ಕೊಪ್ಪಳ | ಗಂಗಾವತಿ ಪ್ರತ್ಯೇಕ ಜಿಲ್ಲೆ ಕೂಗು; ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ

Date:

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕನ್ನು ಹೊಸ ಜಿಲ್ಲಾ ಕೇಂದ್ರವಾಗಿ ಮಾಡಬೇಕು ಎಂಬಕೂಗು ತಾಲೂಕಿನಲ್ಲಿ ಕೇಳಿಬರುತ್ತಿದೆ. ಕೊಪ್ಪಳ ಜಿಲ್ಲೆಯನ್ನು ವಿಭಜಿಸಿ, ಹೊಸ ಜಿಲ್ಲೆಗೆ ʼಕಿಷ್ಕಿಂದಾʼ ಜಿಲ್ಲೆ ಎಂದು ನಾಮಕರಣ ಮಾಡಬೇಕು ಎನ್ನು ಕೂಗು ಗಂಗಾವತಿಯಲ್ಲಿ ಕೇಳಿ ಬರುತ್ತಿದೆ.

ಈ ಭಾಗದ ಹಾಲಿ, ಮಾಜಿ ಜನಪ್ರತಿನಿಧಿಗಳು, ಹಲವು ಸಂಘಟನೆಯ ಮುಖಂಡರು ಹಾಗೂ ಸಾರ್ವಜನಿಕರು ಸೇರಿ ಸಭೆ ನಡೆಸಿದ್ದು,ಕಾವೇರಿ ಗಲಾಟೆ ನಡುವೆ ಮತ್ತೊಂದು ಹೋರಾಟ ಪ್ರತ್ಯೇಕ ಜಿಲ್ಲೆಯ ಕೂಗು ಜೋರಾಗುವ ಸಾಧ್ಯತೆಗಳಿವೆ. ಇಷ್ಟು ದಿನ ತೆರೆಮರೆಯಲ್ಲಿ ಸಭೆ ನಡೆಸುತ್ತಿದ್ದ ಹೋರಾಟಗಾರರು, ಇದೀಗ ಬಹಿರಂಗವಾಗಿಯೇ ಪೂರ್ವಭಾವಿ ಸಭೆ ನಡೆಸಿದ್ದಾರೆ.

ಗಂಗಾವತಿಯ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ನಡೆಸಿದ್ದಾರೆ. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಸವರಾಜ ದಡೆಸೂಗುರು ಸೇರಿ ಹಲವು ರಾಜಕಿಯ ಮುಖಂಡರು, ಹಾಲಿ, ಮಾಜಿ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಕಿಷ್ಕಿಂದಾ ಜಿಲ್ಲಾ ರಚನೆಗೆ ಎಲ್ಲರೂ ಸಹಮತ ಸೂಚಿಸಿದ್ದಾರೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಿ, ಕಿಷ್ಕಿಂದಾ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ, ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವ್ಯಾಪಾರ ವಹಿವಾಟು ಹೊಂದಿದೆ. ಅಲ್ಲದೆ, ಗಂಗಾವತಿಯ ಆನೆಗೊಂದಿ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಹನುಮನ ಜನ್ಮ ಸ್ಥಾನ ಅಂಜನಾದ್ರಿ ಸಹ ಗಂಗಾವತಿ ತಾಲೂಕಿನಲ್ಲಿ‌ದೆ ಜಿಲ್ಲಾ ಕೇಂದ್ರದಿಂದ ೫೦ಕಿಲೋ ಮೀಟರ್‌ ದೂರದಲ್ಲಿ ಇದ್ದರೂ ಗಂಗಾವತಿ ಭಾಗದಲ್ಲಿ ಅಭಿವೃದ್ಧಿ ಕುಂಟಿತವಾಗಿದೆ.

ಕಿಷ್ಕಿಂದಾ ಜಿಲ್ಲೆಯಾದ್ರೆ ಗಂಗಾವತಿ ಸೇರಿದಂತೆ ಉಳಿದ ತಾಲೂಕುಗಳು ಅಭಿವೃದ್ಧಿಯಾಗತ್ತದೆ. ಭತ್ತದ ಕಣಜ ಎಂದೆ ಹೆಸರಾಗಿರುವ ಗಂಗಾವತಿ, ಆನೆಗೊಂದಿ ಭಾಗಕ್ಕೆ ಹೆಚ್ಚಿನ ಅನುಧಾನ ಸಿಕ್ಕು ಜಿಲ್ಲೆಯ ಜನರು ಅಭಿವೃದ್ಧಿ ಕಾಣುತ್ತಾರೆ. ಹೀಗಾಗಿ ಕಿಷ್ಕಿಂದಾ ಜಿಲ್ಲೆ ರಚನೆ ಅನಿವಾರ್ಯವಾಗಿದೆ. ಸರ್ಕಾರ ಈ ಬಗ್ಗೆ ಗಮನ ನೀಡಿ ಹೋರಾಟ ಆರಂಭಕ್ಕೂ ಮುನ್ನವೇ ಸರ್ಕಾರ ಕಿಷ್ಕಿಂದಾ ಜಿಲ್ಲೆಯ ಘೋಷಣೆ ಮಾಡಬೇಕು.,

