ಆರ್‌ಎಸ್‌ಎಸ್‌ ದೊಣ್ಣೆ ಹಿಡಿದು ಪಥಸಂಚಲನ ನಡೆಸಲು ಅನುಮತಿ ಕೂಡದು: ದಸಂಸ ಒಕ್ಕೂಟ

Date:

ದೊಣ್ಣೆ ಹಿಡಿದು ಪಥ ಸಂಚಲನ ನಡೆಸುವುದಕ್ಕೆ ಆರ್‌ಎಸ್‌ಎಸ್‌ಗೆ ಅನುಮತಿ ನೀಡಕೂಡದು ಎಂದು ದಲಿತ ಸಂಘರ್ಷ ಸಮಿತಿ ಒಕ್ಕೂಟವು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಪ್ರಿಯಾಂಕ್‌ ಖರ್ಗೆ ಅವರ ಸೈದ್ಧಾಂತಿಕ ಹೋರಟಕ್ಕೆ ಬೆಂಬಲ ಘೋಷಿಸಿದೆ.

- Advertisement -

ಆರ್‌ಎಸ್‌ಎಸ್‌ ಮೆರವಣಿಗೆ ಮಾಡಲು ಬಯಸಿದರೆ ಅದಕ್ಕೆ ನಮ್ಮ ಆಕ್ಷೇಪಣೆ-ತಕರಾರು ಇಲ್ಲ. ಆದರೆ, ಮಾರಕಾಸ್ತ್ರಗಳಲ್ಲಿ ಒಂದಾದ ದೊಣ್ಣೆ ಹಿಡಿದು ಮೆರವಣಿಗೆ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಆದ್ದರಿಂದ, ಈ ಸಂವಿಧಾನ ವಿರೋಧಿ ನಡೆಗೆ ನಮ್ಮ ತೀವ್ರ ವಿರೋಧ ಇದೆಯೆಂದು ಒಕ್ಕೂಟ ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ರಾಜ್ಯ ಸಂಘಟನಾ ಸಂಚಾಲಕ ಇಂದೂಧರ ಹೊನ್ನಾಪುರ, ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಯೋಜಕ ವಿ.ನಾಗರಾಜು, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಎನ್.ಮುನಿಸ್ವಾಮಿ ಹಾಗೂ ಎನ್.ವೆಂಕಟೇಶ್ ಅವರು ಈ ಹೇಳಿಕೆ ನೀಡಿದ್ದಾರೆ.

“ವಾಸ್ತವವಾಗಿ ಪಥಸಂಚಲನ ಮಾಡುವ ಅಧಿಕಾರ ಸಾಂವಿಧಾನಿಕವಾಗಿ ಇರುವುದು ಪೊಲೀಸ್ ಮತ್ತು ಇನ್ನಿತರ ರಕ್ಷಣಾ ಪಡೆಗಳಿಗೆ ಮಾತ್ರ. ಆರ್‌ಎಸ್‌ಎಸ್‌ ಸೇರಿದಂತೆ ಇತರ ಯಾವುದೇ ಸಂಘ ಸಂಸ್ಥೆಗಳು ಮೆರವಣಿಗೆ-ಪ್ರತಿಭಟನೆ ಮಾಡಬಹುದೇ ಹೊರತು ‘ಪಥಸಂಚಲನ’ವನ್ನಲ್ಲ. ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಹಾಗೂ ಜಾತ್ಯತೀತತೆಯನ್ನು ಒಪ್ಪದ ಆರ್‌ಎಸ್‌ಎಸ್‌ ಒಂದೇ ಧರ್ಮದ ಚೌಕಟ್ಟಿನೊಳಗೆ ದೇಶ ಕಟ್ಟುವ ಮಾತನಾಡುತ್ತಿದೆ. ಸಮತೆ ಮಮತೆ ಅಂತಃಕರಣ ಮಾನವೀಯತೆ ಮತ್ತು ಕೋಮು ಸಾಮರಸ್ಯದಂತಹ ಗುಣಗಳನ್ನು ಎಂದಿಗೂ ಮೈಗೂಡಿಸಿಕೊಳ್ಳದ ಆರ್.ಎಸ್.ಎಸ್. ಸ್ಪೃಶ್ಯ-ಅಸ್ಪೃಶ್ಯ, ಮಡಿ-ಮೈಲಿಗೆ, ಲಿಂಗತಾರತಮ್ಯದಂತಹ ಅಸಮಾನತೆಯನ್ನು ಬೆಂಬಲಿಸುತ್ತಿದೆ. ರಾಜ್ಯಾಂಗದ ಬದಲಿಗೆ ಪಂಚಾಂಗದ ಮೂಲಕ ಆಡಳಿತ ನಡೆಸಲು ಹವಣಿಸುತ್ತಿದೆ. ಈ ಅನಾಗರಿಕ ಪ್ರವೃತ್ತಿಯನ್ನು ನಾಗರಿಕ ಸಮಾಜವು ಖಂಡಿಸಬೇಕು ಮತ್ತು ಅದರ ವಿರುದ್ಧ  ದನಿ ಎತ್ತಬೇಕು” ಎಂದು ಒಕ್ಕೂಟ ಕರೆ ನೀಡಿದೆ.

