ತನಿಖೆಯ ನೆಪ, ನನೆಗುದಿಗೆ ಬಿಲ್: ₹38,000 ಕೋಟಿ ಪಾವತಿಗೆ ಗಡುವು ನೀಡಿದ ಗುತ್ತಿಗೆದಾರರು

Date:

ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಬೆನ್ನೆಲುಬಾಗಿರುವ ಸರ್ಕಾರಿ ಗುತ್ತಿಗೆದಾರರು ಸದ್ಯ ಸರ್ಕಾರದ ವಿರುದ್ಧ ಆಕ್ರೋಶದಲ್ಲಿದ್ದಾರೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಬರೋಬ್ಬರಿ ₹38,000 ಕೋಟಿಗೂ ಅಧಿಕ ಬಿಲ್ ಪಾವತಿಗಾಗಿ ರಾಜ್ಯ ಸರ್ಕಾರಕ್ಕೆ ‘ನವೆಂಬರ್ ಗಡುವು’ ನೀಡಿರುವ ಗುತ್ತಿಗೆದಾರರ ಸಂಘ, ಹಿಂದಿನ ಹೋರಾಟದ ಕಹಿ ನೆನಪಿನೊಂದಿಗೇ ಇದೀಗ ಮತ್ತೊಂದು ನಿರ್ಣಾಯಕ ಸಮರಕ್ಕೆ ಅಣಿಯಾಗಿದೆ.

- Advertisement -

ಗುತ್ತಿಗೆದಾರರು ಸರ್ಕಾರದ ವಿರುದ್ಧ ಸಿಡಿದೆದ್ದಿರುವುದು ಇದೇ ಮೊದಲಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರ ಸಂಘವು ‘40% ಕಮಿಷನ್’ ಆರೋಪ ಮಾಡಿ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಪ್ರಧಾನಿಗಳಿಗೆ ಪತ್ರ ಬರೆಯುವ ಮೂಲಕ ದೊಡ್ಡ ಮಟ್ಟದ ಹೋರಾಟ ನಡೆಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಅಂದಿನ ಆ ಹೋರಾಟವು ರಾಜ್ಯದ ರಾಜಕೀಯ ಚಿತ್ರಣವನ್ನೇ ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿದ್ದ ಹಾಲಿ ನಾಯಕರು, ಗುತ್ತಿಗೆದಾರರ ಬೆಂಬಲಕ್ಕೆ ನಿಂತು, ಅಧಿಕಾರಕ್ಕೆ ಬಂದ ತಕ್ಷಣ ಎಲ್ಲ ಸಮಸ್ಯೆ ಬಗೆಹರಿಸುವ ಮತ್ತು ಶೀಘ್ರವಾಗಿ ಬಿಲ್ ಪಾವತಿಸುವ ಭರವಸೆ ನೀಡಿದ್ದರು. ​

ಇದನ್ನೂ ಓದಿ: ಸಾಲ ವಸೂಲಾತಿ ದಾದಾಗಿರಿಗೆ ಆರ್‌ಬಿಐ ತಡೆ: ಆದೇಶ ಕಾಗದಕ್ಕಷ್ಟೇ ಸೀಮಿತವಾಗದಿರಲಿ, ಗ್ರಾಹಕರಿಗೆ ನಿಜವಾದ ನೆಮ್ಮದಿ ಸಿಗಲಿ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗುತ್ತಿಗೆದಾರರು ಬಿಲ್ ಪಾವತಿಯ ನಿರೀಕ್ಷೆಯಲ್ಲಿದ್ದರು. ಆದರೆ, ಸರ್ಕಾರವು ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳ ಗುಣಮಟ್ಟ ಮತ್ತು ಅಕ್ರಮಗಳ ಪರಿಶೀಲನೆಗೆ ತನಿಖಾ ಸಮಿತಿಗಳನ್ನು (ನ್ಯಾ. ನಾಗಮೋಹನ್ ದಾಸ್ ಸಮಿತಿ ಸೇರಿದಂತೆ) ರಚಿಸಿತು.

“ತನಿಖೆ ಪೂರ್ಣಗೊಂಡು ವರದಿ ಬರುವವರೆಗೆ ಹಣ ಬಿಡುಗಡೆ ಇಲ್ಲ” ಎಂಬ ಕಟ್ಟುನಿಟ್ಟಿನ ನಿಲುವು ತಳೆಯಿತು. ಈ ಪ್ರತಿಕ್ರಿಯೆ ಗುತ್ತಿಗೆದಾರರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತು. ತನಿಖೆಗಳ ವಿಳಂಬದಿಂದಾಗಿ ವರ್ಷಗಳೇ ಉರುಳಿದರೂ, ಬಿಲ್ ಪಾವತಿ ಪ್ರಕ್ರಿಯೆ ಸಂಪೂರ್ಣ ನೆನೆಗುದಿಗೆ ಬಿತ್ತು. ಇತ್ತೀಚೆಗೆ ಕೆಲವು ಇಲಾಖೆಗಳಲ್ಲಿ ಸಣ್ಣಪುಟ್ಟ ಮೊತ್ತ ಬಿಡುಗಡೆಯಾದರೂ, ಬಹುಪಾಲು ಬೃಹತ್ ಮೊತ್ತ (ಸುಮಾರು 38 ಸಾವಿರ ಕೋಟಿ ರೂ.) ಹಾಗೆಯೇ ಉಳಿದುಕೊಂಡಿದೆ.

ಸರ್ಕಾರದ ತನಿಖೆ ಮತ್ತು ಪರಿಶೀಲನೆಗಳ ನೆಪದಲ್ಲಿ ಬಿಲ್ ಪಾವತಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಗುತ್ತಿಗೆದಾರರು ಈಗ ‘ನವೆಂಬರ್ ಡೆಡ್‌ಲೈನ್’ ಅಸ್ತ್ರ ಪ್ರಯೋಗಿಸಿದ್ದಾರೆ. ಬಿಬಿಎಂಪಿ, ಲೋಕೋಪಯೋಗಿ (PWD) ಮತ್ತು ನೀರಾವರಿ ಇಲಾಖೆಗಳಲ್ಲಿ ಸಾವಿರಾರು ಕೋಟಿ ಬಾಕಿ ಇದೆ. ಬ್ಯಾಂಕ್ ಮತ್ತು ಖಾಸಗಿ ಲೇವಾದೇವಿಗಾರರಿಂದ ದುಬಾರಿ ಬಡ್ಡಿಗೆ ಸಾಲ ತಂದು ಕಾಮಗಾರಿ ಮಾಡಿರುವ ಗುತ್ತಿಗೆದಾರರು, ಅಸಲು-ಬಡ್ಡಿ ಕಟ್ಟಲಾಗದೆ ಆಸ್ತಿಪಾಸ್ತಿ ಮಾರಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ.

ಯಾರು ಮೊದಲು ಕಾಮಗಾರಿ ಮುಗಿಸಿದ್ದಾರೋ ಅವರಿಗೆ ಮೊದಲ ಆದ್ಯತೆ ಮೇರೆಗೆ ಯಾವುದೇ ಕಮಿಷನ್ ಹಾವಳಿ ಇಲ್ಲದೆ ನೇರವಾಗಿ ಹಣ ಪಾವತಿಯಾಗಬೇಕು ಎಂಬುದು ಈಗಿನ ಪ್ರಮುಖ ಬೇಡಿಕೆ. ನವೆಂಬರ್ 30ರ ಒಳಗಾಗಿ ಹಂತ-ಹಂತವಾಗಿ ಬಿಲ್ ಪಾವತಿ ಮಾಡಲೇಬೇಕು. ಇಲ್ಲವಾದಲ್ಲಿ, ಡಿಸೆಂಬರ್ 1 ರಿಂದ ರಾಜ್ಯಾದ್ಯಂತ ನಡೆಯುತ್ತಿರುವ ಎಲ್ಲ ಸರ್ಕಾರಿ ಕಾಮಗಾರಿಗಳನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಅಷ್ಟು ಮಾತ್ರವಲ್ಲದೆ ಗಡುವು ಮೀರಿದರೆ ಹೊಸ ಟೆಂಡರ್‌ಗಳಲ್ಲಿ ಭಾಗವಹಿಸದೆ ಸಂಪೂರ್ಣ ಬಹಿಷ್ಕಾರ ಹಾಕಲಾಗುವುದು, ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನಿವಾಸ ಹಾಗೂ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಬೃಹತ್ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಒಟ್ಟಾರೆಯಾಗಿ, ಈ ಹಿಂದಿನ ಬಿಜೆಪಿ ಸರ್ಕಾರದ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದಿದ್ದ ಗುತ್ತಿಗೆದಾರರು ಇದೀಗ ಪ್ರಸ್ತುತ ಸರ್ಕಾರದ ತನಿಖೆ ಮತ್ತು ವಿಳಂಬ ನೀತಿಯಿಂದಲೂ ಹೈರಾಣಾಗಿದ್ದಾರೆ. ನವೆಂಬರ್ ಒಳಗಾಗಿ ಸರ್ಕಾರ ಈ ಬಿಕ್ಕಟ್ಟನ್ನು ಬಗೆಹರಿಸದಿದ್ದರೆ, ರಾಜ್ಯದ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ದೊಡ್ಡ ಮಟ್ಟದ ಬ್ರೇಕ್ ಬೀಳುವುದು ನಿಶ್ಚಿತ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದ ಕ್ಷೀರ ವಲಯ: 11 ಹಾಲು ಒಕ್ಕೂಟಗಳಿಗೆ ಲಾಭದ ಸಿಹಿ, ಐದಕ್ಕೆ ನಷ್ಟದ ಕಹಿ

ರಾಜ್ಯದ ಪ್ರಮುಖ ಡೈರಿ ಉತ್ಪನ್ನ ಸಂಸ್ಥೆಯಾದ ಕರ್ನಾಟಕ ಸಹಕಾರ ಹಾಲು ಉತ್ಪಾದಕರ...

ಕಾರ್ಮಿಕರ ಉಳಿತಾಯಕ್ಕೆ ಕನ್ನ ಹಾಕಿದ ಕೇಂದ್ರದ ಹೊಸ ಪಿಎಫ್ ನೀತಿ: ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ನೂತನ ಭವಿಷ್ಯ ನಿಧಿ (ಪಿಎಫ್) ಹಿಂಪಡೆಯುವಿಕೆಯ...

SIR ಸ್ಥಗಿತಗೊಳಿಸಿ, ತೆಗೆದುಹಾಕಲಾದ ಮತದಾರರ ಹೆಸರುಗಳ ಆಡಿಟ್‌ ಮಾಡಿ: ಶಶಿ ತರೂರ್ ಆಗ್ರಹ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು...