‘ದಾವಣಗೆರೆ ಉಪಚುನಾವಣೆ, ಮುಸ್ಲಿಂ ಸಮಾವೇಶದ ಪೆಟ್ಟು ಇಲ್ಲದಿದ್ದರೆ ಹಿಜಾಬ್ ವಾಪಸ್ ಬರುತ್ತಿತ್ತಾ?’: ಶಿವಸುಂದರ್

Date:

“ದಾವಣಗೆರೆ ಉಪಚುನಾವಣೆ ಮತ್ತು ಮುಸ್ಲಿಂ ಸಮಾವೇಶದ ಪೆಟ್ಟು ಇಲ್ಲವಾಗಿದ್ದರೆ ಹಿಜಾಬ್ ವಾಪಸ್ ಬರುತ್ತಿತ್ತಾ?” ಎಂದು ಚಿಂತಕ ಶಿವಸುಂದರ್ ಪ್ರಶ್ನಿಸಿದರು.

- Advertisement -

ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟ ಶನಿವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ‘ಕರ್ನಾಟಕ ಮುಸ್ಲಿಂ ಸಮಾವೇಶ’ದಲ್ಲಿ ಅವರು ಮಾತನಾಡಿದರು. “ಚುನಾವಣೆ ದೃಷ್ಟಿಯಲ್ಲಿ ಮಾತ್ರ ಆದೇಶ ವಾಪಸ್ ಪಡೆಯುತ್ತೀರಿ. ಕೋಮುವಾದಿ ಶಕ್ತಿಗಳು ಸಂವಿಧಾನಕ್ಕೆ ಹುಟ್ಟಿಸುತ್ತಿರುವ ಆತಂಕದ ಬಗ್ಗೆ ಅರಿವಿದೆಯಾ? ಅರಿವಿಲ್ಲ ಎಂದರೆ ನಿಮ್ಮನ್ನು ನೆಚ್ಚಿಕೊಂಡು ದೇಶ ಉಳಿಯುತ್ತಾ?” ಎಂದು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

“ಬಿಜೆಪಿಯವರಿಗೆ ಹಿಜಾಬ್ ಬಗ್ಗೆ ಗಮನ ಬಂದಿದ್ದು ಯಾವಾಗ? ಹರಿದ ಬಟ್ಟೆ ಹಾಕಿಕೊಂಡು ಬಂದ ಬಡ ಹಿಂದು, ರೇಷ್ಮೆ ಬಟ್ಟೆ ಹಾಕಿ ಬಂದ ಶ್ರೀಮಂತ ಹಿಂದು ನಡುವಿನ ಅಸಮಾನತೆ ಬಗ್ಗೆ ಇವರು ಯಾವತ್ತಾದರೂ ಮಾತನಾಡಿದ್ದು ಉಂಟಾ? ಇವರ ಉದ್ದೇಶವೇ ಸಮವಸ್ತ್ರದ ಹೆಸರಲ್ಲಿ ಮುಸ್ಲಿಂ ಅಸ್ಮಿತೆ ಮತ್ತು ಇಸ್ಲಾಂ ಸಂಸ್ಕೃತಿಯನ್ನು ಹೀನಾಯಗೊಳಿಸುವುದಾಗಿತ್ತು. ಒಂದು ನಿರ್ದಿಷ್ಟ ಸಂಸ್ಕೃತಿಯನ್ನು ಅದು ದೇಶದ ಸಂಸ್ಕೃತಿಯಲ್ಲ ಎಂದು ಪ್ರತಿಪಾದಿಸಿ, ಮತ್ತೊಂದು ಸಂಸ್ಕೃತಿಯನ್ನು ರಾಷ್ಟ್ರೀಯ ಸಂಸ್ಕೃತಿ ಎಂದು ಹೇಳುವುದು ಇದರ ಉದ್ದೇಶವಾಗಿತ್ತು” ಎಂದು ವಿವರಿಸಿದರು.