ಈ ಲೇಖನ ಓದಿದ್ದೀರಾ?: ತೆರಿಗೆ ಹಂಚಿಕೆ | ಕರ್ನಾಟಕಕ್ಕೆ ಮತ್ತೆ ಕಾದಿದೆಯಾ ಭಾರೀ ಅನ್ಯಾಯ? ಕೇಂದ್ರದ ಸಮರ್ಥನೆಗೆ ರಾಜ್ಯ ಬಿಜೆಪಿ ಸಿದ್ದ

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗವಹಿಸದ, ತ್ರಿವರ್ಣ ಧ್ವಜ, ರಾಷ್ಟ್ರಗೀತೆ ಹಾಗೂ ಸಂವಿಧಾನವನ್ನು ಒಪ್ಪದ ಆರ್‌ಎಸ್‌ಎಸ್‌ ಹಿಂದುತ್ವದ ಹೆಸರಿನಲ್ಲಿ ಬ್ರಾಹ್ಮಣ್ಯದ ಪಾರಮ್ಯವನ್ನು ಜನಸಾಮಾನ್ಯರ ಮೇಲೆ ಹೇರುತ್ತಿದ್ದು, ಜನರ ಮನಸ್ಸಿನಲ್ಲಿ ಜಾತೀಯತೆ-ಮತೀಯತೆ, ಮೌಢ್ಯ, ಮೂಢನಂಬಿಕೆಗಳ ವಿಷಬೀಜ ಬಿತ್ತುತ್ತಿದೆ. ಆರ್‌ಎಸ್‌ಎಸ್‌ ವರಿಷ್ಠ ಮೋಹನ್ ಭಾಗವತ್ ಅವರಿಂದ ತಳಹಂತದ ಎಲ್ಲ ಪದಾಧಿಕಾರಿಗಳವರೆಗೂ ಬ್ರಾಹ್ಮಣರದ್ದೇ ಪಾರುಪತ್ಯ ಮಾಡಿಕೊಂಡು, ಬಜರಂಗದಳ, ಶ್ರೀರಾಮ ಸೇನೆ, ವಿಶ್ವಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಸೇರಿದಂತೆ ಹಿಂದುತ್ವದ ಹೆಸರಿನಲ್ಲಿ ಶೂದ್ರ ಸಮುದಾಯಗಳ ಯುವಕರಿಗೆ ದೊಣ್ಣೆ, ತಲವಾರ್, ತ್ರಿಶೂಲ ಸೇರಿದಂತೆ ಮಾರಕಾಸ್ತ್ರಗಳನ್ನು ನೀಡಿ ಕೋಮು ಹಿಂಸಾ ಕೃತ್ಯಗಳಿಗೆ ಪ್ರೇರೇಪಿಸುತ್ತ ಅವರನ್ನು ತನ್ನ ಕಾಲಾಳುಗಳನ್ನಾಗಿ ಮಾಡಿಕೊಳ್ಳುತ್ತಿದೆ.

