ಕಾಂಗ್ರೆಸ್ ಅವಧಿಯಲ್ಲಿಯೂ ನಡೆಯದ ಪಂಚಾಯತ್ ಚುನಾವಣೆ: ರಾಜೀವ್‌ ಗಾಂಧಿ ಕನಸಿಗೆ ಎಳ್ಳುನೀರು

Date:

ಪ್ರಜಾಪ್ರಭುತ್ವದ ತಿರುಳನ್ನು ಅರಿತಿರುವ ಸಿದ್ದರಾಮಯ್ಯನವರು, ಶೀಘ್ರದಲ್ಲಿ ಮೂರು ಹಂತದ ಸ್ಥಳೀಯ ಪಂಚಾಯತ್ ಚುನಾವಣೆಗಳನ್ನು ನಡೆಸಿ ಪ್ರಜಾಪ್ರಭುತ್ವದ ಬೇರುಗಳಿಗೆ ನೀರು ಉಣಿಸುವ ಕೆಲಸವನ್ನು ಮಾಡಲೇಬೇಕು.

ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳಿಗೆ ಎಲ್ಲರೂ ತಲೆಬಾಗಬೇಕು. ಗ್ರಾಮ ಪಂಚಾಯಿತಿಗಳು ಸ್ಥಳೀಯ ಸ್ವಯಂ ಸರ್ಕಾರಗಳಾಗಿ ಕೆಲಸ ಮಾಡಲು ಹಣಕಾಸು ಮಾನವ ಸಂಪನ್ಮೂಲ ಒದಗಿಸಿ ಕೊಡಬೇಕಾದ ರಾಜ್ಯ ಸರ್ಕಾರ ಪಂಚಾಯತ್ ಚುನಾವಣೆ ನಡೆಸದೆ ಮಹಿಳೆಯರಿಗೆ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ಜನರನ್ನು ರಾಜಕೀಯ ಅಧಿಕಾರದಿಂದ ದೂರವಿಟ್ಟಿರುವುದು ಕರ್ನಾಟಕದ ಒಂದು ಲಕ್ಷಕ್ಕೂ ಹೆಚ್ಚು ಜನಪ್ರತಿನಿಧಿಗಳಿಗೆ ಹಾಗೂ ಮೂರು ಕೋಟಿಗೂ ಅಧಿಕ ಮತದಾರ ಪ್ರಭುಗಳಿಗೆ ಮಾಡಿದ ಅನ್ಯಾಯ.

- Advertisement -

ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ದಿವಂಗತ ಅಬ್ದುಲ್ ನಜೀರ್ ಸಾಹೇಬರು ಜನರ ಕೈಗೆ ಅಧಿಕಾರ ನೀಡುವ ಮುಖಾಂತರ ಹಳ್ಳಿಗಳನ್ನು ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಸುಭದ್ರ ಬುನಾದಿಯನ್ನು ಕರ್ನಾಟಕದಲ್ಲಿ ಹಾಕಿದ್ದು ಇತಿಹಾಸ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ದಿವಂಗತ ರಾಜೀವ್ ಗಾಂಧಿ ಅವರು 63ನೇ ಪಂಚಾಯತ್ ರಾಜ್ ತಿದ್ದುಪಡಿ ರಾಜ್ಯಸಭೆಯಲ್ಲಿ ಕೇವಲ ಒಂದು ಮತದಲ್ಲಿ ಬಿದ್ದಾಗ ಕಣ್ಣೀರು ಹಾಕಿದ ದೇಶದ ಮೊದಲ ಪ್ರಧಾನಿ. ಈಗ ಅದೇ ಪಕ್ಷ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದರೂ ಮೂರು ಹಂತದ ಪಂಚಾಯತ್ ರಾಜ್ ಚುನಾವಣೆ ನಡೆಸದೇ ಇರುವುದು ಸಂವಿಧಾನ ವಿರೋಧಿ ನಡೆಯಲ್ಲವೇ?

ದೇಶದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಪಂಚಾಯತ್ ರಾಜ್ ಮಂತ್ರಿಗಳು. ಡಾ. ಬಾಬಾ ಸಾಹೇಬರ ಸಮ ಸಮಾಜದ ನಿರ್ಮಾಣದಲ್ಲಿ ಹಳ್ಳಿಗಳ ಗ್ರಾಮ ಸಭೆ(ವಿಧಾನಸಭೆ) ಸಕಾಲಕ್ಕೆ ಚುನಾವಣೆ ನಡೆಸದೆ ಅಮಾನತಿನಲ್ಲಿಡುವುದು ಯಾವ ನ್ಯಾಯ?
ಗ್ರಾಮ ಪಂಚಾಯಿತಿಗಳು ಸ್ವಯಂ ಆಡಳಿತ ಮತ್ತು ಸ್ವರಾಜ್ಯದ ಅಧಿಕಾರ ನಡೆಸುವಂತೆ ಮಾಡಬೇಕಾದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗ್ರಾಮ ಪಂಚಾಯಿತಿಗಳನ್ನು ಜನಪ್ರತಿನಿಧಿಗಳಿಲ್ಲದೆ ದುರ್ಬಲಗೊಳಿಸುತ್ತಿರುವುದು ನೋವಿನ ಸಂಗತಿ. ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಯೋಜನೆಗಳ ಕ್ರಿಯೆ ಯೋಜನೆ ಮತ್ತು ಅನುಷ್ಠಾನಗೊಳಿಸಲು ಗ್ರಾಮ ಸಭೆಯ ಅನುಮೋದನೆ ತೆಗೆದುಕೊಳ್ಳಬೇಕೆಂದು ಕಾಯ್ದೆಯಲ್ಲಿದ್ದರೂ ಅದು ಮಾತ್ರ ಕಾಗದದ ಹುಲಿಯಾಗಿ ಉಳಿದಿರುವುದು ವಿಪರ್ಯಾಸ.

ಮೇಲಿನ ಹಂತದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮ ಪಂಚಾಯತಿಗಳಿಗೆ ಸುತ್ತೋಲೆಗಳನ್ನು ಕಳುಹಿಸಿ ಹತ್ತಕ್ಷೇಪ ಮಾಡುತ್ತ ಗ್ರಾಮ ಪಂಚಾಯಿತಿಯನ್ನು ಎಟಿಎಂ ರೀತಿಯಲ್ಲಿ ಬಳಸುತ್ತಿರುವುದು ಗ್ರಾಮಗಳ ಅಭಿವೃದ್ಧಿಗೆ ಮಾರಕ. ಇದಕ್ಕೆ ತಾಜಾ ಉದಾಹರಣೆ ಕೂಸಿನ ಮನೆ ಹಾಗೂ ಕಸವಿಲೇವಾರಿ ಘಟಕ ಮೇಲಿನ ಹಂತದಲ್ಲಿ ಯೋಜನೆಗಳನ್ನು ರೂಪಿಸಿದ ಮೇಲೆ ಅದಕ್ಕೆ ಬೇಕಾದ ಹಣಕಾಸು ಹಾಗೂ ಮಾನವ ಸಂಪನ್ಮೂಲ ಒದಗಿಸುವ ಜವಾಬ್ದಾರಿ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳದ್ದಾಗಿರುತ್ತದೆ.

224 ಶಾಸಕರಲ್ಲಿ ಎಷ್ಟು ಮಂದಿ 1993ರ 73, 74ನೇ ತಿದ್ದುಪಡಿಯ ಫಲಾನುಭವಿಗಳಾಗಿದ್ದೀರಿ. ನಿಮಗೆ ಆತ್ಮ ಸಾಕ್ಷಿ ಇದ್ದರೆ ನಿಮ್ಮನ್ನೇ ನೀವು ಪ್ರಶ್ನೆ ಮಾಡಿಕೊಳ್ಳಿ. 2028ರ ವೇಳೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯದಿದ್ದರೆ, 25 ಮಂದಿ ಎಂಎಲ್‌ಸಿಗಳು ನಮ್ಮಂತೆಯೇ ಬೀದಿಯಲ್ಲಿ ನಿಂತು ಹೋರಾಟ ಮಾಡುವ ಕಾಲ ದೂರವಿಲ್ಲ. ರಾಜ್ಯದ ಪ್ರಭಾವಿ ಸಚಿವರುಗಳ ಸಹೋದರರು ಬೆಳಗಾವಿ, ವಿಜಯಪುರದಲ್ಲಿ ಮೂರು ಜನ ಎಮ್ಎಲ್‌ಸಿಗಳು ನೀವು ಮನಸ್ಸು ಮಾಡಿದರೆ ಸರ್ಕಾರವನ್ನೇ ಅಲ್ಲಾಡಿಸಬಹುದು. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದಕ್ಕೆ ಕಷ್ಟ ಸಾಧ್ಯವೇ?

ಬೀದರ್‌ನಿಂದ ಚಾಮರಾಜನಗರದವರೆಗೆ ಮಹಿಳೆಯರು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ಜನರನ್ನು ರಾಜಕೀಯ ಅಧಿಕಾರದಿಂದ ದೂರವಿಟ್ಟಿರುವ ಶಾಸಕರುಗಳೇ ನಿಮಗೆ 2028ರ ಚುನಾವಣೆಯಲ್ಲಿ ಪ್ರಜಾಪ್ರಭುತ್ವದ ಮತದಾರ ಪ್ರಭುಗಳು ತಕ್ಕ ಪಾಠ ಕಲಿಸುತ್ತಾರೆ. ಶಾಸಕರು ಶಾಸನ ಮಾಡುವುದನ್ನು ಬಿಟ್ಟು ಬೇರೆಲ್ಲ ಕೆಲಸವನ್ನು ಮಾಡುತ್ತಿದ್ದಾರೆಂದು ಪಂಚಾಯತ್ ರಾಜ್ ಮಂತ್ರಿಗಳು ವಿಧಾನಸಭೆಯಲ್ಲಿ ಮಾತನಾಡಿದ್ದಾರೆ. ದಾವಣಗೆರೆ ಬಾಗಲಕೋಟೆ ಉಪಚುನಾವಣೆಗೆ ಆರು ತಿಂಗಳ ಒಳಗಾಗಿ ಇಡೀ ಎರಡು ಪಕ್ಷದ ಅತಿರಥ ಮಹಾರಥರನ್ನು ನಿಲ್ಲಿಸಿ ಚುನಾವಣೆ ಮಾಡಿದ್ದೀರಿ. ಅದೇ ಸ್ಥಳೀಯ ಸಂಸ್ಥೆ ಚುನಾವಣೆ ವಿಷಯದಲ್ಲಿ ಯಾಕೆ ಮಾತನಾಡುತ್ತಿಲ್ಲ. ಹಳ್ಳಿಗಳ ಅಭಿವೃದ್ಧಿಗೆ ಬರಬೇಕಾದ 15ನೇ ಹಣಕಾಸಿನ 2,500 ಕೋಟಿ ರೂಪಾಯಿ ಬರದೇ ಇರುವುದಕ್ಕೆ, 16ನೇ ಹಣಕಾಸು ಆಯೋಗದ ಹಣ ಬರುವುದಕ್ಕೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸದಿದ್ದರೆ ರಾಜ್ಯ ಸರ್ಕಾರವೇ ನೇರ ಹೊಣೆ.

ವಿದ್ಯಾರ್ಥಿಗಳಿಗೆ 5,000 ಹುದ್ದೆ ಕರೆದರೆ ಒಂದು ಲಕ್ಷ ಜನ ಅರ್ಜಿ ಹಾಕುತ್ತಾರೆ. 2028ಕ್ಕೆ 224 ಶಾಸಕ ಸ್ಥಾನಗಳು ಖಾಲಿಯಾಗುತ್ತವೆ. ಪ್ರತಿಯೊಂದು ಹಳ್ಳಿಯಿಂದ ವಿದ್ಯಾರ್ಥಿಗಳು, ರೈತರು, ಒಂದು ಲಕ್ಷ ಮಂದಿ ಗ್ರಾಮ ಪಂಚಾಯಿತಿ ಸದಸ್ಯರುಗಳು ನಾಮಪತ್ರ ಸಲ್ಲಿಸಿ ಅದೃಷ್ಟ ಪರೀಕ್ಷಿಸಿಕೊಳ್ಳಿ.
ಪಂಚಾಯತ್ ರಾಜ್ ಮಹಿಳೆಯರಿಗೆ ಶೇ.50ರಷ್ಟು ಅಧಿಕಾರ ನೀಡಿ, 224 ಶಾಸಕರಲ್ಲಿ 112 ಮಂದಿ ಮಹಿಳೆಯರನ್ನು ಶಾಸಕರನ್ನಾಗಿ ಮಾಡಿ…. ನಿಮಗೆ ತಾಕತ್ತು, ದಮ್ಮಿದ್ದರೆ ಇದನ್ನು ಸಾಬೀತು ಮಾಡಿ ತೋರಿಸಿ, ಸುಮ್ಮನೆ ಕಥೆ ಹೇಳುವುದಲ್ಲ.

ಸಂವಿಧಾನ ಪುಸ್ತಕವನ್ನು ಕೈಯಲ್ಲಿ ಹಿಡಿದು ಸಂಸತ್ತಿನಲ್ಲಿ ನಡೆದಾಡುವ ನಿಮಗೆ ಸ್ಥಳೀಯ ಸಂಸ್ಥೆಗಳು ಚುನಾವಣೆ ನಡೆಸದಿರುವುದು ಸಂವಿಧಾನ ವಿರೋಧಿ ನಡೆ ಎಂದು ಯಾಕೆ ಅನಿಸುತ್ತಿಲ್ಲ. ಆರ್ಟಿಕಲ್ 356ರ ಪ್ರಕಾರ, ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ಕರ್ನಾಟಕ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕೆಂದು ಒತ್ತಾಯ ಮಾಡುತ್ತೇನೆ.

