ಹಿಜಾಬ್ ನಿಷೇಧ: ರಾಜ್ಯದಲ್ಲಿ ಕಾಲೇಜು ತೊರೆದ ಅರ್ಧದಷ್ಟು ವಿದ್ಯಾರ್ಥಿನಿಯರ ಶಿಕ್ಷಣ ಮೊಟಕು

Date:

ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ‘ಹಿಜಾಬ್ ನಿಷೇಧ’ ವಿವಾದವು ಮುಸ್ಲಿಂ ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯದ ಮೇಲೆ ಗಂಭೀರ ಹಾಗೂ ಆತಂಕಕಾರಿ ಪರಿಣಾಮ ಬೀರಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಿಂದ ಹೊರಗುಳಿದ 145 ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ ಶೇಕಡಾ 40ರಿಂದ 50ರಷ್ಟು ಮಂದಿ ತಮ್ಮ ಮುಂದಿನ ವ್ಯಾಸಂಗವನ್ನೇ ಕೈಬಿಟ್ಟಿದ್ದಾರೆ. ಇವರಲ್ಲಿ ಅನೇಕ ವಿದ್ಯಾರ್ಥಿನಿಯರು ಇದೀಗ ವಿವಾಹಿತರಾಗಿದ್ದಾರೆ.

- Advertisement -

ಮಂಗಳೂರಿನ ಡಾ. ಪಿ. ದಯಾನಂದ ಪೈ – ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಒಂದರಲ್ಲೇ ಅತಿ ಹೆಚ್ಚು, ಅಂದರೆ 35 ಹೆಣ್ಣುಮಕ್ಕಳು ತಮ್ಮ ಓದನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಕಾಲೇಜು ಬಿಟ್ಟ ನಂತರ ಕಾವೂರಿನ ಜಸ್ಮಿನ್ ಹಾಗೂ ಅಮೀನಮ್ಮ ಅವರಂತಹ ಅನೇಕ ವಿದ್ಯಾರ್ಥಿನಿಯರು ಮದುವೆಯಾಗಿದ್ದಾರೆ. ಇನ್ನು ಕೆಲವರು, ಉದಾಹರಣೆಗೆ ರಯಾನ ಸುಹಾನಾ ಎಂಬುವವರು ಟೈಲರಿಂಗ್ ಕಲಿತು ತಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಆಸರೆಯಾಗಿದ್ದಾರೆ. ಪ್ರಸ್ತುತ ಸರ್ಕಾರ ನಿಷೇಧವನ್ನು ಹಿಂಪಡೆದಿರುವುದರಿಂದ, ಮುಂದೆ ಓದಬೇಕಾದರೆ ತಂದೆಯ ಜೊತೆ ಚರ್ಚಿಸಬೇಕು ಎಂದು ವಿದ್ಯಾರ್ಥಿನಿ ಸುಹಾನಾ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳನ್ನು ಬಿಟ್ಟ ಉಳಿದ ವಿದ್ಯಾರ್ಥಿನಿಯರು ಹಿಜಾಬ್‌ಗೆ ಅವಕಾಶವಿರುವ ಖಾಸಗಿ ಕಾಲೇಜುಗಳಿಗೆ ವರ್ಗಾವಣೆಗೊಂಡಿದ್ದಾರೆ ಎಂದು ಮುಸ್ಲಿಂ ಎಜುಕೇಷನಲ್ ಇನ್‌ಸ್ಟಿಟ್ಯೂಷನ್ಸ್ ಫೆಡರೇಶನ್ (MEIF) ಪ್ರಧಾನ ಕಾರ್ಯದರ್ಶಿ ರಿಯಾಜ್ ಅಹ್ಮದ್ ತಿಳಿಸಿದ್ದಾರೆ. 2022ರ ನಿಷೇಧದ ಆದೇಶವನ್ನು ವಿದ್ಯಾರ್ಥಿಗಳಲ್ಲಿ ವಿಭಜನೆ ತರಲು ಬಳಸಲಾಗಿತ್ತು ಎಂದು ಮಂಗಳೂರಿನ ಸರ್ಕಾರಿ ಕಾಲೇಜೊಂದರ ಮಾಜಿ ಪ್ರಾಂಶುಪಾಲರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿದ್ದೀರಾ? ಕೇರಳಂ ‘ಕೈ’ ಹಿಡಿದ ‘ಪುಸ್ತಕ ಪ್ರೇಮಿ’ ಸಜ್ಜನ ಸತೀಶನ್ ಬಗ್ಗೆ ನಿಮಗೆಷ್ಟು ಗೊತ್ತು?

