರ ಪ್ರತಿಮೆ ನಿರ್ಮಾಣದ ಹೊಣೆ ಚೀನಾ ಕಂಪೆನಿಗೆ ನೀಡಿದ್ದು ಕೂಡ ಕೇಂದ್ರ ಸರ್ಕಾರವೇ

ಚೀನಾ ಕಂಪೆನಿಗಳಿಂದ ದೇಣಿಗೆ ಸ್ವೀಕರಿಸುವುದು ಅಪರಾಧವೆಂದಾದರೆ ಮೊದಲು ಅಪರಾಧಿ ಸ್ಥಾನದಲ್ಲಿ ಮೋದಿಯೇ ನಿಲ್ಲುತ್ತಾರೆ. ಪಿಎಂ ಕೇರ್ಸ್ ಎಂಬ ಗೋಲ್ಮಾಲ್ ನಿಧಿಗೆ ಚೀನಾ ಕಂಪೆನಿಗಳಿಂದ ಕೋಟಿ ಕೋಟಿ ಹಣ ಸಂಗ್ರಹಿಸಲಾಗಿದೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

- Advertisement -

ಈ ಕುರಿತು ಎಕ್ಸ್‌ನಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್‌, “ಚೀನಾ ಕಂಪೆನಿಗಳಿಂದ ದೇಣಿಗೆ ಪಡೆಯಲಾಗಿದೆ ಎಂದು ಆರೋಪಿಸಿ ನ್ಯೂಸ್ ಕ್ಲಿಕ್ ಮಾಧ್ಯಮ ಸಂಸ್ಥೆಯ ಮೇಲೆ ದಾಳಿ ಮಾಡಲಾಗಿದೆ. ಸರ್ದಾರ್ ಪಟೇಲರ ಪ್ರತಿಮೆ ನಿರ್ಮಾಣದ ಹೊಣೆಯನ್ನು ಚೀನಾ ಕಂಪೆನಿಗೆ ನೀಡಿದ್ದು ಕೂಡ ಕೇಂದ್ರ ಸರ್ಕಾರವೇ. ಮೋದಿಯವರಿಗೆ ದಮ್ಮು ತಾಕತ್ತಿದ್ದರೆ ಭಾರತದ ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ ಮಾಡುವ ಬದಲು ಭಾರತವನ್ನು ಆಕ್ರಮಿಸಿರುವ ಚೀನಾ ಮೇಲೆ ದಾಳಿ ಮಾಡಲಿ. ಕನಿಷ್ಠ ಪಕ್ಷ ‘ಚೀನಾ’ ಎಂದು ಹೆಸರು ಹೇಳಿ ವಾಗ್ದಾಳಿಯನ್ನಾದರೂ ಮಾಡಲಿ!” ಎಂದು ಲೇವಡಿ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

“ಇತ್ತೀಚೆಗಷ್ಟೇ ಜಿ20 ಸಮಾವೇಶದ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷರು ಭಾರತದ ಮಾಧ್ಯಮಗಳ ಸ್ವಾತಂತ್ರ್ಯವು ಅಪಾಯದಲ್ಲಿದೆ ಎಂದು ವಿದೇಶದಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಮೋದಿಗೆ ಮಾಧ್ಯಮ ಸ್ವಾತಂತ್ರ್ಯವನ್ನು ರಕ್ಷಿಸುವಂತೆ ಬುದ್ದಿ ಹೇಳಿದ್ದೇನೆ ಎಂದಿದ್ದರು. ಈ ಅವಮಾನದ ಬೆನ್ನಲ್ಲೇ ಮೋದಿ ಸರ್ಕಾರ ನ್ಯೂಸ್ ಕ್ಲಿಕ್ ಸಂಸ್ಥೆಯ ಮೇಲೆ ದಾಳಿ ಮಾಡಿದೆ. ಭಾರತದ ಸತ್ಯ ಹೇಳುವ ಮಾಧ್ಯಮಗಳ ಕತ್ತು ಹಿಸುಕಲಾಗುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮೋದಿ ಭಜನೆಯ ‘ಗೋದಿ ಮೀಡಿಯಾ’ಗಳಿಗೆ ಮಾತ್ರ ಇಲ್ಲಿ ಸ್ವತಂತ್ರವಿದೆ” ಎಂದು ಕಟುವಾಗಿ ಟೀಕಿಸಿದೆ.

“ಅದಾನಿ ಕಂಪೆನಿಯಲ್ಲಿ ಚೀನಾದವರ ಹೂಡಿಕೆ ಇದೆ, ‘ಅದಾನಿ ಚೀನಿ ಬಾಯಿ ಬಾಯಿ’ ಎನ್ನುವಂತಿದೆ. ನರೇಂದ್ರ ಮೋದಿ ಅವರೇ, ಅದಾನಿ ಕಂಪೆನಿ ಮೇಲೆ ಇಡಿ ದಾಳಿ ಮಾಡುವುದು ಯಾವಾಗ? ನಿಮ್ಮ ಗೆಳೆಯನ ಹಿತಕ್ಕಾಗಿ ಚೀನಾದ ಅತಿಕ್ರಮಣ ನೋಡಿ ಸುಮ್ಮನಿದ್ದೀರಾ? ಭಾರತದ ಭೂಮಿಯನ್ನು ಬಲಿ ಕೊಡುತ್ತಿದ್ದೀರಾ” ಎಂದು ಪ್ರಶ್ನಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹವಾಮಾನ | ರಾಜ್ಯದಲ್ಲಿ ಮುಂದಿನ 2 ದಿನ ಭಾರಿ ಮಳೆ: 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಬಿರುಗಾಳಿ ಸಹಿತ...

ರಾಜ್ಯದಲ್ಲಿ SIR ಭೌತಿಕ ವಿಚಾರಣೆ ಸ್ಥಗಿತ: ಬಿಎಲ್ಒಗಳಿಂದ ಮನೆ ಬಾಗಿಲಿಗೆ ತೆರಳಿ ದಾಖಲೆ ಸಂಗ್ರಹ

ಹಿಂದಿನ ದತ್ತಾಂಶ ಲಭ್ಯವಿಲ್ಲದ ಹಾಗೂ ಮಾಹಿತಿಯಲ್ಲಿ ಹೊಂದಾಣಿಕೆಯಾಗದ ಕಾರಣಕ್ಕೆ ನೋಟಿಸ್ ಸ್ವೀಕರಿಸಿರುವ...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ ರಾಹುಲ್ ಗಾಂಧಿ ಸಮರ!

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ...