ಎಚ್‌ಡಿಕೆ – ಎಡಿಜಿಪಿ ವಾಗ್ಯುದ್ಧ; ಕಾಂಗ್ರೆಸ್‌ಗೆ ಕುಮಾರಸ್ವಾಮಿ ಸವಾಲು

Date:

ಬೆಂಗಳೂರಿನ ಗಂಗೇನಹಳ್ಳಿಯ 1.11 ಎಕರೆ ಭೂಮಿ ಅಕ್ರಮ ಡಿನೋಟಿಫಿಕೇಷನ್ ಹಗರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಮತ್ತು ಹಗರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಎಸ್‌ಐಟಿ ಎಡಿಜಿಪಿ ಚಂದ್ರಶೇಖರ್‌ ನಡುವಿನ ವಾಗ್ಯುದ್ಧ ಮುನ್ನೆಲೆಯಲ್ಲಿದೆ. ಇಬ್ಬರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. “ನಾನು ಆರೋಪಿಯೇ ಇರಬಹುದು. ಆದರೆ, ಲೋಕಾಯುಕ್ತ ಎಸ್‌ಐಟಿ ಎಡಿಜಿಪಿ ಎಂ ಚಂದ್ರಶೇಖರ್ ಸರಣಿ ಅಪರಾಧಗಳನ್ನು ಎಸಗಿದ್ದಾರೆ. ಆತ ಅಧಿಕಾರಿ ಸೋಗಿನಲ್ಲಿರುವ ಕ್ರಿಮಿನಲ್‌” ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

- Advertisement -

ಅಕ್ರಮ ಡಿನೋಟಿಫಿಕೇಷನ್‌ ಹಗರಣದಲ್ಲಿ ಲೋಕಾಯುಕ್ತ ಪೊಲೀಸರು ಎಚ್‌.ಡಿ ಕುಮಾರಸ್ವಾಮಿ ಅವರನ್ನು ಶುಕ್ರವಾರ ವಿಚಾರಣೆ ಒಳಪಡಿಸಿದ್ದರು. ವಿಚಾರಣೆ ಎದುರಿಸಿದ್ದ ಕುಮಾರಸ್ವಾಮಿ ಶನಿವಾರ ಪ್ರತಿಕಾಗೋಷ್ಠಿ ನಡೆಸಿದ್ದರು. ಡಿನೋಟಿಫಿಕೇಷನ್ ಹಗರಣದ ತನಿಖೆ ನಡೆಸುತ್ತಿರುವ ಎಡಿಜಿಪಿ ಚಂದ್ರಶೇಖರ್ ವಿರುದ್ಧವೇ ಆರೋಪ ಮಾಡಿದ್ದರು. “ಚಂದ್ರಶೇಖರ್ ಹಿನ್ನೆಲೆ ಗೊತ್ತಾ? ಈ ವ್ಯಕ್ತಿ ಹಿನ್ನೆಲೆ ಹುಡುಕಿ ಹೊರಟಾಗ ಗೊತ್ತಾಗಿದ್ದು, ಹಿಮಾಚಲ ಪ್ರದೇಶದ ಕೇಡರ್​​ನಲ್ಲಿ ಇರಬೇಕಾದವರು. ಯುಪಿಎಸ್​ಸಿಯಲ್ಲಿ ಆಯ್ಕೆಯಾಗಿ ಹಿಮಾಚಲದಲ್ಲಿ ಕೆಲಸ ಮಾಡಬೇಕಾದವನು. ಮಾನ್ಯತಾ ಟೆಕ್​ ಪಾರ್ಕ್​ ಮುಂಭಾಗ 38 ಮಹಡಿಗಳ ಬಿಲ್ಡಿಂಗ್ಅನ್ನು ತನ್ನ ಹೆಂಡತಿ ಹೆಸರಿನಲ್ಲಿ ಕಟ್ಟುತ್ತಿದ್ದಾರೆ. ಅದು ಕೂಡ ರಾಜಕಾಲುವೆ ಜಾಗದಲ್ಲಿ” ಎಂದು ಆರೋಪಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಚಂದ್ರಶೇಖರ್, “ಹಂದಿಗಳ ಜೊತೆ ಗುದ್ದಾಡುವುದಿಲ್ಲ. ಕರ್ತವ್ಯ ನಿರ್ವಹಿಸುವ ವೇಳೆ ಅಪರಾಧಿಗಳು ಮತ್ತು ಆರೋಪಿಗಳನ್ನು ಎದುರಿಸುವುದನ್ನು ನಾವು ತಪ್ಪಿಸಲು ಸಾಧ್ಯವಿಲ್ಲ. ಯಾವ ಕ್ರಿಮಿನಲ್​, ಯಾವ ಆರೋಪಿಗಳ ಜೊತೆ ವಿರೋಧ ಕಟ್ಟಿಕೊಳ್ಳುತ್ತೇವೋ ಅವರು ನಮ್ಮ ಮೇಲೆ ಕೊಳಕು ಎಸೆಯುತ್ತಾರೆ” ಎಂದಿದ್ದರು.