“ಐಎಎಸ್ ಅಧಿಕಾರಿ ಅಥವಾ ವೈದ್ಯರಾಗಬೇಕು ಅಂದುಕೊಂಡಿದ್ದ ಅನೇಕ ಹೆಣ್ಣುಮಕ್ಕಳ ಕನಸುಗಳು ಸರ್ಕಾರದ ಆದೇಶದಿಂದ ನುಚ್ಚುನೂರಾಗಿವೆ. ಕನಸು ಕಳೆದುಕೊಂಡು ಮದುವೆಯಾದವರಲ್ಲಿ ಕೆಲವರು ದಾಂಪತ್ಯ ಕಲಹ ಹಾಗೂ ವಿಚ್ಛೇದನದಂತಹ ಸಂಕಷ್ಟಗಳನ್ನೂ ಎದುರಿಸುತ್ತಿದ್ದಾರೆ” ಎಂದು ಬೆಂಗಳೂರು ಮೂಲದ ಮನೋವಿಜ್ಞಾನಿ ರುಕ್ಸಾನಾ ಹಸನ್ ಆತಂಕ ವ್ಯಕ್ತಪಡಿಸಿದ್ದಾರೆ.

ಹಿಜಾಬ್ ವಿವಾದದ ಕಾನೂನು ಹೋರಾಟದ ಮುಂಚೂಣಿಯಲ್ಲಿದ್ದ ಆಲಿಯಾ ಅಸಾದಿ ಅವರು, ಸರ್ಕಾರ ಇದೀಗ ಹಿಜಾಬ್ ನಿಷೇಧವನ್ನು ಹಿಂದೆಗೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ಸರ್ಕಾರದ ನಿರ್ಧಾರ ಮುಸ್ಲಿಂ ಸಮುದಾಯದ ಮೇಲೆ ಮಾಡಿದ ‘ಉಪಕಾರ’ ಅಲ್ಲ, ಬದಲಾಗಿ ಮೂರು ವರ್ಷಗಳಿಂದ ಕಿತ್ತುಕೊಳ್ಳಲಾಗಿದ್ದ ‘ಮೂಲಭೂತ ಹಕ್ಕಿನ’ ಮರುಸ್ಥಾಪನೆಯಾಗಿದೆ. ಪರೀಕ್ಷೆ ತಪ್ಪಿದವರಿಗೆ ಸರ್ಕಾರವು ಈಗ ಮರು-ಪರೀಕ್ಷೆ ನಡೆಸಬೇಕು ಮತ್ತು ಉದ್ಯೋಗ ಕಳೆದುಕೊಂಡ ಶಿಕ್ಷಕರಿಗೆ ಪರಿಹಾರ ನೀಡಬೇಕು. ಆಗ ಮಾತ್ರ ಅನ್ಯಾಯಕ್ಕೊಳಗಾದವರಿಗೆ ಸರಿಯಾದ ನ್ಯಾಯ ಸಿಕ್ಕಂತಾಗುತ್ತದೆ” ಎಂದು ಅವರು ಆಗ್ರಹಿಸಿದ್ದಾರೆ.

ಆಧಾರ: ಡೆಕ್ಕನ್ ಹೆರಾಲ್ಡ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು | ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ

ತಮಿಳುನಾಡು ಸರ್ಕಾರವು ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಬಸ್‌ಗಳಲ್ಲಿ ಜಾರಿಗೆ...

ಬೆಂಗಳೂರು | ಅಕ್ರಮವಾಗಿ ಮನೆ ನೆಲಸಮ: 5 ಲಕ್ಷ ನಗದು, ಆಭರಣ ಕಳವು; ಇಬ್ಬರ ವಿರುದ್ಧ ಎಫ್‌ಐಆರ್

67 ವರ್ಷದ ವೃದ್ಧ ವ್ಯಾಪಾರಿಯೊಬ್ಬರ ಮನೆಯನ್ನು ಅಕ್ರಮವಾಗಿ ಧ್ವಂಸಗೊಳಿಸಿ, ರೂ. 5...

ಉತ್ತರಾಖಂಡ | ₹135.95 ಕೋಟಿ ಸಂಸದರ ನಿಧಿಯಲ್ಲಿ ಬಳಕೆಯಾಗಿದ್ದು ಕೇವಲ ಶೇ.18 ಮಾತ್ರ

ಉತ್ತರಾಖಂಡದ ಲೋಕಸಭೆ ಮತ್ತು ರಾಜ್ಯಸಭೆಯ ಹಾಲಿ ಸಂಸದರು ತಮಗೆ ಅಭಿವೃದ್ಧಿ ಕಾಮಗಾರಿಗಳಿಗಾಗಿ...