ಇದನ್ನೂ ಓದಿ? ಜನತಂತ್ರದ ಹತ್ಯೆ: ಮತದಾನದ ಹಕ್ಕು ಮತ್ತು ಸ್ಥಳೀಯ ಪ್ರಾತಿನಿಧ್ಯದ ಮೇಲೆ ದಾಳಿ

ತಾಲೂಕು ಪರಿಷತ್ ಮೆಂಬರ್‌ನಿಂದ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಸಾಹೇಬರಿಗೆ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಅಧಿನಿಯಮ 1993ರ 308-ಎಯಲ್ಲಿ ಚುನಾವಣೆಗಳ ವೇಳಾಪಟ್ಟಿ, ರಾಜ್ಯ ಚುನಾವಣೆ ಆಯೋಗವು ಪಂಚಾಯತ್‌ ಅವಧಿಯು ಪೂರ್ಣಗೊಳ್ಳುವುದಕ್ಕೆ ಮೊದಲು, ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸತಕ್ಕದ್ದು ಮತ್ತು ಚುನಾವಣೆ ಅಧಿಸೂಚನೆಯನ್ನು ಹೊರಡಿಸುವುದಕ್ಕೆ ಮುಂಚೆ 45 ದಿನಗಳಿಗೆ ಕಡಿಮೆ ಇಲ್ಲದಂತೆ ಸ್ಥಾನಗಳ ಮೀಸಲಾತಿ ಮತ್ತು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸತಕ್ಕದ್ದು ಎಂಬ ಮಾಹಿತಿ ತಿಳಿದಿಲ್ಲವೇ? ಪ್ರಜಾಪ್ರಭುತ್ವದ ತಿರುಳನ್ನು ಅರಿತಿರುವ ಸಿದ್ದರಾಮಯ್ಯನವರು, ಶೀಘ್ರದಲ್ಲಿ ಮೂರು ಹಂತದ ಸ್ಥಳೀಯ ಪಂಚಾಯತ್ ಚುನಾವಣೆಗಳನ್ನು ನಡೆಸಿ ಪ್ರಜಾಪ್ರಭುತ್ವದ ಬೇರುಗಳಿಗೆ ನೀರು ಉಣಿಸುವ ಕೆಲಸವನ್ನು ಮಾಡಲೇಬೇಕು.

Capture 40
ಪ್ರದೀಪ ಚ ಪಾಟೀಲ್ ನಾಗರದಿನ್ನಿ
+ posts

ಗ್ರಾಮ ಸ್ವರಾಜ್ಯ, ಕರ್ನಾಟಕ ರಾಜ್ಯ ಉಪಾಧ್ಯಕ್ಷರು

ಪೋಸ್ಟ್ ಹಂಚಿಕೊಳ್ಳಿ:

ಪ್ರದೀಪ ಚ ಪಾಟೀಲ್ ನಾಗರದಿನ್ನಿ
ಪ್ರದೀಪ ಚ ಪಾಟೀಲ್ ನಾಗರದಿನ್ನಿ
ಗ್ರಾಮ ಸ್ವರಾಜ್ಯ, ಕರ್ನಾಟಕ ರಾಜ್ಯ ಉಪಾಧ್ಯಕ್ಷರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್‌ಘಾಟ್‌ನಲ್ಲಿ ‘ಇಂಡಿಯಾ’ ಒಕ್ಕೂಟದ ಮೌನ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಪಕ್ಷಗಳು...

ಬಾಗಲಕೋಟೆ | ಪ್ರಜಾಪ್ರಭುತ್ವದ ಕರಾಳ ದಿನ: ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ಸಂಕಲ್ಪದೊಂದಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ...

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ ಗ್ರಾಮಸ್ಥರು

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು...

ವಿಜಯಪುರ | ಕೆ-ಸೆಟ್ ಪರೀಕ್ಷೆ ಪಾರದರ್ಶಕತೆಗೆ ಕಟ್ಟುನಿಟ್ಟಿನ ಕ್ರಮ: ಡಾ. ಔದ್ರಾಮ

ಅ. 11ರಂದು ನಡೆಯಲಿರುವ ಕೆ-ಸೆಟ್ ಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಚ್ಚುಕಟ್ಟಾಗಿ ನಡೆಸಲು...