“ಸಮವಸ್ತ್ರಕ್ಕೆ ಪ್ರತಿಸ್ಪರ್ಧಿಯಾಗಿ ಹಿಜಾಬ್ ಹಾಕಿದ್ದಲ್ಲ. ಸಮವಸ್ತ್ರದ ಜೊತೆಗೆ ಹಿಜಾಬ್ ಇತ್ತು. ಸಮವಸ್ತ್ರದ ಜೊತೆಗೆ ಜನಿವಾರ, ಶಿವದಾರ, ಕುಂಕುಮ, ವಿಭೂತಿ ಇತ್ತು. ಅದ್ಯಾವುದಕ್ಕೂ ಆಕ್ಷೇಪಣೆ ಇಲ್ಲ. ಕೇವಲ ಹಿಜಾಬ್ ಏಕೆ ಎಂಬ ಹೈಕೋರ್ಟ್‌ನಲ್ಲಿ ಕೇಳಲಾಯಿತು. ಆದರೆ ಹೈಕೋರ್ಟ್ ಅತ್ಯಂತ ಅನ್ಯಾಯಯುತ ತೀರ್ಪು ಕೊಟ್ಟಿತು. ಸಮವಸ್ತ್ರವೇ ಮುಖ್ಯ, ಅದನ್ನು ನಿರ್ಧರಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆ ಎಂದಿತು. ವಿವಾದವು ಸುಪ್ರೀಂಕೋರ್ಟ್‌ಗೆ ಹೋಯಿತು. ಜಸ್ಟಿಸ್ ಹೇಮಂತ್ ಗುಪ್ತಾ ಅವರು ಕುಂಕುಮ, ಪಗೋಡ ಇವೆಲ್ಲ ಭಾರತದ ರಾಷ್ಟ್ರೀಯ ಸಂಸ್ಕೃತಿಯ ಭಾಗ. ಹಿಜಾಬ್ ರಾಷ್ಟ್ರೀಯ ಸಂಸ್ಕೃತಿಯ ಭಾಗವಲ್ಲ ಎಂದರು. ಮಕ್ಕಳು ಯಾವುದೇ ವಸ್ತ್ರ ಹಾಕಿಕೊಂಡು ಬಂದರೂ ಶಾಲೆಯಲ್ಲಿ ಶಿಕ್ಷಣ ಕೊಡಬೇಕಾದದ್ದು ನಿಮ್ಮ ಕರ್ತವ್ಯ. ಒಂದು ಸಂಸ್ಕೃತಿ ಮಾತ್ರ ರಾಷ್ಟ್ರೀಯ ಸಂಸ್ಕೃತಿ ಎಂದಿದ್ದು ಈ ದೇಶದ ಸಂವಿಧಾನಕ್ಕೆ ವಿರುದ್ಧವಾಗಿತ್ತು. ಇದು ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ ಕೊಡುವ ಪ್ರಶ್ನೆಯಾಗಿ ಉಳಿಯಲಿಲ್ಲ. ಈ ದೇಶ ಯಾರಿಗೆ ಸೇರಿದ್ದು ಎಂಬ ಸಾಂವಿಧಾನಿಕ ಪ್ರಶ್ನೆಯಾಗಿ ಬಂತು. ಆಗ ಕಾಂಗ್ರೆಸ್ ಏನು ಮಾಡಬೇಕಿತ್ತು? ಬಹುತ್ವ ಈ ದೇಶದ ಭಾಗವಾಗಿದೆ. ಬಹುತ್ವ ಸಂವಿಧಾನದ ಭಾಗವಾಗಿದೆ. ಹೀಗಾಗಿ ಒಂದು ಧರ್ಮವು ರಾಷ್ಟ್ರೀಯ ಧರ್ಮವಲ್ಲ ಎಂದು ಗಟ್ಟಿಯಾಗಿ ಹೇಳಬೇಕಿತ್ತು. ಯಾಕೆ ಹೇಳಲಿಲ್ಲ?” ಎಂದು ಕೇಳಿದರು.

ಇತಿಹಾಸವನ್ನು ನೆನಪಿಸಿದ ಅವರು, “ಅಂಬೇಡ್ಕರ್ ಕನಸಿನ ಮತ್ತು ಆದರ್ಶ ಭಾರತದ ಕಲ್ಪನೆ ಒಂದು ಕಡೆ ಇತ್ತು. ಅಲ್ಪಸಂಖ್ಯಾತರು ಅನ್ಯರಾಗಬೇಕು, ಉಳಿದ ಸಮುದಾಯಗಳು ಬ್ರಾಹ್ಮಣಶಾಹಿಯ ಅಧೀನವಾಗಬೇಕು ಎನ್ನುವ ಸಾವರ್ಕರ್ ಪರಿಕಲ್ಪನೆ ಇನ್ನೊಂದೆಡೆ ಇತ್ತು. ಇವೆರಡರ ನಡುವೆ ಅಂಬೇಡ್ಕರ್ ಗೆದ್ದು ಸಾವರ್ಕರ್ ಸೋತರು. ಆದರೆ ಕಳೆದ 30 ವರ್ಷಗಳಿಂದ ಸಂವಿಧಾನಕ್ಕೆ ಇಂಚಿಂಚೇ ಚೂರಿಹಾಕಲಾಗುತ್ತಿದೆ. ನಿರಂತರ ರಕ್ತಸ್ರಾವ ಆಗುವಂತೆ ಸಂವಿಧಾನದ ಮೇಲೆ ದಾಳಿ ಮಾಡಲಾಗುತ್ತಿದೆ. ಇದನ್ನು ಗಟ್ಟಿಯಾಗಿ ಪ್ರಶ್ನಿಸುವ ನೈತಿಕ ರಾಜಕಾರಣ ಬೇಕಿದೆ” ಎಂದು ಪ್ರತಿಪಾದಿಸಿದರು.