ಚಂದ್ರಶೇಖರ್ ಜೊತೆಗಿನ ತಮ್ಮ ಕಿತ್ತಾಟದಲ್ಲಿ ಕಾಂಗ್ರೆಸ್‌ ಸಚಿವರನ್ನೂ ಕುಮಾರಸ್ವಾಮಿ ಎಳೆದು ತಂದಿದ್ದಾರೆ. “ಅಪ್ರಬುದ್ಧ ಅವಿವೇಕಿಗಳಿಗೆ ಏನು ಹೇಳುವುದು? ಲೋಕಾಯುಕ್ತ ಎಸ್ಐಟಿ ಎಡಿಜಿಪಿ ಹುದ್ದೆಯಲ್ಲಿರುವ ಕಳಂಕಿತ, ಕ್ರಿಮಿನಲ್ ಪ್ರವೃತ್ತಿಯ ಅಧಿಕಾರಿ ನನ್ನ ಸರ್ಕಾರದಲ್ಲಿಯೂ ಕೆಲಸ ಮಾಡಿದ್ದರು, ನಿಜ. ನಾನು ಇಲ್ಲವೆನ್ನುವುದಿಲ್ಲ. ಆದರೆ, ಊರು ಮೇಯೋಕೆ, ಸಿಕ್ಕಸಿಕ್ಕ ಕೊಚ್ಚೆಯಲ್ಲಿ ಉರುಳಾಡೋಕೆ, ಹೆದರಿಸಿ ಬೆದರಿಸಿ ಸುಲಿಗೆ ಮಾಡೋಕೆ ನಾನು ಬಿಟ್ಟಿರಲಿಲ್ಲ. ಹದ್ದುಬಸ್ತಿನಲ್ಲಿ ಇಟ್ಟು ಕೆಲಸ ಮಾಡಿಸಿದ್ದೆ” ಎಂದಿದ್ದಾರೆ. “ನಿಮಗೆ ಅಂತಹ ಎದೆಗಾರಿಕೆ ಇದೆಯಾ” ಎಂದು ಕಾಂಗ್ರೆಸ್ ​ಸಚಿವರನ್ನು ಪ್ರಶ್ನಿಸಿದ್ದಾರೆ.

“ಹೀಗೆಯೇ ಪತ್ರ ಬರಿ ಎಂದು ಹೇಳಿಕೊಟ್ಟು ಅಧಿಕಾರಿಯಿಂದ ಪತ್ರ ಬರೆಸಲಾಗಿದೆ. ಆ ಪತ್ರ ಬರೆಸಿದವರು ಯಾರು ಎಂಬುದು ನನಗೆ ಗೊತ್ತಾಗಿದೆ. ಕೆಪಿಸಿಸಿ ಕಚೇರಿಯಿಂದಲೇ ಪತ್ರ ಬಹಿರಂಗವಾಗಿದೆ ಎಂಬುದೂ ಗೊತ್ತಿದೆ. ಕಳಂಕಿತ ಅಧಿಕಾರಿಗಳಿಂದ ರಕ್ಷಣೆ ಪಡೆದುಕೊಳ್ಳುವ ನಿಮ್ಮ (ಕಾಂಗ್ರೆಸ್‌) ನಿಕೃಷ್ಟ ಸ್ಥಿತಿ ನನಗೆ ಬಂದಿಲ್ಲ. ಬರುವುದೂ ಇಲ್ಲ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು, ಪಿತೃಪ್ರಧಾನತೆಯ ಭೀತಿ ಮೀರಿ, ಲಕ್ಷ್ಮಣ ರೇಖೆ ದಾಟಿ: ಆರ್ ಸುನಂದಮ್ಮ

ಮಹಿಳೆಯರು ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು. ಪಿತೃಪ್ರಧಾನತೆಯ ಭೀತಿ ಮೀರಿ,...

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು...

ಮುಸ್ಲಿಂ ಮತದಾರರ ಹೆಸರು ಅಳಿಸಲು ಬಿಜೆಪಿ ಜೊತೆ ಜೆಡಿಎಸ್ ಸಂಚು? ಡಿಕೆಶಿ ಹೇಳಿದ್ದೇನು?

ಮುಸ್ಲಿಂ ಸೇರಿದಂತೆ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ...

ಕರ್ನಾಟಕ SIR | ಅರ್ಹರ ಹೆಸರು ಡಿಲೀಟ್‌ ಮಾಡಲು ಬಿಜೆಪಿಗೆ ‘ಫಾರ್ಮ್‌-7’ ಟೂಲ್‌ಕಿಟ್; ಷಡ್ಯಂತ್ರ ಬಹಿರಂಗ

ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಬಿಜೆಪಿಗರು ‘ಫಾರ್ಮ್‌-7’ಅನ್ನು ದುರ್ಬಳಕೆ ಮಾಡಿಕೊಳ್ಳುತತಿದ್ದಾರೆ. ಈ...