ಆದ್ದರಿಂದ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯಿಂದ ದೂರವಿರುವ ಸಿಂಧನೂರು, ಕಂಪ್ಲಿ ಹಾಗೂ ಕೊಪ್ಪಳ ಜಿಲ್ಲೆಯ ಕನಕಗಿರಿ, ಕಾರಟಗಿ, ಗಂಗಾವತಿ ತಾಲೂಕುಗಳನ್ನ ಒಟ್ಟಿಗೆ ಸೇರಿಸಿ ಕಿಷ್ಕಿಂದಾ ನೂತ‌ನ ಜಿಲ್ಲೆಯಾಗಿ ಮಾಡಬೇಕು ಎನ್ನುವುದು ಇವರ ಬೇಡಿಕೆ.

ಗಂಗಾವತಿ ಜಿಲ್ಲಾ ಕೇಂದ್ರದ ಎಲ್ಲಾ ಮಾನದಂಡಗಳನ್ನು ಹೊಂದಿದೆ. ಜನಸಂಖ್ಯೆ, ಬೌಗೋಳಿಕ ವಿಸ್ತೀರ್ಣ, ರಸ್ತೆ, ರೈಲು ಮಾರ್ಗಗಳು, ಕೈಗಾರಿಕೆ, ವ್ಯಾಪಾರ ವಹಿವಾಟು ಎಲ್ಲ ಅರ್ಹತೆಯೂ ಗಂಗಾವತಿಗೆ ಇದ್ದಾಗಲೂ ಸರ್ಕಾರ ಜಿಲ್ಲಾ ರಚನೆ ಮಾಡಲು ವಿಳಂಭ ಮಾಡಬಾರದು, ಕೂಡಲೇ ಜಿಲ್ಲೆಯಾಗಿ ರಚನೆ ಮಾಡಬೇಕು ಎನ್ನುವುದು ಇವರುಗಳ ಆಗ್ರಹ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚರ್ಚೆಗೆ ಸಿದ್ದ ಇದ್ದೇನೆ ಬನ್ನಿ; ಡಿಕೆ ಶಿವಕುಮಾರ್‌ಗೆ ಕುಮಾರಸ್ವಾಮಿ ಪ್ರತಿ ಸವಾಲು

"ಮಿಸ್ಟರ್​ ಕುಮಾರಸ್ವಾಮಿ, ಹೆದರಿ ಪಕ್ಕದ ಜಿಲ್ಲೆಗೆ ಹೋಗಿದ್ದೀಯ​. ಚರ್ಚೆ ಮಾಡಲು ಸದನಕ್ಕೆ...

ಯಾರಿಗೂ ಮುಖ ತೋರಿಸದ ಸನ್ನಿವೇಶ ಕುಮಾರಸ್ವಾಮಿಗೆ ನಿರ್ಮಾಣವಾಗಲಿದೆ: ಡಿಕೆ ಶಿವಕುಮಾರ್‌

ಕುಮಾರಸ್ವಾಮಿ ಅವರು ನನ್ನ ಮೇಲೆ ಮನಬಂದಂತೆ ಆರೋಪಿಸುವುದನ್ನು ನೋಡಿಯೂ ನಮ್ಮ ಸಮುದಾಯಕ್ಕಾಗಿ...

ಚಿತ್ರದುರ್ಗ | ನೀತಿ ಸಂಹಿತೆ ನೆಪದಲ್ಲಿ ನೀಲಿ ಬಾವುಟ ತೆರವು; ಕೇಸರಿ ಬಿಟ್ಟಿದ್ದೇಕೆ ಎಂದಾಗ ರಾತ್ರೋರಾತ್ರಿ ಮರುಸ್ಥಾಪನೆ

ಆರಂಭದಲ್ಲಿ ನೆಪ ಹೇಳುತ್ತಿದ್ದ ಪಿಡಿಓಗೆ, ಜನರ ಜೈಭೀಮ್ ಘೋಷಣೆಗಳು ಅಪ್ಪಳಿಸಿದವು... ಡಾ.ಬಿ.ಆರ್‌.ಅಂಬೇಡ್ಕರ್ ಜಯಂತಿಯಂದು...

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ಮಾಪಕ ದ್ವಾರಕೀಶ್ ಅವರು ಮಂಗಳವಾರ...