ಪ್ರಿಯಾಂಕ ಖರ್ಗೆ ಹೋರಾಟಕ್ಕೆ ಬೆಂಬಲ

ದೇಶದ ಯಾವುದೇ ಕಾನೂನಿನ ಅನ್ವಯ ನೋಂದಣಿ ಆಗದೆ ಇರುವ ಆರ್‌ಎಸ್‌ಎಸ್‌ ಸರ್ಕಾರಿ-ಅನುದಾನಿತ ಶಾಲಾ-ಕಾಲೇಜು ಆವರಣದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರವಾದ ದೊಣ್ಣೆ ಹಿಡಿದು ಪಥಸಂಚಲನ ಸೇರಿದಂತೆ ಇನ್ನಿತರ ಜನವಿರೋಧಿ, ದೇಶವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಪ್ರತಿರೋಧ ವ್ಯಕ್ತಪಡಿಸಿ ಸಚಿವ ಪ್ರಿಯಾಂಕ ಖರ್ಗೆ ಅವರು ಆರಂಭಿಸಿರುವ ‘ಸೈದ್ಧಾಂತಿಕ ಹೋರಾಟ’ಕ್ಕೆ ಒಕ್ಕೂಟ ತನ್ನ ಬೆಂಬಲ ಸಾರಿದೆ.

ಪ್ರಿಯಾಂಕ ಖರ್ಗೆ ಅವರು ಎತ್ತಿರುವ ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಹತಾಶೆಯಲ್ಲಿರುವ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯು ಖರ್ಗೆ ಮತ್ತು ಅವರ ಕುಟುಂಬದ ಮೇಲೆ ವೈಯಕ್ತಿಕವಾಗಿ ಕ್ಷುಲ್ಲಕ ದಾಳಿ ನಡೆಸುತ್ತ, ದ್ವೇಷ ಕಾರುತ್ತಿರುವುದನ್ನು ಹಾಗೂ ‘ಪ್ರಿಯಾಂಕ ಖರ್ಗೆ ಅವರ ಮನೆಗೇ ನುಗ್ಗುತ್ತೇವೆ ‘ಎಂದು ಬೆದರಿಕೆ ಹಾಕಿರುವ ಬಿಜೆಪಿ ಮುಖಂಡ ಮಣಿಕಾಂತ ರಾಥೋಡ್ ಅವರ ಗೂಂಡಾಗಿರಿ ನಡೆಯನ್ನು ಒಕ್ಕೂಟವು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಕೊಂದವರು ಯಾರು?’ – ಧರ್ಮಸ್ಥಳದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಅ.2ರಂದು ಬೃಹತ್ ವಿಚಾರ ಸಂಕಿರಣ

ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಹಲವಾರು ದಶಕಗಳಿಂದ ನಡೆದಿದೆ...

ವಿಜಯಪುರ | ವಿಕಲಚೇತನರು, ಹಿರಿಯ ನಾಗರಿಕರಿಗೆ ವಿವಿಧ ಸೌಲಭ್ಯ: ಅರ್ಜಿ ಸಲ್ಲಿಕೆಗೆ ಅ.31 ಕೊನೆಯ ದಿನ

ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 14 ಫಲಾನುಭವಿ ಆಧಾರಿತ...

ಹಾಸನ | SIR ವಿರೋಧ: ಚುನಾವಣಾ ಆಯೋಗ ಅಕ್ರಮವಾಗಿ ಕಾರ್ಯನಿರ್ವಹಿಸಿದೆ; ನಟ ಪ್ರಕಾಶ್ ರಾಜ್ 

SIR ವಿರೋಧಿ ಒಕ್ಕೂಟ, ನಾಗರೀಕ ಸಂಘಟನೆಗಳ ಹಾಗೂ ಜಾತ್ಯತೀತ ಪಕ್ಷಗಳಿಂದ ರಾಜ್ಯ...