“2ಬಿ ಮೀಸಲಾತಿಯು ಮುಸ್ಲಿಮರಿಗೆ ಮಾಡಿದ ಉಪಕಾರವೇನೂ ಅಲ್ಲ. ಅದು ಸಾಂವಿಧಾನಿಕ ಹಕ್ಕು. ಆದರೆ 2ಬಿ ಮೀಸಲಾತಿಯು ಧರ್ಮಾಧಾರಿತವಾಗಿದೆ ಎಂದು ಬಿಂಬಿಸಲಾಯಿತು. ಮುಸ್ಲಿಂ ತುಷ್ಟೀಕರಣ ಮಾಡುತ್ತಿದ್ದೀರಿ ಎಂದು ಕಾಂಗ್ರೆಸ್ ಪಕ್ಷವನ್ನು ಮೂದಲಿಸಲು ಹೀಗೆ ಮಾಡಲಾಗಿತ್ತು. ಸಂವಿಧಾನವನ್ನು ಉಳಿಸುವ ಕೆಲಸ ಕಾಂಗ್ರೆಸ್ನಿಂದ ಆಗಬೇಕಿತ್ತು” ಎಂದರು.
“ಗೋಹತ್ಯೆ ನಿಷೇಧ ಕಾಯ್ದೆ ಮುಸ್ಲಿಮರ ಸಮಸ್ಯೆಯಲ್ಲ. ಅದು ರೈತರ ಸಮಸ್ಯೆ. ಹಾಲು ಕೊಡದ ಹಸು, ಉಳುಮೆಗೆ ಉಪಯೋಗಕ್ಕೆ ಬಾರದ ಜಾನುವಾರನ್ನು ರೈತರು ಏಕೆ ಸಾಕಬೇಕು? ಕೇವಲ ಮುಸ್ಲಿಮರಲ್ಲ, ರೈತರು ಜೈಲಿಗೆ ಹೋಗುವ ಸನ್ನಿವೇಶ ಬಂದಿತು. ಅವರು (ಬಿಜೆಪಿಯವರು) ರೈತರ ಬೆನ್ನಿಗೆ ಗುಂಡಿಟ್ಟು ಹೊಡೆದರು, ಮುಸ್ಲಿಮರಿಗೆ ಎದೆಗೆ ಗುಂಡಿಟ್ಟು ಹೊಡೆದರು. ಕಾಂಗ್ರೆಸ್ ಸರ್ಕಾರ ಈ ಕಾಯ್ದೆಯನ್ನು ವಾಪಸ್ ಪಡೆದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಸಮಾವೇಶದ ಸಂಚಾಲಕರಾದ ಸುಹೇಲ್ ಅಹಮ್ಮದ್ ಮಾತನಾಡಿ, “ಈ ಸಮಾವೇಶಕ್ಕಾಗಿ ಒಂದು ವರ್ಷದಿಂದ ಕೆಲಸ ಮಾಡಲಾಗಿದೆ. ಆದರೆ ಸಮಾವೇಶಕ್ಕೆ 24 ಗಂಟೆ ಇರುವ ಹೊತ್ತಲ್ಲಿ ಅಪಪ್ರಚಾರ ಮಾಡಿ, ಸಮಾವೇಶ ರದ್ದಾಗಿದೆ ಎಂದು ಹಬ್ಬಿಸಲಾಯಿತು. ಆದರೂ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದರು. ಯಾವುದೇ ಒತ್ತಡ ಎದುರಿಸುವವರು ಮಾತ್ರ ಬದಲಾವಣೆಯನ್ನು ತರಬಲ್ಲರು. ಸಮುದಾಯಕ್ಕೆ ಅನ್ಯಾಯ ಮಾಡುತ್ತಿರುವವರು ಯಾರು ಎಂಬ ಸಂದೇಶವನ್ನು ತೆಗೆದುಕೊಂಡು ಹೋಗಬೇಕು. ನಾವು ರೂಪಿಸಿರುವ ವರದಿಯನ್ನು ಮುಖ್ಯಮಂತ್ರಿಯವರಿಗೆ, ಸಚಿವರಿಗೆ ಮತ್ತು ರಾಹುಲ್ ಗಾಂಧಿಯವರಿಗೆ ತಲುಪಿಸುತ್ತೇವೆ. ನಾವಿಲ್ಲಿ ಸೇರಿರುವುದು ಸರ್ಕಾರವನ್ನು ಹೆದರಿಸಲು ಬೆದರಿಸಲು ಅಲ್ಲ. ಸಮುದಾಯಕ್ಕೆ ಚುನಾವಣೆ ವೇಳೆ ವಾಗ್ದಾನ ಕೊಟ್ಟಿದ್ದೀರಿ. ಸಮುದಾಯ ಏಕಪಕ್ಷೀಯವಾಗಿ ಮತ ಹಾಕಿದೆ. ಸರ್ಕಾರದ ಕಾರ್ಯವೈಖರಿಯ ಮೌಲ್ಯಮಾಪನ ಮಾಡಿ, ನಾವು ಹಾಕಿದ ಮತಗಳಿಗೆ ಲೆಕ್ಕ ಕೇಳಲು ಬಂದಿದ್ದೇವೆ” ಎಂದು ತಿಳಿಸಿದರು.

ಈ ವರದಿ ಓದಿದ್ದೀರಾ?: “ಮುಸ್ಲಿಮರು ಕೇವಲ ವೋಟು ಹಾಕಿಕೊಂಡು ಇರಬೇಕಾ?”; ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

ಮುಖಂಡ ಮುಝಫರ್ ಅಹಮ್ಮದ್ ಮಾತನಾಡಿ, “ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳದಿದ್ದರೆ ನಿಮ್ಮನ್ನು ಸಮುದಾಯ ನಂಬುವುದಿಲ್ಲ. 224 ಸ್ಥಾನಗಳಲ್ಲಿ 100ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ನಾವು ಬೇಕು. ನಿಮ್ಮ ಭರವಸೆ ಉಳಿಸಿಕೊಳ್ಳಿ. ನೀವು ಕೇಳಿಸಿಕೊಳ್ಳದಿದ್ದರೆ ಸಮಾಜ ನಿರ್ಧಾರಗಳನ್ನು ಕೈಗೊಳ್ಳುತ್ತದೆ” ಎಂದು ಎಚ್ಚರಿಸಿದರು.

40ಕ್ಕೂ ಹೆಚ್ಚು ಮುಸ್ಲಿಂ ಸಂಘಟನೆಗಳು ಈ ಸಮಾವೇಶದ ಭಾಗವಾಗಿದ್ದವು. ಸಮುದಾಯದ ಮುಖಂಡರಾದ ಯಾಸಿನ್ ಮಲ್ಪೆ ಅವರು ಸಮಾವೇಶದ ಆಗ್ರಹಗಳನ್ನು ಮಂಡಿಸಿದರು. ಸಮಾವೇಶದ ಸಂಚಾಲಕರಾದ ತನ್ವೀರ್ ಅಹಮ್ಮದ್, ಹ್ಯಾರೀಸ್ ಸಿದ್ದಿಕಿ, ಯಾಹಿಯಾ ದಾಮೋದಿ, ಮೌಲಾನಾ ಜಮೀರ್ ರಶ್ದಿ, ಮುಖಂಡರಾದ ಸಲೀಂ ಪಾಶಾ, ಜನಾಬ್ ಮೀರಜ್ ಪಟೇಲ್, ಇಕ್ಬಾಲ್ ಅಲಿ, ಸುಲೇಮನ್ ಸಾಹೇಬ್, ಸಲಾಂ ಪಾಶಾ, ಅನೀಸ್ ಪಾಶಾ, ಸಾಹಿಬ್ ಹುಸೇನ್, ನಸ್ರೀನಾ ಸೈಯದ್ ಮೊದಲಾದ ಮುಖಂಡರು ಸಮಾವೇಶದಲ್ಲಿ ಭಾಗಿಯಾಗಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಶ್ರೀಗೆ ಆಹ್ವಾನ

ಕೊಪ್ಪಳದ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಈ...

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...